Viral News: ಹುಟ್ಟಿ 9 ವರ್ಷ ಆದ್ಮೇಲೆ ಮಗಳಿಗೆ ಹೆಸರಿಟ್ಟ ದಂಪತಿ - ಕಾರಣ ಮುಖ್ಯಮಂತ್ರಿ!

ಈ ಬಾಲಕಿಗೆ ಅಧಿಕೃತವಾಗಿ ಹೆಸರಿಡದಿದ್ದ ಕಾರಣ ತೆಲುಗಿನಲ್ಲಿ ಚಿಕ್ಕ ಹೆಣ್ಣುಮಕ್ಕಳಿಗೆ ಸಹಜವಾಗಿ ಕರೆಯುವಂತೆ ಚಿಟ್ಟಿ ಎಂದು ಕರೆಯಲಾಗುತ್ತಿತ್ತು. ಆಕೆಯ ಆಧಾರ್ ಕಾರ್ಡ್‌ನಲ್ಲೂ "ಚಿಟ್ಟಿ" ಎಂಬ ಹೆಸರೇ ಇತ್ತು.

ಮಹತಿ ಕುಟುಂಬ ಮತ್ತು ಕೆಸಿಆರ್

ಮಹತಿ ಕುಟುಂಬ ಮತ್ತು ಕೆಸಿಆರ್

  • Share this:
ಹುಟ್ಟಿ 9 ವರ್ಷವಾದರೂ ಹೆಸರೇ ಇಲ್ಲದಿದ್ದ ಬಾಲಕಿಗೆ ಕೊನೆಗೂ ಹೆಸರಿಡಲಾಗಿದೆ! ಇದುವರೆಗೆ ಚಿಟ್ಟಿ (Chitti) ಎಂದೇ ಕರೆಯಲ್ಪಡುತ್ತಿದ್ದ ಈ ಬಾಲಕಿ ಈಗ ಮಹತಿ ಆಗಿದ್ದಾಳೆ. ಇಂತಹ ವಿಚಿತ್ರ ಘಟನೆಯೊಂದು ಇದೀಗ ಭಾರೀ ವೈರಲ್ (Viral News) ಆಗುತ್ತಿದೆ. ತೆಲಂಗಾಣದ ಒಂಬತ್ತು ವರ್ಷದ ಬಾಲಕಿಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (Telangana CM K Chandrashekar Rao) ಮಹತಿ ಎಂದು ಹೆಸರಿಟ್ಟಿದ್ದಾರೆ. ಹೀಗೆ ಹೆರಿಡುವ ಮೂಲಕ ಈ ಬಾಲಕಿಯ ತಂದೆಯ 9 ವರ್ಷದ ಆಸೆಯನ್ನು ನೆರವೇರಿಸಿದ್ದಾರೆ. ಅರೇ! ಈ ಬಾಲಕಿಗೆ ಏಕೆ 9 ವರ್ಷವಾದರೂ ಹೆಸರಿಟ್ಟಿರಲಿಲ್ಲ?  ಏಕೆ  ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರೇ ಹೆಸರಿಟ್ಟರು? ಆಶ್ಚರ್ಯಕರ ಸುದ್ದಿಯೊಂದು ಇಲ್ಲಿದೆ. 

ಈ ಬಾಲಕಿಯ ಪೋಷಕರಾದ ಸುರೇಶ್ ಮತ್ತು ಅನಿತಾ ಇಬ್ಬರೂ ಸಹ ಕೆ ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ನಡೆದಿದ್ದ ತೆಲಂಗಾಣ ಪ್ರತ್ಯೇಕ ರಾಜ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 2013ರಲ್ಲಿ ತಮ್ಮ ಮಗಳು ಜನಿಸಿದಾಗ ಆಕೆಗೆ ಕೆ. ಚಂದ್ರಶೇಖರ್ ರಾವ್ ಅವರೇ ಹೆಸರಿಡಬೇಕೆಂದು ಬಯಸಿದ್ದರು.  ಆದರೆ ಕಾರಣಾಂತರಗಳಿಂದ ಒಂಬತ್ತು ವರ್ಷಗಳ ಕಾಲ ತಮ್ಮ ಮಗಳಿಗೆ ಕೆ. ಚಂದ್ರಶೇಖರ್ ರಾವ್ ಹೆಸರಿಡಬೇಕು ಎಂಬ ಆಸೆ ಈಡೇರಿರಲಿಲ್ಲ. ಹೀಗಾಗಿ ಒಟ್ಟು 9 ವರ್ಷಗಳ ಕಾಲ ಈ ಬಾಲಕಿ ಹೆಸರಿಲ್ಲದೇ ಬೆಳೆದುಬಿಟ್ಟಿದ್ದಳು!

ಮಹತಿಗೆ ಉಡುಗೊರೆ


ಹಾಗಾದ್ರೆ ಬಾಲಕಿಯನ್ನು ಏನಂತ ಕರೆಯುತ್ತಿದ್ದರು?
ಈ ಬಾಲಕಿಗೆ ಅಧಿಕೃತವಾಗಿ ಹೆಸರಿಡದಿದ್ದ ಕಾರಣ ತೆಲುಗಿನಲ್ಲಿ ಚಿಕ್ಕ ಹೆಣ್ಣುಮಕ್ಕಳಿಗೆ ಸಹಜವಾಗಿ ಕರೆಯುವಂತೆ ಚಿಟ್ಟಿ ಎಂದು ಕರೆಯಲಾಗುತ್ತಿತ್ತು. ಆಕೆಯ ಆಧಾರ್ ಕಾರ್ಡ್‌ನಲ್ಲೂ "ಚಿಟ್ಟಿ" ಎಂಬ ಹೆಸರೇ ಇತ್ತು. ಆದರೆ ಈ ಪುಟ್ಟ ಬಾಲಕಿಯ ನೆರೆಹೊರೆಯವರು ಮತ್ತು ಪರಿಚಯಸ್ಥರು ಅವಳನ್ನು "ಕೆಸಿಆರ್" ಎಂದೇ ಕರೆಯುತ್ತಿದ್ದರು.

ಮುಖ್ಯಮಂತ್ರಿಗೆ ಈ ವಿಷಯ ತಿಳಿದದ್ದಾದರೂ ಹೇಗೆ?
ತೆಲಂಗಾಣ ರಾಷ್ಟ್ರ ಸಮಿತಿಯ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ವಿಧಾನಸಭಾಧ್ಯಕ್ಷ ಮಧುಸೂಧನ ಚಾರಿ ಅವರಿಗೆ ಇತ್ತೀಚೆಗೆ ಬಾಲಕಿಯ ಬಗ್ಗೆ ತಿಳಿದು ಬಂದಿತ್ತು. ಪುಟ್ಟ ಚಿಟ್ಟಿಗೆ ಅಧಿಕೃತವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಂದ ಹೆಸರಿಡುವ ಇಚ್ಛೆಯನ್ನು ಈಗಲಾದರೂ ನೆರವೇರಿಸಲು ಅವರು ನಿರ್ಧರಿಸಿದರು. ಹೀಗಾಗಿ ದಂಪತಿ ಮತ್ತು ಮಗುವನ್ನು ತೆಲಂಗಾಣ ಮುಖ್ಯಮಂತ್ರಿಯ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಕರೆತಂದರು.

ಕೊನೆಗೂ ಹೆಸರು ಸಿಕ್ತು, ಹೆಸರಿಡುವವರೂ ಸಿಕ್ರು!
ಕೊನೆಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಕಿವಿಗೆ ಈ ಸುದ್ದಿ ಬಿತ್ತು. ಸುರೇಶ್ ಮತ್ತು ಅನಿತಾ ದಂಪತಿಯನ್ನು ಸ್ವಾಗತಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಒಂಬತ್ತು ವರ್ಷದ ಮಗುವಿಗೆ 'ಮಹತಿ' ಎಂದು ನಾಮಕರಣ ಮಾಡಿದರು.

ವಿದ್ಯಾಭ್ಯಾಸಕ್ಕೂ ಸಹಕಾರ
ಅಲ್ಲದೇ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಅವರ ಪತ್ನಿ ಸೇರಿ ಮಹತಿಗೆ ಒಳ್ಳೆಯ ಉಡುಗೊರೆಗಳನ್ನು ನೀಡಿದರು. ಜೊತೆಗೆ ಮಹತಿಯ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡುವುದಾಗಿಯೂ ಘೋಷಿಸಿದರು.
Published by:ಗುರುಗಣೇಶ ಡಬ್ಗುಳಿ
First published: