ತೆಲಂಗಾಣ ಬಾವಿ ರಹಸ್ಯ; ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಸೀರಿಯಲ್ ಕಿಲ್ಲರ್

ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ 27 ವರ್ಷದ ಶ್ರೀನಿವಾಸ್​ ರೆಡ್ಡಿ ಎಂಬುವವನನ್ನು ವಿಚಾರಣೆ ನಡೆಸಿದಾಗ ಈ ಕೃತ್ಯವನ್ನು ತಾನೇ ಮಾಡಿದ್ದೆಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಮೂವರು ಅಪ್ರಾಪ್ತೆಯ ಮೇಲೂ ಅತ್ಯಾಚಾರವೆಸಗಿ, ಸಾಯಿಸಿ ಬಾವಿಗೆ ಬಿಸಾಡಿದ್ದಾಗಿ ಹೇಳಿದ್ದಾನೆ.

Sushma Chakre | news18
Updated:May 1, 2019, 11:20 AM IST
ತೆಲಂಗಾಣ ಬಾವಿ ರಹಸ್ಯ; ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಸೀರಿಯಲ್ ಕಿಲ್ಲರ್
ಪಾಳುಬಾವಿಯ ಬಳಿ ಪೊಲೀಸರ ಶೋಧ
Sushma Chakre | news18
Updated: May 1, 2019, 11:20 AM IST
ರಿಷಿಕಾ ಸದಂ

ಹೈದರಾಬಾದ್ (ಮೇ 1): ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ 14 ವರ್ಷದ ಹುಡುಗಿಯ ದೇಹ ತೆಲಂಗಾಣದ ಹಾಜಿಪುರದ ಪಾಳುಬಾವಿಯಲ್ಲಿ ಪತ್ತೆಯಾಗಿದ್ದು, ಹೈದರಾಬಾದ್​ನಿಂದ ಸುಮಾರು 100 ಕಿ.ಮೀ. ದೂರದಲ್ಲಿ ಈ ಊರಿದೆ. ಆ ಹುಡುಗಿಯ ಜೊತೆಗೆ ಇನ್ನೂ ಇಬ್ಬರು ಹುಡುಗಿಯರ ಶವ ಕೂಡ ಅದೇ ಬಾವಿಯಲ್ಲಿ ಪತ್ತೆಯಾಗಿದೆ.

11ರಿಂದ 17 ವರ್ಷದವರೆಗಿನ ಮೂವರು ಹುಡುಗಿಯರ ದೇಹಗಳು ಪಾಳುಬಾವಿಯಲ್ಲಿ ಪತ್ತೆಯಾಗಿದೆ. ಈ ಮೂವರ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಲಾಗಿದೆ. ಈ ಕೃತ್ಯ ಎಸಗಿದವನು ಓರ್ವ ಸೀರಿಯಲ್ ಕಿಲ್ಲರ್​ ಎಂದು ಪೊಲೀಸರು ಹೇಳಿದ್ದಾರೆ.  1 ವಾರದ ಹಿಂದೆ 14 ವರ್ಷದ ಹುಡುಗಿಯ ಮನೆಯವರು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದಾಗ ತನಿಖೆ ನಡೆಸಲು ಹೋದ ಪೊಲೀಸರು ಈ ಪ್ರಕರಣವನ್ನು ಪತ್ತೆಹಚ್ಚಿದ್ದಾರೆ.

ಕನಸಿದ್ದರೂ ಕಾಸಿಲ್ಲ; ಹಾಂಕಾಂಗ್​ನಲ್ಲಿ ಭಾರತವನ್ನು ಪ್ರತಿನಿಧಿಸಲು ರಸ್ತೆಬದಿ ಹಣ್ಣು ಮಾರುವ ಮಣಿಪುರಿ ಕ್ರೀಡಾಪಟು

ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ 27 ವರ್ಷದ ಮರ್ರಿ ಶ್ರೀನಿವಾಸ್​ ರೆಡ್ಡಿ ಎಂಬುವವನನ್ನು ವಿಚಾರಣೆ ನಡೆಸಿದಾಗ ಈ ಕೃತ್ಯವನ್ನು ತಾನೇ ಮಾಡಿದ್ದೆಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ತಾನೇ ಆ 14 ವರ್ಷದ ಹುಡುಗಿಯ ಮೇಲೆ ಅತ್ಯಾಚಾರವೆಸಗಿ,  ಸಾಯಿಸಿ, ತನ್ನ ತೋಟದ ಮಧ್ಯದಲ್ಲಿರುವ 50 ಅಡಿ ಆಳದ ಪಾಳುಬಾವಿಗೆ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ. 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಆ ಬಾಲಕಿ ಶಾಲೆ ಮುಗಿಸಿಕೊಂಡು ತನ್ನ ಮನೆಗೆ ವಾಪಾಸ್​ ಬರುತ್ತಿದ್ದಾಗ ಶ್ರೀನಿವಾಸ್​ ರೆಡ್ಡಿ ಆಕೆಯನ್ನು ಅಡ್ಡಹಾಕಿದ್ದ. ಆಕೆಯನ್ನು ಮನೆಯ ಬಳಿ ಬಿಡುವುದಾಗಿ ಗಾಡಿ ಹತ್ತಿಸಿಕೊಂಡು ತನ್ನ ಮನೆಯತ್ತ ಗಾಡಿ ತಿರುಗಿಸಿದ್ದ. ನಂತರ ಅತ್ಯಾಚಾರವೆಸಗಿ, ಕೊಲೆ ಮಾಡಿ ಬಾವಿಗೆ ಬಿಸಾಡಿದ್ದ. ಆತ ನೀಡಿದ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಹೋದಾಗ ಪೊಲೀಸರಿಗೆ ಅಲ್ಲಿ ಶವ ಮತ್ತು ಆಕೆಯ ಸ್ಕೂಲ್ ಬ್ಯಾಗ್ ಸಿಕ್ಕಿದೆ.

SSLC Results 2019: ಮಗಳ ಜೊತೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದ ಅಪ್ಪನೂ ಪಾಸ್​!

ಆದರೆ, ವಿಷಯ ಅಲ್ಲಿಗೇ ಮುಗಿದಿಲ್ಲ. ಆ ಸ್ಥಳದ ಬಗ್ಗೆ ಅನುಮಾನಗೊಂಡು ವಿಶೇಷ ಪೊಲೀಸರ ತಂಡವೊಂದು ಹುಡುಕಾಟ ನಡೆಸಿದಾಗ ಅದೇ ಬಾವಿಯಲ್ಲಿ 17 ವರ್ಷದ ಇನ್ನೊಬ್ಬಳು ಹುಡುಗಿಯ ಶವವೂ ಇರುವುದು ಗೊತ್ತಾಗಿದೆ. ಆಕೆಯನ್ನು ಕೂಡ ಅತ್ಯಾಚಾರ ನಡೆಸಿ, ಸಾಯಿಸಿರುವುದು ಗೊತ್ತಾದ ಬಳಿಕ ಪೊಲೀಸರು ಆ ಸೀರಿಯಲ್ ಕಿಲ್ಲರ್​ನನ್ನು ವಶಕ್ಕೆ ಪಡೆದು ಹತ್ಯೆಯ ಸಂಪೂರ್ಣ ಮಾಹಿತಿಯನ್ನು ಬಾಯಿಬಿಡಿಸಿದ್ದಾರೆ. ತಮ್ಮ ಮಗಳು ಕಾಣೆಯಾಗಿದ್ದಾಳೆಂದು 17 ವರ್ಷದ ಬಾಲಕಿಯ ಪೋಷಕರು ಯಾವುದೇ ದೂರು ನೀಡಿರಲಿಲ್ಲ. ಆಕೆ ಯಾರೋ ಹುಡುಗನ ಜೊತೆ ಓಡಿಹೋಗಿದ್ದಾಳೆಂದು ಭಾವಿಸಿದ್ದ ಅವರು ಈ ವಿಷಯ ಗೊತ್ತಾದರೆ ಊರಿನಲ್ಲಿ ಮರ್ಯಾದೆ ಹೋಗುತ್ತದೆ ಎಂದು ಸುಮ್ಮನಾಗಿದ್ದರು. ಮೂರು ದಿನಗಳ ಅಂತರದಲ್ಲಿ ಇಬ್ಬರನ್ನೂ ಶ್ರೀನಿವಾಸ್​ ರೆಡ್ಡಿ ಕೊಲೆ ಮಾಡಿ ಬಾವಿಗೆ ಬಿಸಾಡಿದ್ದ.
Loading...

Cyclone Fani: ಒಡಿಶಾದತ್ತ ಫನಿ ಚಂಡಮಾರುತ; ಕರಾವಳಿ ತೀರದಲ್ಲಿ ಹೈ ಅಲರ್ಟ್​

ಈ ವಿಷಯ ಊರಿನೆಲ್ಲೆಡೆ ಹರಡುತ್ತಿದ್ದಂತೆ 11 ವರ್ಷದ ತಮ್ಮ ಮಗಳು ಕೂಡ 4 ವರ್ಷದಿಂದ ಕಾಣೆಯಾಗಿದ್ದಾಳೆಂದು ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದರು. ಈ ಬಗ್ಗೆ ಈ ಮೊದಲು ಕೂಡ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ತಮ್ಮ ಮಗಳನ್ನೂ ಶ್ರೀನಿವಾಸ್​ ರೆಡ್ಡಿಯೇ ಕೊಲೆ ಮಾಡಿರಬಹುದು ಎಂದು ಅವರು ಮತ್ತೆ ಪೊಲೀಸರಿಗೆ ದೂರು ನೀಡಿದರು. ಈ ಬಗ್ಗೆ ತನಿಖೆ ನಡೆಸಿದಾಗ ತಾನೇ ಆ ಹುಡುಗಿಯ ಮೇಲೂ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾಗಿ ಶ್ರೀನಿವಾಸ್​ ರೆಡ್ಡಿ ಒಪ್ಪಿಕೊಂಡಿದ್ದಾನೆ. ಆ ಹುಡುಗಿಯ ದೇಹವನ್ನು ಚೀಲದಲ್ಲಿ ಕಟ್ಟಿ ಅದೇ ಬಾವಿಯಲ್ಲಿ ಎಸೆದಿದ್ದಾಗಿ ಹೇಳಿದ್ದಾನೆ. ಈ ವಿಷಯ ಕೇಳುತ್ತಿದ್ದಂತೆ ಸ್ತಂಭೀಭೂತರಾದ ಪೊಲೀಸರಿಗೆ ಆಕೆಯ ಬಟ್ಟೆ ಮತ್ತು ದೇಹದ ಪಳೆಯುಳಿಕೆಗಳು ಸಿಕ್ಕಿವೆ. ಈ ಭೀಕರ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಊರಿನ ಜನರು ಗಾಬರಿಗೊಂಡಿದ್ದಾರೆ.

First published:May 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...