ದೇವಸ್ಥಾನಕ್ಕೆ ಹೋಗಿ ವಾಪಸ್ ಆಗುತ್ತಿದ್ದಾಗ ತಂದೆಯ ಎದುರೇ 18 ವರ್ಷದ ಮಗಳನ್ನು ಗ್ಯಾಂಗ್ ಒಂದು ಕಿಡ್ನ್ಯಾಪ್ (Telangana Kidnap Viral News) ಮಾಡಿದ ಘಟನೆಯೊಂದು ನಡೆದಿದೆ. ಆದರೆ ಪಾಪದ ತಂದೆ, ಇದು ಕಿಡ್ನ್ಯಾಪ್ ಎಂದು ಕಣ್ಣೀರು ಹಾಕುತ್ತಿದ್ದಾಗ ಕಿಡ್ನ್ಯಾಪ್ ಆದ ಮಗಳು ವಿಡಿಯೋ (Viral Video) ಬಿಡುಗಡೆ ಮಾಡಿದ್ದಾಳೆ.ನನ್ನನ್ನು ಕಿಡ್ನ್ಯಾಪ್ ಮಾಡಿದ ವ್ಯಕ್ತಿಯ ಜೊತೆ ನನಗೆ ಒಂದು ವರ್ಷದ ಹಿಂದೆಯೇ ಮದುವೆಯಾಗಿದೆ. ನಾನು ಮದುವೆಯಾದ ವ್ಯಕ್ತಿ ದಲಿತ ಎಂದು ನನ್ನ ಅಪ್ಪ ಮದುವೆಯನ್ನು ಒಪ್ಪಿಕೊಂಡಿರಲಿಲ್ಲ. ನನ್ನ ಗಂಡನ ವಿರುದ್ಧ ಪೊಲೀಸ್ ಕಂಪ್ಲೇಟ್ (Police Complaint) ಕೊಟ್ಟಿದ್ದರು ಎಂದು ಯುವತಿ ವಿಡಿಯೊದಲ್ಲಿ ಹೇಳಿದ್ದಾಳೆ.
ಅಪಹರಣಕಾರರ ಗುಂಪು ಯುವತಿಯನ್ನು ಕಿಡ್ನ್ಯಾಪ್ ಮಾಡುವ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಬಾಲಕಿ ತನ್ನ ತಂದೆಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಸಂಬಂಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲೇ ಈ ವಿಚಿತ್ರ ಘಟನೆ ನಡೆದಿದೆ.
ಈ ಹಿಂದೆಯೇ ಯುವತಿ ಪ್ರೇಮಿಯ ಜೊತೆ ಓಡಿಹೋಗಿದ್ದಳಂತೆ!
ಈ ಘಟನೆಯಲ್ಲಿ ನಾಲ್ವರು ಭಾಗಿಯಾಗಿದ್ದಾರೆ. ಈ ಹಿಂದೆ ಯುವತಿ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಈಗ ಅವಳು ವಯಸ್ಕಳಾದ ಕಾರಣ ಅವಳ ಪ್ರೇಮಿ ಅವಳನ್ನು ಕರೆದೊಯ್ದಿರಬಹುದು ಎಂದು ವೇಮುಲವಾಡದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ನಾಗೇಂದ್ರ ಚಾರಿ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ಇದನ್ನೂ ಓದಿ: Lionel Messi: ಮೆಸ್ಸಿ ಜನಿಸಿದ್ದು ಅಸ್ಸಾಂನಲ್ಲಿ! ಹೊಸ ಚರ್ಚೆ ಹುಟ್ಟುಹಾಕಿದ ಕಾಂಗ್ರೆಸ್ ಸಂಸದನ ಟ್ವೀಟ್
ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಯುವತಿಯನ್ನು ಕಾರಿನತ್ತ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ವಿಡಿಯೋದಲ್ಲಿ ಕಾಣುವಂತೆ ಅವನು ಅವಳನ್ನು ಹಿಂಬದಿಯ ಸೀಟಿಗೆ ತಳ್ಳಿದ್ದಾನೆ.
ಇನ್ನೊಬ್ಬ ವ್ಯಕ್ತಿ ಅವಳ ತಂದೆಯ ಬಳಿಗೆ ಹೋದಾಗ ಅವನನ್ನು ವಿರೋಧಿಸುವುದನ್ನು ತಡೆದಿದ್ದಾನೆ. ಬಾಲಕಿಯನ್ನು ಕಾರಿನೊಳಗೆ ತಳ್ಳಿದ ಕೂಡಲೇ ಆಕೆಯ ರಕ್ಷಣೆಗೆ ಬರುತ್ತಿದ್ದ ತಂದೆಯನ್ನು ಪಕ್ಕಕ್ಕೆ ತಳ್ಳಿ ಕಾರು ವೇಗವಾಗಿ ಸಾಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಆ್ಯಂಬುಲೆನ್ಸ್ನಲ್ಲಿ ಡ್ರೈವರ್ ಜೊತೆ ದಾರಿ ಮಧ್ಯೆಯೇ ಮದ್ಯ ಸೇವಿಸಿದ ರೋಗಿ!
ಎಣ್ಣೆಗಾಗಿ ಏನೆಲ್ಲ ಮಾಡಿರೋ ಸುದ್ದಿಯನ್ನ ಕೇಳಿರ್ತೀರಿ, ಆದ್ರೆ ಇಲ್ಲೊಂದು ಸುದ್ದಿಯಿದೆ. ಹೀಗೂ ಮದ್ಯ ಸೇವನೆ ಮಾಡಿದ್ದಾರೆ ಅಂದ್ರೆ ನಂಬಲೂ ಸಾಧ್ಯವಿಲ್ಲದಂತಹ ಸುದ್ದಿಯೊಂದು ವರದಿಯಾಗಿದೆ. ಹೌದು, ಆ್ಯಂಬುಲೆನ್ಸ್ ಡ್ರೈವರ್ ಒಬ್ಬ ಪೇಷೆಂಟ್ನ್ನೂ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆಯೇ ಮದ್ಯ ಸೇವನೆ ಮಾಡಿದ್ದಾರೆ. ಅಷ್ಟೇ ಅಲ್ಲ, ತನ್ನ ಜೊತೆ ಆ್ಯಂಬುಲೆನ್ಸ್ನಲ್ಲಿ ಇದ್ದ ರೋಗಿಗೂ ಸಹ ಒಂದ್ ಪೆಗ್ ನೀಡಿದ್ದಾರೆ! ಸದ್ಯ ಆ್ಯಂಬುಲೆನ್ಸ್ ಡ್ರೈವರ್ ಮತ್ತು ರೋಗಿ ಮದ್ಯ ಸೇವನೆ ಮಾಡುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ರೋಗಿಯನ್ನು ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯುವಾಗ ಆ್ಯಂಬುಲೆನ್ಸ್ ಡ್ರೈವರ್ ರಸ್ತೆ ಪಕ್ಕದಲ್ಲೇ ವಾಹನವನ್ನು ನಿಲ್ಲಿಸಿದ್ದಾರೆ. ಅಲ್ಲೇ ಮದ್ಯ ಸೇವನೆ ಮಾಡಿದ್ದಾರೆ. ಜೊತೆಗೆ ರೋಗಿಗೂ ಮದ್ಯ ನೀಡಿದ್ದಾರೆ.
ಇದನ್ನೂ ಓದಿ: Millets Food Festival: ಇಂದು ಪಾರ್ಲಿಮೆಂಟ್ನಲ್ಲಿ ಸಂಸದರಿಗೆ ಸಿರಿಧಾನ್ಯ ಭೋಜನ- ಏನೆಲ್ಲಾ ಮೆನು ಇದೆ ಗೊತ್ತೇ?
ಆ್ಯಂಬುಲೆನ್ಸ್ನಲ್ಲಿ ರೋಗಿಯ ಜೊತೆ ಓರ್ವ ಮಹಿಳೆ ಮತ್ತು ಒಂದು ಮಗು
ಆದರೆ ರೋಗಿಯೇ ಡ್ರೈವರ್ ಬಳಿ ಮದ್ಯ ಕೊಡುವಂತೆ ಕೇಳಿದ್ದ ಎಂದು ಡ್ರೈವರ್ ತಿಳಿಸಿದ್ದಾರೆ. ಆ್ಯಂಬುಲೆನ್ಸ್ನಲ್ಲಿ ರೋಗಿಯ ಜೊತೆ ಓರ್ವ ಮಹಿಳೆ ಮತ್ತು ಒಂದು ಮಗುವೂ ಇರುವುದು ವಿಡಿಯೋದಲ್ಲಿ ಕಂಡುಬಂದಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ