Terrorist Attack in Kashmir| ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಅಟ್ಟಹಾಸ; ಉಗ್ರರ ಗುಂಡೇಟಿಗೆ ಬಿಹಾರಿ ಕಾರ್ಮಿಕರು ಬಲಿ!

Jammu Kashmir: ಭದ್ರತಾ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪೊಲೀಸರ ಪ್ರಕಾರ, ಕಳೆದ ಒಂದು ವಾರದಲ್ಲಿ 13 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಸೇನೆ ಮಾಹಿತಿ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಾಶ್ಮೀರ್​ (ಅಕ್ಟೋಬರ್​ 18); ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ (Jammu and Kashmir) ಇತ್ತೀಚೆಗೆ ಉಗ್ರರ ಚಟುವಟಿಕೆ ಅಧಿಕವಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಅನೇಕ ಉಗ್ರರು (Terrorist Attack) ಗಡಿ ದಾಟಿ ಭಾರತಕ್ಕೆ ಆಗಮಿಸಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲದೆ, ಇತ್ತೀಚೆಗೆ ಸಾರ್ವಜನಿಕರ ಮೇಲೆ ಮನಸ್ಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದ ಉಗ್ರರು 5 ನಾಗರೀಕರನ್ನು ಹತ್ಯೆ ಮಾಡಿದ್ದರು. ಘಟನೆಯ ನಂತರ ಫೂಂಚ್​ (Punch) ನಗರದ ಸ್ಥಳೀಯರೇ ಉಗ್ರರಿಗೆ ಆಶ್ರಯ ನೀಡಿದ್ದಾರೆ ಎಂಬ ಮಾಹಿತಿ ಅನ್ವಯ ಕಳೆದ ನಾಲ್ಕು ದಿನಗಳಿಂದ ಸೇನೆ ಈ ಭಾಗದಲ್ಲಿ ಕೂಂಬಿಂಗ್ (Coombing) ಕಾರ್ಯಚರಣೆ ನಡೆಸುತ್ತಿದೆ. ಈ ಕಾರ್ಯಾಚರಣೆಯಲ್ಲೂ 9 ಜನ ಸೈನಿಕರು ಹುತಾತ್ಮರಾಗಿದ್ದಾರೆ. ಈ ನಡುವೆ ಇಂದು ಸಹ ಉಗ್ರರು ಸಾರ್ವಜನಿಕ ಸ್ಥಳದಲ್ಲಿ ನಾಗರೀಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಬ್ಬರು ಬಿಹಾರಿ ಕಾರ್ಮಿಕರು ಬಲಿಯಾಗಿದ್ದಾರೆ. ಅಲ್ಲದೆ, ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇದರೊಂದಿಗೆ ಈ ತಿಂಗಳಲ್ಲಿ ಭಯೋತ್ಪಾದಕರಿಗೆ ಬಲಿಯಾದ ನಾಗರೀಕರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

  ಉಗ್ರರ ದಾಳಿಗೆ ಇಬ್ಬರು ಕಾರ್ಮಿಕರು ಸಾವು!:

  ಕಲ್ಗುಮ್‌ ಜಿಲ್ಲೆಯ ವಾನ್ಪೋವ್‌‌ನಲ್ಲಿ ಭಾನುವಾರ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದಾನೆ.
  ಕಣಿವೆ ಪ್ರಾಂತ್ಯದಲ್ಲಿ ಬಿಹಾರದ ಗೋಲ್‌ಗುಪ್ಪ ವ್ಯಾಪಾರಿ ಹಾಗೂ ಉತ್ತರ ಪ್ರದೇಶದ ಬಡಗಿಯ ಹತ್ಯೆಯ ಒಂದು ದಿನದ ಬಳಿಕ ಮತ್ತೊಮ್ಮೆ ಭಯೋತ್ಪಾದಕರಿಂದ ದಾಳಿಯಾಗಿದೆ.

  ಗೋಲ್‌ಗುಪ್ಪ ವ್ಯಾಪಾರಿ ಅರ್ಬಿನ್‌ ಕುಮಾರ್‌ ಶಾ ಅವರು ಶ್ರೀನಗರದಲ್ಲಿ, ಬಡಗಿ ಸಗೀರ್‌ ಅಹಮದ್‌ ಅವರು ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  ಕಳೆದ ಒಂದು ತಿಂಗಳಲ್ಲಿ 11 ನಾಗರೀಕರು ಬಲಿ!

  ನಾಗರೀಕರ ಮೇಲೆ ನಡೆದ ದಾಳಿಯಲ್ಲಿ ಜೀವ ಕಳೆದುಕೊಂಡ 11 ಮಂದಿಯಲ್ಲಿ ಐವರು ಹೊರರಾಜ್ಯಗಳಿಂದ ಬಂದವರಾಗಿದ್ದಾರೆ. ಕಾಶ್ಮೀರದಿಂದ ಇತರ ರಾಜ್ಯಗಳ ಜನರನ್ನು ಹೊರಗೆ ಓಡಿಸಲು ಭಯೋತ್ಪಾದಕರು ಬಯಸಿದಂತಿದೆ ಎಂದು ಮೂಲಗಳು ಹೇಳಿವೆ.

  ಈ ಹತ್ಯೆಗಳು ಕಣಿವೆಯಲ್ಲಿ ಭಯವನ್ನು ಹುಟ್ಟುಹಾಕಿದ್ದು, ಸಂಚಾರಿ ಶಿಬಿರಗಳಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತ್ ಕುಟುಂಬಗಳು ಹೊರಹೋಗಲು ಉತ್ತೇಜಿಸಿವೆ. ಕಾಶ್ಮೀರಿ ವಲಸಿಗರಿಗಾಗಿ ಜಾರಿಗೊಳಿಸಲಾಗಿದ್ದ ಪ್ರಧಾನ ಮಂತ್ರಿಯವರ ವಿಶೇಷ ಯೋಜನೆಯಡಿ ಕೆಲಸಗಳನ್ನು ಪಡೆದು ಕಣಿವೆಗೆ ಮರಳಿದ್ದ ಸರ್ಕಾರಿ ನೌಕರರ ಕುಟುಂಬಗಳು ಸೇರಿದಂತೆ ಹತ್ತಾರು ಕುಟುಂಬಗಳು ಹೊರಬಂದಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
  ಬಿಹಾರಿ ಕಾರ್ಮಿಕರ ಹತ್ಯೆಯ ಬಳಿಕ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಕರೆ ಮಾಡಿದ್ದಾರೆ.

  ಇದನ್ನೂ ಓದಿ: Terrorist Attack| ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಉಗ್ರರು ಫಿನಿಶ್; ನಾಲ್ಕು ದಿನಗಳ ನಂತರ ಮೃತ ಸೈನಿಕರ ದೇಹ ಪತ್ತೆ!

  ಉಗ್ರ ಚಟುವಟಿಕೆ ಹಿಂದೆ ಪಾಕ್ ಕೈವಾಡ:

  ಈ ಹತ್ಯೆಗಳಲ್ಲಿ ಪಾಕ್‌ ಕಮಾಂಡೋಗಳ ಕೈವಾಡವಿದೆ” ಎಂದು ಶಂಕಿಸಲಾಗಿದೆ ಎಂದು ಮೂಲಗಳು ಹೇಳಿವೆ. “ನಾವು ಭಯೋತ್ಪಾದಕರನ್ನು ಸದೆಬಡಿಯುತ್ತೇವೆ" ಎಂದು ಲೆಫ್ಟಿನೆಂಟ್‌ ಗವರ್ನರ್‌ ತಿಳಿಸಿದ್ದಾರೆ.

  ದಾಳಿಗಳ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರತ್ಯೇಕತಾವಾದಿಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಕೇಂದ್ರಾಡಳಿತ ಪ್ರದೇಶದಾದ್ಯಂತ ಸುಮಾರು 900 ಜನರನ್ನು ಬಂಧಿಸಿದ್ದಾರೆ. ಅಲ್ಲದೆ, ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತದೆ. ಆದರೆ, ಕಣಿವೆ ರಾಜ್ಯದಲ್ಲಿ ಸದ್ಯಕ್ಕೆ ಪರಿಸ್ಥಿತಿ ಪ್ರಕ್ಷುಬ್ಧವಾಗಿದ್ದು, ಉಗ್ರಗಾಮಿಗಳ ಭಯಕ್ಕೆ ಜನ ಮನೆಯಿಂದ ಹೊರ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.

  ಇದನ್ನೂ ಓದಿ: Pakistan Debt - ಇಮ್ರಾನ್ ಖಾನ್ ಸರ್ಕಾರಕ್ಕೆ ಸಾಲ ನೀಡಲ್ಲ ಎಂದ IMF - ಸಾಲ ಕೇಳಿದೆಷ್ಟು ಗೊತ್ತಾ?

  ಸೇನೆಯ ದಾಳಿಗೆ 13 ಭಯೋತ್ಪಾದಕರು ಬಲಿ:

  ಭದ್ರತಾ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪೊಲೀಸರ ಪ್ರಕಾರ, ಕಳೆದ ಒಂದು ವಾರದಲ್ಲಿ 13 ಭಯೋತ್ಪಾದಕರು ಹತರಾಗಿದ್ದಾರೆ. “ನಾಗರಿಕರ ಹತ್ಯೆಗಳ ನಂತರ ಒಂಬತ್ತು ಎನ್‌ಕೌಂಟರ್‌ಗಳಲ್ಲಿ 13 ಭಯೋತ್ಪಾದಕರನ್ನು ಸಾಯಿಸಿದ್ದೇವೆ. ಶ್ರೀನಗರದಲ್ಲಿ ಐವರು ಭಯೋತ್ಪಾದಕರಲ್ಲಿ ಮೂವರನ್ನು 24 ಗಂಟೆಗಳಲ್ಲಿ ನಾವು ಸಾಯಿಸಿದ್ದೇವೆ” ಎಂದು ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
  Published by:MAshok Kumar
  First published: