HOME » NEWS » National-international » TELL ME ONE POINT IN THE BILLS THAT HURTS THE FARMERS ASKS FINANCE MINISTER NIRMALA SITHARAMAN SNVS

ಕೃಷಿ ಮಸೂದೆಯಲ್ಲಿ ರೈತರಿಗೆ ಅನ್ಯಾಯವಾಗಿರುವುದಾದರೂ ಏನು?: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಕೃಷಿ ಸಚಿವ ತೋಮರ್ ಅವರು ಎಲ್ಲಾ ಸಂಬಂಧಿತ ವ್ಯಕ್ತಿಗಳೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿ ಮಸೂದೆ ತಂದಿದ್ದಾರೆ. ಈ ಕಾಯ್ದೆಗಳಲ್ಲಿ ರೈತರಿಗೆ ಯಾವ ರೀತಿ ಅನ್ಯಾಯವಾಗುತ್ತದೆ ಎಂದು ಹೇಳಿ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸವಾಲು ಹಾಕಿದ್ದಾರೆ.

news18-kannada
Updated:September 28, 2020, 12:01 PM IST
ಕೃಷಿ ಮಸೂದೆಯಲ್ಲಿ ರೈತರಿಗೆ ಅನ್ಯಾಯವಾಗಿರುವುದಾದರೂ ಏನು?: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
  • Share this:
ನವದೆಹಲಿ(ಸೆ. 28): ಕೇಂದ್ರದ ರೂಪಿಸಿರುವ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಭಟನೆಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾಯ್ದೆಯ ಯಾವ ಅಂಶವು ರೈತರಿಗೆ ಹಾನಿ ಮಾಡುತ್ತದೆ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಪಕ್ಷಗಳು ಸೇರಿದಂತೆ ಎಲ್ಲರೊಂದಿಗೆ ಸುದೀರ್ಘ ಸಮಾಲೋಚನೆ ಬಳಿಕವಷ್ಟೇ ಮಸೂದೆಗಳನ್ನ ಮಂಡನೆ ಮಾಡಿದ್ದಾರೆ. ವಿಪಕ್ಷಗಳು ವಿರೋಧಾಭಾಸ ಧೋರಣೆ ಅನುಸರಿಸುತ್ತಿವೆ ಎಂದು ನಿರ್ಮಲಾ ಸೀತಾರಾಮನ್ ವಿಷಾದಿಸಿದ್ದಾರೆ.

“ಪ್ರತಿಭಟನೆಗಳು ಎಲ್ಲೆಲ್ಲಿ ನಡೆಯುತ್ತಿವೆ ಎಂಬುದನ್ನು ನೋಡಿ. ಯಾವ ಕಾರಣಕ್ಕೆ ಪ್ರತಿಭಟನೆ ನಡೆಯುತ್ತಿದೆ. ಕಾಯ್ದೆಯ ಯಾವ ಅಂಶವು ನಿಮಗೆ ಸರಿ ಕಾಣುತ್ತಿಲ್ಲ? ರೈತರಿಗೆ ಯಾವ ರೀತಿ ಅನ್ಯಾಯವಾಗುತ್ತಿದೆ ಎಂದು ದಯವಿಟ್ಟು ಹೇಳಿ. ನಾನು ನಿಮಗೆ ಉತ್ತರಿಸಲು ಸಾಧ್ಯವಿಲ್ಲದ ಒಂದೇ ಒಂದು ಪ್ರಶ್ನೆ ಕೇಳಿ” ಎಂದು ದಿ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹಣಕಾಸು ಸಚಿವೆ ಕೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಂದ್: ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವರ ಬಂಧನ; ವಿವಿಧೆಡೆ ಪ್ರತಿಭಟನಾಕಾರರಿಗೆ ತಡೆ

ಕೃಷಿ ಸಚಿವರು ಕೃಷಿ ಕ್ಷೇತ್ರ ಸಂಬಂಧಿತ ವ್ಯಕ್ತಿಗಳು ಮತ್ತು ಸಂಘಟನೆಗಳ ಜೊತೆ ಮಾತ್ರವಲ್ಲ, ಸಂಸದರು ಮತ್ತು ರೈತರೊಂದಿಗೂ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದು ಬಹಳ ಶ್ರಮ ವಹಿಸಿ ಕಾಯ್ದೆ ರೂಪಿಸಿದ್ದಾರೆ. ಹೀಗಿದ್ದರೂ ವಿರೋಧ ವ್ಯಕ್ತವಾಗುತ್ತಿರುವುದು ಅಚ್ಚರಿ ಅಲ್ಲ, ನಿರಾಶೆ ಉಂಟು ಮಾಡಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷ ಇಬ್ಬಗೆ ಧೋರಣೆ ಅನುಸರಿಸುತ್ತಿದೆ. ರೈತರ ಬೆಳೆಗೆ ನೀಡಲಾಗುವ ಬೆಂಬಲ ಬೆಲೆ ಹಾಗೂ ಸರ್ಕಾರದ ಖರೀದಿ ಪ್ರಕ್ರಿಯೆಯನ್ನು ಕಾಯ್ದೆಯಲ್ಲಿ ಒಳಗೊಳ್ಳಬೇಕೆಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ಅದರ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿಯನ್ನು ತೆಗೆದುಹಾಕುವುದಾಗಿ ಹೇಳಿತ್ತು. ಬೆಂಬಲ ಬೆಲೆಯನ್ನು ಕಾಯ್ದೆಯಾಗಿ ರೂಪಿಸುವ ಬಗ್ಗೆ ಏನೂ ಹೇಳಿರಲಿಲ್ಲ. ಯಾಕೆ ಈಗ ಒತ್ತಾಯಿಸುತ್ತಿದ್ದೀರಿ? ಎಂದು ಹಣಕಾಸು ಸಚಿವೆ ಪ್ರಶ್ನೆ ಮಾಡಿದ್ದಾರೆ.

ಮಸೂದೆಗಳ ಜಾರಿಗೆ ಯಾಕೆ ಇಷ್ಟು ಆತುರ ತೋರಲಾಗುತ್ತಿದೆ? ಮಸೂದೆಗಳನ್ನ ಸೆಲೆಕ್ಟ್ ಕಮಿಟಿಯ ಪರಾಮರ್ಶೆಗೆ ಯಾಕೆ ಬಿಡಲಿಲ್ಲ ಎಂಬ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಅವರು, ಈ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಪಂಜಾಬ್​ನಲ್ಲಿ ಸ್ವತಂತ್ರ ಸ್ಪರ್ಧೆಗೆ ಬಿಜೆಪಿ ಸಿದ್ಧ; ಅಕಾಲಿಗಳಿಗೆ ಉಭಯಸಂಕಟ ಎಂದ ಪಂಜಾಬ್ ಸಿಎಂರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ ಸೇರಿದಂತೆ ಮೂರು ಮಸೂದೆಗಳನ್ನ ಕೇಂದ್ರ ಸರ್ಕಾರ ಸಂಸತ್​ನಲ್ಲಿ ಮಂಡನೆ ಮಾಡಿ ಎರಡೂ ಸದನಗಳಲ್ಲಿ ಅನುಮೋದನೆಯನ್ನೂ ಪಡೆದಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ಮಸೂದೆಗಳಿಗೆ ಅಂಕಿತವನ್ನೂ ಕೊಟ್ಟಿದ್ದಾರೆ. ಈ ಹೊಸ ಕಾಯ್ದೆಗಳು ಜಾರಿಗೆ ಬಂದರೆ ರೈತರ ಬೆಳೆಗೆ ಬೆಂಬಲ ಬೆಲೆ ಯೋಜನೆ ನಿಂತುಹೋಗಬಹುದು. ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ರೈತರು ಅಡಿಯಾಳಾಗಬೇಕಾಗಬಹುದು ಎಂಬುದು ವಿರೋಧಿಗಳ ಪ್ರಮುಖ ಅಕ್ಷೇಪವಾಗಿದೆ.
Published by: Vijayasarthy SN
First published: September 28, 2020, 12:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading