• Home
  • »
  • News
  • »
  • national-international
  • »
  • ಬೆಳ್ಳಂಬೆಳಗ್ಗೆ ಕಾಶ್ಮೀರದ ಸೋಪೋರ್​ನಲ್ಲಿ ಎನ್​ಕೌಂಟರ್ ಕಾರ್ಯಾಚರಣೆ ಆರಂಭ

ಬೆಳ್ಳಂಬೆಳಗ್ಗೆ ಕಾಶ್ಮೀರದ ಸೋಪೋರ್​ನಲ್ಲಿ ಎನ್​ಕೌಂಟರ್ ಕಾರ್ಯಾಚರಣೆ ಆರಂಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Kashmir Encounter: ಉತ್ತರ ಕಾಶ್ಮೀರದ ಸೋಪೋರ್​ನಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಉಗ್ರರಿರುವ ಜಾಗವನ್ನು ಸುತ್ತುವರೆದಿದ್ದಾರೆ.

  • Share this:

ಶ್ರೀನಗರ (ಜೂ. 25): ಜಮ್ಮು ಮತ್ತು ಕಾಶ್ಮೀರದ ಬರಾಮುಲ್ಲ ಜಿಲ್ಲೆಯ ಸೋಪೋರ್​ನಲ್ಲಿ ಇಂದು ಬೆಳಗ್ಗೆಯಿಂದ ಎನ್​ಕೌಂಟರ್ ಕಾರ್ಯಾಚರಣೆ ಶುರುವಾಗಿದೆ. ಭಾರತೀಯ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಎನ್​ಕೌಂಟರ್​ ಕಾರ್ಯಾಚರಣೆ ನಡೆಯುತ್ತಿದೆ.


ಉತ್ತರ ಕಾಶ್ಮೀರದ ಸೋಪೋರ್​ನಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಉಗ್ರರಿರುವ ಜಾಗವನ್ನು ಸುತ್ತುವರೆದಿದ್ದಾರೆ. ಉಗ್ರರು ಅಡಗಿರುವ ಸ್ಥಳದಲ್ಲಿ ಉಗ್ರರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಯಾರೊಬ್ಬರೂ ಸಾವನ್ನಪ್ಪಿರುವ ಅಥವಾ ಗಾಯಗೊಂಡಿರುವ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ.ಎನ್​​ಕೌಂಟರ್ ಕಾರ್ಯಾಚರಣೆ ಹಿನ್ನೆಲೆ ಸೋಪೋರ್​ನಲ್ಲಿ ಮೊಬೈಲ್ ನೆಟ್​ವರ್ಕ್ ಸ್ಥಗಿತಗೊಳಿಸಲಾಗಿದೆ. ಮೂರ್ನಾಲ್ಕು ಉಗ್ರರು ಸೆರೆಯಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

Published by:Sushma Chakre
First published: