ಮೊಬೈಲ್, ಪೋರ್ನ್ ಚಟ ಹತ್ತಿಸಿಕೊಂಡಿದ್ದ ಮಗನ ಕೈಕತ್ತರಿಸಿದ ತಂದೆ


Updated:March 6, 2018, 6:24 PM IST
ಮೊಬೈಲ್, ಪೋರ್ನ್ ಚಟ ಹತ್ತಿಸಿಕೊಂಡಿದ್ದ ಮಗನ ಕೈಕತ್ತರಿಸಿದ ತಂದೆ
ಸಾಂದರ್ಭಿಕ ಚಿತ್ರ
  • Share this:
-ನ್ಯೂಸ್ 18

ಹೈದ್ರಾಬಾದ್(ಮಾ.06): ಮೊಬೈಲ್ ಮತ್ತು ಪೋರ್ನ್ ಚಟ ಹತ್ತಿಸಿಕೊಂಡಿದ್ದ ಮಗನ ಕೈಗಳನ್ನ ತಂದೆಯೇ ಕತ್ತರಿಸಿರುವ ಘಟನೆ ಹೈದ್ರಾಬಾದ್​ನಲ್ಲಿ ನಡೆದಿದೆ. ಮಗನ ಕೈಕತ್ತರಿಸಿದ 45 ವರ್ಷದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ಧಾರೆ.

ಬಂಧಿತನನ್ನ ಮೊಹಮ್ಮದ್ ಖಯೂಮ್ ಖುರೇಷಿ ಎಂದು ಗುರ್ತಿಸಲಾಗಿದೆ. ಕೊಲೆ ಯತ್ನದ ಕೇಸ್ ದಾಖಲಿಸಲಾಗಿದ್ದು, ಜೈಲಿಗೆ ಕಳುಹಿಸಲಾಗಿದೆ.ಸೋಮವಾರ ಪಹಡಿ ಶರೀಫ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಲಗಿದ್ದ 19 ವರ್ಷದ ಮಗ ಖಾಲಿದ್ ಕೈಗಳನ್ನ ತಂದೆ ಮಾಂಸ ಕತ್ತರಿಸುವ ಮಚ್ಚಿನಿಂದ ಕತ್ತರಿಸಿ ಹಾಕಿದ್ದಾನೆ.

ಕೇಬಲ್ ಆಪರೇಟರ್ ಆಗಿದ್ದ ಮಗ ಖಾಲೀದ್​ಗಿದ್ದ ಮೊಬೈಲ್, ಪೋರ್ನ್ ಚಟದ ಬಗ್ಗೆ ತಂದೆ ಅತಿಯಾಗಿ ತಲೆಕೆಡಿಸಿಕೊಂಡಿದ್ದರು. ಮೊಬೈಲ್ ಮತ್ತು ಅಶ್ಲೀಲ ಚಟದಿಂದ ಹಣ ಮತ್ತು ಆರೋಗ್ಯ ಎರಡೂ ಹಾಳುಮಾಡಿಕೊಂಡಿದ್ದ ಮೊನ್ನೆಯಷ್ಟೇ ಮಗನನ್ನ ತಂದೆ ಪ್ರಶ್ನಿಸಿದ್ದರು. ಈ ಸಂದರ್ಭ ಮಗ ಖಾಲೀದ್ ತಂದೆಯೇ ವಿರುದ್ಧವೇ ತಿರುಗಿ ಬಿದ್ದಿದ್ದ ಎಂದು ತಿಳಿದು ಬಂದಿದೆ.

 
First published:March 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading