ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೆ ಯತ್ನ; ರಕ್ಷಣೆಗಾಗಿ ರಸ್ತೆಯಲ್ಲಿ ಬೆತ್ತಲಾಗಿ ಓಡಿದ ಯುವತಿ

ಯುವತಿ ತನ್ನ ತಂಗಿ, ಗೆಳತಿಯೊಂದಿಗೆ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ದೇವಸ್ಥಾನಕ್ಕೆ ಹೋಗುವಾಗ ಈ ಘಟನೆ ನಡೆದಿದೆ. ದಾರಿ ಮಧ್ಯದಲ್ಲಿ ಅವರನ್ನು ಅಡ್ಡಗಟ್ಟಿದ ಮೂವರಿಂದ ಯುವತಿಯ ತಂಗಿ ಹಾಗೂ ಗೆಳತಿ ತಪ್ಪಿಸಿಕೊಂಡಿದ್ದಾರೆ. ಯುವಕರ ಕೈಗೆ ಸಿಕ್ಕಿಹಾಕಿಕೊಂಡ ಆ ಯುವತಿ ಮೇಲೆ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿದ್ದಾರೆ.

news18-kannada
Updated:September 13, 2019, 6:02 PM IST
ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೆ ಯತ್ನ; ರಕ್ಷಣೆಗಾಗಿ ರಸ್ತೆಯಲ್ಲಿ ಬೆತ್ತಲಾಗಿ ಓಡಿದ ಯುವತಿ
ಪ್ರಾತಿನಿಧಿಕ ಚಿತ್ರ
news18-kannada
Updated: September 13, 2019, 6:02 PM IST
ಜೈಪುರ (ಸೆ. 13): ತನ್ನ ಮೇಲೆ ಅತ್ಯಾಚಾರವೆಸಗಿ ಕೊಲ್ಲಲು ಪ್ರಯತ್ನಿಸಿದ ಮೂವರು ದುಷ್ಟರಿಂದ ತಪ್ಪಿಸಿಕೊಂಡ ಯುವತಿ ತನ್ನನ್ನು ರಕ್ಷಿಸಿಕೊಳ್ಳಲು ರಸ್ತೆಯಲ್ಲಿ ಬೆತ್ತಲಾಗಿ ಓಡಿದ ದಾರುಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಯುವತಿಯನ್ನು ಅಪಹರಿಸಿದ ಮೂವರು ಆಕೆಯ ಮೇಲೆ ಅತ್ಯಾಚಾರವೆಸಗಿ ಮನ ಬಂದಂತೆ ಥಳಿಸಿದ್ದಾರೆ. ಅಲ್ಲೇ ಇದ್ದರೆ ತನ್ನನ್ನು ಸಾಯಿಸುತ್ತಾರೆ ಎಂದು ಅರಿತ ಯುವತಿ ನಿತ್ರಾಣ ಸ್ಥಿತಿಯಲ್ಲೇ ಅಲ್ಲಿಂದ ತಪ್ಪಿಸಿಕೊಂಡು ಬೆತ್ತಲಾಗಿ ರಸ್ತೆಯಲ್ಲಿ ಓಡಿದ್ದಾಳೆ. ಯುವತಿ ತನ್ನ ತಂಗಿ, ಗೆಳತಿಯೊಂದಿಗೆ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ದೇವಸ್ಥಾನಕ್ಕೆ ಹೋಗುವಾಗ ಈ ಘಟನೆ ನಡೆದಿದೆ. ದಾರಿ ಮಧ್ಯದಲ್ಲಿ ಅವರನ್ನು ಅಡ್ಡಗಟ್ಟಿದ ಮೂವರು ಅನುಚಿತವಾಗಿ ವರ್ತಿಸಿದ್ದಾರೆ. ಯುವತಿಯ ತಂಗಿ ಹಾಗೂ ಗೆಳತಿ ತಪ್ಪಿಸಿಕೊಂಡಿದ್ದಾರೆ. ಯುವಕರ ಕೈಗೆ ಸಿಕ್ಕಿಹಾಕಿಕೊಂಡ ಆ ಯುವತಿಯನ್ನು ಅಪಹರಿಸಿ, ಪೇಟೆಯ ಬಳಿಯೇ ಇದ್ದ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿದ್ದಾರೆ.

ಮದುವೆಗೆ ಹುಡುಗಿ ಸಿಕ್ಕಿಲ್ಲ ಎಂದು ಕೆಲಸಕ್ಕೆ ರಾಜೀನಾಮೆ ನೀಡಿದ ಪೊಲೀಸ್ ಕಾನ್ಸ್​ಟೆಬಲ್!

ಅಷ್ಟರಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಪೇಟೆಗೆ ಓಡಿದ ಯುವತಿಯ ಗೆಳತಿ ತನಗೆ ಪರಿಚಯವಿದ್ದವರಿಗೆ ಘಟನೆಯ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿದ ಅಂಗಡಿಯ ಮಾಲೀಕರೊಬ್ಬರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದಾರೆ. ಯುವತಿಯನ್ನು ಥಳಿಸುತ್ತಿದ್ದ ಮೂವರು ಅಪರಿಚಿತ ವ್ಯಕ್ತಿ ಬಂದಿದ್ದನ್ನು ನೋಡಿ ಅಲ್ಲಿಂದ ಓಡಿಹೋಗಿದ್ದಾರೆ. ಆದರೆ, ಆ ಅಂಗಡಿಯ ಮಾಲೀಕ ಕೂಡ ತನಗೆ ಅಪಾಯ ಮಾಡಬಹುದು ಎಂದು ಗಾಬರಿಗೊಂಡ ಯುವತಿ ನಗ್ನಳಾಗಿ ರಸ್ತೆಯತ್ತ ಓಡಿಹೋಗಿದ್ದಾಳೆ. ಅರ್ಧ ಕಿ.ಮೀ.ಗೂ ಹೆಚ್ಚು ದೂರ ಓಡಿದ ಆಕೆಯನ್ನು ಹಿಡಿದು ನಿಲ್ಲಿಸಿ ಬಟ್ಟೆ ನೀಡಿ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ.

ಅಂಗಡಿಯ ಮಾಲೀಕ, ಸಂತ್ರಸ್ತ ಯುವತಿ ಮತ್ತು ಆಕೆಯ ಗೆಳತಿಯರಿಂದ ಪೊಲೀಸರು ಹೇಳಿಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...