ಉಗ್ರರ ಮುಖ್ಯಕೇಂದ್ರ ಜಮ್ಮು-ಕಾಶ್ಮೀರ ವಿಷಯವಾಗಿ ಸುಳ್ಳು ನಿರೂಪಣೆ ಮಾಡುತ್ತಿದೆ; ವಿಶ್ವಸಂಸ್ಥೆಯಲ್ಲಿ ಪಾಕ್​ ಆರೋಪಕ್ಕೆ ಭಾರತದ ತಿರುಗೇಟು

ಇದಕ್ಕೂ ಮುನ್ನ ಪಾಕಿಸ್ತಾನ, ಜಮ್ಮು-ಕಾಶ್ಮೀರ ಸ್ಥಿತಿ ಬಗ್ಗೆ ಚರ್ಚೆ ಮಾಡಲು ಹಲವು ಜಾಗತಿಕ ವೇದಿಕೆಗಳಲ್ಲಿ ವಿಫಲ ಪ್ರಯತ್ನ ಮಾಡಿತ್ತು. ಕಣಿವೆ ರಾಜ್ಯದಲ್ಲಿ ಜನರ ಪರಿಸ್ಥಿತಿಯನ್ನು ಜಾಗತಿಕ ಸಮಿತಿಯಿಂದ ತನಿಖೆ ನಡೆಸುವಂತೆ ಕೋರಿತ್ತು. 

HR Ramesh | news18india
Updated:September 10, 2019, 9:20 PM IST
ಉಗ್ರರ ಮುಖ್ಯಕೇಂದ್ರ ಜಮ್ಮು-ಕಾಶ್ಮೀರ ವಿಷಯವಾಗಿ ಸುಳ್ಳು ನಿರೂಪಣೆ ಮಾಡುತ್ತಿದೆ; ವಿಶ್ವಸಂಸ್ಥೆಯಲ್ಲಿ ಪಾಕ್​ ಆರೋಪಕ್ಕೆ ಭಾರತದ ತಿರುಗೇಟು
ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯಲ್ಲಿ ಮಾತನಾಡಿದ ಭಾರತದ (ಪೂರ್ವ) ರಾಯಭಾರಿ ವಿಜಯಾ ಥಾಕೂರ್ ಸಿಂಗ್​
  • Share this:
ಜಿನೆವಾ: ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯಲ್ಲಿ ಪಾಕಿಸ್ತಾನದ ಹೇಳಿಕೆಗೆ ಭಾರತ ಪ್ರಬಲವಾಗಿ ಪ್ರತಿಕ್ರಿಯಿಸಿದೆ. ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಪೂರ್ವದ ರಾಯಭಾರಿ ವಿಜಯಾ ಥಾಕೂರ್ ಸಿಂಗ್​, ಪಾಕಿಸ್ತಾನದ ಆರೋಪಗಳು ಕೇವಲ ಸುಳ್ಳಿಯ ಸರಮಾಲೆ ಹಾಗೂ ಸಂಯೋಜಿತ ಆರೋಪಗಳು. ಜಮ್ಮು ಮತ್ತು ಕಾಶ್ಮೀರದ ವಿಷಯ ಭಾರತದ ಆಂತರಿಕ ವಿಚಾರ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಇದು ಸಂಸದೀಯ ನಿರ್ಧಾರ, ಅಂದರೆ ತಾರತಮ್ಯದ ಅಂತ್ಯ (ಜಮ್ಮು ಮತ್ತು ಕಾಶ್ಮೀರದಲ್ಲಿ) ಎಂದು ವಿಜಯಾ ಥಾಕೂರ್ ಹೇಳಿದರು.

ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ವಿಜಯಾ ಸಿಂಗ್​ ಅವರು, ಕಲ್ಪಿತ ನಿರೂಪಣೆಯೂ ಜಾಗತಿಕ ಭಯೋತ್ಪಾದನೆಯಿಂದ ಬಂದಿದೆ ಎಂಬುದು ಇಡೀ ಜಗತ್ತಿಗೆ ಅರಿವಿದೆ. ಅಲ್ಲಿ ರಿಂಗ್​ಲೀಡರ್​ಗಳು ಹಲವು ವರ್ಷಗಳಿಂದ ಆಶ್ರಯ ಪಡೆದಿದ್ದಾರೆ. ಆ ದೇಶವು ಗಡಿಯಾಚೆಗೆ ಭಯೋತ್ಪಾದನೆಯನ್ನು ರಾಯಭಾರಿ ಕೆಲಸದ ರೀತಿ ಮಾಡಿಕೊಂಡು ಬಂದಿದೆ ಎಂದು ಹೇಳಿದರು.

ಇದನ್ನು ಓದಿ: ಕಾಶ್ಮೀರ, ಪಿಓಕೆ ಭಾಗದ ಯಥಾಸ್ಥಿತಿ ಬದಲಿಸಲು ಯಾವ ರಾಷ್ಟ್ರವೂ ಪ್ರಯತ್ನಿಸುವಂತಿಲ್ಲ; ವಿದೇಶಾಂಗ ಸಚಿವಾಲಯದ ಎಚ್ಚರಿಕೆ!

ಕಣಿವೆ ರಾಜ್ಯದ ಹಲವು ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೊದ್​ ಖುರೇಷಿ ಹೇಳಿದ್ದರು.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ