ತೆಲಂಗಾಣ ಸಾಮೂಹಿಕ ಅತ್ಯಾಚಾರ ಪ್ರಕರಣ; ಶೀಘ್ರ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ

ಘಟನೆ ನಡೆದು ಮೂರು ದಿನದ ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಕೆ ಚಂದ್ರಶೇಖರ್​ ರಾವ್​ ಈ ಪ್ರಕರಣದ ಶೀಘ್ರ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ರಚಿಸಿ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುಂತೆ   ಭರವಸೆ ನೀಡಿದ್ದರು.

Seema.R | news18-kannada
Updated:December 4, 2019, 5:54 PM IST
ತೆಲಂಗಾಣ ಸಾಮೂಹಿಕ ಅತ್ಯಾಚಾರ ಪ್ರಕರಣ; ಶೀಘ್ರ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ
ಚಿತ್ರ: ಮೀರ್​ ಸುಹೈಲ್​
  • Share this:
ಹೈದ್ರಾಬಾದ್​ (ಡಿ.4): ದೇಶವನ್ನೇ ತಲ್ಲಣಗೊಳಿಸಿದ್ದ ತೆಲಂಗಾಣ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಕುರಿತ ಶೀಘ್ರ ವಿಚಾರಣೆಗೆ ಮಹಬೂಬ್​ನಗರದಲ್ಲಿ ತ್ವರಿತಗತಿ  ನ್ಯಾಯಾಲಯ ರಚಿಸಲಾಗಿದೆ ಎಂದು ತೆಲಂಗಾಣ ಸರ್ಕಾರ ತಿಳಿಸಿದೆ.

ತೆಲಂಗಾಣ ರಾಜಧಾನಿಯ ಟೋಲ್​ಗೇಟ್​ ಬಳಿಕ 26 ವರ್ಷದ ಪಶುವೈದ್ಯೆ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿ, ಜೀವಂತವಾಗಿ ಆಕೆಯನ್ನು ಸುಟ್ಟು ಹಾಕಿದ್ದರು. ಈ ಘಟನೆ ಕುರಿತು ದೇಶಾದ್ಯಂತ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಆರೋಪಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ನೇಣಿಗೆ ಏರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದರು.

ಘಟನೆ ನಡೆದು ಮೂರು ದಿನದ ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಕೆ ಚಂದ್ರಶೇಖರ್​ ರಾವ್​ ಈ ಪ್ರಕರಣದ ಶೀಘ್ರ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ರಚಿಸಿ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುಂತೆ   ಭರವಸೆ ನೀಡಿದ್ದರು.

ಮಹಬೂಬ್​ ನಗರದಲ್ಲಿ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಧೀಶ ನ್ಯಾಯಾಲಯವನ್ನು ವಿಶೇಷ ನ್ಯಾಯಮಂಡಳಿಯಾಗಿ ನೇಮಿಸಲಾಗಿದೆ ಎಂದು ತೆಲಂಗಾಣದ ಕಾನೂನು, ಶಾಸಕಾಂಗ ವ್ಯವಹಾರ ಮತ್ತು ನ್ಯಾಯ ವಿಭಾಗದ ಕಾರ್ಯದರ್ಶಿ ಎ ಸಂತೋಷ್​ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್​ ರಿಜಿಸ್ಟ್ರಾರ್​ ಜನರಲ್​ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.

ಇದನ್ನು ಓದಿ: ನನ್ನ ಮಗ ಅತ್ಯಾಚಾರಿ ಆತನನ್ನು ಗುಂಡಿಟ್ಟು ಕೊಲ್ಲಿ; ತೆಲಂಗಾಣ ಪಶುವೈದ್ಯೆಯ ಕೊಲೆ ಆರೋಪಿ ತಾಯಿಯ ಆಕ್ರೋಶ

ಪ್ರಕರಣ ಕುರಿತು ಶೀಘ್ರ ವಿಚಾರಣೆ ನಡೆಸು ತೀರ್ಪು ಪ್ರಕಟಿಸಲು ಈ ವಿಶೇಷ ನ್ಯಾಯಾಲಯ ಸಹಾಯ ಮಾಡಲಿದೆ. ಪೊಲೀಸರು ಚಾರ್ಚ್​ ಶೀಟ್​ ದಾಖಲಿಸಿದ ತಿಂಗಳೊಳಗೆ ಪ್ರಕರಣ ಇತ್ಯರ್ಥವಾಗುವ ಸಾಧ್ಯತೆ ಇದೆ ಎಂದು ಹೈ ಕೋರ್ಟ್​ ವಕೀಲ ಡಿ ರಾಮ ರೆಡ್ಡಿ ತಿಳಿಸಿದ್ದಾರೆ.
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ