26/11 Mumbai Attack: ಮುಂಬೈನಲ್ಲಿ ಮತ್ತೊಂದು ದಾಳಿಗೆ ನಡೆದಿದೆಯಾ ಸಂಚು? ಪಾಕಿಸ್ತಾನದಿಂದ ಬಂತು ಬೆದರಿಕೆ ಸಂದೇಶ!

ಪಾಕಿಸ್ತಾನದ ನಂಬರ್‌ನಿಂದ (Number) ಬೆದರಿಕೆ ಸಂದೇಶ ಬಂದಿದೆ. 2008ರಲ್ಲಿ ನಡೆದ 26/11ರ ಮುಂಬೈ ದಾಳಿಯ ಮಾದರಿಯಲ್ಲಿ ಮತ್ತೆ ಭಯೋತ್ಪಾದಕ ದಾಳಿ ನಡೆಸುವ ಬೆದರಿಕೆ ಹಾಕಲಾಗಿದೆ.

ಮುಂಬೈನಲ್ಲಿ ಪೊಲೀಸರ ಕಟ್ಟೆಚ್ಚರ

ಮುಂಬೈನಲ್ಲಿ ಪೊಲೀಸರ ಕಟ್ಟೆಚ್ಚರ

  • Share this:
ಮುಂಬೈ: 2008ರ ನವೆಂಬರ್ 26ರಂದು ಮುಂಬೈನಲ್ಲಿ (Mumbai) ನಡೆದ ಭಯೋತ್ಪಾದಕರ ದಾಳಿಯನ್ನೂ (Terror Attack) ಯಾವುದೇ ಭಾರತೀಯರೂ (Indians) ಮರೆತಿಲ್ಲ, ಮರೆಯುವುದೂ ಇಲ್ಲ. ಪಾಕಿಸ್ತಾನ (Pakistan) ಕೃಪಾಪೋಷಿತ ಭಯೋತ್ಪಾದಕರು ನಡೆಸಿದ ಆ ಮಾರಣ ಹೋಮವನ್ನು ಇಡೀ ಜಗತ್ತೇ (World) ಖಂಡಿಸಿತ್ತು. ಅದರ ನೆನಪು (Memory) ಇನ್ನೂ ಹಸಿಯಾಗಿ ಇರುವಾಗಲೇ ಮುಂಬೈ ಪೊಲೀಸರಿಗೆ (Mumbai Police) ಮತ್ತೊಂದು ಬೆದರಿಕೆ ಕರೆ (threatening call) ಬಂದಿದೆ. ನಿನ್ನೆ ರಾತ್ರಿ ಪಾಕಿಸ್ತಾನದ ನಂಬರ್‌ನಿಂದ (Number) ಬೆದರಿಕೆ ಸಂದೇಶ ಬಂದಿದೆ. 2008ರಲ್ಲಿ ನಡೆದ 26/11ರ ಮುಂಬೈ ದಾಳಿಯ ಮಾದರಿಯಲ್ಲಿ ಮತ್ತೆ ಭಯೋತ್ಪಾದಕ ದಾಳಿ ನಡೆಸುವ ಬೆದರಿಕೆ ಹಾಕಲಾಗಿದೆ.

ಪಾಕಿಸ್ತಾನದಿಂದ ಬಂತು ಬೆದರಿಕೆ ಸಂದೇಶ

ಮುಂಬೈ ಟ್ರಾಫಿಕ್ ಪೊಲೀಸರ ಸಹಾಯವಾಣಿ ಸಂಖ್ಯೆಗೆ ನಿನ್ನೆ ರಾತ್ರಿ ಪಾಕಿಸ್ತಾನದ ನಂಬರ್‌ನಿಂದ ಬೆದರಿಕೆ ಸಂದೇಶ ಬಂದಿದೆ ಅಂತ ಮೂಲಗಳು ತಿಳಿಸಿವೆ. ಮಹಾರಾಷ್ಟ್ರದ ರಾಯಗಢ ಕರಾವಳಿಯಲ್ಲಿ ಶಸ್ತ್ರಾಸ್ತ್ರಗಳು ತುಂಬಿದ್ದ ದೋಣಿಗಳು ಪತ್ತೆಯಾಗಿದ್ದವು. ಇದಾದ ಎರಡು ದಿನಗಳ ನಂತರ ಈ ಸಂದೇಶಗಳು ಬಂದಿವೆ. 2008 ರಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತೇವೆ ಅಂತ ಬೆದರಿಕೆ ಹಾಕಲಾಗಿದೆ. ಮತ್ತೆ ಮುಂಬೈ ನಗರದಲ್ಲಿ ಶೀಘ್ರದಲ್ಲೇ ದಾಳಿ ನಡೆಸುತ್ತೇವೆ ಅಂತ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರಂತೆ.

“ದಾಳಿಗೆ ಭಾರತದಲ್ಲೇ ಸಹಾಯ ಮಾಡುತ್ತಾರೆ”

ಮುಂಬೈ ಟ್ರಾಫಿಕ್ ಪೊಲೀಸರಿಗೆ ಕಳುಹಿಸಲಾದ ವಾಟ್ಸಾಪ್ ಸಂದೇಶಗಳಲ್ಲಿ ತಾನು ಪಾಕಿಸ್ತಾನದವನಾಗಿದ್ದು, ಮುಂಬೈನಲ್ಲಿ ದಾಳಿ ನಡೆಸಲಾಗುವುದು ಎಂದು ಹೇಳಿದ್ದಾನೆ. ತಾನು ಪಾಕಿಸ್ತಾನದವನಾಗಿದ್ದು, ಭಾರತದಲ್ಲಿ ದಾಳಿ ನಡೆಸಲು ಕೆಲವು ವ್ಯಕ್ತಿಗಳು ಸಹಾಯ ಮಾಡುತ್ತಿದ್ದಾರೆ ಎಂದು ವ್ಯಕ್ತಿ ಹೇಳಿದ್ದಾನೆ. ಆ ಸಂದೇಶದಲ್ಲಿ ಕೆಲವು ಮೊಬೈಲ್‌ ಸಂಖ್ಯೆಗಳನ್ನು ಹಂಚಿಕೊಳ್ಳಲಾಗಿದೆ. ಜೊತೆಗೆ ಈ ವರ್ಷ ಸಿಧು ಮೂಸೆವಾಲ ಹಾಗೂ ರಾಜಸ್ಥಾನದ ಉದಯಪುರದ ಟೇಲರ್ ಕನ್ಹಲ್ಯ ಲಾಲ್ ಅವರ ಹತ್ಯೆಯಂತೆ ವ್ಯಕ್ತಿಗಳ ಮೇಲೆ ಅಟ್ಯಾಕ್ ಮಾಡಿ, ಹತ್ಯೆ ಮಾಡುತ್ತೇವೆ ಅಂತ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: Explained: ಅಲ್ ಖೈದಾ ಮುಖ್ಯಸ್ಥನ ಹತ್ಯೆ ಹೇಗಾಯ್ತು? ಅಮೆರಿಕಾ ಇವನನ್ನೇ ಏಕೆ ಟಾರ್ಗೆಟ್ ಮಾಡಿತ್ತು?

ಮುಂಬೈ ಪೊಲೀಸ್ ಆಯುಕ್ತರಿಂದ ಮಾಹಿತಿ

“ಕಳೆದ ರಾತ್ರಿ 11.35 ರ ಸುಮಾರಿಗೆ ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಮ್ ಫೋನ್ ಸಂಖ್ಯೆಗಳಲ್ಲಿ ಕೆಲವು ಭಯೋತ್ಪಾದನೆ ಸಂಬಂಧಿತ ಸಂದೇಶಗಳನ್ನು ಸ್ವೀಕರಿಸಲಾಗಿದೆ. ಮೇಲ್ನೋಟಕ್ಕೆ, ಈ ಸಂಖ್ಯೆಯು ಪಾಕಿಸ್ತಾನದವರೆಂದು ತೋರುತ್ತದೆ, ”ಎಂದು ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್  ಸುದ್ದಿಗಾರರಿಗೆ ತಿಳಿಸಿದರು.

ಕಿಡಿಗೇಡಿಗಳಿಗಾಗಿ ಪೊಲೀಸರಿಂದ ಶೋಧ

ನಿನ್ನೆ ಪೊಲೀಸರು ಸ್ವೀಕರಿದ ವಾಟ್ಸಾಪ್ ಸಂದೇಶಗಳಲ್ಲಿ ಮುಂಬೈಗೆ ಭಯೋತ್ಪಾದಕ ಬೆದರಿಕೆ ಇದೆ ಎಂದು ಉಲ್ಲೇಖಿಸಲಾಗಿದೆ. ಸಂದೇಶಗಳಲ್ಲಿ ನಮೂದಿಸಲಾದ ಕೆಲವು ಸಂಖ್ಯೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಚಾಟ್‌ಗಳಲ್ಲಿನ ಸಂಖ್ಯೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಮುಂಬೈ ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಯಾರಿಗೂ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮುಂಬೈ ಪೊಲೀಸ್ ಕಮಿಷನರ್ ಹೇಳಿದ್ದಾರೆ.

ಘಟನೆ ಸಂಬಂಧ ಒಬ್ಬ ಆರೋಪಿ ಬಂಧನ?

ಪ್ರಕರಣಕ್ಕೆ ಸಂಬಂಧಿಸಿ ಇಂದು ಮುಂಬೈ ಸಮೀಪದ ವಿರಾರ್‌ನಲ್ಲಿ ಓರ್ವನನ್ನು ಬಂಧಿಸಲಾಗಿದೆ. ಮುಂಬೈ ಅಪರಾಧ ತನಿಖಾ ದಳ ಬಂಧಿತನನ್ನು ವಿಚಾರಣೆ ನಡೆಸುತ್ತಿದೆ ಅಂತ ಹೇಳಲಾಗುತ್ತಿದೆಯ

ಇದನ್ನೂ ಓದಿ: Explained: ಹೇಗಿದೆ ಭಾರತ-ಪಾಕ್ ಸಂಬಂಧ? ವಾಸ್ತವಿಕ ಅಂಶಗಳನ್ನು ವಿವರಿಸುವ ಪುಸ್ತಕವಿದು

ಮುಂಬೈ ನಗರದಾದ್ಯಂತ ತೀವ್ರ ಕಟ್ಟೆಚ್ಚರ

ಇನ್ನು ಮುಂಬೈ ಪೊಲೀಸರು, ಅದರ ಅಪರಾಧ ವಿಭಾಗದ ವಿಭಾಗ ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಸೇರಿದಂತೆ ಎಲ್ಲಾ ಏಜೆನ್ಸಿಗಳು ಪ್ರಕರಣದ ತನಿಖೆ ನಡೆಸುತ್ತಿವೆ. ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈ ನಗರದ ಸೂಕ್ಷ್ಮ ಪ್ರದೇಶ ಸೇರಿದಂತೆ ನಗರದಾದ್ಯಂತ ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
Published by:Annappa Achari
First published: