HOME » NEWS » National-international » TELANGANA FLOOD DELHI CM ARVIND KEJRIWAL DONATED RS 15 CRORE MAK

ತೆಲಂಗಾಣ ಪ್ರವಾಹ: 15 ಕೋಟಿ ರೂ. ದೇಣಿಗೆ ನೀಡಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

ಕೇಜ್ರಿವಾಲ್‌ರವರ ಈ ಮಾನವೀಯ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಪ್ರಶಂಶಿಸಿದ್ದರೆ, ಇನ್ನೂ ಕೆಲವರು ತೀವ್ರ ಟೀಕೆಗೆ ಗುರಿಮಾಡಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಸಿಲುಕಿ ದೆಹಲಿ ತತ್ತರಿಸಿರುವಾಗ, ದೆಹಲಿಯೇ ಸಂಕಷ್ಟದಲ್ಲಿರುವಾಗ ಇನ್ನೊಂದು ರಾಜ್ಯಕ್ಕೆ ಹಣ ನೀಡಬೇಕೇ? ಎಂದು ಕೆಲವರು ಪ್ರಶ್ನಿಸಿದ್ದಾರೆ.

news18-kannada
Updated:October 20, 2020, 1:09 PM IST
ತೆಲಂಗಾಣ ಪ್ರವಾಹ: 15 ಕೋಟಿ ರೂ. ದೇಣಿಗೆ ನೀಡಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
  • Share this:
ದೆಹಲಿ (ಅಕ್ಟೋಬರ್​ 20); ಇತಿಹಾಸ ಕಾಣದ ಭಾರೀ ಮಳೆಗೆ ತೆಲಂಗಾಣ ರಾಜ್ಯ ತತ್ತರಿಸಿ ಹೋಗಿದೆ. ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ರಾಜ್ಯದ ಜನ ಜೀವನ ಸಂಪೂರ್ಣವಾಗಿ ತತ್ತರಿಸಿಹೋಗಿದೆ. ಅಪಾರ ಜನ ಪ್ರವಾಹಕ್ಕೆ ತುತ್ತಾಗಿ ಮನೆಮಠ-ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇನ್ನೂ ಅನೇಕ ಜನ ಮಳೆಯಿಂದಾಗಿ ಮೃತಪಟ್ಟಿದ್ದಾರೆ. ಒಟ್ಟಿನಲ್ಲಿ ತೆಲಂಗಾಣ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡುವಂತಾಗಿದೆ. ಅಲ್ಲದೆ, ಸರ್ಕಾರಕ್ಕೂ ಸಹಿದರಿಂದಾಗಿ ಸಾವಿರಾರು ಕೋಟಿ ರೂ. ನಷ್ಟ ಉಂಟಾಗಿದೆ. ಈಗಾಗಲೇ ಕೊರೋನಾದಿಂದಾಗಿ ಆರ್ಥಿಕವಾಗಿ ತತ್ತರಿಸಿರುವ ತೆಲಂಗಾಣಕ್ಕೆ ಈ ನೆರೆ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ತೆಲಂಗಾಣ ರಾಜ್ಯದ ಬೆನ್ನಿಗೆ ನಿಂತಿರುವ ದೆಹಲಿ ಸರ್ಕಾರವು ಸಹಾಯ ಹಸ್ತ ಚಾಚಿದ್ದು, 15 ಕೋಟಿ ದೇಣಿಗೆ ನೀಡಲು ಮುಂದಾಗಿದೆ. ಈ ಸಂಬಂಧ ಸ್ವತಃ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಟ್ವೀಟ್​ ಮಾಡಿದ್ದಾರೆ.ಈ ಕುರಿತು ಇಂದು ಬೆಳಿಗ್ಗೆ ಟ್ವೀಟ್‌ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ “ಹೈದರಾಬಾದ್‌ನಲ್ಲಿ ಹಿಂದೆಂದೂ ಕಾಣದ ಭೀಕರ ಪ್ರವಾಹ ಉಂಟಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ದೆಹಲಿಯ ಜನರು ಹೈದರಾಬಾದ್‌ನ ನಮ್ಮ ಸಹೋದರ ಸಹೋದರಿಯರೊಂದಿಗೆ ನಿಲ್ಲಲಿದ್ದಾರೆ. ಪರಿಹಾರ ಕಾರ್ಯಗಳಿಗಾಗಿ ದೆಹಲಿ ಸರ್ಕಾರವು ತೆಲಂಗಾಣ ಸರ್ಕಾರಕ್ಕೆ 15 ಕೋಟಿ ರೂ ದೇಣಿಗೆ ನೀಡಲಿದೆ” ಎಂದು ಘೋಷಿಸಿದ್ದಾರೆ.

ಕೇಜ್ರಿವಾಲ್‌ರವರ ಈ ಮಾನವೀಯ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಪ್ರಶಂಶಿಸಿದ್ದರೆ, ಇನ್ನೂ ಕೆಲವರು ತೀವ್ರ ಟೀಕೆಗೆ ಗುರಿಮಾಡಿದ್ದಾರೆ. "ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಸಿಲುಕಿ ದೆಹಲಿ ತತ್ತರಿಸಿರುವಾಗ, ದೆಹಲಿಯೇ ಸಂಕಷ್ಟದಲ್ಲಿರುವಾಗ ಇನ್ನೊಂದು ರಾಜ್ಯಕ್ಕೆ ಹಣ ನೀಡಬೇಕೇ?" ಎಂದು ಕೆಲವರು ಪ್ರಶ್ನಿಸಿದರೆ, ಸಂಕಷ್ಟದ ಸಮಯದಲ್ಲಿ ಇತರರ ನೆರವಿಗೆ ಧಾವಿಸಿರುವುದಕ್ಕೆ ಹಲವರು ಪ್ರಶಂಸಿದ್ದಾರೆ.


ಇನ್ನೂ ತೆಲಂಗಾಣ ಪ್ರವಾಹಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 14 ರಂದು ಟ್ವೀಟ್‌ ಮಾಡಿದ್ದು “ಪ್ರವಾಹದಿಂದ ತತ್ತರಿಸಿರುವ ತೆಲಂಗಾಣ ರಾಜ್ಯಕ್ಕೆ ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ರೀತಿಯಲ್ಲಿ ನೆರವು ನೀಡುತ್ತದೆ ಎಂದು ಭರವಸೆ ನೀಡುತ್ತೇನೆ” ಎಂದಿದ್ದರು.
Published by: MAshok Kumar
First published: October 20, 2020, 1:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories