Telangana Elections: ತೆಲಂಗಾಣ ಸ್ಥಳೀಯ ಚುನಾವಣೆ ಫಲಿತಾಂಶ: ಟಿಆರ್​ಎಸ್ ಜಯಭೇರಿ

Telangana Municipal Election Results | ವಾರ್ಡ್​ಗಳ ಲೆಕ್ಕಾಚಾರ ಮಾಡಿದರೆ ಫಲಿತಾಂಶ ಪ್ರಕಟವಾಗಿರುವ 2,751 ವಾರ್ಡ್​ಗಳ ಪೈಕಿ ಟಿಆರ್​ಎಸ್ 1,568ರಲ್ಲಿ ಗೆದ್ದಿದೆ. ಕಾಂಗ್ರೆಸ್ 525, ಬಿಜೆಪಿ 268, ಎಂಐಎಂ 86 ವಾರ್ಡ್​​ಗಳನ್ನು ಗೆದ್ದಿವೆ. ಎಡಪಕ್ಷಗಳು 24 ವಾರ್ಡ್​ಗಳಷ್ಟೇ ಮೇಲುಗೈ ಸಾಧಿಸಿವೆ.

ಟಿಆರ್​ಎಸ್ ಮುಖ್ಯಸ್ಥ ಹಾಗೂ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್

ಟಿಆರ್​ಎಸ್ ಮುಖ್ಯಸ್ಥ ಹಾಗೂ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್

  • News18
  • Last Updated :
  • Share this:
ಹೈದರಾಬಾದ್(ಜ. 25): ತೆಲಂಗಾಣ ರಾಜ್ಯದ ವಿವಿಧ ಜಿಲ್ಲೆಗಳ 129 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್​ಎಸ್ ಪಕ್ಷ ಬಹುತೇಕ ಸ್ವೀಪ್ ಮಾಡಿದೆ. ಜ. 22ರಂದು 120 ನಗರಸಭೆ ಮತ್ತು 9 ನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ಬಹುತೇಕ ಕಡೆ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. 9 ನಗರಪಾಲಿಕೆಗಳ ಪೈಕಿ ಟಿಆರ್​ಎಸ್ 8ರಲ್ಲಿ ಜಯಭೇರಿ ಭಾರಿಸಿದೆ. ಲೋಕಸಭೆ ಚುನಾವಣೆಯ ಯಶಸ್ಸಿನ ಗುಂಗಿನಲ್ಲಿರುವ ಬಿಜೆಪಿಗೆ ಒಂದು ದಕ್ಕಿದೆ. ಇನ್ನು, 120 ನಗರಸಭೆಗಳಲ್ಲಿ ಟಿಆರ್​ಎಸ್ ಬರೋಬ್ಬರಿ 96ಕ್ಕೂ ಹೆಚ್ಚು ಗೆದ್ದಿದೆ. ಕಾಂಗ್ರೆಸ್ 9, ಬಿಜೆಪಿ 3 ಮತ್ತು ಎಐಎಂಐಎಂ 2ರಲ್ಲಿ ಗೆದ್ದಿದೆ. ನಾಲ್ಕು ನಗರಸಭೆಗಳಲ್ಲಿ ಪಕ್ಷೇತರರು ಮೇಲುಗೈ ಸಾಧಿಸಿದ್ದಾರೆ.

ಇನ್ನು, ವಾರ್ಡ್​ಗಳ ಲೆಕ್ಕಾಚಾರ ಮಾಡಿದರೆ ಫಲಿತಾಂಶ ಪ್ರಕಟವಾಗಿರುವ 2,751 ವಾರ್ಡ್​ಗಳ ಪೈಕಿ ಟಿಆರ್​ಎಸ್ 1,568ರಲ್ಲಿ ಗೆದ್ದಿದೆ. ಕಾಂಗ್ರೆಸ್ 525, ಬಿಜೆಪಿ 268, ಎಂಐಎಂ 86 ವಾರ್ಡ್​​ಗಳನ್ನು ಗೆದ್ದಿವೆ. ಎಡಪಕ್ಷಗಳು 24 ವಾರ್ಡ್​ಗಳಷ್ಟೇ ಮೇಲುಗೈ ಸಾಧಿಸಿವೆ.

ಇದನ್ನೂ ಓದಿ: ಗಡ್ಡಧಾರಿಯಾಗಿ ಗುರುತೇ ಸಿಗದಂತಾದ ಒಮರ್ ಅಬ್ದುಲ್ಲಾ; ಫೋಟೋ ಹಂಚಿಕೊಂಡು ದುಃಖ ತೋಡಿಕೊಂಡ ಮಮತಾ ಬ್ಯಾನರ್ಜಿ

ನಗರಪಾಲಿಕೆಗಳು: 9
ಟಿಆರ್​ಎಸ್: 1
ಬಿಜೆಪಿ: 1

ನಗರಸಭೆಗಳು: 120
ಟಿಆರ್​ಎಸ್ 96
ಕಾಂಗ್ರೆಸ್: 9
ಬಿಜೆಪಿ: 3
ಎಂಐಎಂ: 2
ಇತರೆ: 4

ಚುನಾವಣೆ ನಡೆದ ಒಟ್ಟು ವಾರ್ಡ್​ಗಳು: 2,971
ಫಲಿತಾಂಶ ಪ್ರಕಟಗೊಂಡ ವಾರ್ಡ್​ಗಳು: 2,751
ಟಿಆರ್​ಎಸ್: 1,568
ಕಾಂಗ್ರೆಸ್: 525
ಬಿಜೆಪಿ: 268
ಪಕ್ಷೇತರರು: 226
ಎಂಐಎಂ: 86
ಸಿಪಿಐ: 18
ಸಿಪಿಎಂ: 6
ಟಿಡಿಪಿ: 5
ಇತರರು: 49

ಇದನ್ನೂ ಓದಿ: ಕೇರಳ, ಪಂಜಾಬ್ ಬಳಿಕ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜಸ್ಥಾನ ಸರ್ಕಾರ

ಭಾರತೀಯ ಜನತಾ ಪಕ್ಷ 2019ರ ಲೋಕಸಭಾ ಚುನಾವಣೆಯಲ್ಲಿ 4 ಸ್ಥಾನಗಳನ್ನು ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ನಗರ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿತ್ತು. ಅದಿಲಾಬಾದ್ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಭೈನ್ಸಾದಲ್ಲಿ ಇತ್ತೀಚೆಗೆ ನಡೆದಿದ್ದ ಕೋಮುಸಂಘರ್ಷ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಇಲ್ಲಿ ಹಿಂದೂ ಸಮುದಾಯದ ಮತಗಳ ಧ್ರುವೀಕರಣಕ್ಕೆ ಯತ್ನಿಸಿತ್ತು. ಅದರಲ್ಲಿ ಭಾಗಶಃ ಯಶಸ್ವಿಯಾಗಿದೆ. ಇಲ್ಲಿ ಒವೈಸಿ ನೇತೃತ್ವದ ಎಂಐಎಂ ಪಕ್ಷವೇ ಮೇಲುಗೈ ಸಾಧಿಸಿದೆ. ಬಿಜೆಪಿ ಎರಡನೇ ಸ್ಥಾನ ಪಡೆದಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: