Mumbai Actress Rape: ಯುವನಟಿ ಮೇಲೆ ಹಲವು ಬಾರಿ ರೇಪ್; ಪೊಲೀಸರಿಂದ ಬಿಲ್ಡರ್ ಬಂಧನ

ಎಫ್​ಐಆರ್​ನಲ್ಲಿ ದಾಖಲಿಸಿರುವಂತೆ ತನ್ನನ್ನು ಮದುವೆಯಾಗುವಂತೆ ನಂಬಿಸಿ ಬ್ಯುಲ್ಡರ್ ಮತ್ತು ಫಿಟ್​ನೆಸ್ ಟ್ರೇನರ್ ಸಹ ಆಗಿರುವ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ತೆಲುಗು ಯುವನಟಿ ದೂರು ದಾಖಲಿಸಿದ್ದಾಳೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಯುವನಟಿಯನ್ನು ಅತ್ಯಾಚಾರ ಮಾಡಿದ ಆರೋಪದಡಿ ಬಿಲ್ಡರ್ ಮತ್ತು ಫಿಟ್​ನೆಸ್ ಟ್ರೇನರ್ ಒಬ್ಬನನ್ನು ಮುಂಬೈ ಪೊಲೀಸರು (Mumbai Police) ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ  ಅತ್ಯಾಚಾರ ಎಸಗಲಾಗಿದೆ ಎಂದು 24 ವರ್ಷದ ತೆಲುಗು ಯುವನಟಿ (Telugu Actress) ಆರೋಪ ಮಾಡಿದ್ದಾರೆ. ಹಲವು ತೆಲುಗು ಸಿನಿಮಾಗಳಲ್ಲಿ (Telugu Film Industry) ನಟಿಸಿರುವ ಈ ಯುವನಟಿ ತನ್ನ ಮೇಲೆ 2021ರಿಂದ 2022ರ ನಡುವೆ ಹಲವು ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 376, 323, 504, 506(2), 67, and 67(A) ಅಡಿ ದೂರು ದಾಖಲಾಗಿದ್ದು  ಆರೋಪಿ ಆದಿತ್ಯಾ ಅಜಯ್ ಕಪೂರ್​ನನ್ನು ಬಂಧಿಸಲಾಗಿದೆ. 

    ಎಫ್​ಐಆರ್​ನಲ್ಲಿ ದಾಖಲಿಸಿರುವಂತೆ ತನ್ನನ್ನು ಮದುವೆಯಾಗುವಂತೆ ನಂಬಿಸಿ ಬಿಲ್ಡರ್ ಮತ್ತು ಫಿಟ್​ನೆಸ್ ಟ್ರೇನರ್ ಸಹ ಆಗಿರುವ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ತೆಲುಗು ಯುವನಟಿ ದೂರು ದಾಖಲಿಸಿದ್ದಾಳೆ.



    ಮದುವೆ ಆಗು ಅಂದರೆ ಹಲ್ಲೆ
    ಈ ಪ್ರಖ್ಯಾತ ಬಿಲ್ಡರ್ ಮತ್ತು ಫಿಟ್​ನೆಸ್ ತರಬೇತುದಾರ ಮದುವೆ ಆಗು ಎಂದು ಕೇಳಿದಾಗ ಆಕೆಯನ್ನು ಹೊಡೆಯಲು ಶುರುಮಾಡಿದ್ದ. ಅಲ್ಲದೇ ಆಕೆಯ ಪೋಷಕರಿಗೆ ಆಕೆಯನ್ನು ಕೊಲ್ಲುವುದಾಗಿಯೂ ಮೆಸೇಜ್ ಕಳಿಸಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.  

    ನರ್ಸರಿ ಬಾಲಕಿ ಮೇಲೆ ಅತ್ಯಾಚಾರ
    ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಮೂರೂವರೆ ವರ್ಷದ ನರ್ಸರಿ ವಿದ್ಯಾರ್ಥಿನಿ ಅತ್ಯಾಚಾರ ನಡೆದಿದೆ. ಪುಟ್ಟ ಬಾಲಕಿ ತೆರಳುತ್ತಿದ್ದ ಶಾಲೆಯ ಬಸ್ ಚಾಲಕನೇ ವಾಹನದೊಳಗೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ. ಕಳೆದ ಗುರುವಾರ ಈ ಅಮಾನುಷ ಘಟನೆ ನಡೆದಿದೆ. ಮೂರುವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ವಾಹನದೊಳಗೆ ಇದ್ದ ಬಸ್ ಚಾಲಕನ ಜೊತೆಗೆ ಮಹಿಳಾ ಅಟೆಂಡರ್​ಅನ್ನು ಸಹ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಇದನ್ನೂ ಓದಿ:  Supreme Court: ಚುನಾವಣೆಯಲ್ಲಿ ಸ್ಪರ್ಧೆ; ಸುಪ್ರೀಂ ಮಹತ್ವದ ಆದೇಶ

    ಭೂಪಾಲ್ ನಗರದ ಪ್ರಮುಖ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ ಮಗು ಬಸ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಬಾಲಕಿ ಮನೆಗೆ ಮರಳಿದ ನಂತರ, ತನ್ನ ಬ್ಯಾಗ್‌ನಲ್ಲಿ ಇರಿಸಲಾಗಿದ್ದ ಮಗುವಿನ ಬಟ್ಟೆಯನ್ನು ಯಾರೋ ಬದಲಾಯಿಸಿದ್ದನ್ನು ಮೂರುವರೆ ವರ್ಷ ತಾಯಿ ಗಮನಿಸಿದ್ದಾರೆ.

    ಮಗುವಿನ ಬಟ್ಟೆ ಬದಲಾವಣೆಯಿಂದ ಹುಟ್ಟಿಕೊಂಡ ಅನುಮಾನ
    ಇದರಿಂದ ಮಗುವಿನ ತಾಯಿಗೆ ಸಂಶಯ ಹುಟ್ಟಿದೆ. ತಾಯಿ ತನ್ನ ಮಗಳ ಕ್ಲಾಸ್ ಟೀಚರ್ ಮತ್ತು ಶಾಲೆಯ ಪ್ರಾಂಶುಪಾಲರನ್ನು ಈ ಬಗ್ಗೆ ವಿಚಾರಿಸಿದ್ದಾಳೆ. ಆದರೆ ಇಬ್ಬರೂ ಮಗುವಿನ ಬಟ್ಟೆಯನ್ನು ಬದಲಾಯಿಸಿಲ್ಲ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: Vande Bharat Express: ಕರ್ನಾಟಕಕ್ಕೂ ಬರಲಿದೆ ವಂದೇ ಭಾರತ್ ರೈಲು! ಬೆಂಗಳೂರಿನಿಂದ ಈ ನಗರಕ್ಕೆ ಸೇವೆ

    ಕೌನ್ಸಿಲಿಂಗ್​ನಲ್ಲಿ ಹೊರಬಿತ್ತು ಭಯಾನಕ ಸತ್ಯ
    ಆದರೆ ಅದೇ ಸಮಯಕ್ಕೆ ಮಗು ತನ್ನ ಜನನಾಂಗದಲ್ಲಿ ನೋವಿನ ಬಗ್ಗೆ ತಾಯಿಯಲ್ಲಿ ಹೇಳಿಕೊಂಡಿದೆ. ಇದರಿಂದ ಆತಂಕಕ್ಕೆ ಒಳಗಾದ ಮಗುವಿನ ಪೋಷಕರು ಆಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೌನ್ಸೆಲಿಂಗ್ ಮಾಡಿದ್ದಾರೆ.
    Published by:ಗುರುಗಣೇಶ ಡಬ್ಗುಳಿ
    First published: