• Home
  • »
  • News
  • »
  • national-international
  • »
  • Elon Musk: ಬಿಟ್​ಕಾಯ್ನ್​ (Bitcoin) ನೊಂದಿಗೆ ಎಲಾನ್ ಮಸ್ಕ್ ವ್ಯವಹಾರ ಮುಗಿಯಿತಾ? ಕೊಂಡವರ ಗತಿ ಏನು ?

Elon Musk: ಬಿಟ್​ಕಾಯ್ನ್​ (Bitcoin) ನೊಂದಿಗೆ ಎಲಾನ್ ಮಸ್ಕ್ ವ್ಯವಹಾರ ಮುಗಿಯಿತಾ? ಕೊಂಡವರ ಗತಿ ಏನು ?

ಎಲಾನ್ ಮಸ್ಕ್

ಎಲಾನ್ ಮಸ್ಕ್

Elon Musk and Bitcoin: ಮಸ್ಕ್ ಅವರ ಇತ್ತೀಚಿನ ಟ್ವೀಟ್‍ಗಳು ಕ್ರಿಪ್ಟೋ ಸಮುದಾಯದಲ್ಲಿ ಉತ್ಸಾಹ, ಗೊಂದಲ ಮತ್ತು ಭೀತಿಯ ಮಿಶ್ರ ವಾತಾವರಣವನ್ನು ಹುಟ್ಟು ಹಾಕಿದೆ. ಅವರ ಸಾಮಾಜಿಕ –ಮಾಧ್ಯಮ ಸುದ್ದಿಗಳು ಡೋಜ್ ಕಾಯಿನ್ ಮತ್ತು ಬಿಟ್‍ಕಾಯಿನ್ ಬೆಲೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿವೆ.

  • Share this:

Elon Musk and Bitcoin: ಕ್ರಿಪ್ಟೋಬುಲ್ ಎಲೋನ್ ಮಸ್ಕ್ ,ಗುರುವಾರ ತಮ್ಮ ಕ್ರಿಪ್ಟಿಕ್ ಟ್ವೀಟ್‍ನಲ್ಲಿ, ಡಿಜಿಟಲ್ ಸ್ವತ್ತುಗಳ ಜಗತ್ತಿನಲ್ಲಿ, ಬಹಳಷ್ಟು ಮಂದಿ, ಬಿಲಿಯೆನೆರ್‍ಗಳ ಸ್ವತ್ತನ್ನು ಬಿಟ್ ಕಾಯಿನ್ ಜೊತೆ ವ್ಯಾಖ್ಯಾನಿಸುತ್ತಿದ್ದರು ಎಂದು ಬರೆದುಕೊಂಡಿದ್ದಾರೆ. ಆದಾದ ಒಂದು ಗಂಟೆಯ ಬಳಿಕ ಅವರು ಈ ಟ್ವೀಟನ್ನು ಪೋಸ್ಟ್ ಮಾಡಿದರು: ಮಸ್ಕ್ ಅವರ ಇತ್ತೀಚಿನ ಟ್ವೀಟ್‍ಗಳು ಕ್ರಿಪ್ಟೋ ಸಮುದಾಯದಲ್ಲಿ ಉತ್ಸಾಹ, ಗೊಂದಲ ಮತ್ತು ಭೀತಿಯ ಮಿಶ್ರ ವಾತಾವರಣವನ್ನು ಹುಟ್ಟು ಹಾಕಿದೆ. ಅವರ ಸಾಮಾಜಿಕ –ಮಾಧ್ಯಮ ಸುದ್ದಿಗಳು ಡೋಜ್ ಕಾಯಿನ್ ಮತ್ತು ಬಿಟ್‍ಕಾಯಿನ್ ಬೆಲೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿವೆ. ಕಳೆದ ತಿಂಗಳು, ವಾಲ್‍ಸ್ಟ್ರೀಟ್ ಜರ್ನಲ್ ಅವರನ್ನು ಬಿಟ್‍ಕಾಯಿನ್ಸ್‌ನ ಅತೀ ದೊಡ್ಡ ಇನ್‍ಫ್ಲುಯೆನ್ಸರ್ ಎಂದು ವರ್ಣಿಸಿತ್ತು.


ಗುರುವಾರ ರಾತ್ರಿಯ ಅಂತ್ಯದಲ್ಲಿ, ಬಿಟ್‍ಕಾಯಿನ್ ಬೆಲೆಗಳು,- 2.3%ರಷ್ಟು ಕುಸಿದವು, ಕಾಯಿನ್‍ಡೆಸ್ಕ್ ಡಾಟಾದ ಪ್ರಕಾರ, ಟೆಸ್ಲಾ ಸಿಇಓ ಅವರ ಟ್ವೀಟ್ ನಂತರ 37,762 ಡಾಲರ್‌ನಷ್ಟು ಕುಸಿದಿದೆ. ಡಾಜ್​ಕಾಯಿನ್‌ ( -2.81%) ಬೆಲೆ 5.5% ಕುಸಿಯಿತು. ಕಳೆದ ತಿಂಗಳು ಮಸ್ಕ್ ತಮ್ಮ ಟ್ವೀಟ್‍ನಲ್ಲಿ, ಟೆಸ್ಲಾ ತನ್ನ ವಾಹನಗಳ ಪೇಮೆಂಟ್‍ಗೆ ಇನ್ನು ಮುಂದೆ ಬಿಟ್‍ಕಾಯಿನ್‍ಗಳನ್ನ ಸ್ವೀಕರಿಸುವುದಿಲ್ಲ ಎಂದಿತ್ತು. ಈ ಟ್ವೀಟ್ ಇನ್ನೂ ಕ್ರಿಪ್ಟೋ ವಲಯಗಳಲ್ಲಿ ಪ್ರತಿಧ್ವನಿಸುತ್ತಿದ್ದು, ಇದು ಬಿಟ್‍ಕಾಯಿನ್ ಗಣಿಗಾರಿಕೆಯ ಸುಸ್ಥಿರತೆಯ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ.


ಇದನ್ನೂ ಓದಿ: SBI Cash Withdrawl: ಇನ್ಮೇಲೆ ಎಸ್​ಬಿಐ ಯಾವುದೇ ಬ್ರಾಂಚ್​ನಿಂದ ಹಿಂದಿಗಿಂತ ಹೆಚ್ಚು ಹಣ ಡ್ರಾ ಮಾಡಬಹುದು !

ಈಗ ಸ್ಥಿರವಾಗಿದ್ದರೂ, ಬಿಟ್‍ಕಾಯಿನ್ ಬೆಲೆಗಳು ಏಪ್ರಿಲ್ ಮಧ್ಯದ ಗರಿಷ್ಟ ಮಟ್ಟದಿಂದ 64,829.14 ಗೆ ಇನ್ನೂ 42% ಕಡಿಮೆಯಾಗಿಯೇ ಇದೆ, ಡೋಜ್ ಕಾಯಿನ್ ತನ್ನ ಗರಿಷ್ಟ ಮಟ್ಟದಿಂದ 48% ದಷ್ಟಿದೆ. ಮಾರ್ಕೆಟ್ ವಾಚ್‍ನ ಮತ್ತೊಂದು ಪಬ್ಲಿಕೇಶನ್ ಬ್ಯಾರೋನ್ ಅಂದಾಜು ಮಾಡಿರುವ ಪ್ರಕಾರ, ಜನವರಿ 27ರ ಟೆಸ್ಲಾ ಅದರೆ ನಾಲ್ಕನೇ ತ್ರೈಮಾಸಿಕ ಕಾನ್ಫರೆನ್ಸ್ ಕರೆಯ ಮಧ್ಯದ ,ಸರಾಸರಿ ಆಸ್ತಿಯ ಬೆಲೆಯ ಮೇಲೆ ಟೆಸ್ಲಾ ಪ್ರತಿ ಬಿಟ್ ಕಾಯಿನ್‍ಗೆ 38,000 ಡಾಲರ್ ಪಾವತಿಸಿದೆ. ಆದರೆ ಅಲ್ಲಿ, ಯಾವುದೇ ಹಿಡುವಳಿ ಮತ್ತು ಫೈಲಿಂಗ್ ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ.


ಕಳೆದ ಫೆಬ್ರವರಿಯಲ್ಲಿ, ಟೆಸ್ಲಾ ಸುಮಾರು 1.5 ಬಿಲಿಯನ್ ಬಿಟ್‍ಕಾಯಿನ್‍ಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಹೇಳಿತ್ತು. ಮಸ್ಕ್ ಬಿಟ್ ಕಾಯಿನ್‍ನಲ್ಲಿ ತಮ್ಮ ಸ್ಥಾನ ಏನು ಎಂಬುದರ ಬಗ್ಗೆ ಗೊಂದಲ ಸೃಷ್ಟಿಸಿದ್ದರು. ಕಳೆದ ಮೇಯಲ್ಲಿ, ಬಿಟ್‍ಕಾಯಿನ್ ಮತ್ತು ತನ್ನ ಕುರಿತ ಟೀಕೆಗಳಿಗೆ, ಟ್ವಿಟ್ಟರ್‌ನಲ್ಲಿ ಅವರು “ನಿಶ್ಚಯವಾಗಿ (indeed)” ಎಂಬ ಒಂದೇ ಪದದ ಪ್ರತಿಕ್ರಿಯೆ ನೀಡಿದ್ದರು. ಆದರೆ ಬಳಿಕ ಅವರು, ತಾನಿನ್ನೂ ಟೆಸ್ಲಾದ ಯಾವುದೇ ಬಿಟ್‍ಕಾಯಿನ್ ಸಂಗ್ರಹವನ್ನು ಮಾರಿಲ್ಲ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಲು ಪ್ರಯತ್ನಿಸಿದರು. ಮಸ್ಕ್ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಯಾರಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಆದರೆ ಕೆಲವರು ಸಿಕ್ಕಾಪಟ್ಟೆ ಹೆದರಿಕೊಳ್ಳತೊಡಗಿದ್ದಾರೆ. ಡಾಜ್​ಕಾಯಿನ್‌ನ ಸಹ ಸಂಸ್ಥಾಪಕ ಹಾಗೂ ಪ್ರಮುಖ ಕ್ರಿಪ್ಟೋಬುಲ್ ಬಿಲ್ಲಿ ಮಾರ್ಕಸ್, “ ಎಲಾನ್. . . .ನಿನ್ನನ್ನು ನಂಬುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.




2021ರಲ್ಲಿ, ಬಿಟ್‍ಕಾಯಿನ್ 33% ರಷ್ಟು ಏರಿಕೆಯಾಗಿದೆ ಮತ್ತು ಡೋಜ್ ಕಾಯಿನ್ ಈ ವರ್ಷಗಳಲ್ಲಿ 7,800% ಹೆಚ್ಚಾಗಿದೆ. ಹೋಲಿಸಿ ನೋಡಿದಾಗ, ಸಾಂಪ್ರದಾಯಿಕ ಸ್ವತ್ತುಗಳು, ಹೆಚ್ಚು ಪ್ರಾಪಂಚಿಕ ಲಾಭಗಳನ್ನು ಕಂಡಿದೆ.

Published by:Soumya KN
First published: