ಶ್ರೀನಗರ (ಜೂನ್ 28): ಜಮ್ಮು ಕಾಶ್ಮೀರದ ತ್ರಾಲ್ನ ಹರಿಪರಿಗಂ ಪ್ರದೇಶದಲ್ಲಿ ಮನೆಯೊಳಗೆ ನುಗ್ಗಿ, ಉಗ್ರರು ನಡೆಸಿದ ಗುಂಡಿನ ದಾಳಿಗೆ ವಿಶೇಷ ಪೊಲೀಸ್ ಅಧಿಕಾರಿ, ಅವರ ಹೆಂಡತಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿಯ ಮೇಲೆ ಗನ್ಮ್ಯಾನ್ಗಳು ಗುಂಡು ಹಾರಿಸುತ್ತಿದ್ದಂತೆ ಅವರನ್ನು ಕಾಪಾಡಲು ಹೋದ ಪೊಲೀಸ್ ಅಧಿಕಾರಿಯ ಹೆಂಡತಿ ಮತ್ತು ಮಗಳ ಮೇಲೂ ಫೈರಿಂಗ್ ನಡೆಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ವಿಶೇಷ ಪೊಲೀಸ್ ಅಧಿಕಾರಿ (SPO) ಆಗಿರುವ ಫಯಾಜ್ ಅಹಮದ್ ಭಟ್ ಈ ರೀತಿ ಉಗ್ರರ ಗುಂಡೇಟಿಗೆ ಬಲಿಯಾದವರು. ಫಯಾಜ್ ಅವರ ತಲೆಗೆ ಗುಂಡು ಹಾರಿಸಿದ ಉಗ್ರರು ಏಕಾಏಕಿ ಹಲ್ಲೆ ನಡೆಸಿದರು. ಈ ವೇಳೆ ಅಡ್ಡ ಬಂದ ಫಯಾಜ್ ಅವರ ಹೆಂಡತಿ ಮತ್ತು ಮಗಳ ಮೇಲೂ ಉಗ್ರರು ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಫಯಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
I strongly condemn brutal terrorist attack on SPO Fayaz Ahmad & his family at Awantipora. This is an act of cowardice & perpetrators of violence will be brought to justice very soon. My deepest condolences to the family of martyr & prayers for the recovery of injured.
— Office of LG J&K (@OfficeOfLGJandK) June 27, 2021
ಇದನ್ನೂ ಓದಿ: SSLC Exam Date: ಶಾಲಾ-ಕಾಲೇಜು ಆರಂಭದ ಬಗ್ಗೆ ಇಂದು ಮಹತ್ವದ ಸಭೆ; ಇಂದೇ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ
ನಿನ್ನೆ ರಾತ್ರಿ 11 ಗಂಟೆ ವೇಳೆಯಲ್ಲಿ ಆವಂತಿಪುರ ಏರಿಯಾದಲ್ಲಿದ್ದ ಎಸ್ಪಿಓ ಫಯಾಜ್ ಅಹಮದ್ ಅವರ ಮನೆಗೆ ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದ್ದಕ್ಕಿದ್ದಂತೆ ಮನೆಯೊಳಗೆ ನುಗ್ಗಿದ ಅಪರಿಚಿತರನ್ನು ಕಂಡು ವಿಚಲಿತಗೊಂಡ ಫಯಾಜ್ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಅವರು ಗುಂಡೇಟಿಗೆ ಬಲಿಯಾಗಿದ್ದಾರೆ. ಅವರನ್ನು ರಕ್ಷಿಸಲು ಅಡ್ಡಬಂದ ಹೆಂಡತಿ, ಮಗಳು ಕೂಡ ಉಗ್ರರ ದಾಳಿಯಿಂದ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.
#Terrorists barged into the house of SPO Fayaz Ahmad of Hariparigam Awantipora & fired #indiscriminately. In this #terror incident, he along with his wife & daughter recieved #critical gunshot injuries. Fayaz Ahmad #succumbed to his injuries. Area cordoned off. Search going on.
— Kashmir Zone Police (@KashmirPolice) June 27, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ