• Home
 • »
 • News
 • »
 • national-international
 • »
 • KCR-HDK: ಜೆಡಿಎಸ್‌ನೊಂದಿಗೆ ಮೈತ್ರಿ ಘೋಷಿಸಿದ ಕೆಸಿಆರ್! ಕರ್ನಾಟಕದಲ್ಲೂ ಸ್ಪರ್ಧೆ

KCR-HDK: ಜೆಡಿಎಸ್‌ನೊಂದಿಗೆ ಮೈತ್ರಿ ಘೋಷಿಸಿದ ಕೆಸಿಆರ್! ಕರ್ನಾಟಕದಲ್ಲೂ ಸ್ಪರ್ಧೆ

ಕೆ ಚಂದ್ರಶೇಖರ್ ರಾವ್ ಮತ್ತು ಹೆಚ್ ಡಿ ಕುಮಾರಸ್ವಾಮಿ

ಕೆ ಚಂದ್ರಶೇಖರ್ ರಾವ್ ಮತ್ತು ಹೆಚ್ ಡಿ ಕುಮಾರಸ್ವಾಮಿ

ಜೆಡಿಎಸ್‌ನೊಂದಿಗೆ ಮೈತ್ರಿ ಘೋಷಿಸಿದ ಕೆಸಿಆರ್, ಮುಂದಿನ ವರ್ಷ ಕರ್ನಾಟಕದಲ್ಲಿ ಬಿಆರ್‌ಎಸ್ ತನ್ನ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.

 • News18 Kannada
 • 3-MIN READ
 • Last Updated :
 • Karnataka, India
 • Share this:

“ಅಬ್ ಕಿ ಬಾರ್, ಕಿಸಾನ್ ಸರ್ಕಾರ್” (ಈ ಬಾರಿ ರೈತರಿಗಾಗಿ ಸರ್ಕಾರ) ಘೋಷಣೆಯೊಂದಿಗೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ (K Chandrashekar Rao) ರಾಜಕೀಯ ಪಕ್ಷ  ಭಾರತ್ ರಾಷ್ಟ್ರ ಸಮಿತಿ (Bharat Rashtra Samithi) ಅನ್ನು ವಿದ್ಯುಕ್ತವಾಗಿ ಪ್ರಾರಂಭಿಸಿದರು. ಜೊತೆಗೆ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದರು. ಅವರ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿಯ ಹೆಸರನ್ನು ಬಿಆರ್‌ಎಸ್ (BRS) ಎಂದು ಬದಲಾಯಿಸಲು ಚುನಾವಣಾ ಆಯೋಗ ಅನುಮೋದನೆ ನೀಡಿದ ನಂತರ ಈ ಬೆಳವಣಿಗೆ ಕಂಡುಬಂದಿದೆ. ಪಕ್ಷದ ಮುಖಂಡರು ಮತ್ತು ಬೆಂಬಲಿಗರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ತೆಲಂಗಾಣ ಭವನದ ಹೊರಗೆ ಬ್ಯಾಂಡ್‌ಗಳ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದ್ದು ಮಾತ್ರವಲ್ಲದೆ ಲಂಬಾಡಾ ಬುಡಕಟ್ಟು ಮಹಿಳೆಯರ ಗುಂಪು ಸುಂದರವಾದ ನೃತ್ಯ ಮಾಡಿದರು. ಈ ಮೂಲಕ ವರ್ಣರಂಜಿತ ಉಡುಗೆ ಮತ್ತು ಆಭರಣಗಳೊಂದಿಗೆ ಆಚರಣೆಗಳಿಗೆ ಇನ್ನಷ್ಟು ವಿಜೃಂಭಣೆಯ ಕಳೆ ತಂದರು.


ಆದರೆ, ಜನಸಂದಣಿಯಿಂದ ವಾಹನ ಸಂಚಾರ ನಿಧಾನಗೊಂಡಿದ್ದರಿಂದ ಜನನಿಬಿಡ ಬಂಜಾರ ಹಿಲ್ಸ್ ರಸ್ತೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು.


ಮುಂದಿನ ವರ್ಷವೇ ಕರ್ನಾಟಕದಲ್ಲಿ ಸ್ಪರ್ಧೆ
ಪಕ್ಷದ ಧ್ವಜವಾದ ಭಾರತದ ಭೂಪಟದ ರೂಪುರೇಷೆಯಿರುವ ಗುಲಾಬಿ ಬಣ್ಣದ ಧ್ವಜವನ್ನು ಅನಾವರಣಗೊಳಿಸಿದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಜನತಾದಳ (ಜಾತ್ಯತೀತ) ಮುಖ್ಯಸ್ಥ ಎಚ್‌ಡಿ ಕುಮಾರಸ್ವಾಮಿ, ನಟ ಪ್ರಕಾಶ್ ರಾಜ್, ರೈತ ಸಂಘದ ಮುಖಂಡರ ಸಮ್ಮುಖದಲ್ಲಿ ಇಸಿಐನಿಂದ ಹೆಸರು ಅನುಮೋದನೆ ಪತ್ರಕ್ಕೆ ಸಹಿ ಹಾಕಿದರು. ಜೆಡಿಎಸ್‌ನೊಂದಿಗೆ ಮೈತ್ರಿ ಘೋಷಿಸಿದ ಕೆಸಿಆರ್, ಮುಂದಿನ ವರ್ಷ ಕರ್ನಾಟಕದಲ್ಲಿ ಬಿಆರ್‌ಎಸ್ ತನ್ನ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.


ಪ್ರಜಾಪ್ರಭುತ್ವದಲ್ಲಿ ಜನತೆ ಗೆಲ್ಲಬೇಕು ರಾಜಕೀಯ ಪಕ್ಷಗಳಲ್ಲ; ಕೆಸಿಆರ್
ಪಕ್ಷದ ನಾಯಕರನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ದೇಶಾದ್ಯಂತ ತೆಲಂಗಾಣ ಮಾದರಿಯನ್ನು ಬಿಆರ್‌ಎಸ್ ಅನ್ವಯಿಸಲು ಹೊರಟಿದ್ದು ಭಾರತದ ಪ್ರಜೆಗಳು ನಮಗೆ ಅವಕಾಶ ನೀಡಿದರೆ ಬಿಆರ್‌ಎಸ್ ಎರಡು ವರ್ಷಗಳಲ್ಲಿ ದೇಶಾದ್ಯಂತ ದೂರದ ಹಳ್ಳಿಗಳಿಗೂ ನಿರಂತರ ವಿದ್ಯುತ್ ಸರಬರಾಜು ಮಾಡುವ ಆಶ್ವಾಸನೆ ನೀಡುತ್ತದೆ. ಜೊತೆಗೆ ಪ್ರತಿ ವರ್ಷ 25 ಲಕ್ಷ ಕುಟುಂಬಗಳಿಗೆ ದಲಿತ ಬಂಧು ಪ್ರೋತ್ಸಾಹ ನೀಡಬಹುದು. ಪ್ರಜಾಪ್ರಭುತ್ವದಲ್ಲಿ ಜನತೆಯ ಜಯ ಮುಖ್ಯವಾಗಬೇಕೇ ಹೊರತು ರಾಜಕೀಯ ಪಕ್ಷಗಳದ್ದಲ್ಲ ಎಂದು ಕೆಸಿಆರ್ ತಿಳಿಸಿದ್ದಾರೆ.


ಆಡಳಿತದಲ್ಲಿ ಒಕ್ಕೂಟದ ಮನೋಭಾವ ಮೂಡಲಿ
ಭಾರತವು ಅಪಾರ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಅನುಕೂಲವನ್ನು ಪಡೆದುಕೊಂಡಿದ್ದರೂ, ಹೆಚ್ಚಿನ ರಾಜ್ಯಗಳು ಇನ್ನೂ ನೀರಿಗಾಗಿ ಹೋರಾಡುತ್ತಿವೆ ಎಂದು ರಾವ್ ಹೇಳಿದರು. ದೇಶವು ಸಂಪನ್ಮೂಲಗಳಿಂದ ತುಂಬಿದ್ದರೂ ನಮ್ಮ ರೈತರು ಇಂತಹ ಜೀವನವನ್ನು ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ದೇಶದ ಆಡಳಿತಗಾರರಿಗೆ ಅಭಿವೃದ್ಧಿಯ ಫಲವನ್ನು ಎಸ್‌ಸಿ, ಎಸ್‌ಟಿ, ಬಿಸಿ, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಆಡಳಿತದಲ್ಲಿ ಸರ್ವಾಧಿಕಾರ ಹೋಗಬೇಕು. ಒಕ್ಕೂಟದ ಮನೋಭಾವ ಮುಂದುವರಿಯಲಿ,'' ಎಂದು ತಿಳಿಸಿದ್ದಾರೆ. ದಲಿತ, ಬಹುಜನ, ದುರ್ಬಲ ವರ್ಗದವರ ಉನ್ನತಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಕೆಸಿಆರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Himachal Pradesh: ಹಿಮಾಚಲ ಗದ್ದುಗೆ ಏರಲು ಕಾಂಗ್ರೆಸ್‌ನಲ್ಲಿ ರೇಸ್! ಸುಖವಿಂದರ್ ಸಿಂಗ್ ಸುಖುಗೆ ಸಿಎಂ ಪಟ್ಟ ಸಾಧ್ಯತೆ


ಹಲವಾರು ಜನಪರ ಯೋಜನೆಗಳ ಮೂಲಕ ಕೆಸಿಆರ್ ಸಹಕಾರ
ಸುದ್ದಿಮಾಧ್ಯಮದೊಂದಿಗೆ ಸಂವಹನ ನಡೆಸಿದ ಜುಬಿಲಿ ಹಿಲ್ಸ್ ಟಿಆಆರ್​ಎಸ್ ಅಸೋಸಿಯೇಶನ್ ಅಧ್ಯಕ್ಷ ಆರ್ ಗೋಪಾಲ್ ನಾಯ್ಕ್ ನಮ್ಮ ಮುಖ್ಯಮಂತ್ರಿಗಳು ಇತರ ರಾಜ್ಯಗಳಿಂದ ಮಾತ್ರವಲ್ಲದೆ ಇತರ ದೇಶಗಳ ನಾಯಕರಿಂದಲೂ ಪ್ರಶಂಸೆ ಗಳಿಸುತ್ತಿದ್ದಾರೆ. ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಕೆಸಿಆರ್‌ಗೆ ಮಾತ್ರ ಸಾಧ್ಯ ಎಂದು ತಿಳಿಸಿದರು.


ಇದನ್ನೂ ಓದಿ: Cyclone Mandous: ಮರಣರೂಪಿ 'ಮಾಂಡೌಸ್' ಅಬ್ಬರಕ್ಕೆ ನಾಲ್ವರು ಬಲಿ, ತಿಮ್ಮಪ್ಪನಿಗೂ ತಟ್ಟಿದ ಚಂಡಮಾರುತದ ಎಫೆಕ್ಟ್


ಗೋಪಾಲ್ ನಾಯ್ಕ್, ಕೇಂದ್ರವು ಪೆಟ್ರೋಲ್ ಡೀಸೆಲ್ ಹಾಗೂ ದಿನಬಳಕೆಯ ಇತರ ವಸ್ತುಗಳ ಮೇಲೆ ಬೆಲೆ ಏರಿಸಿದ್ದು ಜನಸಾಮಾನ್ಯರನ್ನು ಕೊಳ್ಳೆಹೊಡೆಯುತ್ತಿದೆ. ಈ ಸಮಯದಲ್ಲಿ ಬಂಧು, 24/7 ವಿದ್ಯುತ್ ಪೂರೈಕೆ, ರೈತ ಬಂಧು ಇತ್ಯಾದಿ ಯೋಜನೆಗಳೊಂದಿಗೆ ಕೆಸಿಆರ್ ಜನರಿಗೆ ಸಹಾಯ ಮಾಡುತ್ತಿದ್ದಾರೆ ಎಂಬುದು ಗೋಪಾಲ್ ನಾಯ್ಕ್ ಮಾತಾಗಿದೆ.

Published by:ಗುರುಗಣೇಶ ಡಬ್ಗುಳಿ
First published: