Sai Pallavi: ಸಾಯಿಪಲ್ಲವಿಗೆ ತೆಲಂಗಾಣ ಹೈಕೋರ್ಟ್‍ನಲ್ಲಿ ಹಿನ್ನೆಡೆ! ಏಕೆ? ಏನಾಯ್ತು?

ನಟಿ ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ

ಖ್ಯಾತ ನಟಿ ಸಾಯಿ ಪಲ್ಲವಿಗೆ ಕೋರ್ಟ್‌ನಲ್ಲಿ ಹಿನ್ನೆಡೆಯಾಗಿದೆ. ವಿವಾದಾತ್ಮಕ ಹೇಳಿಕೆ ಕುರಿತಂತೆ ನೋಟಿಸ್ ರದ್ದು ಮಾಡುವಂತೆ ಕೋರಿ ಸಾಯಿಪಲ್ಲವಿ ತೆಲಂಗಾಣ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ರು. ಆ ಅರ್ಜಿಯನ್ನು ತೆಲಂಗಾಣ ಕೋರ್ಟ್ ತಿರಸ್ಕರಿಸಿದೆ.

  • Share this:

ಸಾಯಿಪಲ್ಲವಿ (Sai Pallavi) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು  ಹೆಸರಾಂತ ಬಹುಭಾಷಾ ನಟಿ (Actress). ತಮ್ಮ ಅಮೋಘ ನಟನೆಯ ಮೂಲಕ ಹಲವು ವೀಕ್ಷಕರ ಮನ ಗೆದ್ದಿದ್ದಾರೆ. ಆದ್ರೆ ಇತ್ತೀಚೆಗೆ ಅವರು ಸುದ್ದಿಯಲ್ಲಿದ್ದಾರೆ. ಅದು ಅವರು ನಟಿಸಿರುವ ಚಿತ್ರಗಳಿಂದ ಅಲ್ಲ. ಅವರು ಸಂದರ್ಶವೊಂದರಲ್ಲಿ (Interview) ನೀಡಿದ ಹೇಳಿಕೆಯಿಂದ. ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈಗ ನಟಿ ಸಾಯಿಪಲ್ಲವಿಗೆ ತೆಲಂಗಾಣ ಹೈಕೋರ್ಟ್‍ನಲ್ಲಿ (High Court) ಹಿನ್ನೆಡೆಯಾಗಿದೆ. ಕಾನೂನು ಬಾಹಿರ (Illegal), ಅನ್ಯಾಯ (injustice) ಮತ್ತು ಅನ್ವಯವಾಗುವ ಕಾನೂನಗಳ ಉಲ್ಲಂಘನೆಯಡಿ ಠಾಣೆಗೆ ಹಾಜರಾಗುವಂತೆ ಸಾಯಿಪಲ್ಲವಿಗೆ ಹೈದ್ರಾಬಾದ್ ಸುಲ್ತಾನ್ ಬಜಾರ್ (Sultan Bazaar) ಸರ್ಕಲ್ ಇನ್ಸ್‍ಪೆಕ್ಟರ್ ನೋಟಿಸ್ (Notice) ನೀಡಿದ್ರು. ಆ ನೋಟಿಸ್ ರದ್ದು ಕೋರುವಂತೆ ಸಾಯಿಪಲ್ಲವಿ ತೆಲಂಗಾಣ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ರು. ಆ ಅರ್ಜಿಯನ್ನು ತೆಲಂಗಾಣ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಸಾಯಿಪಲ್ಲವಿಗೆ ಭಾರೀ ಹಿನ್ನೆಡೆಯಾಗಿದೆ.


ತೆಲಂಗಾಣ ಹೈಕೋರ್ಟ್ ಅರ್ಜಿ ತಿರಸ್ಕರಿಸಿದ್ಯಾಕೆ?


ಸಾಯಿಪಲ್ಲವಿ  ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕನ್ನೆಗಂಟಿ ಲಲಿತಾ, "ಅರ್ಜಿದಾರ ಅಪರಾಧದ ವಸ್ತುವನ್ನು ನಿರ್ದಿಷ್ಟಪಡಿಸದ ದುರುದ್ದೇಶಪೂರಿತ ಅರ್ಜಿಯ ಆಧಾರದ ಮೇಲೆ ದೋಷಾರೋಪಣೆಯ ನೋಟಿಸ್ ನೀಡಲಾಗಿದೆ". ಸತ್ಯಾಸತ್ಯತೆ ತಿಳಿಯಲು ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ.


ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿ ಏನ್ ಹೇಳಿದ್ರು?


ಸಾಯಿಪಲ್ಲವಿ ಅಭಿನಯದ ವಿರಾಟ ಪರ್ವ ಚಿತ್ರದ ಬಿಡುಗಡೆ ವೇಳೆ ಯೂಟ್ಯೂಬ್ ಚಾನೆಲ್‍ಗೆ ಸಂದರ್ಶನ ನೀಡಿದ್ರು. ಆಗ ಅವರು ದಿ ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ಕಾಶ್ಮೀರಿ ಪಂಡಿತರನ್ನು ಕೊಲ್ಲುವುದನ್ನು ಖಂಡಿಸುತ್ತಾರೆ. ಗೋ ಕಳ್ಳರ ಮೇಲಿನ ನಡೆಯುತ್ತಿರು ಹಲ್ಲೆ ಮತ್ತು ಹತ್ಯೆಯನ್ನು ಏಕೆ ಖಂಡಿಸುವುದಿಲ್ಲ. ನಾವು ಮೊದಲು ಮನುಷ್ಯರಾಗಬೇಕು. ಯಾರಿಗೂ ನೋವು ಮಾಡಬಾರದು ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದಿದ್ದರು. ಕಾಶ್ಮೀರಿ ಪಂಡಿತರ ನರಮೇಧವನ್ನು ಗೋ ಕಳ್ಳರ ಮೇಲಿನ ದಾಳಿಗೆ ಹೋಲಿಸಿದ್ದರಿಂದ ಸಾಯಿಪಲ್ಲವಿ ವಿರುದ್ಧ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು.


ಇದನ್ನೂ ಓದಿ: Gargi Movie: ಗಾರ್ಗಿ ಸಿನಿಮಾದ ರಿಲೀಸ್​ ಡೇಟ್​ ಅನೌನ್ಸ್​, ಸಾಯಿ ಪಲ್ಲವಿಗೆ ಸಾಥ್ ನೀಡಿದ ರಕ್ಷಿತ್ ಶೆಟ್ಟಿ


ಅರ್ಜಿ ಸಲ್ಲಿಸಿದ್ದು ಯಾರು? ಏಕೆ?


ಸಾಯಿ ಪಲ್ಲವಿ ಈ ರೀತಿಯ ಹೇಳಿಕೆ ನೀಡಿದ್ದ ದಿನದಿಂದಲೂ ಹಲವು ವಿರೋಧಗಳು ಕೇಳಿ ಬಂದಿದ್ವು. ಅಲ್ಲದೇ ನಟಿಗೆ ಮತ್ತು ಅವರ ಕುಟುಂಬಕ್ಕೆ ಜೀವ ಬೆದರಿಕೆ ಕರೆಗಳು ಬಂದಿದ್ವು. ಜೂನ್ 16, 2022 ರಂದು ಬಜರಂಗದಳದ ಸದಸ್ಯ ಅಖಿಲ್,ಸುಲ್ತಾನ್ ಬಜಾರ್ ಪೆÇಲೀಸರಿಗೆ ಸಾಯಿಪಲ್ಲವಿಯನ್ನು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ರು. ಸಾಯಿ ಪಲ್ಲವಿ ಹೇಳಿಕೆಯಿಂದ ನೋವುಂಟಾಗಿದೆ. ಕಾಶ್ಮೀರಿ ಭಯೋತ್ಪಾದಕರಿಗೆ ಸಮೀಕರಿಸುವ ಟೀಕೆಗಳನ್ನು ಮಾಡಿದ್ದಾರೆ. ಗೋರಕ್ಷಕರಿಗೂ ಸಾಯಿಪಲ್ಲವಿ ಹೇಳಿಕೆಯಿಂದ ನೋವಾಗಿದೆ. ಬಜರಂಗದಳ ಮತ್ತು ಗೋ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ಮನವಿ ಮಾಡಿದ್ರು. ಬಜರಂಗದಳದ ಸದಸ್ಯ ಅಖಿಲ್ ಮನವಿ ಮೇರೆಗೆ ಹೈದ್ರಾಬಾದ್ ಸುಲ್ತಾನ್ ಬಜಾರ್ ಸರ್ಕಲ್ ಇನ್ಸ್‍ಪೆಕ್ಟರ್ ಸಾಯಿಪಲ್ಲವಿಗೆ ನೋಟಿಸ್ ಜಾರಿ ಮಾಡಿದ್ರು.


ಇದನ್ನೂ ಓದಿ: Kaali Poster: ಕೆನಡಾದಲ್ಲಿ ಸಿಗರೇಟ್ ಸೇದುವ ಕಾಳಿಮಾತೆ ಪೋಸ್ಟರ್! ತಕ್ಷಣ ತೆಗೆಯುವಂತೆ ಭಾರತ ಸೂಚನೆ


ಅಂದಿನಿಂದ ಸಾಯಿ ಪಲ್ಲವಿ ವಿಚಾರಣೆಗೆ ಹಾಜರಾಗಿರಲಿಲ್ಲ ಬದಲಿಗೆ, ತೆಲಂಗಾಣ ಕೋರ್ಟ್‍ನಲ್ಲಿ ನೋಟಿಸ್ ರದ್ದು ಮಾಡುವಂತೆ ಅರ್ಜಿ ಸಲ್ಲಿಸಿದ್ರು. ಅಲ್ಲದೇ ನೋಟಿಸ್ ನೀಡಿ ವಿಚಾರಣೆ ಮಾಡುವಂತ ತಪ್ಪು ಹೇಳಿಕೆ ನಾನು ನೀಡಿಲ್ಲ. ಸುಖಾ ಸುಮ್ಮನೆ ನನ್ನನ್ನು ಮತ್ತೆ ಮತ್ತೆ ವಿವಾದದಲ್ಲಿ ಎಳೆಯುತ್ತಿದ್ದಾರೆ ಎಂದು ಬೇಸರಗೊಂಡಿದ್ದಾರೆ. ಅಲ್ಲದೇ ಸಾಯಿಪಲ್ಲವಿ ಕಾಶ್ಮೀರಿ ಪಂಡಿತರ ನರಮೇಧವನ್ನು ಗೋ ಕಳ್ಳರ ಮೇಲಿನ ದಾಳಿಗೆ ಸಮ ಮಾಡಿದ್ದಾರೆ ಅದು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತವಾಗಿತ್ತು. ಈಗ ತೆಲಂಗಾಣ ಕೋರ್ಟ್‍ನಲ್ಲಿ ಸಾಯಿಪಲ್ಲವಿಗೆ ತೀವ್ರ ಮುಖಭಂಗವಾಗಿದೆ.

top videos
    First published: