ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) 6000 ಕೋಟಿ ರೂಪಾಯಿ ಬಜೆಟ್ ನಲ್ಲಿ ಸಿದ್ಧವಾಗುತ್ತಿರುವ ಸುರಂಗ ಮಾರ್ಗ ಯೋಜನೆಗೆ (Tunnel projects) ಟೆಂಡರ್ (Tender) ಸರಕಾರದ ಯೋಜನೆಗಳು ಕೆಲವು ಸ್ವಲ್ಪ ಸಮಯದಲ್ಲಿ ಜಾರಿ ಆದರೆ, ಇನ್ನು ಕೆಲವು ಅತ್ಯಂತ ದೀರ್ಘಕಾಲದ ನಂತರ ಜಾರಿಯಾಗುತ್ತವೆ. ದೇಶದ ಅತ್ಯಂತ ಮಹತ್ವದ ಯೋಜನೆಯು ಜಾರಿಯಾಗುತ್ತಿದೆ. ಆ ಯೋಜನೆ ಯಾವುದು? ಆ ಯೋಜನೆಗೆ ಸರ್ಕಾರ (Government) ನೀಡುತ್ತಿರುವ ಬಜೆಟ್ (Budget) ಎಷ್ಟು? ಹೇಗೆ ಈ ಯೋಜನೆ ಜಾರಿಯಾಗುತ್ತಿವೆ ಎಂಬ ಎಲ್ಲ ಮಾಹಿತಿಗಳನ್ನು ಈ ಲೇಖನದಲ್ಲಿ ನಾವಿಂದು ತಿಳಿಯೋಣ .
ಹಾಗಿದ್ರೆ ಈ ಯೋಜನೆ ಯಾವುದು?
ಒಂದು ದಶಕದ ನಂತರ ಜಮ್ಮು ಮತ್ತು ಶ್ರೀನಗರದ ನಡುವೆ ಪರ್ಯಾಯ ಹೆದ್ದಾರಿಯ ಮೂಲಕ ಸಂಪರ್ಕವನ್ನು ಸಾಧಿಸಲು ಬೇಕಾಗುವ ಮತ್ತು ಮುಖ್ಯವಾಗಿ, ಮಿಲಿಟರಿ ಕಾರ್ಯಚಟುವಟಿಕೆಗೆ ಸಹಾಯ ಮಾಡಲು, ಕೇಂದ್ರ ಸರ್ಕಾರವು ಅಂತಿಮವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಪ್ರಮುಖ ಸುರಂಗ ಮಾರ್ಗ ಯೋಜನೆಗಳಿಗೆ ಜಾಗತಿಕ ಟೆಂಡರ್‌ಗಳನ್ನು ಆಹ್ವಾನಿಸಿದೆ.
ಈ ಯೋಜನೆಯ ಬಜೆಟ್ ಎಷ್ಟಿದೆ?
ಈ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗ ಬೇಕಾಗುವ ಸುರಂಗ ಮಾರ್ಗ ಯೋಜನೆಗೆ ಸುಮಾರು ರೂ. 6,000 ಕೋಟಿ ಬಜೆಟ್ ಅನ್ನು ಕೇಂದ್ರ ಸರ್ಕಾರ ನಿಗದಿ ಪಡಿಸಿದೆ. ಈ ಯೋಜನೆಗೆ ಸರ್ಕಾರ ಆಹ್ವಾನಿಸಿದ ಬಿಡ್‌ದಾರರಲ್ಲಿ ನ್ಯೂಸ್ 18 ಸಂಸ್ಥೆಯು ಪಾಲ್ಗೊಂಡಿತ್ತು. ಈ ಯೋಜನೆಯ ಟೆಂಡರ್ ಆಗಸ್ಟ್ 1 ರಂದು ನಡೆದಿದ್ದು, ಇದು 10.3 ಕಿಮೀ ಉದ್ದದ ಸಿಂಗ್ಪೋರಾ-ವೈಲೂ ಸುರಂಗ ಮತ್ತು ಸುಮಾರು 8 ಕಿಮೀ ಉದ್ದದ ಸುಧ್ಮಹಾದೇವ್-ದ್ರಂಗಾ ಟ್ವಿನ್ ಟ್ಯೂಬ್ ಟ್ಯೂನಲ್ ಸುರಂಗ ಯೋಜನೆಯ ಟೆಂಡರ್‌ಗಳಿಗೆ ಅಂತರರಾಷ್ಟ್ರೀಯ ಸಂಸ್ಥೆಗಳು ಕೂಡ ತಮ್ಮ ಸಂಸ್ಥೆಯಿಂದ ಬಿಡ್ ಮಾಡಲು ಪ್ರವೇಶ ಮಾಡಿದ್ದವು.
ಇದನ್ನೂ ಓದಿ: India V/s China: ಭಾರತದ ವಿರುದ್ಧ ಚೀನಾ ಸ್ಪೆಕ್ಟ್ರಂ ಯುದ್ಧ ತಯಾರಿ! ತಂತ್ರಗಳಲ್ಲಿ ಇನ್ನೂ 15 ವರ್ಷ ಹಿಂದಿದೆಯಂತೆ ಇಂಡಿಯಾ!
ಈ ಸುರಂಗ ಮಾರ್ಗಗಳಿಗೆ ತಗಲುವ ವೆಚ್ಚವೆಷ್ಟು?
ಈ ಸುಂರಂಗ ಮಾರ್ಗ ಯೋಜನೆಗೆ ತಗಲುವ ಒಟ್ಟು ವೆಚ್ಚ ಕ್ರಮವಾಗಿ ರೂ. 3,253 ಕೋಟಿ ಮತ್ತು ರೂ. 2,598 ಕೋಟಿ ಎಂದು ನಿರೀಕ್ಷೆ ಮಾಡಲಾಗಿದೆ. ಈ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ಮೊದಲ ಗಡುವು ಐದು ವರ್ಷಗಳು ಮತ್ತು ನಂತರದ ಅವಧಿಗೆ ನಾಲ್ಕು ವರ್ಷಗಳು ಆಗಿರುತ್ತವೆ. ಮೊದಲ ಸುರಂಗ ಮಾರ್ಗಕ್ಕೆ 38 ಕಿ.ಮೀ ಹಾಗೂ ಎರಡನೇ ಸುರಂಗ ಮಾರ್ಗಕ್ಕೆ ಐದು ಕಿ.ಮೀ ಉದ್ದದ ಅಪ್ರೋಚ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಈ ಸುರಂಗ ಮಾರ್ಗದ ದಾರಿ ಎಲ್ಲಿಂದ- ಎಲ್ಲಿಯವರೆಗೆ ನಿರ್ಮಾಣವಾಗುತ್ತದೆ?
ಈ ಸುರಂಗ ಮಾರ್ಗದ ಯೋಜನೆಯ ಮಾರ್ಗವು ಜವಾಹರ್ ಲಾಲ್ ಸುರಂಗ ಮಾರ್ಗದ ಮೂಲಕ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಾಗಿ ಅಲ್ಲಿನ ಟ್ರಾಫಿಕ್ ಪ್ರಮಾಣವನ್ನು ಕಡಿಮೆಗೊಳಿಸುವ ರಸ್ತೆಯೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶ್ರೀನಗರ ಮತ್ತು ಗಡಿ ಪ್ರದೇಶಗಳನ್ನು ಸಂಪರ್ಕಿಸಲು ಪರ್ಯಾಯ ಮಾರ್ಗವಾದ NH 244 ನಲ್ಲಿ ಸಂಪರ್ಕ ಸಾಧಿಸಲಾಗುತ್ತದೆ. ಈ ಸುರಂಗ ಮಾರ್ಗದ ಯೋಜನೆಗಳನ್ನು ದಶಕದ ಹಿಂದೆಯೇ ಪ್ರಸ್ತಾಪಿಸಲಾಗಿತ್ತು. ಈ ಯೋಜನೆಯು ರಸ್ತೆ NH 244 ಚೆನಾನಿಯಿಂದ ಜಮ್ಮು ಮತ್ತು ಕಾಶ್ಮೀರದ ಖಾನಬಲ್‌ಗೆ 274 ಕಿಮೀ ದೂರದ ಒಂದು ಕಾರ್ಯತಂತ್ರದ ರಸ್ತೆ ಯೋಜನೆ ಆಗಿದೆ.
ಇದನ್ನೂ ಓದಿ: Reliance AGM 2022 Live Updates: ದೀಪಾವಳಿಗೆ ಭಾರತೀಯರಿಗೆ ಬಂಪರ್! ಜಿಯೋ 5ಜಿ ಆರಂಭ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು 2020 ರಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಈ ರಸ್ತೆಯಲ್ಲಿರುವ ಎಲ್ಲಾ ಸುರಂಗಗಳನ್ನು ಒಳಗೊಂಡಂತೆ ಫಾಸ್ಟ್ ಟ್ರ್ಯಾಕ್ ಮೋಡ್‌ನಲ್ಲಿ ಹೆದ್ದಾರಿಯನ್ನು ಪೂರ್ಣಗೊಳಿಸಬೇಕು ಎಂದು ವಿನಂತಿಸಿತ್ತು. ಆದರೆ, 2027 ರ ಗಡುವಿನೊಂದಿಗೆ ಈಗ ಟೆಂಡರ್‌ಗಳನ್ನು ಆಹ್ವಾನಿಸಲು ಎರಡು ವರ್ಷಗಳನ್ನು ತೆಗೆದುಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದ ಹಿಂದಿನ ಸುರಂಗ ಮಾರ್ಗ ಯೋಜನೆಗಳು ಯಾವುವು?ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್ 2, 2017 ರಂದು ಜಮ್ಮು ಮತ್ತು ಕಾಶ್ಮೀರದ ಚೆನಾನಿ-ನಶ್ರಿ ಸುರಂಗ ಮಾರ್ಗವನ್ನು ದೇಶಕ್ಕೆ ಸಮರ್ಪಿಸಿದರು. ಇದು ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಮತ್ತು ರಂಬನ್ ನಡುವಿನ ಭಾರತದ ಅತಿ ಉದ್ದದ 9 ಕಿಮೀ ಎರಡು-ದಿಕ್ಕಿನ ಹೆದ್ದಾರಿ ಸುರಂಗ ಮಾರ್ಗವಾಗಿದ್ದು, ಜಮ್ಮು ಮತ್ತು ಶ್ರೀನಗರದ ನಡುವಿನ ಪ್ರಯಾಣದ ಸಮಯವನ್ನು 2 ಗಂಟೆಗಳವರೆಗ ಕಡಿಮೆ ಮಾಡುತ್ತದೆ. ಸುಮಾರು 41 ಕಿಮೀ ರಸ್ತೆಯ ಉದ್ದವನ್ನು ಬೈಪಾಸ್ ಮಾಡುವುದು ಇದರ ಯೋಜನೆ ಆಗಿತ್ತು. ಇದಕ್ಕೆ ತಗುಲಿದ ವೆಚ್ಚವು ಸುಮಾರು 3,720 ಕೋಟಿ ರೂಪಾಯಿ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ