Terrorists Encounter: ಜಮ್ಮು ಕಾಶ್ಮೀರದಲ್ಲಿ ಎಲ್​ಇಟಿ ಕಮಾಂಡರ್ ಸೇರಿ ಮೂವರು ಉಗ್ರರ ಎನ್​ಕೌಂಟರ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬರಾಮುಲ್ಲಾದಲ್ಲಿ ಇಂದು ನಡೆದ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೊಯ್ಬಾದ ಕಮಾಂಡರ್ ಸಜ್ಜದ್ ಅಲಿಯಾಸ್ ಹೈದರ್ ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

 • Share this:

  ಶ್ರೀನಗರ (ಆ. 18): ಕಾಶ್ಮೀರದ ಬರಾಮುಲ್ಲಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರ ದಾಳಿಗೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಎಲ್​ಇಟಿ ಕಮಾಂಡರ್ ಸೇರಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. 


  ಸೋಮವಾರ ಉಗ್ರರು ಮತ್ತು ಭಾರತೀಯ ಸೇನಾ ಪಡೆಯ ನಡುವೆ ನಡೆದ ಗುಂಡಿನ ದಾಳಿಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಸಿಆರ್​ಪಿಎಫ್ ಯೋಧರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇಂದು ನಡೆದ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೊಯ್ಬಾದ ಕಮಾಂಡರ್ ಸಜ್ಜದ್ ಅಲಿಯಾಸ್ ಹೈದರ್ ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.


  ಬರಾಮುಲ್ಲಾದಲ್ಲಿ ನಡೆದ ಕಾರ್ಯಾಚರಣೆ ವೇಳೆ ಯೋಧರು, ಪೊಲೀಸು ಗಸ್ತು ತಿರುಗುವಾಗ ಉಗ್ರರು ಹೊಂಚು ಹಾಕಿ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಸಿಆರ್ ಪಿಎಫ್ ಯೋಧರು, ಓರ್ವ ಪೊಲೀಸ್ ಸೇರಿ ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ನಂತರ ಭದ್ರತಾ ಸಿಬ್ಬಂದಿ ಎನ್‍ಕೌಂಟರ್ ಆರಂಭಿಸಿದ್ದು, ಎಲ್‍ಇಟಿ ಪ್ರಮುಖ ಕಮಾಂಡರ್ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದರು. ಘಟನೆ ನಡೆಯುತ್ತಿದ್ದಂತೆ ಮತ್ತಷ್ಟು ಉಗ್ರರು ಸ್ಥಳಕ್ಕೆ ಧಾವಿಸಿದ್ದರು. ಇಂದು ಭಾರತೀಯ ಯೋಧರು ಕಾರ್ಯಾಚರಣೆ ಮುಂದುವರೆಸಿದ್ದಾರೆ.


  ಇದನ್ನೂ ಓದಿ: ವಿಸ್ಕಿ ಬಾಟಲ್​ನಲ್ಲಿದ್ದ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ; ಪ್ರಾಣಾಪಾಯದಿಂದ ಮೂವರು ಪಾರು


  ಇಂದು ಸಿಆರ್​ಪಿಎಫ್, ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎಲ್​ಇಟಿ ಕಮಾಂಡರ್ ಸಜ್ಜದ್​ನನ್ನು ಹತ್ಯೆ ಮಾಡಿರುವುದು ಭಾರತೀಯ ಸೇನೆಯ ಬಹುಮುಖ್ಯ ಸಾಧನೆಯಾಗಿದೆ. ಆತ ಟಾಪ್ 10 ಉಗ್ರರ ಪೈಕಿ ಒಬ್ಬನಾಗಿದ್ದ. 2016ರಲ್ಲಿ ಲಷ್ಕರ್-ಇ-ತೊಯ್ಬಾ ಸಂಘಟನೆ ಸೇರಿದ್ದ ಆತ ಅನೇಕ ಯುವಕರನ್ನು ಭಯೋತ್ಪಾದನೆಗೆ ಬಳಸಿಕೊಳ್ಳುತ್ತಿದ್ದ. ಸಜ್ಜದ್ ಸಾವಿನ ನಂತರ ನಾವು 20 ಯುವಕರನ್ನು ಬಂಧಿಸಿದ್ದೇವೆ. ಅನೇಕ ಪ್ರಕರಣಗಳಲ್ಲಿ ಸಜ್ಜದ್ ಹುಡುಕಾಟ ನಡೆಸಲಾಗುತ್ತಿತ್ತು ಎಂದು ಡಿಜಿಪಿ ದಿಲ್ ಬಾಗ್ ಸಿಂಗ್ ತಿಳಿಸಿದ್ದಾರೆ.


  ನಂತರ ಶೋಪಿಯಾನ್ ಜಿಲ್ಲೆಯ ಮಲ್ದೆರಾ ಪ್ರದೇಶದಲ್ಲಿ ಉಗ್ರಗಾಮಿ ಸಂಘಟನೆಗೆ ಹೊಸದಾಗಿ ನೇಮಕಗೊಂಡ ಭಯೋತ್ಪಾದಕರನ್ನು ಭದ್ರತಾ ಪಡೆ ಪೊಲೀಸರು ಬಂಧಿಸಿದ್ದಾರೆ. ಉಗ್ರರ ದಾಳಿಗೆ ಬರಾಮುಲ್ಲಾದ ವಿಶೇಷ ಅಧಿಕಾರಿ ಮುಜಾಫರ್ ಅಲಿ, ಕಾನ್​ಸ್ಟೇಬಲ್​ಗಳಾದ ಲೋಕೇಶ್ ಶರ್, ಸಿಆರ್​ಪಿಎಫ್ ಯೋಧ ಖುರ್ಷಿದ್ ಖಾನ್ ಬಲಿಯಾಗಿದ್ದಾರೆ.

  Published by:Sushma Chakre
  First published: