HOME » NEWS » National-international » TERROR ATTACK IN VIENNA CITY OF AUSTRIA 3 KILLED SNVS

Terror Attack - ಆಸ್ಟ್ರಿಯಾದ ವಿಯೆನ್ನಾದಲ್ಲಿ ಉಗ್ರರ ದಾಳಿ: ಮೂವರ ಸಾವು

ಆಸ್ಟ್ರಿಯಾ ದೇಶದ ವಿಯೆನ್ನಾ ನಗರದ ಮಧ್ಯಭಾಗದಲ್ಲಿ ಆರು ವಿವಿಧ ಸ್ಥಳಗಳಲ್ಲಿ ಉಗ್ರಗಾಮಿಗಳು ರೈಫಲ್​ಗಳಿಂದ ಸಾರ್ವಜನಿಕರ ಮೇಲೆ ದಾಳಿ ನಡೆಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ಶಂಕಿತ ಉಗ್ರ ಸೇರಿ ಮೂವರು ಹತ್ಯೆಯಾಗಿದ್ಧಾರೆ.

news18
Updated:November 3, 2020, 8:21 AM IST
Terror Attack - ಆಸ್ಟ್ರಿಯಾದ ವಿಯೆನ್ನಾದಲ್ಲಿ ಉಗ್ರರ ದಾಳಿ: ಮೂವರ ಸಾವು
ವಿಯೆನ್ನಾ ಪೊಲೀಸ್
  • News18
  • Last Updated: November 3, 2020, 8:21 AM IST
  • Share this:
ಆಸ್ಟ್ರಿಯಾ(ನ. 03): ಯೂರೋಪ್​ನ ಆಸ್ಟ್ರಿಯಾ ದೇಶದ ರಾಜಧಾನಿ ವಿಯೆನ್ನಾದಲ್ಲಿ ಭಯೋತ್ಪಾದಕ ದಾಳಿ ಆಗಿದೆ. ನಗರದ ಮಧ್ಯ ಭಾಗದ ಆರು ವಿವಿಧ ಸ್ಥಳಗಳಲ್ಲಿ ಉಗ್ರಗಾಮಿಗಳು ಶೂಟೌಟ್ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂವರು ಹತ್ಯೆಯಾಗಿದ್ದಾರೆ. ಸಾವಿಗೀಡಾದವರಲ್ಲಿ ಒಬ್ಬ ಶಂಕಿತ ಉಗ್ರನೂ ಇರುವುದು ತಿಳಿದುಬಂದಿದೆ. ಸ್ಥಳೀಯ ಕಾಲಮಾನದಲ್ಲಿ ನಿನ್ನೆ ರಾತ್ರಿ 8 ಗಂಟೆಗೆ ಉಗ್ರರು ರೈಫಲ್​​ಗಳಿಂದ ಈ ದಾಳಿ ಮಾಡಿದ್ದಾರೆ. ಆದರೆ, ಇವರು ಯಾವ ಸಂಘಟನೆಗೆ ಸೇರಿದವರೆಂದು ತಿಳಿದುಬಂದಿಲ್ಲ.

ಆಸ್ಟ್ರಿಯಾದ ಚಾನ್ಸೆಲರ್ ಸೆಬಾಸ್ಟಿಯನ್ ಕುರ್ಜ್ ಅವರು ಈ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ. ಇದೊಂದು ಪೈಶಾಚಿಕ ಉಗ್ರ ದಾಳಿಯಾಗಿದೆ ಎಂದು ಬಣ್ಣಿಸಿದ ಅವರು, “ನಮ್ಮ ದೇಶದಲ್ಲಿ ಈಗ ಕಠಿಣ ಕ್ಷಣಗಳನ್ನ ಎದುರಿಸುತ್ತಿದ್ದೇವೆ” ಎಂದು ವಿಷಾದಿಸಿದ್ದಾರೆ.

“ಈ ಉಗ್ರ ದಾಳಿ ನಡೆಸಿದವರ ವಿರುದ್ಧ ನಮ್ಮ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಾರೆ. ಭಯೋತ್ಪಾದನೆಗೆ ನಾವು ಯಾವತ್ತೂ ಹೆದರುವುದಿಲ್ಲ. ಎಲ್ಲಾ ರೀತಿಯಿಂದಲೂ ಇದನ್ನು ಎದುರಿಸುತ್ತೇವೆ” ಎಂದು ಚಾನ್ಸೆಲರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Kabul University Attack: ಕಾಬೂಲ್​ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ; 10 ವಿದ್ಯಾರ್ಥಿಗಳ ಸಾವು

ಯೂರೋಪಿಯನ್ ಯೂನಿಯನ್ ಮುಖ್ಯಸ್ಥ ಚಾರ್ಲ್ಸ್ ಮಿಶೆಲ್ ಅವರು ಈ ಘಟನೆಯನ್ನು ಖಂಡಿಸಿದ್ದು, ಇದೊಂದು ಹೇಡಿತನದ ಕೃತ್ಯ ಎಂದು ಟೀಕಿಸಿದ್ದಾರೆ.
Published by: Vijayasarthy SN
First published: November 3, 2020, 8:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories