HOME » NEWS » National-international » TESLA SEO ELON MUSK STARLINK WILL SEND YOU A WARNING IF YOU TRY TO ILLEGALLY DOWNLOAD A MOVIE STG HG

ಕಾನೂನು ಬಾಹಿರವಾಗಿ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್‌ನಿಂದ ಚಲನಚಿತ್ರಗಳನ್ನು ಡೌನ್ಲೋಡ್ ಮಾಡಿದರೆ ಎಚ್ಚರ..!

ELON MUSK: ಟೆಸ್ಲಾ ದೊರೆ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಉಪಗ್ರಹ ಅಂತರ್ಜಾಲದ ಪ್ರಮುಖ ಸೇವೆಯಾದ ಸ್ಟಾರ್‌ಲಿಂಕ್‌ನಿಂದ ಚಲನಚಿತ್ರಗಳನ್ನು ಪೈರಸಿ ಮಾಡಿದರೆ ಎಚ್ಚರ! ಕೂಡಲೇ ನಿಮಗೆ ನೋಟಿಸ್ ತಲುಪುತ್ತದೆ.

news18-kannada
Updated:May 5, 2021, 6:51 PM IST
ಕಾನೂನು ಬಾಹಿರವಾಗಿ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್‌ನಿಂದ ಚಲನಚಿತ್ರಗಳನ್ನು ಡೌನ್ಲೋಡ್ ಮಾಡಿದರೆ ಎಚ್ಚರ..!
Elon Musk / ಎಲಾನ್ ಮಸ್ಕ್
  • Share this:
ಪೈರಸಿ ಎನ್ನುವುದು ಈಗ ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿಲ್ಲ. ದೊಡ್ಡ ದೊಡ್ಡ ಓಟಿಟಿ ಮತ್ತು ಇಂಟರ್​ನೆಟ್ ಸೇವೆಗಳಿಗೂ ದೊಡ್ಡ ಆತಂಕವಾಗಿ ಪರಿಣಮಿಸಿದೆ. ಅದರಲ್ಲೂ ಓಟಿಟಿಗಳ ಕಂಟೆಂಟ್ ಇಂಟರ್​​ನೆಟ್ ಮೂಲಕ ಸೋರಿಕೆಯಾಗುವುದು ಸಾಮಾನ್ಯವಾಗಿದೆ. ಅಲ್ಲದೇ ಈ ಬಗ್ಗೆ ನಾನಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗ ಇದೇ ಚಿಂತೆ ವಿಶ್ವದ ಶ್ರೀಮಂತರ ಪೈಕಿ ಒಬ್ಬರಾಗಿರುವ ಉದ್ಯಮಿ ಎಲಾನ್ ಮಸ್ಕ್ ಅವರನ್ನೂ ಕಾಡಿದೆ. ಈ ನಿಟ್ಟಿನಲ್ಲಿ ಎಲಾನ್ ತಮ್ಮದೇ ಆದ ಕೆಲವು ಕಠಿಣ ನಿಯಮಗಳನ್ನು ಹೇರಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಟೆಸ್ಲಾ ದೊರೆ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಉಪಗ್ರಹ ಅಂತರ್ಜಾಲದ ಪ್ರಮುಖ ಸೇವೆಯಾದ ಸ್ಟಾರ್‌ಲಿಂಕ್‌ನಿಂದ ಚಲನಚಿತ್ರಗಳನ್ನು ಪೈರಸಿ ಮಾಡಿದರೆ ಎಚ್ಚರ! ಕೂಡಲೇ ನಿಮಗೆ ನೋಟಿಸ್ ತಲುಪುತ್ತದೆ. ತಕ್ಷಣವೇ ನಿಮ್ಮ ತಪ್ಪನ್ನು ನಿಲ್ಲಿಸಿ ಎಂದು ನಿಮಗೆ ಬಿಸಿ ಮುಟ್ಟಿಸುವುದು ಗ್ಯಾರಂಟಿ. ಈ ವಿಷಯದಲ್ಲಿ ಸ್ಟಾರ್‌ಲಿಂಕ್ ಎಷ್ಟು ಗಂಭೀರವಾಗಿದೆ? ನಿಜವಾಗಿಯೂ ಹಕ್ಕು ಸ್ವಾಮ್ಯದ ವಿಚಾರಕ್ಕೆ ಬರುವುದಾದರೆ ನಿಯಮಗಳನ್ನು ಹೇರುವುದೇ? ಎನ್ನುವುದನ್ನು ತಿಳಿದುಕೊಳ್ಳಲು ಸ್ಟಾರ್‌ಲಿಂಕ್‌ನ ಚಂದಾದಾರರೊಬ್ಬರು ಪ್ರಯತ್ನ ನಡೆಸಿದರು.

ಸಬ್‌ಸ್ಟ್ರೇಟ್ 97 ಎನ್ನುವ ಚಂದಾದಾರರು ಈ ವಾರಾಂತ್ಯದಲ್ಲಿ ರೆಡ್ಡಿಟ್‌ನಲ್ಲಿ ಸ್ಪೇಸ್ ಎಕ್ಸ್‌ನಿಂದ ಪಡೆದಿದ್ದ ಪೈರಸಿ ಅಲರ್ಟ್ ಎಚ್ಚರಿಕೆಯ ಸಂದೇಶವನ್ನು ಹಂಚಿಕೊಂಡಿದ್ದರು. ಈ ಎಚ್ಚರಿಕೆಯ ಸಂದೇಶದಲ್ಲಿ ಕಂಪನಿಯೂ ತನ್ನ ಚಂದಾದಾರರಿಗೆ ಕಾನೂನು ಬಾಹಿರ ಮತ್ತು ಹಕ್ಕು ಸ್ವಾಮ್ಯ ಕಂಟೆಂಟ್‌ಗಳನ್ನು ಸ್ಟಾರ್‌ಲಿಂಕ್‌ ಸೇವೆ ಬಳಸಿ ಡೌನ್ಲೋಡ್ ಮಾಡುವುದರಿಂದ ದೂರವಿರಿ. ಪರವಾನಗಿ ಇಲ್ಲದೇ ಹಕ್ಕುಸ್ವಾಮ್ಯ ವಿಷಯವನ್ನು ಡೌನ್ಲೋಡ್ ಮಾಡುವುದು ಅಮಾನತ್ತಿಗೆ ಕಾರಣವಾಗಬಹುದು. ಜೊತೆಗೆ ನಿಮಗೆ ಸೇವೆಯನ್ನು ನಿರ್ಬಂಧಿಸಬಹುದು. ಇದೆಲ್ಲಕ್ಕೂ ಮಿಗಿಲಾಗಿ ಮೂಲ ವಿಷಯದ ಮಾಲೀಕರಿಂದ ಕಾನೂನು ಕ್ರಮವನ್ನು ಎದುರಿಸಬೇಕಾಗಬಹುದು ಎಂದು ಸ್ಪಷ್ಟವಾಗಿ ಎಚ್ಚರಿಸಿದೆ.

ಇನ್ನು ಐಎಸ್ಪಿಯ ಮೇಲ್ವಿಚಾರಣೆ ನಿಯಂತ್ರಣ ಮಾಡುವುದು ಕಷ್ಟವೇನಲ್ಲ. ಆದರೂ ಪೈರಸಿಯನ್ನು ನಾವು ಪ್ರೋತ್ಸಾಹಿಸಬಾರದು. ವರ್ಚುವಲ್ ಖಾಸಗಿ ನೆಟ್ವರ್ಕ್(ವಿಪಿಎನ್) ಇಂಟರ್​ನೆಟ್ ದಟ್ಟಣೆಯ ಮೇಲೆ ಕಣ್ಣಿಡದಂತೆ ಇಂಟರ್​ನೆಟ್ ಸೇವೆ ಒದಗಿಸುವವರನ್ನು ನಿಯಂತ್ರಿಸುತ್ತದೆ. ಇದರಿಂದ ಎನ್ಕ್ರಿಪ್ಟ್ ಆಗುವುದನ್ನು ತಡೆಬಹುದಾಗಿದೆ. ಆದ್ದರಿಂದ ಸ್ಟಾರ್‌ಲಿಂಕ್ ಚಂದಾದಾರರು ಪೈರೇಟೆಡ್ ಕಂಟೆಂಟ್‌ ಅನ್ನು ಡೌನ್‌ಲೋಡ್ ಮಾಡಬಹುದು.

ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಕಕ್ಷೆಯಲ್ಲಿ 1,300 ಕ್ಕೂ ಹೆಚ್ಚು ಉಪಗ್ರಹಗಳ ಬಲವನ್ನು ಹೊಂದಿದೆ. ಆದರೆ ಅಂತರ್ಜಾಲವು ಸ್ಥಳೀಯ ಫೈಬರ್ ನೆಟ್‌ವರ್ಕ್‌ಗಳಲ್ಲಿ ಸಂಯೋಜಿಸಲ್ಪಟ್ಟ ಗ್ರೌಂಡ್‌ ಸ್ಟೇಷನ್‌ಗಳಿಂದ ಹುಟ್ಟಿಕೊಂಡಿದೆ.

ಅಮೆರಿಕದ ಸಬ್‌ಸ್ಟ್ರೇಟ್ 97 ಹೆಸರಿನ ಚಂದಾದಾರರು pcmag.com ನ ಪ್ರಶ್ನೆಗಳಿಗೆ ಸೂಕ್ತ ಸ್ಪಂದನೆ ನೀಡಿಲ್ಲ. ಆದರೆ ಸ್ಟಾರ್‌ಲಿಂಕ್‌ನಲ್ಲಿ ಟೊರೆಂಟ್ ಫೈಲ್ ಹಂಚಿಕೆ ಸೇವೆಯನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದ್ದು. ಅದರ ಪರಿಣಾಮಗಳನ್ನು ನೋಡಲು ಕಾದಿದ್ದೇನೆ ಎಂದು ರೆಡ್ಡಿಟ್ ವೇದಿಕೆಯಲ್ಲಿ ಚಂದಾದಾರರು ಹೇಳಿದ್ದಾರೆ. ಎರಡು ತಿಂಗಳ ಹಿಂದೆ ಅವರು ಸ್ಟಾರ್‌ಲಿಂಕ್ ಸೇವೆಗೆ ಚಂದಾದಾರರಾದಾಗಿನಿಂದಲೂ ಟೊರೆಂಟ್ ಬಳಸುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಸ್ಟಾರ್‌ಲಿಂಕ್‌ ಇನ್ನಿತರ ಅಂತರ್ಜಾಲ ಸೇವಾ ಪೂರೈಕೆಯಂತೆ ಪೈರಸಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ ಎಂದು ಎಚ್ಚರಿಕೆಯ ಸಂದೇಶದಲ್ಲಿ ತಿಳಿಸಿದೆ.


Youtube Video
ಒಂದು ವೇಳೆಕೃತಿಸ್ವಾಮ್ಯದ ಚಲನಚಿತ್ರವನ್ನು ಡೌನ್‌ಲೋಡ್ ಮಾಡುವುದನ್ನು ಇಂಟರ್ನೆಟ್ ಸೇವಾ ಪೂರೈಕೆದಾರರು ಗುರುತಿಸಿದರೆ, ಈ ಕೃತ್ಯದಲ್ಲಿ ಭಾಗಿಯಾಗುವ ಚಂದಾದಾರರಿಗೆ ತಪ್ಪು ಮಾಡಿದ್ದಕ್ಕಾಗಿ ಎಚ್ಚರಿಕೆಯ ಸಂದೇಶ ಕಳುಹಿಸುವುದು ಖಂಡಿತಾ ಎಂದು ತಿಳಿಸಿದೆ.
First published: May 5, 2021, 6:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories