Actors Summoned In Drugs Case: ರಾಣಾ ದಗ್ಗುಬಾಟಿ, ರವಿತೇಜ, ರಾಕುಲ್​ಗೆ ಡ್ರಗ್ಸ್ ಕೇಸ್​​​ನಲ್ಲಿ ED ಸಮನ್ಸ್

Rana Daggubati, Ravi teja, Rakul Preet Singh Summoned: ಬಾಹುಬಲಿ ಸಿನಿಮಾ ಖ್ಯಾತಿಯ ನಟ ರಾಣಾ ದಗ್ಗುಬಾಟಿ, ನಟ ರವಿತೇಜ,  ನಟಿ ರಾಕುಲ್ ಪ್ರೀತ್ ಸಿಂಗ್​ ಸೇರಿದಂತೆ 10 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್​​​​ ನೀಡಿದೆ.

ತೆಲುಗು ನಟ-ನಟಿಯರಿಗೆ ಸಮನ್ಸ್​​​​

ತೆಲುಗು ನಟ-ನಟಿಯರಿಗೆ ಸಮನ್ಸ್​​​​

  • Share this:
Drugs Case: ಸ್ಯಾಂಡಲ್​​​ ವುಡ್​ ಡ್ರಗ್​ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಇತರೆ ಆರೋಪಿಗಳು ಮಾದಕ ವಸ್ತು ಸೇವಿಸಿದ್ದರು ಎಂಬುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಬೀತಾಗಿದೆ. ಹಲವು ತಿಂಗಳುಗಳ ಬಳಿಕ ಡ್ರಗ್ಸ್​ ಪ್ರಕರಣಕ್ಕೆ ಮತ್ತೆ ಸುದ್ದಿಯಲ್ಲಿದೆ. ಇದರ ಬೆನ್ನಲ್ಲೇ ಪಕ್ಕದ ಟಾಲಿವುಡ್(Tollywood)​​ನಲ್ಲಿ 4 ವರ್ಷಗಳ ಹಿಂದಿನ ಡ್ರಗ್​ ಕೇಸ್​ಗೆ ಮರುಜೀವ ಸಿಕ್ಕಿದೆ. ಬಾಹುಬಲಿ ಸಿನಿಮಾ ಖ್ಯಾತಿಯ ನಟ ರಾಣಾ ದಗ್ಗುಬಾಟಿ(Rana Daggubati), ನಟ ರವಿತೇಜ(Ravi Teja),  ನಟಿ ರಾಕುಲ್ ಪ್ರೀತ್ ಸಿಂಗ್(Rakul Preet Singh) ಸೇರಿದಂತೆ 10 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ED) ಸಮನ್ಸ್​​​​ ನೀಡಿದೆ.

ಟಾಲಿವುಡ್​​ಗೆ ತ್ರಿಬಲ್​​​ R ಶಾಕ್​​ (Rana, Ravi Teja, Rakul) 

ಸೆಪ್ಟೆಂಬರ್ 6 ರಂದು ರಾಕುಲ್ ಪ್ರೀತ್ ಸಿಂಗ್, ಸೆಪ್ಟೆಂಬರ್ 8 ರಂದು ರಾಣಾ ದಗ್ಗುಬಾಟಿ, ಸೆಪ್ಟೆಂಬರ್ 9 ರಂದು ತೆಲುಗು ನಟ ರವಿತೇಜ ಮತ್ತು ಸೆಪ್ಟೆಂಬರ್ 31 ರಂದು ನಿರ್ದೇಶಕ ಪುರಿ ಜಗನ್ನಾಥ್ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ರವಿತೇಜ ಹಾಗೂ ಪುರಿ ಜಗನ್ನಾಥ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿಲ್ಲ. ಆದರೆ ಇವರುಗಳು ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

4 ವರ್ಷ ಹಿಂದಿನ ಪ್ರಕರಣಕ್ಕೆ ಮರುಜೀವ..!

2017 ರಲ್ಲಿ ತೆಲಂಗಾಣ ಅಬಕಾರಿ ಮತ್ತು ನಿಷೇಧ ಇಲಾಖೆಯು 30 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡು, 12 ಪ್ರಕರಣಗಳನ್ನು ದಾಖಲಿಸಿತ್ತು. 11 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.  ನಂತರ, ಜಾರಿ ನಿರ್ದೇಶನಾಲಯವು ಅಬಕಾರಿ ಇಲಾಖೆಯ ಪ್ರಕರಣಗಳಲ್ಲಿ ಅಕ್ರಮ ಹಣ ವರ್ಗಾವಣೆಯ ಬಗ್ಗೆ ತನಿಖೆ ಆರಂಭಿಸಿತು. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಅಬಕಾರಿ ಇಲಾಖೆಯಿಂದ ಇಲ್ಲಿಯವರೆಗೆ 30 ಜನರನ್ನು ಬಂಧಿಸಲಾಗಿದ್ದು, 62 ಮಂದಿಯನ್ನು ಪ್ರಶ್ನಿಸಲಾಗಿದೆ. ಪ್ರಶ್ನಿಸಿದವರಲ್ಲಿ 11 ಮಂದಿ ಚಿತ್ರರಂಗಕ್ಕೆ ಸಂಬಂಧಪಟ್ಟವರಾಗಿದ್ದಾರೆ.

ಹೈದರಾಬಾದ್‌  ಮಾದಕ ಜಾಲ..!

ಕಳೆದ ಕೆಲವು ವರ್ಷಗಳಲ್ಲಿ ಹೈದರಾಬಾದ್‌ನಲ್ಲಿ ಮಾದಕವಸ್ತುಗಳ ಸಾಗಾಟ ಪ್ರಕರಣಗಳು ಹೆಚ್ಚಾಗಿವೆ. 2017 ರ ಜುಲೈನಲ್ಲಿ ಅತಿ ದೊಡ್ಡ ಪ್ರಮಾಣದ ಎಲ್‌ಎಸ್‌ಡಿ ಮತ್ತು ಕೊಕೇನ್ ಅನ್ನು ಸರಣಿ ದಾಳಿಗಳ ಮೂಲಕ 13 ಜನರಿಂದ ವಶಪಡಿಸಿಕೊಳ್ಳಲಾಯಿತು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್​ ಜಾಲದಲ್ಲಿದ್ದಾ ಎಂದು ಅಬಕಾರಿ ಇಲಾಖೆ ಹೇಳಿತ್ತು.ಈ ಬಗ್ಗೆ 26 ಶಾಲೆಗಳು ಮತ್ತು 27 ಕಾಲೇಜುಗಳ ಜೊತೆಗೆ ಪೋಷಕರಿಗೆ ಸಹ ಮಾಹಿತಿ ನೀಡಲಾಗಿತ್ತು.

ಹೈ-ಫೈ ಜನಗಳೇ ಡ್ರಗ್ಸ್​ ಗ್ರಾಹಕರು..!

ಬಂಧಿತರು ಗೋವಾ ಮತ್ತು ಹೈದರಾಬಾದ್‌ನ ಪಬ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ರೇವ್ ಪಾರ್ಟಿಗಳಿಗೆ ಡ್ರಗ್ಸ್​ ಪೂರೈಸುತ್ತಿದ್ದರು ಎಂಬುದು ತಿಳಿದು ಬಂದಿತ್ತು. ಆರೋಪಿಗಳು ಪುಣೆ, ಮುಂಬೈ ಮತ್ತು ದೆಹಲಿಗೂ ಸಂಪರ್ಕ ಹೊಂದಿದ್ದಾರೆ. ಸುಶಿಕ್ಷಿತರು, ಉನ್ನತ ಕಂಪನಿಗಳಲ್ಲಿ ಉದ್ಯೋಗಳು ಡ್ರಗ್ಸ್​ ಮಾಫಿಯಾದ ಗ್ರಾಹಕರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಲ್ಲಿ ಆರು ಜನ ಎಂಜಿನಿಯರಿಂಗ್ ಪದವೀಧರರು.

ಇದನ್ನೂ ಓದಿ: Drugs Case| ಡ್ರಗ್ಸ್​ ಪ್ರಕರಣದ ಆರೋಪಿಗಳು ರಂಗೋಲಿ ಕೆಳಗೆ ನುಸುಳುವ ಕೆಲಸ ಮಾಡುತ್ತಿದ್ದಾರೆ; ಸಚಿವ ಅರಗ ಜ್ಞಾನೇಂದ್ರ ಕಿಡಿ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: