ನವದೆಹಲಿ (ಡಿ. 17): ಪಂಜಾಬ್ನ ಅತ್ತಾರಿ- ವಾಘಾ ಗಡಿಯಲ್ಲಿ ಭಾರತದೊಳಗೆ ನುಸುಳಲು ಪ್ರಯತ್ನಿಸಿದ ಇಬ್ಬರು ಉಗ್ರರನ್ನು ಇಂದು ಮುಂಜಾನೆ ಬಿಎಸ್ಎಫ್ (ಗಡಿ ಭದ್ರತಾ ಪಡೆ) ಸಿಬ್ಬಂದಿ ಹತ್ಯೆ ಮಾಡಿದ್ದಾರೆ. ಅಮೃತಸರದ ಅತ್ತಾರಿ ಗಡಿಯಲ್ಲಿ ನಿನ್ನೆ ರಾತ್ರಿ ಉಗ್ರರು ನುಸುಳಲು ಪ್ರಯತ್ನಿಸುತ್ತಿದ್ದ ವೇಳೆ ಬಿಎಸ್ಎಫ್ ಯೋಧರು ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಬಿಎಸ್ಎಫ್ ಪಡೆಯ ಎಚ್ಚರಿಕೆಯನ್ನು ಲೆಕ್ಕಿಸದೆ ಭಾರತದ ಗಡಿಯೊಳಗೆ ಅಕ್ರಮವಾಗಿ ನುಗ್ಗಲು ಪ್ರಯತ್ನಿಸಿದ ಉಗ್ರರಿಬ್ಬರನ್ನು ಮಧ್ಯರಾತ್ರಿ 2.30ರ ವೇಳೆಗೆ ಬಿಎಸ್ಎಫ್ ಯೋಧರು ಹೊಡೆದುರುಳಿಸಿದ್ದಾರೆ.
ಬಿಎಸ್ಎಫ್ ಮತ್ತು ಉಗ್ರರ ನಡುವೆ ರಾತ್ರಿಯಿಂದ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈಯುವಲ್ಲಿ ಬಿಎಸ್ಎಫ್ ಯೋಧರು ಯಶಸ್ವಿಯಾಗಿದ್ದಾರೆ. ಅತ್ತಾರಿ ಗಡಿ ಭಾಗದಲ್ಲಿ ಇಬ್ಬರು ಉಗ್ರರು ಒಳ ನುಸುಳಲು ಹೊಂಚು ಹಾಕುತ್ತಿದ್ದರು. ಆಗ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಗಡಿ ಭದ್ರತಾ ಪಡೆಯ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅದಕ್ಕೆ ಬಗ್ಗದ ಉಗ್ರರು ಗಡಿಯೊಳಗೆ ನುಸುಳಲು ಮುಂದಾದಾಗ ಅವರಿಬ್ಬರನ್ನೂ ಹತ್ಯೆ ಮಾಡಲಾಗಿದೆ.
Punjab: Two intruders at Attari border eliminated by Border Security Force, weapons recovered; Search operation underway
— ANI (@ANI) December 17, 2020
One AK 56 Rifle, two magazines with 61 live rounds, one magnum rifle, one magazine with 29 rounds, one pistol, two magazines, two PVC pipes, and Pakistani rupees 30 recovered from the possession of two Pakistani intruders at the Attari border. Search operation underway.
— ANI (@ANI) December 17, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ