Terror funding: ಭಯೋತ್ಪಾದಕರಿಗೆ ಹಣ ನೀಡ್ತಿದ್ದ ವ್ಯಾಪಾರಿಗಳ ನಿವಾಸದ ಮೇಲೆ NIA ದಾಳಿ

ಅತಿ ಹೆಚ್ಚು ಕ್ಯಾಲಿಫೋರ್ನಿಯಾದ ಬಾದಾಮಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ವ್ಯಾಪಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ವ್ಯಾಪಾರಿಗಳು ನಿಷೇಧಿತ ಉಗ್ರ ಸಂಘಟನೆಗಳ ಜೊತೆ ಲಾಭದಲ್ಲಿ ಹಂಚಿಕೆ ಮಾಡಿಕೊಳ್ಳುತ್ತಿರುವ ಅನುಮಾನಗಳು ವ್ಯಕ್ತವಾಗಿದ್ದವು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನ್ಯಾಶನಲ್ ಇನ್ವಿಸ್ಟಿಗೇಶನ್ ಏಜೆನ್ಸಿ (ಎನ್‍ಐಎ- National Investigation Agency) ಟೆರರ್ ಫಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಪೂಂಛ್ ವ್ಯಾಪ್ತಿಯ 10 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಜಮ್ಮು-ಕಾಶ್ಮೀರ (Jammu Kashmir) ಪೊಲೀಸರು, ಸಿಆರ್‍ಪಿಎಫ್ ಮತ್ತು ಐಟಿಬಿಪಿ ಜಂಟಿಯಾಗಿ ಎನ್‍ಐಎ ದಾಳಿ ನಡೆಸಿರುವ ಕುರಿತು ವರದಿಯಾಗಿದೆ. ಎಲ್‍ಓಸಿ (LOC) ಗಡಿಯಲ್ಲಿಯ ವ್ಯಾಪಾರಿಗಳು ವಾಸವಾಗಿರುವ ವ್ಯಾಪ್ತಿಯಲ್ಲಿಯೇ ದಾಳಿ ನಡೆದಿದೆ. ದಾಳಿಯಲ್ಲಿ ಎನ್‍ಐಎ ಹಲವು ದಾಖಲೆ, ಡಿಜಿಟಲ್ ಉಪಕರಣ ಸೇರಿದಂತೆ ಅನೇಕ ಆಕ್ಷೇಪಾರ್ಹ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

    ಅತಿ ಹೆಚ್ಚು ಕ್ಯಾಲಿಫೋರ್ನಿಯಾದ ಬಾದಾಮಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ವ್ಯಾಪಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ವ್ಯಾಪಾರಿಗಳು ನಿಷೇಧಿತ ಉಗ್ರ ಸಂಘಟನೆಗಳ ಜೊತೆ ಲಾಭದಲ್ಲಿ ಹಂಚಿಕೆ ಮಾಡಿಕೊಳ್ಳುತ್ತಿರುವ ಅನುಮಾನಗಳು ವ್ಯಕ್ತವಾಗಿದ್ದವು. ಬಾರಾಮುಲ್ಲಾ ಜಿಲ್ಲೆಯ ಸಲಾಮಾಬಾದ್, ಉರಿ ಮತ್ತು ಪೂಂಛ್ ನ ಚಕ್ಕನ್-ದಾ-ಬಾಗ್ ವ್ಯಾಪ್ತಿಯ ಕ್ರಾಸ್ ಎಲ್‍ಓಸಿಯಲ್ಲಿ ವ್ಯಾಪಾರ ಸುಗಮವಾಗಿ ನಡೆದಿತ್ತು.

    ಯಾರ ಮನೆ ಮೇಲೆ ದಾಳಿ?

    ಚಾಕತ್ರೂ ನಿವಾಸಿ ಮೊಹಮ್ಮದ್ ಶಫಿ, ನಂಗಾಲಿಯ ಮುಸ್ತಾಖ್ ಅಹಮದ್, ದೇಗ್‍ವರ್ ನ ಜಾವೇದ್ ಅಹಮದ್, ರೇಡಿಯೋ ಸ್ಟೇಶನ್ ಕಾPಲೋಬನಿಯ ಮೊಹಮ್ಮದ್ ಅಜಂ, ಕನುಜೈನ್ ನ ಮೊಹಮ್ಮದ್ ಅಕ್ರಂ, ತಾರೀಖ್ ಅಹಮದ್, ಅಬ್ದುಲ್ ಗನಿ ನಿವಾಸಗಳ ಮೇಲೆ ಎನ್‍ಐಎ ದಾಳಿ ನಡೆಸಿದೆ.

    ಯುಎ(ಪಿ) ಆ್ಯಕ್ಟ್ 1967ರ ಸೆಕ್ಷನ್ 17ರ ಅಡಿಯಲ್ಲಿ ಎನ್‍ಐಎ ಡಿಸೆಂಬರ್ 9, 2016ರಂದು ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಬಾಂಧವ್ಯ ವೃದ್ಧಿಸುವ ಹಿನ್ನೆಲೆ 2008ರಂದು ಎಲ್‍ಓಸಿ ಮಾರ್ಗವಾಗಿ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾಗಿತ್ತು. ಈ ವ್ಯಾಪಾರ ವಸ್ತು  ವಿನಿಮಯ ಆಧಾರದ ಮೇಲೆ ನಡೆಯುತ್ತಿತ್ತು. ಈ ಮಾರ್ಗದಲ್ಲಿ ಮೂರನೇ ವ್ಯಕ್ತಿ ಅಥವಾ ಬೇರೆ ದೇಶಗಳ ಸರಕುಗಳು ವಿನಿಮಯಕ್ಕೆ ಅನುಮತಿ ನೀಡಿರಲಿಲ್ಲ.

    ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮೋದಿನ ಬಂಧಿಸಿ, ಗಲ್ಲಿಗೇರಿಸ್ತೀವಿ; Abdul Rashid Dar ವಿವಾದಾತ್ಮಕ ಹೇಳಿಕೆ

    ಎನ್‍ಐಎ ಡಿಸೆಂಬರ್ 16, 2016ರಂದು ಎಫ್‍ಐಆರ್ ದಾಖಲಿಸಿತ್ತು. ಎಫ್‍ಐಆರ್ ದಾಖಲಾದ ನಂತರ ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶ ನೀಡಿತು. ಎಲ್‍ಓಸಿ ಮಾರ್ಗವಾಗಿ ನಡೆಯುವ ವ್ಯಾಪಾರ ಇನ್‍ಪುಟ್ ಆಧಾರಿತವಾಗಿದೆ. ಆದ್ರೆ ಇಲ್ಲಿ ವಿದೇಶಿ ವಸ್ತುಗಳ ವಿನಿಮಯ ಆಗುತ್ತಿರೋದು ಕಂಡು ಬಂದಿತ್ತು. ಮೂರನೇ ಪಾರ್ಟಿಯ ವಸ್ತುಗಳನ್ನು ತಂದು ಅದರ ಲಾಭವನ್ನು ಭಯೋತ್ಪಾದಕ ಜೊತೆ ಹಂಚಿಕೊಳ್ಳುತ್ತಿರುವ ಆರೋಪಗಳು ಕೇಳಿ ಬಂದಿದ್ದವು. ಈ ಮೂಲಕ ಭಯೋತ್ಪಾದಕರಿಗೆ ಹಣ ವರ್ಗಾವಣೆ ಆಗುತ್ತಿತ್ತು.

    2016ರಲ್ಲಿಯೂ ದಾಳಿ

    ಟೆರರ್ ಫಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರ ಆಗಸ್ಟ್ ನಲ್ಲಿ ಶ್ರೀನಗರ ವ್ಯಾಪ್ತಿಯ ಉದ್ಯಮಿಗಳು ಮತ್ತು ಪ್ರತ್ಯೇಕವಾದಿಗಳ ನಿವಾಸದ ಮೇಲೆ ಎನ್‍ಐಎ ದಾಳಿ ನಡೆಸಿತ್ತು. ವ್ಯಾಪಾರಿ ಜುಹುರ್ ವಾಟ್ಲಿಯ ಸಂಬಂಧಿಕರು ಸೇರಿದಂತೆ ಆತನ ಚಾಲಕನ ನಿವಾಸದ ತಪಾಸಣೆ ನಡೆದಿತ್ತು. ಅಂದು ಪ್ರತ್ಯೇಕವಾದಿಗಳನ್ನು ಸುಮಾರು 20 ದಿನ ಎನ್‍ಐಎ ವಿಚಾರಣೆ ನಡೆಸಿತ್ತು.

    ಹೇಗೆ ನಡೆಯುತ್ತೆ ಟೆರರ್ ಫಂಡಿಂಗ್?

    ಪೂಂಛ್, ಉರಿ ಮಾರ್ಗವಾಗಿ ಭಾರತದಿಂದ ತೆರಳುವ ಸರಕುಗಳ ಮೌಲ್ಯವನ್ನು ದಾಖಲು ಮಾಡಲಾಗುತ್ತದೆ. ಪಾಕಿಸ್ತಾನದಿಂದ ಅತ್ಯಧಿಕ ಸರಕು ವಿನಿಮಯ ರೂಪದಲ್ಲಿ ಅತ್ಯಧಿಕ ಹಿಂದಿರುಗುತ್ತಿತ್ತು. ಈ ಸರಕುಗಳ ನಡುವೆ ವಿದೇಶಿ ವಸ್ತುಗಳ ಆಮದು ನಡೆಯುತ್ತಿತ್ತು. ವ್ಯಾಪಾರಿಗಳು ಕಡಿಮೆ ಬೆಲೆಗೆ ಸರಕು ಲಭ್ಯವಾಗಿದ್ದರಿಂದ ಖರೀದಿಸಲಾಗಿದೆ ಎಂದು ಇಲ್ಲಿ ವ್ಯಾಪಾರಿಗಳು ಕಾರಣ ನೀಡುತ್ತಿದ್ದರು.

    ವರದಿ: ಮೊಹ್ಮದ್​ ರಫೀಕ್​ ಕೆ 
    Published by:Kavya V
    First published: