ಹೈದ್ರಾಬಾದ್: ನಾನ್ ವೆಜ್ ಬಿರಿಯಾನಿ ಭಾರತೀಯರ ಅಚ್ಚುಮೆಚ್ಚಿನ ಖಾದ್ಯ. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರ ಸಂಖ್ಯೆ ಕೋಟಿಗಳಲ್ಲಿ ಇದೆ. ದೇಶದ ದೈತ್ಯ ಫುಡ್ ಡಿಲಿವರಿ ಆ್ಯಪ್ಗಳಾದ ಸ್ವಿಗ್ಗಿ, ಜೊಮ್ಯಾಟೋದಲ್ಲೂ ಚಿಕನ್ ಬಿರಿಯಾನಿಗೆ ಭಾರೀ ಡಿಮ್ಯಾಂಡ್. ಹೆಚ್ಚಾಗಿ ಬಿರಿಯಾನಿಯನ್ನೇ ಆರ್ಡರ್ ಮಾಡಿಸಿಕೊಂಡು ಭಾರತೀಯರು ತಿನ್ನುತ್ತಾರೆ ಎಂದು ಅಂಕಿಸಂಖ್ಯೆಗಳೇ ಹೇಳುತ್ತವೆ. ಅದರಲ್ಲೂ ಹೈದ್ರಾಬಾದ್ ಬಿರಿಯಾನಿಗೆ ವಿಶೇಷ ಸ್ಥಾನವಿದೆ. ಮುತ್ತಿನ ನಗರಿಯ ಬಿರಿಯಾನಿ ಇಡೀ ಇಂಡಿಯಾದಲ್ಲೇ ಫೇಮಸ್. ಅದಕ್ಕಾಗಿ ಆಹಾರಪ್ರಿಯರ ದಂಡೇ ಇದೆ.
ಹೈದ್ರಾಬಾದ್ನಲ್ಲಿನ ಬಾವರ್ಚಿ ಬಿರಿಯಾನಿ, ಪ್ಯಾರಡೈಸ್ ಬಿರಿಯಾನಿಯಿಂದ ಹಿಡಿದು ರಸ್ತೆಬದಿಯ ಬಿರಿಯಾನಿಗೂ ಭಾರೀ ಸಂಖ್ಯೆಯಲ್ಲಿ ಗ್ರಾಹಕರಿದ್ದಾರೆ. ಅದರಲ್ಲೂ ಈಗ ಲಾಕ್ಡೌನ್ ಇರುವುದರಿಂದ ಆನ್ಲೈನ್ ಮೂಲಕವೇ ಜನ ಬಿರಿಯಾನಿ ತರಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಆನ್ಲೈನ್ ಮೂಲಕ ಬಿರಿಯಾನಿ ತರಿಸಿಕೊಂಡ ಯುವಕನಿಗೆ ತೀವ್ರ ನಿರಾಸೆಯಾಗಿದೆ. ಲೆಗ್ ಪೀಸ್ನ ಆಸೆಯಲ್ಲಿದ್ದ ಯುವಕನಿಗೆ ಅದೃಷ್ಟ ಕೈ ಕೊಟ್ಟಿದೆ. ಬಿರಿಯಾನಿಯಲ್ಲಿ ಕೇಬಲ ಮಾಮೂಲಿ ಪೀಸ್ಗಳು ಇರುವುದನ್ನು ನೋಡಿದ ಯುವಕನಿಗೆ ಬೇಸರವಾಗಿದೆ.
ಇದನ್ನೂ ಓದಿ: ವಿಡಿಯೋ ಕಾನ್ಫರೆನ್ಸ್ ವೇಳೆ ಕಾಫಿ ಕಪ್ನಲ್ಲಿ ಮೂತ್ರ ವಿಸರ್ಜಿಸಿದ ಸಂಸದ.. ಮೀಟಿಂಗ್ನಲ್ಲಿದ್ದವರಿಗೆ ಶಾಕ್!
ಇಷ್ಟಕ್ಕೆ ಸುಮ್ಮನಾಗದ ಯುವಕ ಬಿರಿಯಾನಿಯಲ್ಲಿ ಲೆಗ್ ಪೀಸ್ ಇಲ್ಲ, ಹೋಟೆಲ್ನವರು ಮೋಸ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನೋವು ತೋಡಿಕೊಂಡಿದ್ದಾನೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಸಮಸ್ಯೆಯನ್ನು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರ, ಮಂತ್ರಿಯೂ ಆಗಿರುವ ಕೆಟಿಆರ್ಗೆ ಟ್ಯಾಗ್ ಮಾಡಿದ್ದಾನೆ. ನಾನು ಮಸಾಲೆಯುಕ್ತ, ಪರಿಮಳವುಳ್ಳ, ಲೆಗ್ ಪೀಸ್ ಇರುವ ಬಿರಿಯಾನಿಯನ್ನು ಆರ್ಡರ್ ಮಾಡಿದ್ದೆ. ಆದರೆ ನನಗೆ ಲೆಗ್ ಪೀಸ್ ಕೊಡದೇ ಮೋಸ ಮಾಡಿದ್ದಾರೆ. ಮಸಾಲೆಯೂ ಜಾಸ್ತಿ ಇಲ್ಲ. ಬಿರಿಯಾನಿ ಟೇಸ್ಟ್ ಇಲ್ಲ ಎಂದು ಸಚಿವರಿಗೆ ದೂರಿದ್ದಾನೆ ಭೂಪ.
ಯುವಕನ ಲೆಗ್ ಪೀಸ್ ಸಮಸ್ಯೆಗೆ ಮಂತ್ರಿ ಕೆಟಿಆರ್ ಪ್ರತಿಕ್ರಿಯಿಸಿದ್ದಾರೆ ಕೂಡ. ಬ್ರದರ್ ಈ ಸಮಸ್ಯೆಯನ್ನು ನನಗೇಕೆ ಟ್ಯಾಗ್ ಮಾಡಿದ್ದೀಯಾ? ನಾನು ಏನು ಮಾಡಬೇಕೆಂದು ಬಯಸುತ್ತಿದ್ದೀಯಾ ಎಂದು ಪ್ರತಿಕ್ರಿಯಿಸಿದ್ದಾರೆ. ಬಿರಿಯಾನಿ ಲೆಗ್ ಲೀಸ್ ಸಮಸ್ಯೆಗೆ ತೆಲಂಗಾಣದ ಮಂತ್ರಿ ಪ್ರತಿಕ್ರಿಯಿಸಿರುವುದು ಭಾರೀ ಸುದ್ದಿಯಾಗಿದೆ. ಲೆಗ್ ಪೀಸ್ ಯುವಕ ಹಾಗೂ ಸಿಎಂ ಟ್ವೀಟ್ ವೈರಲ್ ಆಗಿದ್ದು, ಅನೇಕ ಸ್ವಾರಸ್ಯಕರ ಕಮೆಂಟ್ಗಳು ಬಂದಿದೆ. ಬಿರಿಯಾನಿಯಲ್ಲಿ ಲೆಗ್ ಪೀಸನ್ನು ಕಡ್ಡಾಯಗೊಳಿಸಬೇಕು. ತೆಲಂಗಾಣ ಸರ್ಕಾರ ಬಿರಿಯಾನಿಯನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಕಮೆಂಟಿಸಿದ್ದಾರೆ.
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 1,73,790 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,77,29,247ಕ್ಕೆ ಏರಿಕೆ ಆಗಿದೆ. ಶುಕ್ರವಾರ ಒಂದೇ ದಿನ ಕೊರೋನಾ 3,617 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,22,512ಕ್ಕೆ ಏರಿಕೆ ಆಗಿದೆ. ಈವರೆಗೆ 2,51,78,011 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 22,28,724 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 20 ಕೋಟಿ ದಾಟಿದೆ. ಈವರೆಗೆ 20,89,02,445 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ದೇಶದಲ್ಲಿ ಸದ್ಯ ಗುಣಮುಖ ಆದದವರ ಪ್ರಮಾಣ ಶೇಕಡಾ 90.80ಕ್ಕೆ ಏರಿಕೆ ಆಗಿದೆ. ವಾರದ ಪಾಸಿಟಿವಿಟಿ ದರ ಶೇಕಡಾ 9.84ಕ್ಕೆ ಇಳಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾನು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ