• Home
  • »
  • News
  • »
  • national-international
  • »
  • K Chandrashekhar Rao: ಮೇಘಸ್ಫೋಟದ ಹಿಂದಿದ್ಯಾ ವಿದೇಶಿ ಕೈವಾಡ? ಕೆಸಿಆರ್‌ ಆರೋಪಿಸಿದ್ದು ಯಾರ ಮೇಲೆ?

K Chandrashekhar Rao: ಮೇಘಸ್ಫೋಟದ ಹಿಂದಿದ್ಯಾ ವಿದೇಶಿ ಕೈವಾಡ? ಕೆಸಿಆರ್‌ ಆರೋಪಿಸಿದ್ದು ಯಾರ ಮೇಲೆ?

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್

ತೆಲಂಗಾಣ ರಾಜ್ಯದ ಪಶ್ಚಿಮ ಗೋಧಾವರಿ (West Godhavari), ಭದ್ರಾಚಲಂ (Bhadrachalam) ಸೇರಿದಂತೆ ಹಲವೆಡೆ ಭಾರೀ ಪ್ರವಾಹ ಸಮೇತ ಮಳೆಯಾಗುತ್ತಿದೆ. ಇವಕ್ಕೆಲ್ಲ ಮೇಘಸ್ಫೋಟ ಕಾರಣ, ಈ ಮೇಘಸ್ಫೋಟದ ಹಿಂದೆ ವಿದೇಶಿ ಕೈವಾಡ ಇದೆ ಅಂತ ಕೆ. ಚಂದ್ರಶೇಖರ್ ರಾವ್ ಆರೋಪಿಸಿದ್ದಾರೆ.  

  • News18 Kannada
  • 4-MIN READ
  • Last Updated :
  • Telangana
  • Share this:

ತೆಲಂಗಾಣ: ಇಷ್ಟು ದಿನ ಕೇಂದ್ರ ಸರ್ಕಾರದ (Central Government) ವಿರುದ್ದ ಗುಡುಗುತ್ತಿದ್ದ ತೆಲಂಗಾಣ ಸಿಎಂ (Telangana CM) ಕೆ. ಚಂದ್ರಶೇಖರ್ ರಾವ್ (K Chandrashekhar Rao), ಇದು ವಿದೇಶಿ ಷಡ್ಯಂತ್ರದ ವಿರುದ್ಧ ಗುಡುಗಿದ್ದಾರೆ. ಇತ್ತೀಚಿಗಷ್ಟೇ ಅಮರನಾಥ್‌ನಲ್ಲಿ (Amarnath) ಭಾರೀ ಮೇಘಸ್ಫೋಟ (Cloudburst) ಸಂಭವಿಸಿತ್ತು. ಈ ಹಿಂದೆ ಕಾಶ್ಮೀರ, ಲೇಹ್, ಲಡಾಖ್ ಹಾಗೂ ಉತ್ತರಾಖಂಡದಲ್ಲಿ ಈ ರೀತಿ ಆಗಿತ್ತು. ಇತ್ತ ತೆಲಂಗಾಣ ರಾಜ್ಯದ ಪಶ್ಚಿಮ ಗೋಧಾವರಿ (West Godhavari), ಭದ್ರಾಚಲಂ (Bhadrachalam) ಸೇರಿದಂತೆ ಹಲವೆಡೆ ಭಾರೀ ಪ್ರವಾಹ ಸಮೇತ ಮಳೆಯಾಗುತ್ತಿದೆ. ಇವಕ್ಕೆಲ್ಲ ಮೇಘಸ್ಫೋಟ ಕಾರಣ, ಈ ಮೇಘಸ್ಫೋಟದ ಹಿಂದೆ ವಿದೇಶಿ ಕೈವಾಡ ಇದೆ ಅಂತ ಕೆ. ಚಂದ್ರಶೇಖರ್ ರಾವ್ ಆರೋಪಿಸಿದ್ದಾರೆ.  


 ಮೇಘ ಸ್ಫೋಟದ ಹಿಂದೆ ವಿದೇಶಗಳ ಕೈವಾಡ


ದೇಶದಲ್ಲಿ ಉಂಟಾಗುವ ಮೇಘಸ್ಫೋಟಗಳ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್​ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಗೋದಾವರಿ ನದಿ ಜಲಾನಯನ ಪ್ರದೇಶ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಸಂಭವಿಸಿದ ಮೇಘಸ್ಫೋಟದ ಹಿಂದೆ ವಿದೇಶಿಯರ ಕೈವಾಡವಿರುವ ಶಂಕೆ ಇದೆ ಎಂದು ಕೆಸಿಆರ್​​ ಹೇಳಿದ್ದಾರೆ.


 ಹಲವು ವರದಿ ಉಲ್ಲೇಖಿಸಿದ ಕೆಸಿಆರ್‌


ಭದ್ರಾಚಲಂ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಅವರು, ವಿದೇಶಿ ಶಕ್ತಿಗಳು ಉದ್ದೇಶ ಪೂರ್ವಕವಾಗಿಯೇ ಆಯ್ದ ಕೆಲವು ಪ್ರದೇಶಗಳಲ್ಲಿ ಮೇಘಸ್ಫೋಟ ಮಾಡುತ್ತಿವೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಈ ಹಿಂದೆ ಕಾಶ್ಮೀರ, ಲೇಹ್, ಲಡಾಖ್ ಹಾಗೂ ಉತ್ತರಾಖಂಡದಲ್ಲಿ ಈ ರೀತಿ ಆಗಿತ್ತು. ಈಗ ಇಂತಹ ಸಂಚು ಗೋದಾವರಿ ಪ್ರಾಂತ್ಯದಲ್ಲಿ ನಡೆಯುತ್ತಿದೆ ಎಂದು ಕೆಲವು ವರದಿಗಳು ಹೇಳಿವೆ ಎಂದಿದ್ದಾರೆ.


ಇದನ್ನೂ ಓದಿ: Cloudburst: ಮೇಘ ಸ್ಫೋಟ ಎಂದರೇನು ಗೊತ್ತಾ? ಅದು ತಂದೊಡ್ಡುವ ಅಪಾಯಗಳೇನು? ಇಲ್ಲಿವೆ ಮಾಹಿತಿ


ಮೇಘ ಸ್ಫೋಟ ಎದುರಿಸಲು ತೆಲಂಗಾಣ ಸರ್ಕಾರ ಸಿದ್ಧ


ಮೇಘಸ್ಫೋಟದ ಮೂಲಕ ಕೃತಕ ಪ್ರವಾಹ ಸೃಷ್ಟಿಸಿ ಜನರನ್ನು ಸಂಕಷ್ಟಕ್ಕೆ ದೂಡುವ ಪಿತೂರಿ ನಡೆದಿದೆ ಎನ್ನಲಾಗುತ್ತಿದೆ. ಆದರೆ ಮೇಘಸ್ಫೋಟದ ಪರಿಣಾಮಗಳನ್ನು ಎದುರಿಸಲು ತೆಲಂಗಾಣ ರಾಜ್ಯ ಸರ್ಕಾರ ಸಂಪೂರ್ಣ ಸಜ್ಜಾಗಿದೆ ಎಂದು ಸಿಎಂ ಕೆಸಿಆರ್‌ ಇದೇ ವೇಳೆ ಭರವಸೆ ನೀಡಿದರು.


ಕೆಸಿಆರ್‌ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯ


ಇನ್ನು ಕೆ ಚಂದ್ರಶೇಖರ್ ರಾವ್ ಈ ಹೇಳಿಕೆ ಇದೀಗ ಭಾರೀ ಸಂಚಲನ ಮೂಡಿಸಿದೆ. ಕೆಸಿಆರ್‌ ಹೇಳಿಕೆಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕೆಸಿಆರ್ ಹೇಳಿಕೆಯನ್ನು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅಲ್ಲಗಳಿದಿದ್ದಾರೆ.  ಇದು ಶತಮಾನದ ದೊಡ್ಡ ಜೋಕ್ ಎಂದು ಅವರು ವ್ಯಂಗ್ಯವಾಡಿದ್ದಾರೆ.


ಜುಲೈ 8ರಂದು ಭೀಕರ ಮೇಘಸ್ಫೋಟ


ಜುಲೈ 8 ರಂದು ಗುಹಾ ದೇಗುಲದ ಸಮೀಪ ಸಂಭವಿಸಿದ ಪ್ರವಾಹದಲ್ಲಿ 15 ಯಾತ್ರಿಗಳು ಪ್ರಾಣ ಕಳೆದುಕೊಂಡಿದ್ದರೆ ಸುಮಾರು 55 ಜನರು ಗಾಯಗೊಂಡಿದ್ದರು. ಇಲ್ಲಿಯವರೆಗೆ 1.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಗುಹಾ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಪಹಲ್ಗಾಮ್‌ ಮತ್ತು ಬಾಲ್ಟಾಲ್‌ ಶಿಬಿರಗಳಿಂದ ಅಮರನಾಥ ಗುಹೆಗೆ ಯಾವುದೇ ಯಾತ್ರಿಕರಿಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ. ಚಿಕ್ಕದಾದ ಬಾಲ್ಟಾಲ್‌ ಮಾರ್ಗವನ್ನು ಬಳಸಿ ಹೋಗುವವರು ಗುಹಾ ದೇಗುಲಕ್ಕೆ ತಲುಪಲು ಸುಮಾರು 14 ಕಿ.ಮೀ ಚಾರಣ ಮಾಡಬೇಕಾಗುತ್ತದೆ.


ಇದನ್ನೂ ಓದಿ: Explained: ಮೇಘಸ್ಪೋಟ ಎಂದರೇನು? ನಿಜಕ್ಕೂ ಮೋಡ ಸ್ಫೋಟಗೊಳ್ಳುತ್ತದೆಯೇ?


 ಅಮರನಾಥ ಮೇಘಸ್ಫೋಟದಲ್ಲಿ ಮೃತರ ಸಂಖ್ಯೆ 49ಕ್ಕೆ ಏರಿಕೆ


ಜುಲೈ 8 ರಂದು ಅಮರನಾಥ್‌ದಲ್ಲಿ ಸಂಭವಿಸಿದ್ದ ಮೇಘಸ್ಫೋಟದಲ್ಲಿ ಮೃತರ ಸಂಖ್ಯೆ 49ಕ್ಕೆ ಏರಿದೆ. ಕಳೆದ 36 ಗಂಟೆಗಳಲ್ಲಿ ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಆರು ಯಾತ್ರಿಕರು ಮತ್ತು ಕುದುರೆ ಸವಾರನೊಬ್ಬ ಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟಾರೇ ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು