• Home
  • »
  • News
  • »
  • national-international
  • »
  • Cyber Crime: ಅಪ್ಪನ 92 ಲಕ್ಷ ಭೂ ಪರಿಹಾರದ ಹಣವನ್ನು ಆನ್​ಲೈನ್ ಗೇಮ್​ನಲ್ಲಿ ಕಳೆದ ಮಗ!

Cyber Crime: ಅಪ್ಪನ 92 ಲಕ್ಷ ಭೂ ಪರಿಹಾರದ ಹಣವನ್ನು ಆನ್​ಲೈನ್ ಗೇಮ್​ನಲ್ಲಿ ಕಳೆದ ಮಗ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೆಲಂಗಾಣ ರಾಜ್ಯ ಸರ್ಕಾರ ದಂಪತಿಯ ಭೂಮಿಯನ್ನು ಯೋಜನೆಯೊಂದಕ್ಕೆ ವಶಪಡಿಸಿಕೊಂಡು ಎಕರೆಗೆ ರೂ.10.5 ಲಕ್ಷದಂತೆ ರೂ.1.05 ಕೋಟಿ ಪರಿಹಾರವನ್ನು ನೀಡಿತ್ತು.

  • News18 Kannada
  • Last Updated :
  • Telangana, India
  • Share this:

ಹೈದರಾಬಾದ್: ಅಪ್ಪನಿಗೆ ಭೂ ಪರಿಹಾರವಾಗಿ ಬಂದ 92 ಲಕ್ಷ ಹಣವನ್ನು ಮಗ ಆನ್​ಲೈನ್ ಗೇಮ್ ಆಡಿ ಕಳೆದುಕೊಂಡ ಘಟನೆಯೊಂದು ನಡೆದಿದೆ. ತೆಲಂಗಾಣದ ರೈತರ ಮಗನೊಬ್ಬ ಆನ್‌ಲೈನ್ ಗೇಮ್‌ನಲ್ಲಿ (Online Game) ಸೈಬರ್ ವಂಚಕರಿಂದ (Cyber Crime)  ವಂಚನೆಗೊಳಗಾಗಿದ್ದಾರೆ.  ಕೃಷಿ ಮಾಡಿಕೊಂದು ಬದುಕು ಕಟ್ಟಿಕೊಂಡಿದ್ದ ತೆಲಂಗಾಣದ (Telangana) ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದ ಸೀತಾರಾಮಪುರಂ ಗ್ರಾಮದ ಶ್ರೀನಿವಾಸ್ ರೆಡ್ಡಿ ಮತ್ತು ವಿಜಯಲಕ್ಷ್ಮಿ ದಂಪತಿಗೆ ಇಬ್ಬರು ಗಂಡು ಮಕ್ಕಳು. ಹಿರಿಯ ಮಗ ಶ್ರೀಪಾಲ್ ಹೈದರಾಬಾದ್‌ನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದು, ಕಿರಿಯ ಹರ್ಷವರ್ಧನ್ ರೆಡ್ಡಿ ಅದೇ ನಗರದ ನಿಜಾಮ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಯಾಗಿದ್ದರು. 


ಕೃಷಿ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಮಕ್ಕಳ ಓದಿಗೆ ಹಣ ಒದಗಿಸುತ್ತಿದ್ದರು ಈ ದಂಪತಿ. ಆದರೆ ತೆಲಂಗಾಣ ರಾಜ್ಯ ಸರ್ಕಾರ ದಂಪತಿಯ ಭೂಮಿಯನ್ನು ಯೋಜನೆಯೊಂದಕ್ಕೆ ವಶಪಡಿಸಿಕೊಂಡು ಎಕರೆಗೆ ರೂ.10.5 ಲಕ್ಷದಂತೆ ರೂ.1.05 ಕೋಟಿ ಪರಿಹಾರವನ್ನು ನೀಡಿತ್ತು. ಇದೇ ವೇಳೆ ಶಂಶಾಬಾದ್‌ನ ಮಲ್ಲಾಪುರದಲ್ಲಿ ಭೂ ಪರಿಹಾರದ ಹಣದಿಂದ ಅರ್ಧ ಎಕರೆ ಜಮೀನು ಖರೀದಿಸಲು ನಿರ್ಧರಿಸಿದ ಶ್ರೀನಿವಾಸ್‌, ಭೂಮಾಲೀಕರಿಗೆ ಮುಂಗಡ ರೂಪದಲ್ಲಿ ಒಂದಿಷ್ಟು ಮೊತ್ತ ನೀಡಿದ್ದರು.


King 527 ಎಂಬ ಆನ್​ಲೈನ್ ಗೇಮ್​ನಿಂದ ಲಾಸ್
ಈ ಮಧ್ಯೆ ಶ್ರೀನಿವಾಸ್ ಅವರು ತಮ್ಮ ಮಗ ಹರ್ಷವರ್ಧನ್ ರೆಡ್ಡಿಗೆ ಆನ್​ಲೈನ್ ಕ್ಲಾಸ್​ಗಾಗಿ ಸ್ಮಾರ್ಟ್​ಫೋನ್ ಬುಕ್ ಮಾಡಿದ್ದರು. ಆದರೆ ಹರ್ಷವರ್ಧನ್ ಈ ಸ್ಮಾರ್ಟ್​ಫೋನ್​ನಲ್ಲಿ ಬರೀ ಆನ್​ಲೈನ್ ಗೇಮ್​ನಲ್ಲೆ ಕಾಲ ಕಳೆಯುತ್ತಿದ್ದ. King 527 ಎಂಬ ಆನ್​ಲೈನ್ ಗೇಮ್​ನ್ನು ಸಹ ಡೌನ್​ಲೋಡ್ ಮಾಡಿ ಸದಾ ಆಟ ಆಡುತ್ತಿದ್ದ. ಇದೇ ವೇಳೆ ಶ್ರೀನಿವಾಸ್ ರೆಡ್ಡಿಯವರು ಭೂ ಪರಿಹಾರದ ಹಣವನ್ನು ತಮ್ಮ ಮಗನ ಖಾತೆಗೆ ಟ್ರಾನ್ಸ್​ಫರ್ ಮಾಡಿದ್ದರು.  


ಇದನ್ನೂ ಓದಿ: Sushant Singh: ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ಆದಿತ್ಯ ಠಾಕ್ರೆಯಿಂದ 44 ಕರೆಗಳು, ಸಂಸದನಿಂದ ಗಂಭೀರ ಆರೋಪ!


ಅಮ್ಮನ ಅಕೌಂಟ್​ನಿಂದಲೂ ಹಣ ಟ್ರಾನ್ಸ್​ಫರ್
ಇದೇ ವೇಳೆ King 527 ಆನ್​ಲೈನ್ ಗೇಮ್​ನಲ್ಲಿ ಹಣ ಕಟ್ಟಿ ಆಡುವವರೆಗೂ ಹರ್ಷವರ್ಧನ್ ತಲುಪಿದ್ದ. ಇನ್ಸ್​ಟಾಲ್​ಮೆಂಟ್​ನಲ್ಲಿ ಹಣ ಕಟ್ಟಿ ಆನ್​ಲೈನ್ ಗೇಮ್ ಆಡುತ್ತಿದ್ದ ಹರ್ಷವರ್ಧನ್ ಅಕೌಂಟ್​ನಲ್ಲಿದ್ದ ಎಲ್ಲ ಹಣವನ್ನೂ ಕಳೆದುಕೊಂಡಿದ್ದ. ಅಲ್ಲದೇ ತನ್ನ ಅಮ್ಮನ ಅಕೌಂಟ್​ನಲ್ಲಿದ್ದ ಹಣವನ್ನೂ ತನ್ನ ಅಕೌಂಟ್​ಗೆ ಟ್ರಾನ್ಸ್​ಫರ್ ಮಾಡಿಕೊಂಡು ಆ ಹಣವನ್ನೂ ಕಳೆದುಕೊಂಡಿದ್ದ.


ಇದನ್ನೂ ಓದಿ: Jharkhand: ರೆಬೆಕ್ಕಾ ಹತ್ಯಾಕಾಂಡ: ಕೊಲೆಗೈದು ಚರ್ಮ ಸುಲಿದ್ರು, ಬಳಿಕ ದೇಹವನ್ನು 40ಕ್ಕೂ ಹೆಚ್ಚು ಪೀಸ್ ಮಾಡಿದ್ರು!


ಹಣ ಮರಳಿ ಕೇಳಿದಾಗ ಹೊರಬಂತು ಸತ್ಯ
ಆದರೆ ಇತ್ತ ಪಾಲಕರು ಹರ್ಷವರ್ಧನ್ ಬಳಿ ಹಣವನ್ನು ವಾಪಸ್ ಕೇಳುತ್ತಿದ್ದಂತೆ ಆಕಾಶವೇ ತಲೆಮೇಲೆ ಬಿದ್ದಂತಾಗಿದೆ. 92 ಲಕ್ಷ ಹಣವೂ ಆನ್​ಲೈನ್​ ಗೇಮ್​ನಲ್ಲಿ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ಸೈಬರ್ ಕ್ರೈಮ್​ ಪೊಲೀಸರಿಗೆ ದೂರು ನೀಡಿರುವ ಶ್ರೀನಿವಾಸ್ ರೆಡ್ಡಿ ಮತ್ತು ವಿಜಯಲಕ್ಷ್ಮಿ ದಂಪತಿ ಭೂ ಪರಿಹಾರದ ಹಣ ಮರಳಿ ಬರುವ ನಿರೀಕ್ಷೆಯಲ್ಲಿದ್ದಾರೆ. ಇತ್ತ ಸೈಬರ್ ಕ್ರೈಮ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


ಇಂತಹ ಘಟನೆಗಳೂ ನಡೆಯುತ್ತೆ ಹುಷಾರ್
ಕೆಲ ಸೈಬರ್ ವಂಚಕರು ಇತ್ತೀಚೆಗ ವಾಟ್ಸಪ್​ನಲ್ಲಿ ಕುಟುಂಬದ ಸದಸ್ಯರಂತೆ, ಗೆಳೆಯರಂತೆ ಮೆಸೇಜ್ ಮಾಡುವ ಮೂಲಕ ತಮ್ಮ ಡೀಟೇಲ್ಸ್​ ಕೇಳಿ ಡೇಟಾವನ್ನು ಹ್ಯಾಕ್​ ಮಾಡುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾದಲ್ಲೊಂದು ಇಂಥದ್ದೇ ಘಟನೆ ನಡೆದಿದ್ದು ಕೇವಲ ’ಹೈ ಅಮ್ಮಾ’ ಎಂದು ಮೆಸೇಜ್ ಮಾಡುವ ಮೂಲಕ ಬರೋಬ್ಬರಿ 57.84 ಕೋಟಿ ಹಣವನ್ನು ದೋಚಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: