Crime news| ಹುಡುಗಿಗೆ ಯುವಕನಿಂದ ನಿತ್ಯ ಕಿರುಕುಳ; ಕುಟುಂಬಸ್ಥರಿಂದ ಹೊಡೆದು ಕೊಲೆ!

ಅನಿಲ್ ಬೇರೆ ಉಪಜಾತಿಗೆ ಸೇರಿದವನಾಗಿದ್ದರಿಂದ ಆತನನ್ನು ಕೊಲ್ಲಲಾಗಿದೆ ಎಂದು ಆರೋಪಿಸಿ, ಪೊಲೀಸ್ ಠಾಣೆ ಮುಂದೆ ಆತನ ಕುಟುಂಬದ ಸದಸ್ಯರು ಮೃತದೇಹವನ್ನು ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ತೆಲಂಗಾಣ (ಅಕ್ಟೋಬರ್​ 22); ಪ್ರೀತಿಸುವಂತೆ ಹುಡುಗಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೊಬ್ಬನನ್ನು ಯುವತಿಯ ಕುಟುಂಬಸ್ಥರು ಹೊಡೆದು ಕೊಲೆ ಮಾಡಿರುವ ಘಟನೆ ತೆಲಂಗಾಣದ (Telangana) ನಿರ್ಮಲ್ ಜಿಲ್ಲೆಯ ಖಾನಾಪುರ ಮಂಡಲದ ಸುರ್ಜಾಪುರ ಗ್ರಾಮದಲ್ಲಿ (Sarjapura Village) ನಡೆದಿದೆ. ಯುವತಿಯ ಕುಟುಂಬಸ್ಥರ ಅಮಾನುಷ ಹಲ್ಲೆಯಿಂದ ಮೃತಪಟ್ಟ ಯುವಕನನ್ನು ಆರ್.ಅನಿಲ್ ಎಂದು ಗುರುತಿಸಲಾಗಿದೆ. ಆತ ಹಿಂದುಳಿದ ವರ್ಗದ ಸಮುದಾಯದೊಳಗಿನ ಇನ್ನೊಂದು ಉಪ-ಜಾತಿಗೆ (Sub- Caste) ಸೇರಿದವರಾಗಿದ್ದಾರೆ.

  ಮೂಲಗಳ ಪ್ರಕಾರ, ಗೊಲ್ಲ ಸಮುದಾಯಕ್ಕೆ ಸೇರಿದ ಅನಿಲ್, ಕಳೆದ ಒಂದು ತಿಂಗಳಿನಿಂದ ಪ್ರೀತಿಯ ಹೆಸರಿನಲ್ಲಿ ಕಾಪು ಸಮುದಾಯಕ್ಕೆ ಸೇರಿದ ಯುವತಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದು ಮರ್ಯಾದಾಗೇಡು ಹತ್ಯಾ ಪ್ರಕರಣವಾಗಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.

  ಕಿರುಕುಳ ನೀಡುತ್ತಿದ್ದ ಬಗ್ಗೆ ಯುವತಿಯ ಕುಟುಂಬ ಸದಸ್ಯರು ಖಾನಾಪುರ ಪೊಲೀಸರಿಗೆ ದೂರು ನೀಡಿದ್ದರೂ, ಯುವಕ ತಮ್ಮ ಮಗಳಿಗೆ ತೊಂದರೆ ನೀಡುತ್ತಲೇ ಇದ್ದ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ ಬುಧವಾರ ತಡರಾತ್ರಿ, ಯುವತಿಯ ಕುಟುಂಬದ ಸದಸ್ಯರು ಅನಿಲ್ ಅವರನ್ನು ತಮ್ಮ ಮನೆಯ ಬಳಿ ಗಮನಿಸಿದ್ದಾರೆ. ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ.

  ಯುವತಿ ಕುಟುಂಬದವರು ಹಲ್ಲೆ ಮಾಡುತ್ತಿರುವ ವಿಷಯ ತಿಳಿದ ಅನಿಲ್ ಸಂಬಂಧಿಕರು ಸ್ಥಳಕ್ಕೆ ಧಾವಿಸಿ ಆತನನ್ನು ಖಾನಾಪುರ ಪಿಎಚ್‌ಸಿಗೆ ಕರೆದೊಯ್ದಿದ್ದಾರೆ. ಆತನ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ, ಅನಿಲ್ ಅವರನ್ನು ನಿರ್ಮಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಾವನ್ನಪ್ಪಿದ್ದಾರೆ.

  ಇದನ್ನೂ ಓದಿ: Supreme Court| ಮಹಿಳಾ ಸೇನಾಧಿಕಾರಿಗಳ ಉದ್ಯೋಗ ಖಾಯಂಗೊಳಿಸಿ; ಆಯೋಗಕ್ಕೆ ಸುಪ್ರೀಂ ಕೋರ್ಟ್​ ಮಹತ್ವದ ಆದೇಶ

  ಅನಿಲ್ ಬೇರೆ ಉಪಜಾತಿಗೆ ಸೇರಿದವನಾಗಿದ್ದರಿಂದ ಆತನನ್ನು ಕೊಲ್ಲಲಾಗಿದೆ ಎಂದು ಆರೋಪಿಸಿ, ಪೊಲೀಸ್ ಠಾಣೆ ಮುಂದೆ ಆತನ ಕುಟುಂಬದ ಸದಸ್ಯರು ಮೃತದೇಹವನ್ನು ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

  ಇದನ್ನೂ ಓದಿ: Ananya Panday Drugs Case| ನಾನು ಯಾರಿಗೂ ಡ್ರಗ್ಸ್​ ಪೂರೈಕೆ ಮಾಡಿಲ್ಲ; ಆರೋಪ ನಿರಾಕರಿಸಿದ ನಟಿ ಅನನ್ಯಾ ಪಾಂಡೆ

  ಪ್ರತಿಭಟನೆ ಹಿನ್ನೆಲೆ ಡಿಎಸ್‌ಪಿ ಉಪೇಂದರ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ, ಯುವಕನ ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದಾರೆ. ಅವರಿಗೆ ನ್ಯಾಯದ ಭರವಸೆ ನೀಡಿದ್ದಾರೆ. ಅನಿಲ್ ತಾಯಿ ಆರ್.ಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
  Published by:MAshok Kumar
  First published: