ಹೊಸ ಬದಲಾವಣೆಗಳೊಂದಿಗೆ BARCನಿಂದ ಟಿವಿ ಚಾನೆಲ್​​ಗಳ TRP ರೇಟಿಂಗ್ ಪುನಾರಂಭ

ಹೊಸ ಬದಲಾವಣೆಗಳೊಂದಿಗೆ ಟಿಆರ್​ಟಿ ಮಾಪನ ಕಾರ್ಯವನ್ನು ಪ್ರಾರಂಭಿಸಿದೆ. ಶಾಶ್ವತ ಉಸ್ತುವಾರಿ ಸಮಿತಿಯನ್ನೂ ರಚಿಸಲಾಗಿದೆ. ಖಾಸಗಿ ಮಾಹಿತಿಗಳನ್ನು ಪಡೆಯಲು ಇರುವ ನಿಯಮಗಳನ್ನು ಪರಿಷ್ಕರಿಸಿ ಮತ್ತಷ್ಟು ಬಿಗಿಗೊಳಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಟಿವಿಯಲ್ಲಿ ವೀಕ್ಷಕರು (Television Viewers) ಯಾವ ವಾಹಿನಿಯನ್ನು(TV Channels) ಯಾವ ಸಮಯದಲ್ಲಿ ಎಷ್ಟು ಹೊತ್ತಿನವರೆಗೆ ನೋಡುತ್ತಿದ್ದಾರೆ ಎಂಬುವನ್ನು ಮಾಪನ ಮಾಡುತ್ತಿದ್ದ ಬಾರ್ಕ್​​ (BARC)ಸಂಸ್ಥೆ ಮತ್ತೆ ತನ್ನ ಕಾರ್ಯಾಚರಣೆಯನ್ನು ಶುರು ಮಾಡಿದೆ. ಬಾರ್ಕ್ ಸಂಸ್ಥೆ​​ ಟಿವಿ ಚಾನೆಲ್​ಗಳ TRPಯನ್ನು ನೀಡುವ ಕಾರ್ಯವನ್ನು ಪುನಾರಂಭಿಸಿದೆ. ಕೆಲ ಅಪಾದನೆಗಳು ಎದುರಾಗಿದ್ದರಿಂದ ಬಾರ್ಕ್​ ಸಂಸ್ಥೆ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಈಗ ಕೆಲವೊಂದಿಷ್ಟು ಮಾರ್ಪಾಡುಗಳೊಂದಿಗೆ ತನ್ನ ಕಾರ್ಯವನ್ನು ಪುನಾರಂಭಿಸಿದೆ. ಮುಖ್ಯವಾಗಿ ಸ್ವತಂತ್ರ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲು ಮಂಡಳಿ ಮತ್ತು ತಾಂತ್ರಿಕ ಸಮಿತಿಯ ರಚನೆಯನ್ನು ಸಹ BARC ಆರಂಭಿಸಿದೆ.

ಮೇಲ್ವಿಚಾರಣಾ ಕಾರ್ಯವಿಧಾನಗಳ ಪರಿಷ್ಕರಣೆ

TRP ಸಮಿತಿ ವರದಿ ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) 28.04.2020 ರ ಶಿಫಾರಸಿನಂತೆ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ತನ್ನ ಪ್ರಕ್ರಿಯೆಗಳು, ನಿಯಮಗಳು, ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಪರಿಷ್ಕರಿಸಿ ಸುಧಾರಣೆಗಳನ್ನು ತಂದಿದೆ. ಈ ಹೊಸ ಬದಲಾವಣೆಗಳೊಂದಿಗೆ ಟಿಆರ್​ಟಿ ಮಾಪನ ಕಾರ್ಯವನ್ನು ಪ್ರಾರಂಭಿಸಿದೆ. ಶಾಶ್ವತ ಉಸ್ತುವಾರಿ ಸಮಿತಿಯನ್ನೂ ರಚಿಸಲಾಗಿದೆ. ಖಾಸಗಿ ಮಾಹಿತಿಗಳನ್ನು ಪಡೆಯಲು ಇರುವ ನಿಯಮಗಳನ್ನು ಪರಿಷ್ಕರಿಸಿ ಮತ್ತಷ್ಟು ಬಿಗಿಗೊಳಿಸಲಾಗಿದೆ.

ಕಳೆದ 3 ತಿಂಗಳುಗಳ TRP ಬಿಡುಗಡೆ

BARC ತಾನು ಕೈಗೊಂಡ ಬದಲಾವಣೆಗಳು, ಹೊಸ ಪ್ರಸ್ತಾವನೆಗಳನ್ನು ವಿವರಿಸಲು ಸಂಬಂಧಿತ ಕ್ಷೇತ್ರಗಳನ್ನು ಸಂಪರ್ಕಿಸಿದೆ. ಹೊಸ ನಿಯಮಗಳ ಪ್ರಕಾರ ಟಿಆರ್​ಪಿ ಅಂಕಿಅಂಶಗಳ ಬಿಡುಗಡೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ತಿಳಿಸಿದೆ. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಸುದ್ದಿ ರೇಟಿಂಗ್‌ಗಳನ್ನು ತಕ್ಷಣದಿಂದ ಜಾರಿಗೆ ತರುವಂತೆ   BARC ಗೆ ಸೂಚಿಸಿದೆ. ಕಳೆದ ಮೂರು ತಿಂಗಳ ಡೇಟಾವನ್ನು ಬಿಡುಗಡೆ ಮಾಡಲು ಕೇಳಿದೆ. ಪರಿಷ್ಕೃತ ವ್ಯವಸ್ಥೆಯ ಪ್ರಕಾರ, ಸುದ್ದಿ ಮತ್ತು ಸ್ಥಾಪಿತ ಪ್ರಕಾರಗಳ ವರದಿಯು ನಾಲ್ಕು ವಾರಗಳ ಸರಾಸರಿ ಪರಿಕಲ್ಪನೆ ಯಲ್ಲಿರುತ್ತದೆ.

ಇದನ್ನೂಓದಿ: I&B Ministry Twitter: ಕೇಂದ್ರ ಸರ್ಕಾರದ ಟ್ವಿಟರ್​ ಖಾತೆ ಹ್ಯಾಕ್​; ಮಾಡಿದ್ದು ಯಾರು ಗೊತ್ತಾ?

ಪ್ರಸಾರ ಭಾರತಿ ಅವರ ಅಧ್ಯಕ್ಷತೆಯಲ್ಲಿ ಸಚಿವಾಲಯವು ಕಾರ್ಯಕಾರಿ ಸಮಿತಿಯನ್ನು ಸಹ ಸ್ಥಾಪಿಸಿದೆ. TRP ಸೇವೆಗಳ ಬಳಕೆಗಾಗಿ ರಿಟರ್ನ್ ಪಾತ್ ಡೇಟಾ (RPD) ಸಾಮರ್ಥ್ಯಗಳನ್ನು ನಿಯಂತ್ರಿಸುವ ಪರಿಗಣನೆಗಾಗಿ, TRAI ಮತ್ತು TRP ಸಮಿತಿಯ ವರದಿಯಿಂದ ಶಿಫಾರಸು ಮಾಡಲಾಗಿದೆ. ಸಮಿತಿಯು ತನ್ನ ವರದಿಯನ್ನು ನಾಲ್ಕು ತಿಂಗಳ ಅವಧಿಯಲ್ಲಿ ಸಲ್ಲಿಸಬೇಕು.

TRPಎಂದರೇನು? 

ಟಿಆರ್​ಪಿ ಎಂದರೆ ಟೆಲಿವಿಶನ್ ರೇಟಿಂಗ್ ಪಾಯಿಂಟ್ಸ್. ಇದು ನ್ಯೂಸ್ ಚಾನೆಲ್​ಗಳನ್ನೂ ಸೇರಿ ಟಿವಿ ವಾಹಿನಿಗಳನ್ನು ಎಷ್ಟು ಮಂದಿ ವೀಕ್ಷಿಸುತ್ತಾರೆ ಎಂದು ಅಂದಾಜು ಮಾಡುವ ಸ್ವಯಂಚಾಲಿತ ಸಮೀಕ್ಷಾ ವ್ಯವಸ್ಥೆಯಾಗಿದೆ. ಬಾರ್ಕ್ ಸಂಸ್ಥೆ ಈ ಕಾರ್ಯವನ್ನ ನಿರ್ವಹಿಸುತ್ತದೆ. ದೇಶದ ಅನೇಕ ನಗರ, ಪಟ್ಟಣ, ಗ್ರಾಮಗಳಲ್ಲಿ ಸೆಟ್ ಟಾಪ್ ಬಾಕ್ಸ್ ಇರುವ ಕೆಲ ಆಯ್ದ ಮನೆಗಳಲ್ಲಿ ರಹಸ್ಯವಾಗಿ ಟಿಆರ್​ಪಿ ಮೀಟರ್​ಗಳನ್ನ ಅಳವಡಿಸಲಾಗುತ್ತದೆ. ಈ ಮೀಟರ್​ಗಳಿರುವುದು ಆ ಮನೆಗಳವರಿಗೂ ಗೊತ್ತಿರುವುದಿಲ್ಲ. ಆ ಮನೆಗಳಲ್ಲಿ ಏನು ವೀಕ್ಷಣೆ ಮಾಡುತ್ತಾರೆ ಅದರ ಮೇಲೆ ಟಿಆರ್​ಪಿ ನಿರ್ಧಾರವಾಗುತ್ತದೆ.

ಈ ಹಿಂದೆಯೂ ರೇಟಿಂಗ್​ ಸ್ಥಗಿತಗೊಂಡಿತ್ತು 

2020ರಲ್ಲಿ ಮುಂಬೈನಲ್ಲಿ ಟಿಆರ್​ಪಿ ಗೋಲ್ಮಾಲ್ ಬೆಳಕಿಗೆ ಬಂದ ಬೆನ್ನಲ್ಲೇ ಬಾರ್ಕ್ ಸಂಸ್ಥೆ ಎಲ್ಲಾ ಸುದ್ದಿ ವಾಹಿನಿಗಳ ಟಿಆರ್​ಪಿಯನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಿತ್ತು. ಆದರೆ, ರಾಜ್ಯವಾರು ಮತ್ತು ಭಾಷಾವಾರು ನ್ಯೂಸ್ ವಿಭಾಗಕ್ಕೆ ಬರುವ ವೀಕ್ಷಕರ ಸಂಖ್ಯೆಯನ್ನು ನೀಡುವ ಕಾರ್ಯ ಮುಂದುವರಿಸಿತ್ತು. ಒಂದು ನ್ಯೂಸ್ ಚಾನೆಲ್​ಗೆ ಪ್ರತ್ಯೇಕವಾಗಿ ಟಿಆರ್​ಪಿ ರೇಟಿಂಗ್ ಮಾಹಿತಿ ಇರುವುದಿಲ್ಲ. ಈ ಮೂರು ತಿಂಗಳಲ್ಲಿ ಟಿಆರ್​ಪಿ ವ್ಯವಸ್ಥೆಯನ್ನ ಮರುಪರಿಶೀಲಿಸಿ ಲೋಪಸರಿಪಡಿಸುವ ಕೆಲಸ ಮಾಡಲಾಗುತ್ತದೆ ಎಂದು ಆ ಸಂಸ್ಥೆ ಹೇಳಿತ್ತು. ಸುದ್ದಿ ಬಿಟ್ಟು ಬೇರೆ ಎಂಟರ್​ಟೈನ್ಮೆಂಟ್, ಸ್ಪೋರ್ಟ್ಸ್​ನಂಥ ಬೇರೆ ವಿಭಾಗಗಳ ವಾಹಿನಿಗಳ ಟಿಆರ್​ಪಿಯನ್ನು ನೀಡಿತ್ತು.
Published by:Kavya V
First published: