Telangana: ಕಾನೂನು ಪದವಿ ಓದಲು ತೆಲಂಗಾಣದಲ್ಲಿ ಯಾರೆಲ್ಲಾ ಸಿಇಟಿ ಬರೆಯುತ್ತಿದ್ದಾರೆ ಗೊತ್ತಾ?

ಈಗ ತೆಲಂಗಾಣ ರಾಜ್ಯ ಕಾನೂನು ಸಾಮಾನ್ಯ ಪ್ರವೇಶ ಪರೀಕ್ಷೆ 2022 ಗೆ ನೋಂದಾಯಿಸುತ್ತಿರುವ ಎಂಜಿನಿಯರಿಂಗ್ ಪದವೀಧರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಪ್ಪು ಉದ್ದನೆಯ ಗೌನ್ ಧರಿಸಿ, ನ್ಯಾಯಾಲಯದಲ್ಲಿ ನ್ಯಾಯಾಧೀಶರ (Judge) ಮುಂದೆ ತಮ್ಮ ಕಕ್ಷಿದಾರರಿಗೆ ಆದ ಅನ್ಯಾಯದ ವಿರುದ್ಧ ಸರಿಯಾದ ಸಾಕ್ಷಿ ಆಧಾರಗಳನ್ನು ಕಲೆ ಹಾಕಿ, ಸೂಕ್ತವಾಗಿ ವಾದ ಮಾಡಿ ಅವರಿಗೆ ನ್ಯಾಯ (Justice) ಒದಗಿಸಿ ಕೊಡುವ ಕೆಲಸ ಎಂದರೆ ಯಾವ ವಿದ್ಯಾವಂತರಿಗೆ (Educated) ಇಷ್ಟ ಇರುವುದಿಲ್ಲ ಹೇಳಿ. ಬಹುಶಃ ಇದಕ್ಕೆ ಇರಬಹುದು ಈಗ ಹೆಚ್ಚಿನ ವಿದ್ಯಾರ್ಥಿಗಳು ಕಾನೂನು ಪದವಿಯನ್ನು (Law degree) ಓದುವ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿರುವುದು ಎಂದು ಅನ್ನಿಸುತ್ತದೆ. ತೆಲಂಗಾಣದಲ್ಲಿ (Telangana) ಈಗ ಎಂಜಿನಿಯರ್, ವೈದ್ಯಕೀಯ ಮತ್ತು ಫಾರ್ಮಸಿ ಪದವಿ ಪಡೆದ ವಿದ್ಯಾರ್ಥಿಗಳು ಕಾನೂನು ಪದವಿಯನ್ನು ಓದಬೇಕೆಂದು ಕಾನೂನು ಪದವಿ ಕೋರ್ಸ್ ಗೆ ಸೇರಲು ಸಿಇಟಿಯನ್ನು ಬರೆಯುತ್ತಿದ್ದಾರೆ.

ಕೋಡಿಂಗ್, ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನೀಡುವುದು ಈ ಕ್ಷೇತ್ರಗಳಲ್ಲಿರುವ ಲಾಭದಾಯಕ ವೇತನ ಪ್ಯಾಕೇಜ್ ಗಳಿಂದ ದೂರ ಸರಿದು ಈಗ ತೆಲಂಗಾಣ ರಾಜ್ಯ ಕಾನೂನು ಸಾಮಾನ್ಯ ಪ್ರವೇಶ ಪರೀಕ್ಷೆ 2022 ಗೆ ನೋಂದಾಯಿಸುತ್ತಿರುವ ಎಂಜಿನಿಯರಿಂಗ್ ಪದವೀಧರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಕಾನೂನು ಪದವಿ ಕೋರ್ಸ್ ಗೆ ಅರ್ಜಿ ಸಲ್ಲಿಸುತ್ತಿರುವ ಬಿಇ ಮತ್ತು ಬಿಟೆಕ್ ಪದವೀಧರರು
ಈ ವರ್ಷ, 881 ಬಿಇ ಮತ್ತು ಬಿಟೆಕ್ ಪದವೀಧರರು ಮೂರು ವರ್ಷಗಳ ಕಾನೂನು ಪದವಿ ಕೋರ್ಸ್ ಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ.  ಇನ್ನೂ ವಿದ್ಯಾರ್ಥಿಗಳು ನೋಂದಾಯಿಸಿ ಕೊಳ್ಳುತ್ತಿರುವುದರಿಂದ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Pakistan: ಪಾಕಿಸ್ತಾನಕ್ಕೂ ಎದುರಾಗಿದ್ಯಂತೆ ಮಹಾ ಸಂಕಷ್ಟ! 'ಮಾಡಿದ್ದುಣ್ಣೋ ಮಾರಾಯಾ' ಅನ್ನೋದು ಇದಕ್ಕೆ ಅನಿಸುತ್ತೆ!

"ಕಾನೂನು ವೃತ್ತಿಯಲ್ಲಿ ಜೀವನೋಪಾಯ ಮತ್ತು ಅವಕಾಶಗಳು ಹೇರಳವಾಗಿವೆ. ಬಿಟೆಕ್ ಮತ್ತು ಬಿಇ ಪದವೀಧರರಿಗೆ, ತಾಂತ್ರಿಕ ಕಾನೂನು ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಕಾನೂನು ಪದವಿ ಹೊಂದಿರುವ ಎಂಜಿನಿಯರಿಂಗ್ ಪದವೀಧರರಿಗೆ ಪೇಟೆಂಟ್ ಏಜೆಂಟ್ ನಂತಹ ಹಲವಾರು ಅವಕಾಶಗಳಿವೆ, ಇದು ಇತರ ಶೈಕ್ಷಣಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಲಭ್ಯವಿರುವುದಿಲ್ಲ ಎಂದು ಟಿಎಸ್ ಕಾನೂನು ಸಿಇಟಿ 2022 ಸಂಚಾಲಕ ಪ್ರೊ. ಜಿ ಬಿ ರೆಡ್ಡಿ ಅವರು ಹೇಳಿದರು.

ಸಿಇಟಿಗೆ ಯಾರೆಲ್ಲಾ ಅರ್ಜಿ ಸಲ್ಲಿಸಿದ್ದಾರೆ ನೋಡಿ
ಕೇವಲ ಎಂಜಿನಿಯರ್ ಗಳು ಮಾತ್ರವಲ್ಲದೇ, ವೈದ್ಯರು ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ರೇಸ್ ನಲ್ಲಿದ್ದಾರೆ. ಇದುವರೆಗೆ ಎಂಬಿಬಿಎಸ್ ಓದಿರುವ 14 ಮತ್ತು ಬಿಡಿಎಸ್ ವಿದ್ಯಾರ್ಹತೆ ಹೊಂದಿರುವ 11 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅಂತೆಯೇ, 63 ಬಿ ಫಾರ್ಮಸಿ ಅರ್ಹ ವಿದ್ಯಾರ್ಥಿಗಳು, ಆರ್ಕಿಟೆಕ್ಚರ್ ನಲ್ಲಿ ಪದವಿ ಪಡೆದ ಮತ್ತು ಹೋಮಿಯೋಪಥಿಕ್ ಮೆಡಿಸಿನ್ ಮತ್ತು ಸರ್ಜರಿಯಲ್ಲಿ ಪದವಿಯನ್ನು ಪಡೆದಿರುವ ತಲಾ ಮೂವರು ಅಭ್ಯರ್ಥಿಗಳು, ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಒಬ್ಬರು ಮತ್ತು ನಾಲ್ಕು ಡಿ ಫಾರ್ಮಸಿ ಅರ್ಹ ಅಭ್ಯರ್ಥಿಗಳು ಮೂರು ವರ್ಷಗಳ ಕಾನೂನು ಪದವಿ ಕೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಟಿಎಸ್ ಕಾನೂನು ಕೋರ್ಸ್ ಸಿಇಟಿ 2022 ರ ಅಧಿಸೂಚನೆಯ ಪ್ರಕಾರ, ಮೂರು ವರ್ಷಗಳ ಎಲ್‌ಎಲ್‌ಬಿ ಕೋರ್ಸ್ ಗೆ ಅಭ್ಯರ್ಥಿಗಳು ಸೇರಲು ಸಾಮಾನ್ಯ ವರ್ಗಕ್ಕೆ ಒಟ್ಟು ಶೇಕಡಾ 45, ಒಬಿಸಿ ವರ್ಗಕ್ಕೆ ಶೇಕಡಾ 42 ಮತ್ತು ಎಸ್‌ಸಿ ಮತ್ತು ಎಸ್‌ಟಿ ವರ್ಗಕ್ಕೆ ಶೇಕಡಾ 40ರಷ್ಟು ಅಂಕಗಳೊಂದಿಗೆ ಸಂಬಂಧಿಸಿದ ವಿಶ್ವವಿದ್ಯಾಲಯಗಳಿಂದ ತತ್ಸಮಾನವೆಂದು ಮಾನ್ಯತೆ ಪಡೆದ ಯಾವುದೇ ಪದವಿ ಅಥವಾ ಇತರ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಇದನ್ನೂ ಓದಿ: Chamrajnagar: ಶಾಲೆಗೆ ಮಕ್ಕಳು ಚಕ್ಕರ್ ಹೊಡೆದ್ರೆ ಮನೆ ಮುಂದೆ ಕುದುರೆ ಮಾಮ ಹಾಜರ್, ಸ್ಕೂಲ್​​ಗೆ ಉಚಿತ ಕುದುರೆ ಸವಾರಿ!

ವಾಣಿಜ್ಯ ಅಧ್ಯಯನದಲ್ಲಿ (ಬಿಕಾಂ) ಪದವೀಧರರನ್ನು ಒಳಗೊಂಡು ಕೊನೆಯ ಎಣಿಕೆಯವರೆಗೆ ಒಟ್ಟು 5,328 ಅರ್ಜಿಗಳು ಬಂದಿದ್ದು, ಈ ಬಾರಿ ಅತ್ಯಧಿಕ 1,825 ಅರ್ಜಿಗಳು ಬಂದಿವೆ. ಅಂತೆಯೇ, 1,521 ಅಭ್ಯರ್ಥಿಗಳು ಐದು ವರ್ಷಗಳ ಕಾನೂನು ಪದವಿಗೆ ಅರ್ಜಿ ಸಲ್ಲಿಸಿದ್ದರೆ, ಎಲ್ಎಲ್ಎಂ ಪ್ರವೇಶ ಪರೀಕ್ಷೆಗೆ 583 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ವಿಳಂಬ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನಾಂಕವಾಗಿತ್ತು. ಮೂರು ವರ್ಷದ ಕಾನೂನು ಪದವಿ ಕೋರ್ಸ್ ನ ಪ್ರವೇಶ ಪರೀಕ್ಷೆ ಜುಲೈ 21 ರಂದು ನಿಗದಿಯಾಗಿದ್ದು, ಐದು ವರ್ಷಗಳ ಪದವಿ ಕಾನೂನು ಮತ್ತು ಎಲ್ಎಲ್ಎಂ ಕೋರ್ಸ್ ಗಳ ಪರೀಕ್ಷೆ ಜುಲೈ 22 ರಂದು ನಡೆಯಲಿದೆ.
Published by:Ashwini Prabhu
First published: