Raichur: ರಾಯಚೂರು ತೆಲಂಗಾಣಕ್ಕೆ ಸೇರ್ಬೇಕು; ಕಿಡಿ ಹೊತ್ತಿಸಿದ ಕೆ ಚಂದ್ರಶೇಖರ್ ರಾವ್​

K Chandrashekar Rao On Raichur: ಟಿಆರ್‌ಎಸ್ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿರುವ ಕರ್ನಾಟಕದ ರಾಯಚೂರು ಜಿಲ್ಲೆಯ ಜನರು ತಮ್ಮ ಪ್ರದೇಶವನ್ನು ತೆಲಂಗಾಣಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಅವರು ಗಡಿ ವಿವಾದ ಹೊತ್ತಿಸಿದ್ದಾರೆ.

ಕೆ ಚಂದ್ರಶೇಖರ್ ರಾವ್

ಕೆ ಚಂದ್ರಶೇಖರ್ ರಾವ್

 • Share this:
  ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ (Belagavi) ತನಗೆ ಸೇರಬೇಕೆಂದು ಪಕ್ಕದ ಮಹಾರಾಷ್ಟ್ರ ಪದೇ ಪದೇ ವಿವಾದ ಹೊತ್ತಿಸಿದ್ದು ಇನ್ನೂ ಮಾಸಿಲ್ಲ. ಈ ಮುನ್ನವೇ ರಾಯಚೂರು ಜಿಲ್ಲೆ ತೆಲಂಗಾಣಕ್ಕೆ ಸೇರಬೇಕೆಂದು ಹೇಳುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (Telangana CM K Chandrashekar Rao) ವಿವಾದದ ಕಿಡಿ ಹೊತ್ತಿಸಿದ್ದಾರೆ. ಟಿಆರ್‌ಎಸ್ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿರುವ ಕರ್ನಾಟಕದ ರಾಯಚೂರು (Karnataka Raichuru) ಜಿಲ್ಲೆಯ ಜನರು ತಮ್ಮ ಪ್ರದೇಶವನ್ನು ತೆಲಂಗಾಣಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ. ಅವರ ಹೇಳಿಕೆಗೆ ಕರ್ನಾಟಕದಲ್ಲಿ ಭಾರೀ ವಿರೋಧ ಹುಟ್ಟಿಸುತ್ತಿದೆ. 

  ಟಿಆರ್‌ಎಸ್ ಅಧಿಕಾರಕ್ಕೆ ಬಂದ ನಂತರ 2016 ರಲ್ಲಿ ರೂಪುಗೊಂಡ ನೈರುತ್ಯ ತೆಲಂಗಾಣದ ಹೊಸ ಜಿಲ್ಲೆಯಾದ ವಿಕಾರಾಬಾದ್‌ನಲ್ಲಿ ಹೊಸ ಕಲೆಕ್ಟರೇಟ್ ಸಂಕೀರ್ಣವನ್ನು ರಾವ್ ಮಂಗಳವಾರ ಉದ್ಘಾಟಿಸಿದ ಸಂದರ್ಭದಲ್ಲಿ ಈ ವಿವಾದ ಹುಟ್ಟಿಸಿದ್ದಾರೆ.

  ಕರ್ನಾಟಕ ಸರ್ಕಾರದಿಂದ ಪ್ರತಿಕ್ರಿಯೆಯಿಲ್ಲ; ಪ್ರಿಯಾಂಕ್ ಖರ್ಗೆ ಕಿಡಿಕಿಡಿ
  ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿವಾದದ ಹೇಳಿಕೆಗೆ ಕಾಂಗ್ರೆಸ್ ನಾಯಕ, ಶಾಸಕ ಪ್ರಿಯಾಂಕ್ ಖರ್ಗೆ ಕರ್ನಾಟಕ ಸರ್ಕಾರದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. "ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ರಾಯಚೂರು ಹೇಳಿಕೆ ನೀಡಿ 24 ಗಂಟೆಯೇ ಆದರೂ ಕರ್ನಾಟಕ ಸರ್ಕಾರ ಇನ್ನೂ ಯಾವುದೇ ವಿರೋಧ ಅಥವಾ ಪ್ರತಿಕ್ರಿಯೆ ನೀಡಿಲ್ಲ" ಎಂದು ಪ್ರಿಯಾಂಕ್ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

  ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆ. ಚಂದ್ರಶೇಖರ್ ರಾವ್, ತೆಲಂಗಾಣ ಮತದಾರರು “ಬಿಜೆಪಿ ಧ್ವಜಗಳಿಗೆ ಮೋಸ ಹೋಗಬೇಡಿ” ಎಂದು  ಕೇಳಿಕೊಂಡರು.

  ಇದನ್ನೂ ಓದಿ: Prashant Kishor: ಕಾಂಗ್ರೆಸ್​ ಚರ್ಚೆ ನಡುವೆ ಕೆಸಿಆರ್​ ಜೊತೆ ಪ್ರಶಾಂತ್​ ಕಿಶೋರ್​; ತೆಲಂಗಾಣದಲ್ಲಿ ನಡೆಯಲಿದ್ಯಾ ಮೋಡಿ?

  ತೆಲಂಗಾಣದಲ್ಲಿನ ಯೋಜನೆಗಳು ಕರ್ನಾಟಕದಲ್ಲೂ ಜಾರಿಯಾಗಲಿ
  ಕರ್ನಾಟಕದೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಗಡಿ ಪ್ರದೇಶವಾದ ತಾಂಡೂರಿಗೆ ನೀವು ಹತ್ತಿರದಲ್ಲಿದ್ದೀರಿ. ರಾಯಚೂರಿನ ಕೆಲವು ಗಡಿ ಭಾಗದ ಜನರು ತಮ್ಮನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಬೇಕು ಅಥವಾ ಅದೇ ರೀತಿಯ ಕಲ್ಯಾಣ ಕಾರ್ಯಕ್ರಮಗಳನ್ನು ಒದಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಸಹ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ.

  ಕೆ.ಚಂದ್ರಶೇಖರ್ ರಾವ್ ಹೇಳಿಕೆಗೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುವ ಎಲ್ಲ ಲಕ್ಷಣಗಳೂ ದಟ್ಟವಾಗಿವೆ.

  ಚಂದ್ರಶೇಖರ್ ರಾವ್ ಜೊತೆ ಪ್ರಶಾಂತ್ ಕಿಶೋರ್?
  ಚುನಾವಣಾ ಚಾಣಕ್ಷ ಪ್ರಶಾಂತ್​ ಕಿಶೋರ್​ ಕಾಂಗ್ರೆಸ್​ ಜೊತೆ ಕೈ ಜೋಡಿಸಲಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೈ  ಗೆಲುವಿಗೆ ಹೋರಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ನಡುವೆ ಪ್ರಶಾಂತ್​ ಕಿಶೋರ್​ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಟಿಆರ್​ಎಸ್​ ಪಕ್ಷದ ಜೊತೆಗೆ ರಾಜಕೀಯ ಸಲಹೆಗಾರ ಒಪ್ಪಂದಕ್ಕೆ ಸಹಿ ಹಾಕಿದೆ. ತೆಲಂಗಾಣದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಐ ಪ್ಯಾಕ್​ ಟಿಆರ್​ಎಸ್​​ ಪರ ಕೆಲಸ ಮಾಡಲಿದೆ. ಇದಕ್ಕೆ ಪುಷ್ಠಿ ನೀಡುವಂತೆ ಪ್ರಶಾಂತ್​ ಕಿಶೋರ್​ ಹೈದರಾಬಾದ್​ನ ಕೆಸಿಆರ್​ ಮನೆಯಲ್ಲಿ ಬೀಡು ಬಿಟ್ಟಿದ್ದಾರೆ ಎಂಬ ಸುದ್ದಿಗಳನ್ನು ಮೂಲಗಳು ತಿಳಿಸಿವೆ.

  ಇನ್ನು ಯಾವುದೇ ನಿಖರ ಮಾಹಿತಿ ಇಲ್ಲ
  ಈ ಹಿಂದೆಯೇ ಕೆಸಿಆರ್​ ಜೊತೆಗೆ ಐಪ್ಯಾಕ್​ ಸಹಿ ನಡೆಸಲಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ನಡುವೆ ಕಾಂಗ್ರೆಸ್​ ಪಕ್ಷವನ್ನು ಮತ್ತೆ ಚೇತರಿಕೆ ಹಾದಿಯತ್ತ ಪ್ರಶಾಂತ್​ ಕಿಶೋರ್​ ಕೊಂಡೊಯ್ಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತು. ಆದರೆ, ಈ ಬಗ್ಗೆ ಇನ್ನೂ ಯಾವುದೇ ವಿಚಾರ ನಿಖರವಾಗಿಲ್ಲ.
  Published by:guruganesh bhat
  First published: