• Home
  • »
  • News
  • »
  • national-international
  • »
  • Terrorists Encounter: ಶ್ರೀನಗರದಲ್ಲಿ ಬೆಳ್ಳಂಬೆಳಗ್ಗೆ ಎನ್​ಕೌಂಟರ್; ಎಲ್ಇಟಿ ಕಮಾಂಡರ್, ಪಾಕಿಸ್ತಾನಿ ಉಗ್ರನ ಹತ್ಯೆ

Terrorists Encounter: ಶ್ರೀನಗರದಲ್ಲಿ ಬೆಳ್ಳಂಬೆಳಗ್ಗೆ ಎನ್​ಕೌಂಟರ್; ಎಲ್ಇಟಿ ಕಮಾಂಡರ್, ಪಾಕಿಸ್ತಾನಿ ಉಗ್ರನ ಹತ್ಯೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶ್ರೀನಗರದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಪಾಕಿಸ್ತಾನಿ ಉಗ್ರ ಮತ್ತು ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರನನ್ನು ಹತ್ಯೆ ಮಾಡಲಾಗಿದೆ.

  • Share this:

ಶ್ರೀನಗರ (ಜೂನ್ 29): ಇಂದು ಬೆಳ್ಳಂಬೆಳಗ್ಗೆ ಭಾರತೀಯ ಗಡಿ ಭದ್ರತಾ ಪಡೆಯ ಸಿಬ್ಬಂದಿ (BSF) ನಡೆಸಿದ ಎನ್​ಕೌಂಟರ್​ನಲ್ಲಿ ಪಾಕಿಸ್ತಾನಿ ಉಗ್ರ ಮತ್ತು ಲಷ್ಕರ್-ಇ-ತೊಯ್ಬಾ (LeT) ಸಂಘಟನೆಯ ಕಮಾಂಡರ್ ನದೀಮ್ ಅಬ್ರಾರ್ ಭಟ್ ಅವರನ್ನು ಹೊಡೆದುರುಳಿಸಲಾಗಿದೆ. ಶ್ರೀನಗರದ ಮಲ್ಹೋರ ಪರಿಂಪೊರದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಎಲ್ಇಟಿ ಕಮಾಂಡರ್ ಮತ್ತು ಪಾಕಿಸ್ತಾನಿ ಉಗ್ರನನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿದೆ.


ಈ ಬಗ್ಗೆ ಕಾಶ್ಮೀರ ವಲಯದ ಪೊಲೀಸರು ಮಾಹಿತಿ ನೀಡಿದ್ದಾರೆ. ಶ್ರೀನಗರದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಪಾಕಿಸ್ತಾನಿ ಉಗ್ರ ಮತ್ತು ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ಟ್ವಿಟ್ಟರ್​ನಲ್ಲಿ ಖಚಿತಪಡಿಸಿದ್ದಾರೆ.ಇದನ್ನೂ ಓದಿ: Karnataka Weather Today: ಇಂದಿನಿಂದ 3 ದಿನ ಕರ್ನಾಟಕದಲ್ಲಿ ಭಾರೀ ಮಳೆ; ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ


ಭಾರತೀಯ ಗಡಿ ಭದ್ರತಾ ಪಡೆಯ ಸಿಬ್ಬಂದಿ ಮೇಲೂ ಇತ್ತೀಚೆಗೆ ದಾಳಿ ನಡೆಸಿದ್ದ ಎಲ್ಇಟಿ ಕಮಾಂಡರ್ ಅಬ್ರಾರ್ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ಕಾಶ್ಮೀರದ ನಾಗರಿಕರ ಮೇಲೂ ಹಲ್ಲೆ ನಡೆಸಿದ್ದ. ಆತನನ್ನು ಸೆರೆಹಿಡಿಯಲು ಹಲವು ತಿಂಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಇಂದು ಮುಂಜಾನೆ ಆತ ಭದ್ರತಾ ಪಡೆಯ ಗುಂಡೇಟಿಗೆ ಬಲಿಯಾಗಿದ್ದಾನೆ.ಕಾಶ್ಮೀರದ ಶ್ರೀನಗರದಲ್ಲಿ ಸುಮಾರು 13 ಗಂಟೆಗಳಿಂದ ಉಗ್ರರು ಮತ್ತು ಪೊಲೀಸರು ಹಾಗೂ ಭದ್ರತಾ ಪಡೆಯ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಕಾರ್ಯಾಚರಣೆಯಲ್ಲಿ ಇಂದು ಇಬ್ಬರು ಉಗ್ರರನ್ನು ಎನ್​ಕೌಂಟರ್ ಮಾಡಲಾಗಿದೆ. ಎನ್​ಕೌಂಟರ್ ನಡೆದ ಸ್ಥಳದಿಂದ ಎಕೆ-47 ರೈಫಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.ಇದನ್ನೂ ಓದಿ: Talguppa Express: ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನ ಕಾಲೇ ತುಂಡಾಯ್ತು!


ಎಲ್ಇಟಿ ಕಮಾಂಡರ್ ಅಬ್ರಾರ್​ನನ್ನು ಈಗಾಗಲೇ ಜಮ್ಮು ಕಾಶ್ಮೀರದ ಪೊಲೀಸರು ಬಂಧಿಸಿದ್ದರು. ಸಿಆರ್​ಪಿಎಫ್, ಭಾರತೀಯ ಸೇನಾಪಡೆ ಮತ್ತು ಕಾಶ್ಮೀರದ ಪೊಲೀಸರು ಜಂಟಿಯಾಗಿ ಆತನನ್ನು ವಿಚಾರಣೆ ನಡೆಸುವಾಗ ತನ್ನ ಅಡಗುತಾಣ, ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದ. ಹೀಗಾಗಿ, ಆತನನ್ನು ಮೆಲ್ಹೋರಕ್ಕೆ ಕರೆದುಕೊಂಡು ಹೋಗಲಾಗಿತ್ತು.ಆದರೆ, ಈ ವೇಳೆ ತನ್ನ ಕುತಂತ್ರ ಬುದ್ಧಿಯನ್ನು ತೋರಿಸಿದ ಅಬ್ರಾರ್, ಶಸ್ತ್ರಾಸ್ತ್ರಗಳನ್ನು ತೋರಿಸಲು ತನ್ನ ಮನೆಯೊಳಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಮನೆಯ ಬಾಗಿಲಿನ ಹಿಂದೆ ಅಡಗಿದ್ದ ಉಗ್ರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ನಿನ್ನೆಯಿಂದ ಭದ್ರತಾ ಪಡೆಯ ಸಿಬ್ಬಂದಿ ಮತ್ತು ಉಗ್ರರು ನಡುವೆ ನಡೆಯುತ್ತಿದ್ದ ಈ ಗುಂಡಿನ ದಾಳಿಯಲ್ಲಿ ಮೂವರು ಸಿಆರ್​ಪಿಎಫ್ ಯೋಧರು ಗಾಯಗೊಂಡಿದ್ದರು.

ಇಂದು ಮುಂಜಾನೆ ಅಬ್ರಾರ್ ಸೇರಿದಂತೆ ಇನ್ನೊಬ್ಬ ಪಾಕಿಸ್ತಾನಿ ಉಗ್ರನನ್ನು ಕೂಡ ಎನ್​ಕೌಂಟರ್​​ನಲ್ಲಿ ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆ ವೇಳೆ ಆ ಪ್ರದೇಶದಲ್ಲಿ ಸಿಲುಕಿದ್ದ ನಾಗರಿಕರನ್ನು ಭದ್ರತಾ ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ.

Published by:Sushma Chakre
First published: