IRCTC: ಪ್ರಮುಖ ದೇವಸ್ಥಾನಗಳು-ಐತಿಹಾಸಿಕ ಸ್ಥಳಗಳನ್ನು ನೋಡಲು ಇಲ್ಲಿದೆ ವಿಶೇಷವಾದ ಪ್ಯಾಕೇಜ್

ವಿಶೇಷ ಪ್ಯಾಕೇಜ್‌ಗಳಲ್ಲಿ ಪ್ರಯಾಣಿಕರು ಕೇವಲ ಐಆರ್‌ಸಿಟಿಸಿ (ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ) ನಿಗದಿಪಡಿಸಿದ ಹಣ ನೀಡಿ ಬುಕ್ ಮಾಡಿಕೊಂಡರೆ ಸಾಕು. ಪೂರ್ತಿ ಪ್ರವಾಸದ ಎಲ್ಲ ವ್ಯವಸ್ಥೆಗಳನ್ನು ಅವರೇ ಮಾಡುತ್ತಾರೆ. ನೀವು ಯಾವುದೇ ಕಿರಿಕಿರಿ ಇಲ್ಲದೆಯೇ ಆರಾಮಾಗಿ ಪ್ರವಾಸಕ್ಕೆ ಹೋಗಿ ಬರಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ತನ್ನ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಪ್ರಮುಖ ದೇವಸ್ಥಾನಗಳ ದರ್ಶನ ಪಡೆಯಲು ಅವಕಾಶ ಮಾಡಿಕೊಡುವಲ್ಲಿ ತುಂಬಾ ವರ್ಷಗಳಿಂದಲೂ ಭಾರತೀಯ ರೈಲ್ವೆ  (IRCTC) ವಿಭಿನ್ನ ತರಹದ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸುತ್ತಲೇ ಬಂದಿದೆ. ಅಲ್ಲದೆ ಎಷ್ಟೋ ಜನರಿಗೆ ಈ ಪ್ರಮುಖ ದೇವಸ್ಥಾನಗಳನ್ನು ನೋಡಬೇಕು ಎಂದು ಆಸಕ್ತಿ ಇದ್ದರೂ, ಅಷ್ಟೊಂದು ಹಣ ಖರ್ಚು ಮಾಡಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ಒಬ್ಬರೇ ಹೋಗಿ ಎಲ್ಲಾ ಪ್ರೇಕ್ಷಣೀಯ ಮತ್ತು ದೇವಸ್ಥಾನಗಳನ್ನು ಸುತ್ತಿಕೊಂಡು ಬರಲು ಸಾಧ್ಯವಾಗುವುದಿಲ್ಲ. ಅಂತಹ ಜನರಿಗಾಗಿ ಭಾರತೀಯ ರೈಲ್ವೆ ಸದಾ ವಿಶೇಷ ಪ್ಯಾಕೇಜ್‌ಗಳನ್ನು ನೀಡುತ್ತಾ ಬಂದಿದೆ.

ಈ ವಿಶೇಷ ಪ್ಯಾಕೇಜ್‌ಗಳಲ್ಲಿ ಪ್ರಯಾಣಿಕರು ಕೇವಲ ಐಆರ್‌ಸಿಟಿಸಿ (ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ) ನಿಗದಿಪಡಿಸಿದ ಹಣ ನೀಡಿ ಬುಕ್ ಮಾಡಿಕೊಂಡರೆ ಸಾಕು. ಪೂರ್ತಿ ಪ್ರವಾಸದ ಎಲ್ಲ ವ್ಯವಸ್ಥೆಗಳನ್ನು ಅವರೇ ಮಾಡುತ್ತಾರೆ. ನೀವು ಯಾವುದೇ ಕಿರಿಕಿರಿ ಇಲ್ಲದೆಯೇ ಆರಾಮಾಗಿ ಪ್ರವಾಸಕ್ಕೆ ಹೋಗಿ ಬರಬಹುದು.

Harihara Pallathadka village harihareshwara temple history
ಸಾಂದರ್ಭಿಕ ಚಿತ್ರ


ಇದೀಗ ಮತ್ತೊಮ್ಮೆ ತನ್ನ ಪ್ರಯಾಣಿಕರಿಗಾಗಿ ಐಆರ್‌ಸಿಟಿಸಿ ಒಂದು ವಿಶೇಷವಾದ ಪ್ಯಾಕೇಜ್ ಘೋಷಿಸಿದ್ದು, ಅದರಲ್ಲಿ ಆಸಕ್ತರು ಅಯೋಧ್ಯೆ, ಚಿತ್ರಕೂಟ, ನಂದಿಗ್ರಾಮ್, ಪ್ರಯಾಗ್, ಶ್ರಿಂಗಾವರ್ ಪುರ್ ಮತ್ತು ವಾರಾಣಸಿಯಂತಹ ದೇವಸ್ಥಾನಗಳ ಯಾತ್ರೆಗೆ ಹೋಗಿ ಬರಬಹುದು. ಈ ವಿಶೇಷವಾದ ಯಾತ್ರೆಯು ಏಳು ರಾತ್ರಿ ಮತ್ತು ಎಂಟು ದಿನಗಳ ಸುದೀರ್ಘ ಪ್ರವಾಸ ಪ್ಯಾಕೇಜ್ ಹೊಂದಿದೆ ಎಂದು ಐಆರ್‌ಸಿಟಿಸಿ ಇತ್ತೀಚೆಗೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಘೋಷಿಸಿದೆ.

ಇದನ್ನೂ ಓದಿ: IRCTC Offer: ಭಾರತೀಯ ರೈಲ್ವೆ ವಿಶೇಷ ಕೊಡುಗೆ: ಕಾಶ್ಮೀರಕ್ಕೆ ಕಡಿಮೆ ವೆಚ್ಚದಲ್ಲಿ 6 ದಿನಗಳ ಪ್ರವಾಸ

ಪ್ಯಾಕೇಜ್‌ನ ಒಟ್ಟು ವೆಚ್ಚವು ಒಬ್ಬ ವ್ಯಕ್ತಿಗೆ 7,560 ರೂಪಾಯಿಗಳಿಂದ ಪ್ರಾರಂಭವಾಗಲಿದೆ. ಐತಿಹಾಸಿಕ ಪ್ರಾಮುಖ್ಯತೆ ಪಡೆದಂತಹ ದೇವಾಲಯಗಳು ಮತ್ತು ಪ್ರವಾಸಿ ತಾಣಗಳನ್ನು ಈ ವಿಶೇಷ ಪ್ಯಾಕೇಜ್ ಒಳಗೊಂಡಿರುತ್ತದೆ. ಪ್ರವಾಸದ ದಿನಾಂಕವನ್ನು ಐಆರ್‌ಸಿಟಿಸಿಯು  ನವೆಂಬರ್ 27 ಎಂದು ನಿಗದಿಪಡಿಸಿದೆ.

ಈ ವಿಶೇಷವಾದ ಪ್ಯಾಕೇಜ್‌ನಲ್ಲಿ ಪ್ರಯಾಣಿಕರು ಸ್ಲೀಪರ್ ಕ್ಲಾಸ್ ಮತ್ತು 3ಎಸಿ ಕ್ಲಾಸ್ ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸುವ ಸೌಲಭ್ಯವಿರುತ್ತದೆ. ರಾತ್ರಿ ಈ ಪ್ರವಾಸಿ ತಾಣಗಳಲ್ಲಿ ಮತ್ತು ದೇವಸ್ಥಾನಗಳ ಹತ್ತಿರ ತಂಗಲು ವಸತಿ ಸೌಲಭ್ಯ ಒದಗಿಸಲಾಗುವುದು. ರಾತ್ರಿ ತಂಗುವ ಸ್ಥಳಗಳಲ್ಲಿ ಮಲ್ಟಿಶೇರಿಂಗ್ ಆಧಾರದ ಮೇಲೆ 3ಎಸಿ ಬುಕ್ ಮಾಡಿಕೊಂಡವರಿಗೆ ವಸತಿ ಮತ್ತು ಬೆಳಗ್ಗೆ ಫ್ರೆಶ್ ಅಪ್ ಆಗಲು ನಾಲ್ಕು ಶೇರಿಂಗ್ ಬೇಸಿಸ್ ರೂಮ್ ಅನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: IRCTC Cruise Liner: ಭಾರತದಲ್ಲೂ ಈಗ ಐಶಾರಾಮಿ ಹಡಗಿನ ಪ್ರಯಾಣ ಶುರು, ಟಿಕೆಟ್ ರೇಟ್ ಎಷ್ಟು, ಬೆಂಗಳೂರಿಂದ ಹೋಗೋದು ಹೇಗೆ? ಫುಲ್ ಡೀಟೆಲ್ಸ್

ಈ ವಿಶೇಷ ಪ್ಯಾಕೇಜ್‌ನಲ್ಲಿ ಪ್ರಯಾಣಿಕರಿಗೆ ಶುದ್ಧ ಸಸ್ಯಾಹಾರಿ ಊಟ, ಪ್ರವಾಸದಲ್ಲಿ ಪ್ರಕಟಣೆಗಳು ಮತ್ತು ಮಾಹಿತಿಗಾಗಿ ಜನರನ್ನು, ಪ್ರತಿ ಬೋಗಿಗೆ ಭದ್ರತಾ ವ್ಯವಸ್ಥೆಗಳು, ರೈಲು ಅಧೀಕ್ಷಕರಾಗಿ ರೈಲಿನಲ್ಲಿ ಐಆರ್‌ಸಿಟಿಸಿ ಅಧಿಕಾರಿ ಮತ್ತು ಪ್ರಯಾಣ ವಿಮೆಯೂ ಈ ವಿಶೇಷ ಪ್ಯಾಕೇಜ್‌ನಲ್ಲಿ ಲಭ್ಯವಿರುತ್ತದೆ ಎಂದು ಐಆರ್‌ಸಿಟಿಸಿ ತಿಳಿಸಿದೆ. ಈ ಹಿಂದೆಯೂ ಸಹ ಐಆರ್‌ಸಿಟಿಸಿ ತನ್ನ ಪ್ರಯಾಣಿಕರಿಗಾಗಿ ವಿಶೇಷವಾದ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತಲೆ ಬಂದಿದ್ದು, ಆಸಕ್ತರು ಈ ಪ್ರವಾಸ ಪ್ಯಾಕೇಜ್ ಅನ್ನು ಕೂಡಲೇ ಬುಕ್ ಮಾಡಿಕೊಳ್ಳಬಹುದಾಗಿದೆ.
Published by:Anitha E
First published: