12 ಸಾವಿರ ಎಕ್ಟೇರ್​; 50 ಲಕ್ಷ ಮರ ಬೆಳೆಸುವ ಯೋಜನೆಗೆ ಡ್ರೋಣ್​ ಬಳಸಲು ಯೋಜನೆ ರೂಪಿಸಿದ ತೆಲಂಗಾಣ

ಬೀಜದ ಚೆಂಡುಗಳನ್ನು ಸ್ಥಳೀಯ ಮಹಿಳೆಯರು ಮತ್ತು ಕಲ್ಯಾಣ ಸಮುದಾಯಗಳು ತಯಾರಿಸುತ್ತವೆ, ಅವುಗಳನ್ನು ಉದ್ದೇಶಿತ ಪ್ರದೇಶಗಳಲ್ಲಿ ಡ್ರೋನ್‌ಗಳ ಮೂಲಕ ಚದುರಿಸಲಾಗುತ್ತದೆ. ಇದಲ್ಲದೆ, ಬಿತ್ತಿದ ಸಸ್ಯಗಳ ಬೆಳವಣಿಗೆಯನ್ನು ಪತ್ತೆಹಚ್ಚಲು ಈ ಪ್ರದೇಶವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತೆಲಂಗಾಣ ಸರ್ಕಾರವು ಮಾರುತ್ ಡ್ರೋನ್ಸ್ ( Marut Drones) ಎನ್ನುವ ಹೈದರಾಬಾದ್ ಮೂಲದ ಡ್ರೋನ್ ಟೆಕ್ನಾಲಜಿ ಸ್ಟಾರ್ಟ್ಅಪ್ ಕಂಪೆನಿಯ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದು, 'ಹರ ಭರ' (‘Hara Bhara’) ಹೆಸರಿನ ಡ್ರೋನ್ ಆಧಾರಿತ ಅರಣ್ಯೀಕರಣ ಯೋಜನೆಯನ್ನು ಆರಂಭಿಸಿದೆ. Telanganaದ ಎಲ್ಲಾ 33 ಜಿಲ್ಲೆಗಳಲ್ಲಿ 12,000 ಹೆಕ್ಟೇರ್ ಭೂಮಿಯಲ್ಲಿ ರಾಜ್ಯ ಸರ್ಕಾರ 50 ಲಕ್ಷ ಮರಗಳನ್ನು ನೆಡುವ ಮೊದಲ ಪ್ರಯತ್ನ ಇದಾಗಿದೆ.

  ಮಾರುತ್ ಡ್ರೋನ್ಸ್ ಕಂಪೆನಿಯು ಬೀಜ ಬಿತ್ತುವ ಕಾಪ್ಟರ್ (Seedcopter) ಮೂಲಕ ತ್ವರಿತವಾದ ಮರು ಅರಣ್ಯೀಕರಣಕ್ಕೆ ವೈಮಾನಿಕವಾಗಿ ಬಿತ್ತನೆ ಮಾಡಿವ ಕಾರ್ಯಕ್ಕೆ ಈ ಮೂಲಕ ಹೊಸ ಸಾಹಸಕ್ಕೆ ಸರ್ಕಾರ ಕೈ ಹಾಕಿದೆ.

  ಇದು ಸಮುದಾಯ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಒಳಗೊಂಡ, ಸುಸ್ಥಿರ ಮತ್ತು ದೀರ್ಘಕಾಲೀನ ಪರಿಹಾರಕ್ಕಾಗಿ ಮಾಡುತ್ತಿರುವ ಕೆಲಸ. ಇದು ಪರಿಸರ ಹಾನಿಯನ್ನು ಹಿಮ್ಮೆಟ್ಟಿಸುವುದಲ್ಲದೆ, ಗ್ರಾಮೀಣ, ಬುಡಕಟ್ಟು ಮತ್ತು ಇತರ ದುರ್ಬಲ ಸಮುದಾಯಗಳಲ್ಲಿ ಪ್ರಮುಖ ಉದ್ಯೋಗವನ್ನು ಸೃಷ್ಟಿಸುತ್ತದೆ. ಅರಣ್ಯೀಕರಣಕ್ಕಾಗಿ ಬಲವಾದ ಸಮುದಾಯಗಳನ್ನು ನಿರ್ಮಿಸುವುದು ಮತ್ತು ಅರಣ್ಯನಾಶದ ಪರಿಣಾಮಗಳ ಕುರಿತು ತಳಮಟ್ಟದಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತೆಲಂಗಾಣ ಸರ್ಕಾರ ಹೇಳಿದೆ.

  ತೆಳುವಾದ ಅರಣ್ಯ ಪ್ರದೇಶ ಹೊಂದಿರುವ, ಬಂಜರು ಮತ್ತು ಖಾಲಿ ಅರಣ್ಯ ಭೂಮಿಯಲ್ಲಿ ಬೀಜದ ಚೆಂಡುಗಳನ್ನು ಡ್ರೋನ್‌ಗಳ ಮೂಲಕ ಉದುರಿಸಲಾಗುತ್ತದೆ, ಈ ಮೂಲಕ ಮರಗಳ ಸಂಖ್ಯೆಯನ್ನು ಹೆಚ್ಚಿಸಿ ಅವುಗಳನ್ನು ಹಚ್ಚ ಹಸಿರಿನ ತಾಣಗಳನ್ನಾಗಿ ಮಾಡುವ ಕೆಲಸ ಇದಾಗಿದೆ.

  ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಮತ್ತು ತುರ್ತು ಗಮನ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಲು ಭೂಪ್ರದೇಶದ ಪ್ರದೇಶ ಸಮೀಕ್ಷೆ ಮತ್ತು ಮ್ಯಾಪಿಂಗ್‌ನೊಂದಿಗೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಮಣ್ಣು, ಹವಾಮಾನ ಮತ್ತು ಇತರ ನಿಯತಾಂಕಗಳ ಆಧಾರದ ಮೇಲೆ ಬಂಜರು ಭೂಮಿಯಲ್ಲಿ ನೆಡಬಹುದಾದ ಮರಗಳ ಸಂಖ್ಯೆ ಮತ್ತು ಜಾತಿಗಳನ್ನು ನಿರ್ಧರಿಸಲು ಡ್ರೋಣ್ ಬಳಸಲಾಗುತ್ತದೆ.

  ಬೀಜದ ಚೆಂಡುಗಳನ್ನು ಸ್ಥಳೀಯ ಮಹಿಳೆಯರು ಮತ್ತು ಕಲ್ಯಾಣ ಸಮುದಾಯಗಳು ತಯಾರಿಸುತ್ತವೆ, ಅವುಗಳನ್ನು ಉದ್ದೇಶಿತ ಪ್ರದೇಶಗಳಲ್ಲಿ ಡ್ರೋನ್‌ಗಳ ಮೂಲಕ ಚದುರಿಸಲಾಗುತ್ತದೆ. ಇದಲ್ಲದೆ, ಬಿತ್ತಿದ ಸಸ್ಯಗಳ ಬೆಳವಣಿಗೆಯನ್ನು ಪತ್ತೆಹಚ್ಚಲು ಈ ಪ್ರದೇಶವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

  ಇದನ್ನೂ ಓದಿ: ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಶಿಕ್ಷೆ ವಿಧಿಸಿದ ನಾಗ್ಪುರ ನ್ಯಾಯಾಲಯ

  ಐಟಿ, ಕೈಗಾರಿಕೆಗಳು ಮತ್ತು MAUD ಖಾತೆ ಸಚಿವ ಕೆಟಿ ರಾಮರಾವ್, "ಮಾನವ ಜೀವನಕ್ಕೆ ಸ್ವಚ್ಛ ಮತ್ತು ವಾಸಯೋಗ್ಯ ವಾತಾವರಣವನ್ನು ಕಾಪಾಡಿಕೊಳ್ಳಲು ಅರಣ್ಯಗಳು ಅತ್ಯಗತ್ಯ, ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಅರಣ್ಯೀಕರಣ ಪ್ರಯತ್ನಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ. ಹೊಸ ರೀತಿಯ ತಂತ್ರಜ್ಞಾನವನ್ನು ಅಂದರೆ  ಡ್ರೋನ್‌ಗಳನ್ನು ಬಳಸುವುದರಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ನಾವುಗಳು,  ಬೀಜಗಳನ್ನು ನೆಡಲು ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಾದ್ಯಂತ ಅರಣ್ಯ ಪ್ರದೇಶಗಳನ್ನು ಹೆಚ್ಚಿಸಲು 'ಹರ ಭರ' ಯೋಜನೆ ಆರಂಭಿಸುತ್ತಿದ್ದೇವೆ, ಎಂದು ಮಾಹಿತಿ ನೀಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: