• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Perfume IED: ಜಮ್ಮುವಿನಲ್ಲಿ ಹಲವು ಸ್ಪೋಟ ಪ್ರಕರಣಗಳ ಆರೋಪಿ ಬಂಧನ, ಸರ್ಕಾರಿ ನೌಕರನಾಗಿದ್ದ ಉಗ್ರನ ಮನೆಯಲ್ಲಿ ಸಿಕ್ತು ಪರ್ಫ್ಯೂಮ್ IED!

Perfume IED: ಜಮ್ಮುವಿನಲ್ಲಿ ಹಲವು ಸ್ಪೋಟ ಪ್ರಕರಣಗಳ ಆರೋಪಿ ಬಂಧನ, ಸರ್ಕಾರಿ ನೌಕರನಾಗಿದ್ದ ಉಗ್ರನ ಮನೆಯಲ್ಲಿ ಸಿಕ್ತು ಪರ್ಫ್ಯೂಮ್ IED!

ಜಮ್ಮುವಿನಲ್ಲಿ ಉಗ್ರ ಬಂಧನ

ಜಮ್ಮುವಿನಲ್ಲಿ ಉಗ್ರ ಬಂಧನ

ಸರ್ಕಾರಿ ಹುದ್ದೆಯಲ್ಲಿ ಇದ್ದುಕೊಂಡೇ ಆರಿಫ್​ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ. ಜನವರಿ 21ರಂದು ಜಮ್ಮುವಿನ ನರ್ವಾಲ್​ನಲ್ಲಿ ನಡೆದ ಸ್ಫೋಟದಲ್ಲೂ ಭಾಗಿಯಾಗಿದ್ದ ಎಂದು ಜಮ್ಮು ಡಿಜಿಪಿ ದಿಲ್ಬಾಗ್​ ಸಿಂಗ್​ ತಿಳಿಸಿದ್ದು, ಆತನದಿಂದ ಪರ್ಫ್ಯೂಮ್​ ಐಇಡಿ ಯನ್ನು ( Improvised explosive device) ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮುಂದೆ ಓದಿ ...
  • Share this:

    ನವದೆಹಲಿ: ಹಲವು ಸ್ಫೋಟ ಪ್ರಕರಣಗಳ ಆರೋಪಿಯಾಗಿದ್ದ ಲಷ್ಕರ್-ಎ- ತಯಬಾ (Lashkar-e-Taiba) ಸಂಘಟನೆಯ ಉಗ್ರನೊಬ್ಬನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು (Jammu and Kashmir Police) ಗುರುವಾರ ಬಂಧಿಸಿದ್ದಾರೆ. ರಿಯಾಸಿ ಜಿಲ್ಲೆಯ ಆರಿಫ್ ​(Arif) ಎಂಬ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಸರ್ಕಾರಿ ಶಾಲಾ ಶಿಕ್ಷಕನ (teacher) ಹುದ್ದೆಯಲ್ಲಿ ಇದ್ದುಕೊಂಡೇ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ವೈಷ್ಣೋದೇವಿ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್​ ಸ್ಫೋಟಕ ಪ್ರಕರಣ ಸೇರಿದಂತೆ ಹಲವೆಡೆ ನಡೆದಿದ್ದ ಬಾಂಬ್​ ಬ್ಲಾಸ್ಟ್​ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವೂ ಆರಿಫ್​ ಮೇಲಿದೆ.


    ಲಷ್ಕರ್-ಎ-ತಯಬಾ ಸಂಘಟನೆ ಉಗ್ರ


    ಸರ್ಕಾರಿ ಹುದ್ದೆಯಲ್ಲಿ ಇದ್ದುಕೊಂಡೇ ಆರಿಫ್​ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ. ಜನವರಿ 21ರಂದು ಜಮ್ಮುವಿನ ನರ್ವಾಲ್​ನಲ್ಲಿ ನಡೆದ ಸ್ಫೋಟದಲ್ಲೂ ಭಾಗಿಯಾಗಿದ್ದ ಎಂದು ಜಮ್ಮು ಡಿಜಿಪಿ ದಿಲ್ಬಾಗ್​ ಸಿಂಗ್​ ತಿಳಿಸಿದ್ದು, ಆತನಿಂದ ಪರ್ಫ್ಯೂಮ್​ ಐಇಡಿ ಯನ್ನು ( Improvised explosive device) ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


    11 ದಿನಗಳ ಪರಿಶ್ರಮದಿಂದ ಬಂಧನ


    ಜಮ್ಮುವಿನಲ್ಲಿ ಬ್ಲಾಸ್ಟ್ ನಡೆದ ​ 11 ದಿನಗಳ ನಂತರ ಜಮ್ಮು ಪೊಲೀಸರ ಸತತ ಪರಿಶ್ರಮದಿಂದಾಗಿ ರಿಯಾಸಿ ಜಿಲ್ಲೆಯ ನಿವಾಸಿಯಾಗಿರುವ ಆರಿಫ್ ಅಹ್ಮದ್​ನನ್ನು ಬಂಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಡಿಜಿಪಿ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ. ಗಣರಾಜ್ಯೋತ್ಸವ ಆಚರಣೆಗೆ ಐದು ದಿನ ಬಾಕಿಯಿರುವಾಗ ಜನವರಿ 21ರಂದು ಜಮ್ಮುವಿನ ನರ್ವಾಲ್‌ ಕೈಗಾರಿಕಾ ಪ್ರದೇಶದಲ್ಲಿ ಎರಡು ಐಇಡಿ ಸ್ಫೋಟಿಸಲಾಗಿತ್ತು. ಮೊದಲ ಸ್ಟೋಟದಲ್ಲಿ ಐವರು ಮತ್ತು ಎರಡನೇ ಸ್ಫೋಟದಲ್ಲಿ ನಾಲ್ವರು ಸೇರಿ ಒಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದರು.


    ಇದನ್ನೂ ಓದಿ: Siddique Kappan: 2 ವರ್ಷಗಳ ಜೈಲುವಾಸದ ನಂತರ ಕೊನೆಗೂ ಜಾಮೀನು ಪಡೆದು ಹೊರಬಂದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್

     ಮೂರು ಪ್ರಕರಣಗಳಲ್ಲಿ ಭಾಗಿ


    ಆರಿಫ್ ಸರ್ಕಾರಿ ನೌಕರನಾಗಿದ್ದು, ಲಷ್ಕರ್-ಎ-ತಯಬಾ ಸಂಘಟನೆಯ ಸಕ್ರಿಯ ಉಗ್ರ. ಅವನು ಪಾಕಿಸ್ತಾನ ಮೂಲ ಖಾಸಿಮ್ ಮತ್ತು ಅವರ ಚಿಕ್ಕಪ್ಪ ಕಮರ್ದಿನ್ ಅವರ ಆಜ್ಞೆಯ ಮೇರೆಗೆ ಈ ಕೆಲಸ ಮಾಡುತ್ತಿದ್ದ. ಕಮರ್ದಿನ್​ ಲಷ್ಕರ್-ಎ-ತಯಬಾದ ಸಂಘಟನೆಯಲ್ಲಿದ್ದಾನೆ. ಬಂಧಿತನಾಗಿರುವ ಆರಿಫ್ ಮೂರು ಐಇಡಿ ಸ್ಫೋಟದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. 2010ರಲ್ಲಿ ಸರ್ಕಾರಿ ಶಿಕ್ಷಕನಾಗಿದ್ದ ಸೇರಿದ್ದ ನಂತರ 2016ರಲ್ಲಿ ಶಿಕ್ಷಕ ಹುದ್ದೆಯನ್ನು ಖಾಯಂಗೊಳಿಸಲಾಗಿತ್ತು. ಶಾಸ್ತ್ರಿ ನಗರ, ಕತ್ರಾ ಮತ್ತು ಜನವರಿ 21 ರಂದು ಜಮ್ಮುವಿನ ನರ್ವಾಲ್ ನಡೆದ ಸ್ಫೋಟಗಳಲ್ಲಿ ಈತ ಭಾಗಿಯಾಗಿದ್ದ ಎಂದು ಡಿಜಿಪಿ ದಿಲ್ಬಾಗ್​ ಸಿಂಗ್​ ಮಾಹಿತಿ ನೀಡಿದರು.




    ಪರ್ಫ್ಯೂಮ್ ಐಇಡಿ ಪತ್ತೆ


    ಇಲ್ಲಿಯವರೆಗೆ ನಾವು ಉಗ್ರರ ಬಂಧನ ವೇಳೆ ಸ್ಫೋಟಕ ವಸ್ತುಗಳು, ಬಾಂಬ್‌ಗಳು ಮತ್ತು ಟೈಮರ್ ಅಳವಡಿಸಲಾದ ಐಇಡಿಗಳನ್ನು ನೋಡಿದ್ದೇವೆ. ಆದರೆ ಆರಿಫ್‌ನಿಂದ ಹೊಸ ರೀತಿಯ ಐಇಡಿಯಯನ್ನು ವಶಪಡಿಸಿಕೊಳ್ಳಲಾಗಿದೆ. ಅದು ನೋಡುವುದಕ್ಕೆ ಪರ್ಫ್ಯೂಮ್​ ಬಾಟಲ್​ನಂತಿದೆ. ಆದರೆ ಸ್ಫೋಟಕ ವಸ್ತುಗಳನ್ನು ಒಳಗೊಂಡಿದೆ. ಇದೇ ಮೊದಲ ಬಾರಿಗೆ ಪರ್ಫ್ಯೂಮ್ ಬಾಟಲಿಯ ಮಾದರಿಯ ಐಇಡಿ ದೊರೆತಿದೆ.


    ಇದು ನಮಗೂ ಹೊಸದಾಗಿರುವುದರಿಂದ, ಅದು ಎಷ್ಟು ಹಾನಿಕಾರಕ ಮತ್ತು ಎಷ್ಟು ಶಕ್ತಿಯುತವಾಗಿದೆ ಎಂಬುದನ್ನು ತಜ್ಞರು ಪರೀಕ್ಷೆ ಮಾಡಲಿದ್ದಾರೆ. ನಾವು ಅದನ್ನು ಇಲ್ಲಿಯವರೆಗೆ ಮುಟ್ಟಿಲ್ಲ, ಇದರ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ದಿಲ್ಬಾಗ್​ ಸಿಂಗ್ ಪ್ರಕರಣವನ್ನು ವಿವರಿಸಿದ್ದಾರೆ.


     terrorist held with perfume ied in jammu and kashmir
    ಪರ್ಫ್ಯೂಮ್ ಐಇಡಿ


    ಕೋಮು ದ್ವೇಷ ಪ್ರಚೋದಿಸುವ ಉದ್ದೇಶ


    ಈ ಐಇಡಿಗಳ ಬ್ಲಾಸ್ಟ್​ಗಳ ಪ್ರಮುಖ ಉದ್ದೇಶವೆಂದರೆ ಅಮಾಯಕ ಜನರನ್ನು ಗುರಿಯಾಗಿಸುವುದು ಮತ್ತು ಜಮ್ಮು ಪ್ರದೇಶದಲ್ಲಿ ಕೋಮು ದ್ವೇಷವನ್ನು ಪ್ರಚೋದಿಸುವುದು. ಈ ಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಆರಿಫ್ ತನ್ನ ಕೆಲಸವನ್ನು ಕಳೆದುಕೊಳ್ಳುವುದರ ಜೊತೆಗೆ, ನಾವು ಅವನ ವಿರುದ್ಧ ಬಲವಾದ ದಾಖಲೆಯನ್ನು ಸಿದ್ಧಪಡಿಸುತ್ತಿದ್ದೇವೆ. ಆತ ಬಹಳ ಬುದ್ಧಿವಂತನಾಗಿದ್ದು, ತನ್ನ ಬಟ್ಟೆ, ಶೂ ಮತ್ತು ಮೊಬೈಲ್ ಫೋನ್‌ಗಳನ್ನು ಸುಟ್ಟಿಹಾಕಿದ್ದ. ಆದರೆ ಪೊಲೀಸರು ತಮಗೆ ಸಿಕ್ಕಂತಹ ಸಣ್ಣ ಸುಳಿವಿನಿಂದ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.


    ಡ್ರೋನ್​​ ಮೂಲಕ ಐಇಡಿ ರವಾನೆ


    ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸುವುದರ ಭಾಗವಾಗಿ ಆರಿಫ್ ಕೆಲಸ ಮಾಡುತ್ತಿದ್ದ. ನರ್ವಾಲ್‌ ಪ್ರದೇಶದಲ್ಲಿ ಸ್ಫೋಟಕ್ಕೆ ಬಳಸಿದ ಐಇಡಿಗಳನ್ನು ಕಳೆದ ಡಿಸೆಂಬರ್​ನಲ್ಲಿ ಡ್ರೋನ್‌ಗಳ​ ಮೂಲಕ ಆರಿಫ್​ಗೆ ರವಾನಿಸಲಾಗಿತ್ತು. ನರ್ವಾಲ್‌ ಪ್ರದೇಶದಲ್ಲಿ ಸ್ಫೋಟಗಳ ಮೂಲಕ ಅತಿಹೆಚ್ಚು ಜನರಿಗೆ ಹಾನಿ ಮಾಡುವ ಉದ್ದೇಶವನ್ನು ಈ ಉಗ್ರ ಹೊಂದಿದ್ದ ಎಂದರು.

    Published by:Rajesha B
    First published: