ಸಿಎಎ, ಕಲಂ 370 ರದ್ದು ವೇಳೆ ಇಂಟರ್​ನೆಟ್​ ಸ್ಥಗಿತ: ಗಂಟೆಗೆ ಕೋಟ್ಯಂತರ ರೂ ನಷ್ಟ ಅನುಭವಿಸಿದ ಟೆಲಿಕಾಂ ಕಂಪನಿಗಳು

ಭಾರತೀಯರು ತಿಂಗಳಿಗೆ ಸರಾಸರಿ 9.8ಗಿಗಾಬೈಟ್​ ಡಾಟಾ ಬಳಕೆ ಮಾಡುತ್ತಾರೆ. ಇದು ವಿಶ್ವದಲ್ಲಿಯೇ ಅತಿ ಹೆಚ್ಚು ಬಳಕೆ ಮಾಡುವವರ ಸಂಖ್ಯೆ ಕೂಡ ಆಗಿದೆ ಎಂದು ಸ್ವದೇಶಿ ಟೆಲಿಕಾಮ್ಸ್​ ಗೇರ್​ಮೇಕರ್ಸ್​ ಎರಿಕ್ಸನ್​ ತಿಳಿಸಿದೆ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್ ಮತ್ತು ವಾಟ್ಸ್​ಆ್ಯಪ್​ಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ.

Seema.R | news18-kannada
Updated:December 28, 2019, 12:07 PM IST
ಸಿಎಎ, ಕಲಂ 370 ರದ್ದು ವೇಳೆ ಇಂಟರ್​ನೆಟ್​ ಸ್ಥಗಿತ: ಗಂಟೆಗೆ ಕೋಟ್ಯಂತರ ರೂ ನಷ್ಟ ಅನುಭವಿಸಿದ ಟೆಲಿಕಾಂ ಕಂಪನಿಗಳು
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ (ಡಿ.28): ಜಮ್ಮು ಕಾಶ್ಮೀರದಲ್ಲಿ ವಿಧಿ 370 ರದ್ದು ಸಮಯ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ವಿವಿಧೆಡೆ ನಡೆದ ಪ್ರತಿಭಟನೆ ವೇಳೆ ಸಾಮಾಜಿಕ ಜಾಲತಾಣದ ದುರ್ಬಳಕೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂಟರ್​ನೆಟ್​ ಸ್ಥಗಿತಕ್ಕೆ ಮುಂದಾಗಿತ್ತು. ಈ ರೀತಿ ಇಂಟರ್​ನೆಟ್​ ಸ್ಥಗಿತಗೊಳಿಸಿದ್ದರಿಂದಾಗಿ ಟೆಲಿಕಾಂ ಕಂಪನಿಗಳು ಭಾರೀ ನಷ್ಟ ಅನುಭವಿಸಿದೆ ಎಂದು ರಾಯಿಟರ್ಸ್​ ವರದಿ ಮಾಡಿದೆ.

ಅತಿಹೆಚ್ಚು ಇಂಟರ್​ನೆಟ್​ ಬಳಸುವ ದೇಶಗಳಲ್ಲಿ ಭಾರತ ಒಂದಾಗಿದ್ದು, ಈ ರೀತಿ ಇಂಟರ್​ನೆಟ್​ ಸೇವೆ ಸ್ಥಗಿತಗೊಳಿಸಿದ್ದರಿಂದ ಗಂಟೆಗೆ 24.5 ಮಿಲಿಯನ್​ ರೂಪಾಯಿ (2 ಕೋಟಿ 45 ಲಕ್ಷ) ನಷ್ಟ ಅನುಭವಿಸಿದೆ.

ಭಾರತೀಯರು ತಿಂಗಳಿಗೆ ಸರಾಸರಿ 9.8ಗಿಗಾಬೈಟ್​ ಡಾಟಾ ಬಳಕೆ ಮಾಡುತ್ತಾರೆ. ಇದು ವಿಶ್ವದಲ್ಲಿಯೇ ಅತಿ ಹೆಚ್ಚು ಬಳಕೆ ಮಾಡುವವರ ಸಂಖ್ಯೆ ಕೂಡ ಆಗಿದೆ ಎಂದು ಸ್ವದೇಶಿ ಟೆಲಿಕಾಮ್ಸ್​ ಗೇರ್​ಮೇಕರ್ಸ್​ ಎರಿಕ್ಸನ್​ ತಿಳಿಸಿದೆ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್ ಮತ್ತು ವಾಟ್ಸ್​ಆ್ಯಪ್​ಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಈಶಾನ್ಯ ರಾಜ್ಯ, ಉತ್ತರ ಪ್ರದೇಶದ 18 ಜಿಲ್ಲೆಗಳಲ್ಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇಂಟರ್​ನೆಟ್​​ ಸೇವೆ ರದ್ದುಗೊಂಡಿತು. ಇನ್ನು ರಾಜಧಾನಿ ದೆಹಲಿಯಲ್ಲಿ ಕೂಡ ಡಿ.28ರವರೆಗೆ  24 ಗಂಟೆಗಳ ಕಾಲ ಈ ಸೇವೆಯನ್ನು ಸ್ಥಗಿತ ಗೊಳಿಸಲಾಗಿತ್ತು. ಇನ್ನು ಜಮ್ಮು ಕಾಶ್ಮೀರದಲ್ಲಿ ಈಗಾಗಲೇ ಇಂಟರ್​ನೆಟ್​ ಸೇವೆಯನ್ನು 140 ದಿನಗಳ ಕಾಲ  ಸ್ಥಗಿತಗೊಳಿಸಲಾಗಿತ್ತು.

ಇದನ್ನು ಓದಿ: ಪಾಕಿಸ್ತಾನಕ್ಕೆ ಹೋಗಿ; ಮೀರತ್​ ಹಿಂಸಾಚಾರದ ವೇಳೆ ಪ್ರತಿಭಟನಾಕಾರರಿಗೆ ಪೊಲೀಸ್ ಅಧಿಕಾರಿ​ ಎಚ್ಚರಿಕೆ ವಿಡಿಯೋ ವೈರಲ್

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಇಂಟರ್​ನೆಟ್​ ಸೇವೆಯನ್ನು ಸ್ಥಗಿತಗೊಳಿಸುತ್ತಿರುವ ಕುರಿತು ಮಾತನಾಡಿರುವ, ಸೆಲ್ಯೂಲರ್​ ಆಪರೇಟರ್​ ಅಸೋಸಿಯೆಷನ್​ ಆಫ್​ ಇಂಡಿಯಾ, ಪ್ರತಿಭಟನೆ ವೇಳೆ ಮೊದಲು ಇಂಟರ್​ನೆಟ್​ ಸೇವೆ ಸ್ಥಗಿತಗೊಳಿಸುವುದು ಒಳ್ಳೆಯ ಯೋಜನೆಯಲ್ಲ. ಈ ಸೇವೆ ಸ್ಥಗಿತದಿಂದಾಗಿ ನಾವು ಭಾರೀ ಬೆಲೆ ತೆರಬೇಕಾಗುತ್ತದೆ. ಈ ನಷ್ಟದಿಂದಾಗಿ ಟೆಲಿಕಾಂ ಕಂಪನಿಗಳು ಸಂಕಷ್ಟಕ್ಕೆ ಒಳಗಾಗುತ್ತವೆ  ಎನ್ನುತ್ತಾರೆ ಇಲ್ಲಿನ ಪ್ರಧಾನ ನಿರ್ದೇಶಕ ರಾಜನ್​ ಮ್ಯಾಥ್ಯೂ.
First published:December 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ