ಸೂರತ್​​ನಲ್ಲಿ ಮ್ಯಾನ್​ಹೋಲ್​ ದುರಂತ: ಮುಂದುವರೆದ ಬಾಲಕನ ರಕ್ಷಣಾ ಕಾರ್ಯ


Updated:July 15, 2018, 7:34 PM IST
ಸೂರತ್​​ನಲ್ಲಿ ಮ್ಯಾನ್​ಹೋಲ್​ ದುರಂತ: ಮುಂದುವರೆದ ಬಾಲಕನ ರಕ್ಷಣಾ ಕಾರ್ಯ

Updated: July 15, 2018, 7:34 PM IST
ನ್ಯೂಸ್​-18 ಕನ್ನಡ

ಸೂರತ್​​(ಜುಲೈ.15): ಗುಜರಾತ್​ ಸೂರತ್​ನ ವರಾಚಾ ಪ್ರದೇಶದಲ್ಲಿ ಹತ್ತು ವರ್ಷದ ಬಾಲಕನೋರ್ವ ತೆರೆದ ಮ್ಯಾನ್​ಹೋಲ್​ಗೆ ಬಿದ್ದ ದುರ್ಘಟನೆ ನಡೆದಿದೆ. ಮ್ಯಾನ್​ಹೋಲ್​ ದುರಂತ ಸಂಭವಿಸಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಬಾಲಕನ ರಕ್ಷಣಾ ಕಾರ್ಯ ಮುಂದುವರೆಯುತ್ತಿದೆ.


ಇನ್ನು ಮ್ಯಾನ್​ಹೋಲ್​ಗೆ ಬಿದ್ದ 10 ವರ್ಷದ ಬಾಲಕನ ರಕ್ಷಣಾ ಕಾರ್ಯ ಮುಂದುವರೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯದಲ್ಲಿ ತೊಡಗಿದ್ಧಾರೆ. ಅಲ್ಲದೇ ಬಾಲಕ ಮ್ಯಾನ್​ಹೋಲ್​ಗೆ ಬೀಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್​ ಆಗಿದೆ. ಬಾಕಲನ ಕುರಿತು ಮಾಹಿತಿ ತಿಳಿದು ಬಂದಿಲ್ಲ ಎನ್ನಲಾಗಿದೆ.

ಈ ಹಿಂದೆ ಕರ್ನಾಟಕದಲ್ಲಿ ಈ ರೀತಿಯ ಘಟನೆ ನಡೆದಿವೆ. ಮಕ್ಕಳು ಆಟವಾಡುವ ವೇಳೆ  ತೆರೆದ ಮ್ಯಾನ್ ಹೋಲ್​ಗೆ ಬಿದ್ದು ಸಾವನ್ನಪ್ಪಿದ್ಧಾರೆ. ಇನ್ನು ಅವೈಜ್ಞಾನಿಕ ಮ್ಯಾನ್ ಹೋಲ್ ನಿರ್ಮಾಣದಿಂದಾಗಿ ಈ ರೀತಿಯ ದುರಂತಗಳು ಸಂಭವಿಸುತ್ತವೆ ಎಂದು ಸಾರ್ವಜನಿಕರು ಹಲವು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ಧಾರೆ.

 
First published:July 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ