ಜಿಎಸ್​ಟಿ ಬಿಸಿ; ತೆಲುಗು ನಟ ಪ್ರಿನ್ಸ್​ ಮಹೇಶ್​ ಬಾಬು ಬ್ಯಾಂಕ್​ ಅಕೌಂಟ್​ ಸೀಜ್

ಮಹೇಶ್‌ಬಾಬು ಸುಮಾರು 10 ವರ್ಷಗಳ ಹಿಂದಿನ ಸರ್ವೀಸ್ ಟ್ಯಾಕ್ಸ್ ಇದುವರೆಗೂ ಕಟ್ಟಿಲ್ಲ. ಇದರಿಂದ ಕಾನೂನು ಕ್ರಮಕ್ಕೆ ಜಿಎಸ್‌ಟಿ ಇಲಾಖೆ ಮುಂದಾಗಿದೆ.

Seema.R | news18
Updated:December 28, 2018, 1:37 PM IST
ಜಿಎಸ್​ಟಿ ಬಿಸಿ; ತೆಲುಗು ನಟ ಪ್ರಿನ್ಸ್​ ಮಹೇಶ್​ ಬಾಬು ಬ್ಯಾಂಕ್​ ಅಕೌಂಟ್​ ಸೀಜ್
ಮಹೇಶ್​ ಬಾಬು
  • News18
  • Last Updated: December 28, 2018, 1:37 PM IST
  • Share this:
ಹೈದ್ರಾಬಾದ್​ (ಡಿ.28): ಸೇವಾ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ತೆಲುಗು ನಟ ಪ್ರಿನ್ಸ್​ ಮಹೇಶ್​ ಬಾಬು ಅವರ ಎರಡು ಖಾತೆಗಳನ್ನು ಸೀಜ್​ ಮಾಡುವ ಮೂಲಕ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಅವರಿಗೆ ಬಿಸಿ ಮುಟ್ಟಿಸಿದೆ.

ಮಹೇಶ್‌ಬಾಬು ಸುಮಾರು 10 ವರ್ಷಗಳ ಹಿಂದಿನ ಸರ್ವೀಸ್ ಟ್ಯಾಕ್ಸ್ ಇದುವರೆಗೂ ಕಟ್ಟಿಲ್ಲ. ಇದರಿಂದ ಕಾನೂನು ಕ್ರಮಕ್ಕೆ ಜಿಎಸ್‌ಟಿ ಇಲಾಖೆ ಮುಂದಾಗಿದ್ದು, ಮಹೇಶ್‌ಬಾಬುಗೆ ಸೇರಿದ 2 ಬ್ಯಾಂಕ್‌ ಖಾತೆಗಳನ್ನ ನಿಷ್ಕ್ರಿಯಗೊಳಿಸಲಾಗಿದೆ ಎಂದು ಹೈದ್ರಾಬಾದ್​ ಜಿಎಸ್​ಟಿ ಆಯುಕ್ತರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

2007 ಮತ್ತು 2008ರಲ್ಲಿ ಮಹೇಶ್‌ಬಾಬು ಕಾಣಿಸಿಕೊಂಡಿದ್ದ ಜಾಹೀರಾತುಗಳಿಗೆ ವಿಧಿಸಿದ್ದ 18 ಲಕ್ಷ 50 ಸಾವಿರ ರೂಪಾಯಿ ಸೇವಾ ತೆರಿಗೆ ಕಟ್ಟಿರಲಿಲ್ಲ. ಈ ಮೊತ್ತ ಈಗ ಬಡ್ಡಿ ಸೇರಿ 73 ಲಕ್ಷ 50 ಸಾವಿರ ರೂಪಾಯಿ ಆಗಿದೆ.

ಇದನ್ನು ಓದಿ: ಕಾಂಗ್ರೆಸ್​-ಬಿಜೆಪಿ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು 'ದಿ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​' ಟ್ರೈಲರ್

ಇದರಲ್ಲಿ 42 ಲಕ್ಷ ರೂಪಾಯಿಯನ್ನ ಮಹೇಶ್‌ಬಾಬು ಅವರ ಆಕ್ಸಿಸ್‌ಬ್ಯಾಂಕ್‌ ಖಾತೆಯಿಂದ ವಸೂಲಿ ಮಾಡಲಾಗಿದೆ. ಐಸಿಐಸಿಐ ಬ್ಯಾಂಕ್‌ ಖಾತೆಯಿಂದ ಉಳಿದ ಮೊತ್ತ ವಸೂಲಿಗೆ ಜಿಎಸ್‌ಟಿ ಇಲಾಖೆ ಸಜ್ಜಾಗಿದೆ. ಅಷ್ಟೂ ಹಣ ವಸೂಲಿ ಆಗದವರೆಗೆ ಮಹೇಶ್‌ಬಾಬು ಅವರು ಈ ಖಾತೆಗಳಿಂದ ಯಾವುದೇ ವ್ಯವಹಾರ ಮಾಡುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

First published: December 28, 2018, 1:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading