HOME » NEWS » National-international » TELANGANA IAS OFFICERS TOUCHING CHIEF MINISTER K CHANDRASHEKHAR RAOS FEET SESR

ಅಪ್ಪಂದಿರ ದಿನದಂದು ಮುಖ್ಯಮಂತ್ರಿ ಕಾಲಿಗೆ ಬಿದ್ದ ಐಎಎಸ್​ ಅಧಿಕಾರಿ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಕಷ್ಟು ಟೀಕಾರೋಪಕ್ಕೆ ಕೂಡ ಗುರಿಯಾಗಿದೆ.

news18-kannada
Updated:June 21, 2021, 6:52 PM IST
ಅಪ್ಪಂದಿರ ದಿನದಂದು ಮುಖ್ಯಮಂತ್ರಿ ಕಾಲಿಗೆ ಬಿದ್ದ ಐಎಎಸ್​ ಅಧಿಕಾರಿ
ತೆಲಂಗಾಣ ಸಿಎಂ ಕೆಸಿಆರ್​​
  • Share this:
ಹೈದ್ರಾಬಾದ್​​ (ಜೂ. 21):  ವಿಶ್ವ ಅಪ್ಪಂದಿರ ದಿನದಂದು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಐಎಎಸ್​ ಅಧಿಕಾರಿಯೊಬ್ಬರು ಮುಖ್ಯಮಂತ್ರಿಗಳ ಕಾಲಿಗೆ ಎರಗಿ ನಮಸ್ಕಾರ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ. ಉನ್ನತ ಮಟ್ಟದ ಅಧಿಕಾರಿಯೊಬ್ಬರ ಈ ವರ್ತನೆ ಸಾಕಷ್ಟು ಟೀಕೆಗೆ ಗುರಿಯಾಗಿದೆ. ತೆಲಂಗಾಣದಲ್ಲಿ ನಡೆದು ಈ ಘಟನೆ ಈಗ ಸಾಕಷ್ಟು ಸುದ್ದಿಯಾಗಿದೆ. ಸಿದ್ಧಿ ಪೇಟೆ ಜಿಲ್ಲಾಧಿಕಾರಿ ವೆಂಕಟರಾಮ್​ ರೆಡ್ಡಿ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ಕಾಲಿಗೆ ಬಿದ್ದು ನಮಸ್ಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ.

ತಂದೆಯಂದಿರ ದಿನವಾದ ಭಾನುವಾರ ಅಂದರೆ ಜೂ. 20ರಂದು ಸಿದ್ಧಿಪೇಟೆಯಲ್ಲಿನ ಹಲವರಾರು ಸರ್ಕಾರಿ ಕಚೇರಿಗಳ ಉದ್ಘಾಟನಾ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದ್ದರು. ಈ ವೇಳೆ ಅನೇಕ ಪೂಜಾ ಕಾರ್ಯಕ್ರಮ ಕೂಡ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿಎಂ ಕಾಲಿಗೆ ಎರಗಿ ನಮಸ್ಕರಿಸಿದ್ದಾರೆ. ಇದೇ ವೇಳೆ ಅವರು ತೆಲಂಗಾಣ ಮುಖ್ಯ ಕಾರ್ಯದರ್ಶಿ ಸೋಮೇಶ್​ ಕುಮಾರ್​ ಅವರು ಕಾಲಿಗೆ ಬೀಳಲು ಮುಂದಾದರು, ಆದರೆ, ಅವರು ಪಾದ ಮುಟ್ಟಲು ಅನುಮತಿ ನೀಡಲಿಲ್ಲ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಕಷ್ಟು ಆರೋಪಕ್ಕೆ ಕೂಡ ಗುರಿಯಾಗಿದೆ.

ಇದನ್ನು ಓದಿ: ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಅವರು ಉಡುಗೆಯೇ ಕಾರಣ; ಪಾಕ್​ ಪ್ರಧಾನಿ

ಬಳಿಕ ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ರೆಡ್ಡಿ, ಶುಭ ಸಂದರ್ಭದಲ್ಲಿ ಹಿರಿಯರ ಆಶೀರ್ವಾದ ಪಡೆಯುವುದು ತೆಲಂಗಾಣದ ಸಂಸ್ಕೃತಿಯಾಗಿದೆ. ಜಿಲ್ಲಾಧಿಕಾರಿಯಾಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಈ ಸಂದರ್ಭದಲ್ಲಿ ತಂದೆ ಸ್ವರೂಪವಾಗಿರುವ ಮುಖ್ಯಮಂತ್ರಿಗಳ ಆಶೀರ್ವಾದ ಪಡೆದೆ. ಈ ವಿಷಯವನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ಶಿವಮೊಗ್ಗ, ಬಳ್ಳಾರಿ ಸೇರಿದಂತೆ 6ಜಿಲ್ಲೆಗಳು ಅನ್​ಲಾಕ್​; ಇನ್ನುಳಿದ 7 ಜಿಲ್ಲೆಗಳಲ್ಲಿ ಲಾಕ್​ಡೌನ್​ ಮುಂದುವರಿಕೆ

ಇನ್ನು ವಿಪಕ್ಷ ನಾಯಕರುಗಳು ಕೂಡ ಜಿಲ್ಲಾಧಿಕಾರಿ ಈ ವರ್ತನೆ ಕುರಿತು ಹೆಚ್ಚಿನ ಸೋಜಿಗ ವ್ಯಕ್ತಪಡಿಸಿಲ್ಲ ಘಟನೆ ಕುರಿತು ಮಾತನಾಡಿರುವ ಬಿಜೆಪಿ ವಕ್ತಾರ ಕೆ ಕೃಷ್ಣ ಸಾಗರ್​ ರಾವ್​, ಮುಖ್ಯಮಂತ್ರಿಗಳು ಅಧಿಕಾರಿ ಶಾಹಿ ವರ್ಗವನ್ನು ಸಾಕಷ್ಟು ಓಲೈಸುತ್ತಿದ್ದಾರೆ. ಇತ್ತೀಚೆಗೆ ಕಲೆಕ್ಟರ್​ಗಳಿಗೆ ದುಬಾರಿ ಎಸ್​ಯುವಿ ಕಾರ್​ಗಳನ್ನು ಹಂಚಿಕೆ ಮಾಡಿದ್ದಾರೆ. ಆಡಳಿತಾಧಿಕಾರಿಯ ಈ ವರ್ತನೆಗಳು ಸರಿಯಲ್ಲ, ಅವರ ಈ ವರ್ತನೆ ಐಎಎಸ್​ ಅಧಿಕಾರಿಗಳು ಘನತೆ, ಸಮಗ್ರತೆ ಮತ್ತು ಸ್ವಾತಂತ್ರ್ಯವನ್ನು ಕಡಿಮೆ ಮಾಡುತ್ತದೆ. ಮೇಲಿನ ಅಧಿಕಾರಿಗಳನ್ನು ಓಲೈಸುವ ಬದಲು ಅಧಿಕಾರಿಗಳು ತಮ್ಮ ಕಾರ್ಯ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡಬೇಕು ಎಂದು ತಿಳಿಸಿದರುಕಾಂಗ್ರೆಸ್ ಕೂಡ ಐಎಎಸ್​ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ್ದು, ಸಿದ್ದಿಪೇಟೆ ಕಲೆಕ್ಟರ್​ ಈ ರೀತಿ ಮುಖ್ಯಮಂತ್ರಿಗಳ ಕಾಲಿಗೆ ಎರಗಿದ್ದು, ಅನೀರಿಕ್ಷಿತ ಮತ್ತು ಅಸಹ್ಯಕರ. ತೆಲಂಗಾಣದಲ್ಲಿ ಅರಾಜಕತೆ ಮತ್ತು ಸರ್ವಾಧಿಕಾರಿ ಆಡಳಿತ ಇದೆ ಎಂಬುದರ ಸೂಚನೆ ಇದಾಗಿದೆ ಎಂದು ಕಾಂಗ್ರೆಸ್​ ವಕ್ತಾರ ಶ್ರವನ್​ ದಾಸೊಜು ಟೀಕಿಸಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by: Seema R
First published: June 21, 2021, 6:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories