HOME » NEWS » National-international » TERROR ATTACK KASHMIR TERRORISTS ATTACK CRPF POLICE TEAM IN BARAMULLA POLICE OFFICER KILLED LG

Terror Attack: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ; ಓರ್ವ ಪೊಲೀಸ್ ಅಧಿಕಾರಿ ಮೃತ, ಇಬ್ಬರು ಯೋಧರಿಗೆ ಗಾಯ

ದಾಳಿಯಲ್ಲಿ ಗಾಯಗೊಂಡ ಇಬ್ಬರು ಸಿಆರ್​ಪಿಎಫ್​ ಸೈನಿಕರು 119 ಬೆಟಾಲಿಯನ್​ನವರು ಎಂದು ತಿಳಿದು ಬಂದಿದೆ. ಕಾಶ್ಮೀರಿ ಕಣಿವೆಯಲ್ಲಿ ಇತ್ತೀಚೆಗೆ ಉಗ್ರರ ಅಟ್ಟಹಾಸ ಹೆಚ್ಚಾಗಿದೆ. ಪುಲ್ವಾಮ ಜಿಲ್ಲೆಯಲ್ಲೂ ಸಹ ಆಗಾಗ್ಗೆ ಭಯೋತ್ಪಾದಕರು ದಾಳಿ ಮಾಡುತ್ತಿದ್ದಾರೆ. 

news18-kannada
Updated:August 17, 2020, 3:29 PM IST
Terror Attack: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ; ಓರ್ವ ಪೊಲೀಸ್ ಅಧಿಕಾರಿ ಮೃತ, ಇಬ್ಬರು ಯೋಧರಿಗೆ ಗಾಯ
ಸಾಂದರ್ಭಿಕ ಚಿತ್ರ
  • Share this:
ಜಮ್ಮು(ಆ.17): ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಇಂದು ಬೆಳಗ್ಗೆಯೂ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಬರಾಮುಲ್ಲಾ ಪ್ರದೇಶದಲ್ಲಿ ಸಿಆರ್​ಪಿಎಫ್​ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್​ ತಂಡದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದರೆ, ಇಬ್ಬರು ಸಿಆರ್​​ಪಿಎಫ್​ ಸೈನಿಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭಿಸಿದೆ.

ದಾಳಿ ನಡೆದ ಪ್ರದೇಶವನ್ನು ಸುತ್ತುವರೆಯಲಾಗಿದ್ದು, ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯಲ್ಲಿ ಗಾಯಗೊಂಡ ಇಬ್ಬರು ಸಿಆರ್​ಪಿಎಫ್​ ಸೈನಿಕರು 119 ಬೆಟಾಲಿಯನ್​ನವರು ಎಂದು ತಿಳಿದು ಬಂದಿದೆ. ಕಾಶ್ಮೀರಿ ಕಣಿವೆಯಲ್ಲಿ ಇತ್ತೀಚೆಗೆ ಉಗ್ರರ ಅಟ್ಟಹಾಸ ಹೆಚ್ಚಾಗಿದೆ. ಪುಲ್ವಾಮ ಜಿಲ್ಲೆಯಲ್ಲೂ ಸಹ ಆಗಾಗ್ಗೆ ಭಯೋತ್ಪಾದಕರು ದಾಳಿ ಮಾಡುತ್ತಿದ್ದಾರೆ.

ಮಳೆಯಿಂದ ಸೋರುತ್ತಿರುವ ಯಾದಗಿರಿ ಸರ್ಕಾರಿ ಆಸ್ಪತ್ರೆ - ಟಾರ್ಪಲಿನ್​​ ಹೊದಿಸಿ ಗರ್ಭಿಣಿಗೆ ಹೆರಿಗೆ ಮಾಡಿದ ಸಿಬ್ಬಂದಿ

ಇಂದು ಬೆಳಗ್ಗೆ  ಪುಲ್ವಾಮಾ ಜಿಲ್ಲೆಯ ತುಜಾನ್​ ಗ್ರಾಮದ ಸೇತುವೆಯ ಅಡಿ ಭಾಗದಲ್ಲಿ ಆಧುನಿಕ ಸ್ಫೋಟಕ ಪತ್ತೆಯಾಗಿತ್ತು. ಪೊಲೀಶರು ಆ ಸ್ಪೋಟಕವನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಮುಂದಾಗಬಹುದಾಗಿದ್ದ ಭಾರೀ ದುರಂತವನ್ನು ಪೊಲೀಸರು ತಪ್ಪಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕಾಶ್ಮೀರ ಐಜಿಪಿ ವಿಜಯ್​ ಕುಮಾರ್, ಭಯೋತ್ಪಾದಕರು ಸೇತುವೆ ಮಧ್ಯೆ ಸ್ಫೋಟಕಗಳನ್ನು ಇಟ್ಟಿದ್ದರು. ಸೇನಾ ವಾಹನ ಹೋಗುವಾಗ ಇದನ್ನು ಸ್ಫೋಟ ಮಾಡುವ ಲೆಕ್ಕಾಚಾರ ಅವರದ್ದಾಗಿತ್ತು. ಅದೃಷ್ಟವಶಾತ್​ ಈ ಸ್ಫೋಟಕ ನಮ್ಮ ಕಣ್ಣಿಗೆ ಬಿದ್ದಿದೆ ಎಂದು ಹೇಳಿದ್ದಾರೆ.
ಸ್ಫೋಟಕ ಇಡಲಾಗಿದ್ದ ಸೇತುವೆ ಬುದ್ಗಾಮ್​ ಹಾಗೂ ಪುಲ್ವಾಮಾವನ್ನು ಸಂಪರ್ಕಿಸುತ್ತವೆ. ಭಾರತೀಯ ಸೇನಾ ಸಿಬ್ಬಂದಿ ಈ ಸೇತುವೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಈ ಕಾರಣಕ್ಕಾಗಿಯೇ ಸ್ಫೋಟಕಗಳನ್ನು ಇಡಲಾಗಿದೆ ಎನ್ನಲಾಗಿದೆ.
Published by: Latha CG
First published: August 17, 2020, 3:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories