ಪುಲ್ವಾಮಾದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಭಯೋತ್ಪಾದಕ ವಾನಿ ತಂದೆ ಮುಜಾಫರ್

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರಾಳಿತ ಪ್ರದೇಶದ ಎಲ್ಲ ಶಿಕ್ಷಣ ಇಲಾಖೆಗಳು ಸೇರಿದಂತೆ ಎಲ್ಲ ಇಲಾಖೆಗಳು ಸ್ವತಂತ್ರ್ಯೋತ್ಸವದ ದಿನ ಕಡ್ಡಾಯವಾಗಿ ಧ್ವಜಾರೋಹಣ ಮಾಡಬೇಕು ಎಂದು ಕೇಂದ್ರಾಡಳಿತ ಪ್ರದೇಶದ ಆಡಳಿತ ನಿರ್ದೇಶನ ನೀಡಿದೆ.

ಧ್ವಜಾರೋಹಣ ನೆರವೇರಿಸಿದ ಮುಜಾಫರ್ ವಾನಿ.

ಧ್ವಜಾರೋಹಣ ನೆರವೇರಿಸಿದ ಮುಜಾಫರ್ ವಾನಿ.

 • Share this:
  ದೇಶದೆಲ್ಲೆಡೆ ಇಂದು ಸಡಗರದ 75ನೇ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದೆ. ಅದರಂತೆ ಕಾಶ್ಮೀರದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡುತ್ತಿರುವ ಚಿತ್ರವೊಂದು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏಕೆಂದರೆ ಧ್ವಜಾರೋಹಣ ಮಾಡಿದ ವ್ಯಕ್ತಿಯ ಹೆಸರು ಮುಜಾಫರ್ ವಾನಿ.  2016ರಂದು ಕಣಿವೆ ರಾಜ್ಯದಲ್ಲಿ ಹಲವು ವಿಧ್ವಂಸಕ ಕೃತ್ಯ ನಡೆಸಿ, ನೂರಾರು ನಾಗರಿಕರ ಸಾವಿಗೆ ಕಾರಣನಾದ ಭಯೋತ್ಪಾದಕ, ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ರಾನ್ ವಾನಿಯ ತಂದೆಯೇ ಈ  ಮುಜಾಫರ್ ವಾನಿ.

  ಮುಜಾಫರ್ ವಾನಿ ಅವರು ಪುಲ್ವಾಮದ ಟ್ರಾಲ್​ನಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರಾಳಿತ ಪ್ರದೇಶದ ಎಲ್ಲ ಶಿಕ್ಷಣ ಇಲಾಖೆಗಳು ಸೇರಿದಂತೆ ಎಲ್ಲ ಇಲಾಖೆಗಳು ಸ್ವತಂತ್ರ್ಯೋತ್ಸವದ ದಿನ ಕಡ್ಡಾಯವಾಗಿ ಧ್ವಜಾರೋಹಣ ಮಾಡಬೇಕು ಎಂದು ಕೇಂದ್ರಾಡಳಿತ ಪ್ರದೇಶದ ಆಡಳಿತ ನಿರ್ದೇಶನ ನೀಡಿದೆ.

  ಎಲ್ಲ ಶಾಲೆಗಳು ಸ್ವಾತಂತ್ರ್ಯ ದಿನ ಆಚರಿಸಬೇಕು. ಆಯಾ ಶಾಲೆಗಳಲ್ಲಿ ಆಯಾ ಸಿಇಒ, ಪ್ರಾಂಶುಪಾಲರು ಹಾಗೂ ಮುಖ್ಯಶಿಕ್ಷಕರು ಧ್ವಜಾರೋಹಣ ಮಾಡಬೇಕು. ಧ್ವಜಾರೋಹಣ ಮಾಡಿದ ಕಾರ್ಯಕ್ರಮದ ವಿಡಿಯೋ ಮತ್ತು ಫೋಟೋವನ್ನು ಗೂಗಲ್​ ಡ್ರೈವ್​ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಸರ್ಕಾರ ಆದೇಶ ಮಾಡಿತ್ತು. ಏತನ್ಮಧ್ಯೆ ಮುಜಾಫರ್ ವಾನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಸಹ ಹಬ್ಬಿತ್ತು. ಆದರೆ, ಈ ವದಂತಿಯನ್ನು ವಾನಿ ಅವರು ಶನಿವಾರ ತಿರಸ್ಕರಿಸಿದ್ದರು.

  ಜಮ್ಮು ಮತ್ತು ಕಾಶ್ಮೀರದಾದ್ಯಂತ ಒಟ್ಟು 23 ಸಾವಿರ ಸರ್ಕಾರಿ ಶಾಲೆಗಳಿವೆ. ಆದರೆ, ಸರ್ಕಾರದ ಆದೇಶದ ನಡುವೆಯೂ ಹಲವು ಶಾಲೆಗಳು ಧ್ವಜಾರೋಹಣ ಕಾರ್ಯಕ್ರಮ ಮಾಡಿಲ್ಲ. ಶ್ರೀನಗರ ವಲಯದಲ್ಲಿ 120 ಶಾಲೆಗಳಿವೆ. ಇವುಗಳಲ್ಲಿ ಕೇವಲ 3 ಶಾಲೆಗಳಲ್ಲಿ ಮಾತ್ರ ಧ್ವಜಾರೋಹಣ ಮಾಡಲಾಗಿದೆ ಎಂದು ಶ್ರೀನಗರದ ಶಿಕ್ಷಣ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಕಣಿವೆ ರಾಜ್ಯದಲ್ಲಿ ನೂರಾರು ನಾಗರಿಕರ ಸಾವಿಗೆ ಕಾರಣನಾಗಿದ್ದ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಕಮಾಂಡರ್ ಬರ್ಹಾನ್ ವಾನಿ ಹೆಡೆಮುರಿ ಕಟ್ಟಿದ ಕಾರ್ಯಾಚರಣೆಯ ನೇತೃತ್ವದ ವಹಿಸಿದ್ದ ಅಧಿಕಾರಿ ಕಳೆದ ವರ್ಷ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪದಕ ಗೌರವಕ್ಕೆ ಭಾಜನರಾಗಿದ್ದರು.

  ಬುರ್ಹಾನ್ ವಾನಿ 2010 ಆಕ್ಟೋಬರ್​ 16ರಂದು ಮನೆ ಬಿಟ್ಟು 15ನೇ ವಯಸ್ಸಿಗೆ ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆ ಸೇರಿದ್ದ. ಪೊಲೀಸರು ವಾನಿ ಸಹೋದರ ಖಾಲಿದ್​ನನ್ನು ಥಳಿಸಿದ ಬಳಿಕ ವಾನಿ ಉಗ್ರ ಸಂಘಟನೆ ಸೇರಿದ್ದಾಗಿ ಪೋಷಕರು ಇಂಡಿಯನ್ ಎಕ್ಸ್​ಪ್ರೆಸ್​ಗೆ ಮಾಹಿತಿ ನೀಡಿದ್ದರು.

  ಆನಂತರ, ಖಾಲೀದ್ 13 ಏಪ್ರಿಲ್ 2015 ರಂದು ಭಾರತೀಯ ಸೇನೆಯಿಂದ ಹತನಾದ.  ಬುರ್ಹಾನ್ ನನ್ನು ಭೇಟಿಯಾಗಲು ಸ್ನೇಹಿತರೊಂದಿಗೆ ಹೋಗಿದ್ದ. ಉಗ್ರ ಸಂಘಟನೆಗೆ ಗುಪ್ತವಾಗಿ ಯುವಕರನ್ನು ಸೇರಿಸುತ್ತಿದ್ದಾನೆ ಎಂದು ಭಾರತೀಯ ಸೈನಿಕರು ಆತನನ್ನು ಹೊಡೆದುರುಳಿಸಿದ್ದರು. ಬ್ರರ್ಹಾನ್ ವಾನಿ ಮತ್ತು ಆತನೊಂದಿಗೆ ಇನ್ನಿಬ್ಬರು ಉಗ್ರರನ್ನು 2016ರ ಜುಲೈನಲ್ಲಿ ಕೊಲ್ಲಲಾಯಿತು.

  ಇದನ್ನು ಓದಿ: ಹೊಸ ದಾಖಲೆ ಬರೆದ ಭಾರತೀಯರು: ರಾಷ್ಟ್ರಗೀತೆ ಹಾಡಿರುವ 1.5 ಕೋಟಿಗೂ ಹೆಚ್ಚು ವಿಡಿಯೋ ಅಪ್​​​ಲೋಡ್​​

  ನಂತರ, ಖಲೀದ್ 13 ಏಪ್ರಿಲ್ 2015 ರಂದು ಭಾರತೀಯ ಸೇನೆಯಿಂದ ಕೊಲ್ಲಲ್ಪಟ್ಟನು.  ಬುರ್ಹಾನ್ ಅವರನ್ನು ಭೇಟಿಯಾಗಲು ಸ್ನೇಹಿತರೊಡನೆ ಹೋಗುತ್ತಿದ್ದಾಗ ಸೈನಿಕರು ಇವನನ್ನು ಹೊಡೆದುರುಳಿಸಿದರು. ಆನಂತರ ಉಗ್ರ ಸಂಘಟನೆಗೆ ಯುವಕರನ್ನು ಗುಪ್ತವಾಗಿ ಸೇರಿಸುತ್ತಿದ್ದ ಎಂಬ ಮಾಹಿತಿಯನ್ನು ಭಾರತೀಯ ಸೇನೆ ತಿಳಿಸಿತು.

  ಬುರ್ಹಾನ್ ವಾನಿ ಮತ್ತು ಆತನೊಂದಿಗೆ ಇನ್ನಿಬ್ಬರು ಉಗ್ರರನ್ನು 2016ರ ಜುಲೈ 8ರಂದು ಹೊಡೆದುರುಳಿಸಲಾಯಿತು. ವಾನಿ ಅಂತ್ಯಕ್ರಿಯೆ ಅತಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆತನ ದೇಹದ ಮೇಲೆ ಪಾಕಿಸ್ತಾನ ಮತ್ತು ಭಯೋತ್ಪಾದಕರ ಧ್ವಜ ಹಾಕಲಾಗಿತ್ತು.  ಈತ ಬದುಕಿದ್ದಾಗ ಕಣಿವೆ ಪ್ರದೇಶದಲ್ಲಿ ಆರು ತಿಂಗಳುಗಳಲ್ಲಿ ಹತ್ತಾರು ವಿಧ್ವಂಸಕ ಕೃತ್ಯ ನಡೆಸಿ, ನೂರಾರು ಅಮಾಯಕರ ಸಾವಿಗೆ ಕಾರಣನಾಗಿದ್ದ.
  Published by:HR Ramesh
  First published: