ಯುನೆಸ್ಕೋದ ವಿಶ್ವ ಪರಂಪರೆಯ ತಾಣದ ಪಟ್ಟಿ ಸೇರಿದ ತೆಲಂಗಾಣದ ರಾಮಪ್ಪ ದೇವಾಲಯ; ಏನಿದರ ವಿಶೇಷತೆ?

ಹೈದ್ರಾಬಾದ್‌ನಿಂದ ಸರಿಸುಮಾರು 209 ಕಿಮೀ ದೂರದಲ್ಲಿರುವ ವಾಸ್ತುಶಿಲ್ಪದ ಅದ್ಭುತವೆಂದೇ ಪ್ರಖ್ಯಾತಗೊಂಡಿರುವ ದೇವಾಲಯವನ್ನು ಕಾಕತೀಯ ರಾಜವಂಶದವರು ನಿರ್ಮಿಸಿದ್ದಾರೆ.

ಹೈದ್ರಾಬಾದ್‌ನಿಂದ ಸರಿಸುಮಾರು 209 ಕಿಮೀ ದೂರದಲ್ಲಿರುವ ವಾಸ್ತುಶಿಲ್ಪದ ಅದ್ಭುತವೆಂದೇ ಪ್ರಖ್ಯಾತಗೊಂಡಿರುವ ದೇವಾಲಯವನ್ನು ಕಾಕತೀಯ ರಾಜವಂಶದವರು ನಿರ್ಮಿಸಿದ್ದಾರೆ.

ಹೈದ್ರಾಬಾದ್‌ನಿಂದ ಸರಿಸುಮಾರು 209 ಕಿಮೀ ದೂರದಲ್ಲಿರುವ ವಾಸ್ತುಶಿಲ್ಪದ ಅದ್ಭುತವೆಂದೇ ಪ್ರಖ್ಯಾತಗೊಂಡಿರುವ ದೇವಾಲಯವನ್ನು ಕಾಕತೀಯ ರಾಜವಂಶದವರು ನಿರ್ಮಿಸಿದ್ದಾರೆ.

  • Share this:

ಭಾರತದ ದೇವಾಲಯಗಳಲ್ಲಿ ವಿಶಿಷ್ಟ ಎಂದೆನ್ನಿಸಿಕೊಂಡಿರುವ ರಾಮಪ್ಪ ದೇವಾಲಯದಲ್ಲಿರುವ ಆರಾಧ್ಯ ದೇವರು ಶಿವನ ಹೆಸರಿನ ಬದಲಿಗೆ ಶಿಲ್ಪಿ ರಾಮಪ್ಪ ಎಂಬುವವರ ಹೆಸರನ್ನು ದೇವಾಲಯಕ್ಕೆ ಇಡಲಾಗಿದೆ. ತೆಲಂಗಾಣದ 800 ವರ್ಷ ಹಳೆಯದು ಎಂದೆನ್ನಿಸಿಕೊಂಡಿರುವ ರಾಮಪ್ಪ ದೇವಾಯಲವನ್ನು ಯುನೆಸ್ಕೋ ಸಂಸ್ಥೆಯು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದ ನಂತರ ಇದು ಟ್ವಿಟರ್‌ನಲ್ಲಿ ಸುದ್ದಿಯ ತಾಣವಾಗಿದೆ. ಕಾಕತೀಯ ರುದ್ರೇಶ್ವರ ದೇವಾಸ್ಥಾನವು ರಾಮಪ್ಪ ದೇವಸ್ಥಾನ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದ್ದು, ಮುಲುಗು ಜಿಲ್ಲೆಯ ಪಾಲಂಪೇಟ್ ಹಳ್ಳಿಯಲ್ಲಿದೆ. ರಾಜ್ಯ ರಾಜಧಾನಿ ಹೈದ್ರಾಬಾದ್‌ನಿಂದ ಸರಿಸುಮಾರು 209 ಕಿಮೀ ದೂರದಲ್ಲಿರುವ ವಾಸ್ತುಶಿಲ್ಪದ ಅದ್ಭುತವೆಂದೇ ಪ್ರಖ್ಯಾತಗೊಂಡಿರುವ ದೇವಾಲಯವನ್ನು ಕಾಕತೀಯ ರಾಜವಂಶದವರು ನಿರ್ಮಿಸಿದ್ದಾರೆ.


ಯುನೆಸ್ಕೋ, ದೇವಾಲಯದ ವಾಸ್ತುಶಿಲ್ಪ ಹಾಗೂ ದೇವಾಲಯಕ್ಕಿರುವ ಪೌರಾಣಿಕ ಅಂಶವನ್ನು ಶ್ಲಾಘಿಸಿದ್ದು ಮರಳುಗಲ್ಲಿನ ರಾಮಪ್ಪ ದೇವಾಲಯದ ನಿರ್ಮಾಣವು ಕ್ರಿ.ಶ 1213 ರಲ್ಲಿ ಆರಂಭವಾಯಿತು ಹಾಗೂ 40 ವರ್ಷಗಳ ಕಾಲ ನಿರ್ಮಾಣ ಕಾರ್ಯ ಮುಂದುವರಿಯಿತು ಎನ್ನಲಾಗಿದೆ. ದೇವಾಲಯದ ಕಟ್ಟಡವನ್ನು ಕೆತ್ತಿದ ಗ್ರಾನೈಟ್ ಹಾಗೂ ಡೋಲರೈಟ್‌ನ ಅಲಂಕೃತ ಕಿರಣಗಳಿಂದ ಹಾಗೂ ಕಂಬಗಳನ್ನು ವಿಶಿಷ್ಟವಾದ ಹಾಗೂ ಪಿರಮಿಡಲ್ ವಿಮಾನ ರಚನೆಯೊಂದಿಗೆ (ಅಡ್ಡಲಾದ ಸೋಪಾನವುಳ್ಳ ಗೋಪುರ) ಹಗುರವಾದ ರಂಧ್ರಯುಕ್ತ ಇಟ್ಟಿಗೆಗಳಿಂದ ಮಾಡಲಾದ ತಯಾರಿಸಲಾಗಿದೆ. ಈ ಇಟ್ಟಿಗೆಗಳನ್ನು ತೇಲುವ ಇಟ್ಟಿಗೆಗಳು ಎಂದೂ ಕರೆಯುತ್ತಾರೆ. ಈ ಇಟ್ಟಿಗೆಯ ವಿಶೇಷತೆ ಎಂದರೆ ಇದು ಮೇಲ್ಛಾವಣಿಯ ಭಾರವನ್ನು ಕಡಿಮೆ ಮಾಡುತ್ತದೆ.


ಈ ರಂಧ್ರಯುಕ್ತ ಇಟ್ಟಿಗೆಗಳ ಇನ್ನೊಂದು ವಿಶೇಷತೆ ಎಂದರೆ ಇದು ನೀರಿನಲ್ಲಿ ತೇಲುತ್ತವೆ ಅದೂ ಅಲ್ಲದೆ ಈ ದೇವಾಲಯಕ್ಕಿರುವ ಇನ್ನೊಂದು ವಿಶೇಷತೆ ಎಂದರೆ ಇಲ್ಲಿರುವ ದೇವರು ಶಿವನ ಹೆಸರನ್ನಿಡುವ ಬದಲಿಗೆ ಶಿಲ್ಪಿ ರಾಮಪ್ಪನ ಹೆಸರನ್ನು ದೇವಾಲಯಕ್ಕೆ ಇಡಲಾಗಿರುವುದು. ಹಾಗಾಗಿ ಭಾರತದಲ್ಲಿರುವ ಕೆಲವೇ ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ.


ಇದನ್ನು ಓದಿ: ಬಿಎಸ್​ವೈ ಬಗ್ಗೆ ಅನುಕಂಪವಿದೆ, ಅವರ ಮುಂದಿನ ಜೀವನ ಸುಖಕರವಾಗಿರಲಿ; ಸಿದ್ದರಾಮಯ್ಯ

ಯುನೆಸ್ಕೋ ರಾಮಪ್ಪ ದೇವಾಲಯವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದ್ದು ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದು, “ಅದ್ಭುತ!! ಪ್ರತಿಯೊಬ್ಬರಿಗೂ ಅಭಿನಂದನೆಗಳು ಅದರಲ್ಲೂ ತೆಲಂಗಾಣದ ಜನರಿಗೆ ವಿಶೇಷವಾದ ವಂದನೆಗಳು. ಅಪ್ರತಿಮ ರಾಮಪ್ಪ ದೇವಾಲಯವು ಕಾಕತೀಯ ರಾಜವಂಶದ ಅತ್ಯುತ್ತಮ ಕರಕುಶಲತೆಯನ್ನು ಪ್ರದರ್ಶಿಸಿದೆ. ಈ ಭವ್ಯವಾದ ದೇವಾಲಯದ ರಚನೆಯನ್ನು ಸೊಬಗನ್ನು ಕಣ್ತುಂಬಿಕೊಳ್ಳಿ. ದೇವಾಲಯದ ಭವ್ಯತೆಯ ಮೊದಲ ಅನುಭವವನ್ನು ಪಡೆಯಲು ನಾನು ನಿಮ್ಮೆಲ್ಲರೂ ವಿನಂತಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.


ತೆಲಂಗಾಣ ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ ತಾರಕ ರಾಮರಾವ್ ಅವರು ದೇವಾಲಯವನ್ನು ಪಾರಂಪರಿಕ ಗೌರವವನ್ನು ಪಡೆಯಲು ಶ್ರಮಿಸಿರುವ ಎಲ್ಲರನ್ನೂ ಅಭಿನಂದಿಸಿದರು. ತೆಲಂಗಾಣದ ಕಾಕತೀಯ ರಾಜವಂಶದ ರಾಮಪ್ಪ ದೇವಾಲಯವು ಯುನೆಸ್ಕೋದ ಗೌರವಕ್ಕೆ ಪಾತ್ರವಾಗಿದ್ದು ಹೆಮ್ಮೆಯ ವಿಷಯ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಅನೇಕ ಗಣ್ಯರು, ಸಂಸದರು ರಾಮಪ್ಪ ದೇವಾಲಯಕ್ಕೆ ಸಂದ ಗೌರವದ ಕುರಿತು ಹರ್ಷ ವ್ಯಕ್ತಪಡಿಸಿದ್ದು ಟ್ವಿಟರ್‌ನಲ್ಲಿ ತಮ್ಮ ಹರ್ಷವನ್ನು ಹಂಚಿಕೊಂಡಿದ್ದಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
First published: