ವಾಷಿಂಗ್ಟನ್: ಎರಡು ಮಕ್ಕಳು (Twins Baby) ಒಂದೇ ಗರ್ಭದಲ್ಲಿ ಬೆಳೆಯುವುದನ್ನು ಅವಳಿ ಎಂದು ಕರೆಯುತ್ತಾರೆ. ಅದರಲ್ಲಿ ಎರಡು ವಿಧ. ಸಾಧಾರಣವಾಗಿ ಹೆಣ್ಣಿನಲ್ಲಿ ಒಂದು ಮಾಸಿಕ ಚಕ್ರದಲ್ಲಿ ಒಂದು ಅಂಡಾಣು ಫಲಿತವಾಗಿ ಯುಗ್ಮಜವಾಗುತ್ತದೆ. ಕೆಲವೊಮ್ಮೆ ಈ ಒಂದೇ ಯುಗ್ಮಜ ಒಂದು ಮಗುವಾಗಿ ಬೆಳೆಯುವ ಬದಲು ಎರಡಾಗಿ ಕವಲೊಡೆದು ಅವಳಿ ಮಕ್ಕಳಾಗುತ್ತವೆ. ಸಾಮಾನ್ಯವಾಗಿ ಅವಳಿ-ಜವಳಿ ಮಕ್ಕಳಿ ಒಂದೇ ದಿನ, ಒಂದೇ ಬಾರಿ ಜನಿಸುವುದನ್ನು ನಾವು ಕೇಳಿರುತ್ತೇವೆ. ಆದರೆ ಟೆಕ್ಸಾಸ್ನ (Texas) ದಂಪತಿಯೊಬ್ಬರ (Couple) ಕಥೆಯೇ ವಿಚಿತ್ರವಾಗಿದೆ. ಅದೇನಪ್ಪಾ ಅಂದರೆ ಕಲಿ ಜೋ ಎಂಬ ಅಮೇರಿಕನ್ ಮಹಿಳೆ (American woman) ಮತ್ತು ಆಕೆಯ ಪತಿ ಕ್ಲಿಪ್ಗೆ ಪ್ರತ್ಯೇಕ ವರ್ಷಗಳಲ್ಲಿ ಬೇರೆ, ಬೇರೆ ದಿನ ಅವಳಿ ಹೆಣ್ಣು ಮಗು ಜನಿಸಿದೆ. ಅಷ್ಟಕ್ಕೂ ಇದೇಗಪ್ಪ ಸಾಧ್ಯ ಅಂತ ಯೋಚಿಸ್ತೀದ್ದೀರಾ? ಹಾಗಾದ್ರೆ ಈ ಸ್ಟೋರಿ ಓದಿ..
ಮಧ್ಯರಾತ್ರಿ ಒಳಗೆ ಮಗು ಜನಿಸುತ್ತೆ ಅಂದುಕೊಂಡಿದ್ದ ದಂಪತಿ
ಹೌದು ಕಲಿ ಜೋ ಅವರು, ಡಿಸೆಂಬರ್ 31 ರಂದು ರಾತ್ರಿ 11.55 ಕ್ಕೆ ತಮ್ಮ ಮೊದಲ ಮಗಳು ಅನ್ನಿ ಜೋಗೆ ಜನ್ಮ ನೀಡಿದರು. ಮುಂದಿನ ವರ್ಷ ಜನವರಿ 1 ರಂದು 12.01 AM ಕ್ಕೆ ತಮ್ಮ ಎರಡನೇ ಮಗಳು ಎಫಿ ರೋಸ್ಗೆ ಜನ್ಮ ನೀಡಿದ್ದಾರೆ. ಮಧ್ಯರಾತ್ರಿಯ ಒಳಗೆಯೇ ಮಗು ಜನಿಸುತ್ತದೆ ಎಂದು ದಂಪತಿ ಭಾವಿಸಿದ್ದರು. ಆದರೆ ಎರಡು ಅವಳಿ ಮಗು ಬೇರೆ, ಬೇರೆ ದಿನ ಜನಿಸಿದೆ ಎಂದು ನ್ಯೂಯಾರ್ಕ್ ಪೋಸ್ಟ್ನಲ್ಲಿ ವರದಿ ಮಾಡಲಾಗಿದೆ.
ಮಕ್ಕಳ ಫೋಟೋ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ ಮಹಿಳೆ
ಈ ಸಂತಸವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಕಲಿ ಜೋ, ಇಬ್ಬರು ಮಕ್ಕಳೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆನ್ನಿ ಜೋ ಮತ್ತು ಎಫಿ ರೋಸ್ ಸ್ಕಾಟ್ ಇಬ್ಬರನ್ನು ನನಗೆ ಪರಿಚಯಿಸಲು ಬಹಳ ಹೆಮ್ಮೆಯಾಗುತ್ತಿದೆ. ! ಅನ್ನಿ 2022ರ ಕೊನೆಯಲ್ಲಿ ಜನಿಸಿದ ಮಗು. ನಂತರ ಎಫೀ 2023ರ ಆರಂಭದಲ್ಲಿ ಜನಿಸಿದ ಮೊದಲ ಮಗುವಾಗಿದ್ದಾಳೆ. ಇಬ್ಬರೂ ಆರೋಗ್ಯಕರವಾಗಿದ್ದಾರೆ ಮತ್ತು ಸಂತೋಷದಿಂದ ಇದ್ದಾರೆ. ಅಲ್ಲದೇ ಇಬ್ಬರೂ ಕೂಡ 5.5 ಪೌಂಡ್ ತೂಕವಿದ್ದಾರೆ. ಇದರಿಂದ ಕ್ಲಿಫ್ ಮತ್ತು ನನಗೆ ಬಹಳ ಸಂತಸವಾಗಿದೆ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
ವಯಸ್ಸಾದಂತೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು
ಅಧ್ಯಯನದ ಪ್ರಕಾರ, ವಯಸ್ಸಾದಂತೆ ಅವಳಿ ಮಕ್ಕಳಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಮುಟ್ಟು ಸಮೀಪವಿರುವ ಮಹಿಳೆಯರು ಹಾರ್ಮೋನುಗಳ ಬದಲಾವಣೆಗಳನ್ನು ಅನುಭವಿಸುತ್ತಾರೆ, ಇದು ಅಂಡೋತ್ಪತ್ತಿ ಸಮಯದಲ್ಲಿ ತಮ್ಮ ದೇಹವನ್ನು ಒಂದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಇಡಲು ಪ್ರೋತ್ಸಾಹಿಸಬಹುದು. ಪ್ರಪಂಚದ ಎಲ್ಲಾ ಅವಳಿ ಮಕ್ಕಳು ಸುಮಾರು ಶೇ.80 ರಷ್ಟು ಈಗ ಏಷ್ಯಾ ಮತ್ತು ಆಫ್ರಿಕಾದಲ್ಲಿ ಜನಿಸುತ್ತಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇಂಗ್ಲೆಂಡ್ ನಲ್ಲಿ 1,000 ಹೆರಿಗೆಯಲ್ಲಿ 15 ರಿಂದ 17 ಅವಳಿ ಮಕ್ಕಳು ಜನಿಸುತ್ತಾರೆ ಎಂದು ತಿಳಿದು ಬಂದಿದೆ.
ಪ್ರತಿ ವರ್ಷ 1.6 ಮಿಲಿಯನ್ ಅವಳಿ ಮಕ್ಕಳ ಜನನ
ಹಿಂದೆಂದಿಗಿಂತಲೂ ಹೆಚ್ಚು ಅವಳಿ ಮಕ್ಕಳು ಜನಿಸುತ್ತಿದ್ದಾರೆ. 1980 ರ ದಶಕದಿಂದ, 1,000 ಗರ್ಭಿಣಿಯರಿಗೆ ಅವಳಿ ಮಕ್ಕಳ ಪ್ರಮಾಣವು ಮೂರಕ್ಕೆ ಏರಿದ್ದು, 9 ರಿಂದ 12 ಕ್ಕೆ ತಲುಪಿದೆ. ಇದರರ್ಥ ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 1.6 ಮಿಲಿಯನ್ ಅವಳಿ ಮಕ್ಕಳು ಜನಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇನ್ ವಿಟ್ರೊ ಫಲೀಕರಣ (ಐವಿಎಫ್), ಅಂಡಾಶಯದ ಸಿಮ್ಯುಲೇಶನ್ ಮತ್ತು ಕೃತಕ ಗರ್ಭಧಾರಣೆ ಸೇರಿದಂತೆ ಎಂಎಆರ್ ಹೆಚ್ಚಳ. ಹೆಚ್ಚು ಅವಳಿ ಮಕ್ಕಳು ಹುಟ್ಟಲು ಇನ್ನೊಂದು ಪ್ರಮುಖ ಕಾರಣವೆಂದರೆ ಕಳೆದ ದಶಕಗಳಲ್ಲಿ ಅನೇಕ ದೇಶಗಳಲ್ಲಿ ಮಹಿಳೆಯರಿಗೆ ವಿಳಂಬವಾಗಿ ಗರ್ಭ ಧರಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ