ತೆಲಂಗಾಣ ಚುನಾವಣೆ: ಭಾರೀ ಪ್ರಮಾಣದಲ್ಲಿ ಅಕ್ರಮ ಹಣ, ಮದ್ಯ ವಶಕ್ಕೆ

Ganesh Nachikethu
Updated:December 7, 2018, 1:08 PM IST
ತೆಲಂಗಾಣ ಚುನಾವಣೆ: ಭಾರೀ ಪ್ರಮಾಣದಲ್ಲಿ ಅಕ್ರಮ ಹಣ, ಮದ್ಯ ವಶಕ್ಕೆ
ಸಾಂದರ್ಭಿಕ ಚಿತ್ರ
Ganesh Nachikethu
Updated: December 7, 2018, 1:08 PM IST
ಹೈದರಬಾದ್​​(ಡಿ.06): ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೇ ಶುರುವಾಗಿದೆ. ಈಗಾಗಲೇ ಬಹಿರಂಗ ಚುನಾವಣಾ ಪ್ರಚಾರಕ್ಕೂ ಆಯೋಗದಿಂದ ನಿನ್ನೆಯೇ ತೆರೆ ಬಿದ್ದಿದೆ. ಮತದಾನಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ರಾಜಕೀಯರು ಹಣ, ಮದ್ಯದ ಹೊಳೆಯನ್ನೇ ಹರಿಸಿದ್ದಾರೆ. ಈಗಾಗಲೇ ಚುನಾವಣೆ ಆಯೋಗ ಭಾರೀ ಪ್ರಮಾಣದಲ್ಲಿ ಅಕ್ರಮ ಹಣ, ಮದ್ಯ ವಶ ಪಡಿಸಿಕೊಂಡಿದೆ ಎನ್ನಲಾಗಿದೆ.

ಇಲ್ಲಿಯವರೆಗೂ ಚುನಾವಣಾ ಆಯೋಗ ನೀಡಿರುವ ಲೆಕ್ಕದ ಪ್ರಕಾರ 86.5 ಕೋಟಿ ರೂ. ನಗದು, ಬರೋಬ್ಬರಿ ನಾಲ್ಕು ಲಕ್ಷ ಲೀಟರ್​ನಷ್ಟು ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ರಾಜ್ಯ ಕಾನೂನು ಸುವ್ಯವಸ್ಥೆ ಪೊಲೀಸ್ ಮಹಾ ನಿರ್ದೇಶಕ ಜಿತೇಂದ್ರ ಅವರು ಪ್ರತಿಕ್ರಿಯಿಸಿದ್ದು, ಕಳೆದ ಮೂರು ತಿಂಗಳಲ್ಲಿ 11 ಸಾವಿರ ಜಾಮೀನು ರಹಿತ ವಾರೆಂಟ್ ನೀಡಲಾಗಿದೆ. ಅಲ್ಲದೇ 8400 ಶಸ್ತ್ರಾಸ್ತ್ರವನ್ನು ಠೇವಣಿ ಇಟ್ಟುಕೊಳ್ಳಲಾಗಿದೆ ಎಂದಿದ್ದಾರೆ.

ದೇಶದಲ್ಲಿಯೇ ಪಂಚರಾಜ್ಯ ಚುನಾವಣೆಗಳ ಪೈಕಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ತೆಲಂಗಾಣಗೆ ನಾಳೆ ಡಿಸೆಂಬರ್ 7ರಂದು ಮತದಾನ ನಡೆಯಲಿದೆ. ಇದೇ ತಿಂಗಳ ಡಿ.11 ರಂದು ಚುನಾವಣಾ ಫಲಿತಾಂಶವೂ ಕೂಡ ಹೊರಬೀಳಲಿದೆ. ಅಲ್ಲದೇ ಈ ಸಂದರ್ಭದಲ್ಲಿಯೇ ಅಭ್ಯರ್ಥಿಗಳ ಭವಿಷ್ಯ ಗೊತ್ತಾಗಲಿದೆ. ಇತ್ತ ಬಿಜೆಪಿ, ಅತ್ತ ಕಾಂಗ್ರೆಸ್​ ಎನ್ನುತ್ತ ತೆಲಂಗಾಣದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೇರಿದಂತೆ ಕೇಂದ್ರ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಮತ್ತೊಂದು ಆಘಾತ; ಪಕ್ಷ ಬಿಟ್ಟ ಸಂಸದೆ ಸಾವಿತ್ರಿಬಾಯಿ ಫುಲೆ

ಇನ್ನು ಸಿಎಂ ಕೆಸಿಆರ್ ನೇತೃತ್ವದ ಸಂಪುಟ ಅವಧಿಗೂ ಮುನ್ನವೇ ಚುನಾವಣೆಗೆ ಹೋಗುವ ತೀರ್ಮಾನ ಕೈಗೊಂಡಿತ್ತು. ಅದಾದ ಬಳಿಕ ಚಂದ್ರಶೇಖರ್ ರಾವ್ ಅವರು ರಾಜ್ಯಪಾಲ ಇಎಸ್​ಎಲ್ ನರಸಿಂಹನ್ ಅವರನ್ನು ಭೇಟಿಯಾಗಿ ಈ ಕುರಿತು ಮಾಹಿತಿ ನೀಡಿದ್ದರು. ಬಳಿಕ ಸಿಎಂ ಪ್ರಸ್ತಾವನೆಗೆ ರಾಜ್ಯಪಾಲರೂ ಒಪ್ಪಿಕೊಂಡಿದ್ದು, ವಿಧಾನಸಭೆಯನ್ನು ಅಧಿಕೃತವಾಗಿ ವಿಸರ್ಜಿಸಿದರು. ಅದರಂತೆಯೇ ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಭಾರೀ ಬಿಗಿ ಪೊಲೀಸ್​​ ಬಂದೋಬಸ್ತ್​​ ಮಾಡಲಾಗಿದೆ.

ಇದನ್ನೂ ಓದಿ: ಸಿಎಂ ಕುಟುಂಬದ ಅಕ್ರಮದ ವಿರುದ್ಧ ಸಿಎಂ ಬಳಿಯೇ ದೂರು

ಕಳೆದ 2014ರ ಚುನಾವಣೆಯಲ್ಲಿ ಕಾಂಗ್ರೆಸ್​ ಹಾಗೂ ಟಿಡಿಪಿಗೆ ಒಟ್ಟು ಶೇ. 39.5 ಮತಗಳು ಲಭ್ಯವಾಗಿದ್ದವು. ಟಿಆರ್​ಎಸ್​ಗೆ ಶೇ. 36 ಮತಗಳು ಪಡೆದಿತ್ತು. ಟಿಆರ್​ಎಸ್​ ತೆಕ್ಕೆಗೆ 63 ಸ್ಥಾನಗಳು, ಕಾಂಗ್ರೆಸ್​ಗೆ 21, ಟಿಡಿಪಿ 15, ಬಿಜೆಪಿ 5 ಹಾಗೂ ಎಂಐಎಂ 7 ಸ್ಥಾನಗಳನ್ನು ಗೆದಿದ್ದರು.  ಸಿಎಂ ಕೆ.ಚಂದ್ರಶೇಖರರಾವ್ ನೇತೃತ್ವದ ಟಿಆರ್‌ಎಸ್ 63 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಹುಮತ ಪಡೆದು ಸರ್ಕಾರ ರಚನೆ ಮಾಡಿತ್ತು.
Loading...

------------------
ತಮಿಳುನಾಡಿನವರ ಒತ್ತಡ ನ್ಯಾಯಬದ್ಧವಲ್ಲ, ಮೇಕೆದಾಟು ವಿಚಾರದ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆ
First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...