ತೆಲಂಗಾಣ ಸಚಿವ ಸಂಪುಟ: ಜನವರಿ 18ಕ್ಕೆ ಮುಹೂರ್ತ ಫಿಕ್ಸ್​​; ಇಲ್ಲಿದೆ ನೂತನ ಮಂತ್ರಿಗಳ ಪಟ್ಟಿ!

ಸರ್ಕಾರದಲ್ಲಿ ಕೇವಲ 18 ಮಂತ್ರಿ ಸ್ಥಾನಗಳಿವೆ. ರಾಜ್ಯದ ಎಲ್ಲಾ ಜಿಲ್ಲೆಯವರಿಗೆ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ. ಆದರೆ, ಹೇಗಾದರೂ ಮಾಡಿ ಪ್ರತಿಯೊಬ್ಬ ಶಾಸಕರಿಗೂ ಅವಕಾಶ ನೀಡಲೇಬೇಕು. ಈ ಹಿನ್ನೆಲೆಯಲ್ಲಿ ಮತ್ತೆ ಸಂಸದೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿಸಲು ಕೆಸಿಆರ್​ ಮುಂದಾಗಿದ್ದಾರೆ.

Ganesh Nachikethu
Updated:January 10, 2019, 5:50 PM IST
ತೆಲಂಗಾಣ ಸಚಿವ ಸಂಪುಟ: ಜನವರಿ 18ಕ್ಕೆ ಮುಹೂರ್ತ ಫಿಕ್ಸ್​​; ಇಲ್ಲಿದೆ ನೂತನ ಮಂತ್ರಿಗಳ ಪಟ್ಟಿ!
ಕೆ. ಚಂದ್ರಶೇಖರ್​​ ರಾವ್​
Ganesh Nachikethu
Updated: January 10, 2019, 5:50 PM IST
ಹೈದರಾಬಾದ್​​(ಜ.10): ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ತೆಲಂಗಾಣ ಸಚಿವ ಸಂಪುಟ ರಚನೆಗೆ ಮುಹೂರ್ತ ನಿಗದಿಯಾಗಿದೆ. ಇದೇ ತಿಂಗಳ ಸಂಕ್ರಾಂತಿ ಹಬ್ಬದ ನಂತರದಲ್ಲಿ ಒಳ್ಳೆಯ ಮಹೂರ್ತವಿದೆ. ಜನವರಿ 18 ರೋಹಿಣಿ ನಕ್ಷತ್ರದ ದಿವಸ. ಅಂದೇ ರೋಹಿಣಿ ನಕ್ಷತ್ರದ ಅಧಿದೇವತೆ ಬ್ರಹ್ಮನನ್ನು ಪೂಜಿಸಿ ಸಂಪುಟ ರಚನೆ ಮಾಡಿದರೇ, ಸರ್ಕಾರದ ಕಾರ್ಯಗಳು ಸುಗಮವಾಗಿ ಅಭಿವೃದ್ದಿ ಹೊಂದುತ್ತವೆ. ಹೀಗಾಗಿ ಜ.18 ಶುಕ್ರವಾರದಂದೇ ಸಂಪುಟ ವಿಸ್ತರಣೆ ಮಾಡಬೇಕೆಂದು ಸಿಎಂ ಕೆ.ಚಂದ್ರಶೇಖರ್ ಅವರು ತಯಾರಿ ನಡೆಸಿಕೊಂಡಿದ್ದಾರೆ. ಅಲ್ಲದೇ ಪ್ರಮಾಣ ವಚನ ಕಾರ್ಯಕ್ರಮವೂ ಅಂದೇ ನಡೆಯಲಿದೆ.

ಕಳೆದ ವರ್ಷ ಡಿಸೆಂಬರ್​​​ 7ರಂದು ತೆಂಲಗಾಣ ಚುನಾವಣೆ ನಡೆದಿತ್ತು. ಈ ಬೆನ್ನಲ್ಲೇ ಡಿ.15 ಕ್ಕೆ ಫಲಿತಾಂಶವೂ ಹೊರಬಿದ್ದಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್​​-ಟಿಡಿಪಿ ಮೈತ್ರಿಕೂಟದ ವಿರುದ್ಧ ಸಿಎಂ ಕೆಸಿಆರ್​ ನೇತೃತ್ವದ ಟಿಆರ್​ಎಸ್​ ಐತಿಹಾಸಿಕ ಗೆಲುವು ದಾಖಲಿಸಿತ್ತು. ನಂತರ ಸಿಎಂ ಚಂದ್ರಶೇಖರ್​​ ರಾವ್​​ ಅವರು ಎರಡನೇ ಬಾರಿಗೆ ಮುಖ್ಯಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರು. ಸರ್ಕಾರ ಅಸ್ತಿತ್ವಕ್ಕೆ ಬಂದು 1 ತಿಂಗಳಾಗಿದೆ. ಇನ್ನು ಸಚಿವ ಸಂಪುಟ ರಚನೆಯಾಗಿಲ್ಲ. ಯಾವಾಗ ಸಂಪುಟ ರಚನೆಯಾಗಲಿದೆ? ಎಂದು ಸಚಿವಾಕಾಂಕ್ಷಿಗಳು ಕಾಯುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೇಲ್ಜಾತಿ ಬಡವರಿಗೆ 10% ಮೀಸಲಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ

ಎರಡು ಮೂರು ಖಾತೆಗಳು ಒಬ್ಬರ ಬಳಿಯೇ ಇದ್ದಲ್ಲಿ ಶಾಸಕರು ಬಂಡಾಯ ಏಳುವ ಸಾಧ್ಯತೆಯಿದೆ. ಹೀಗಾಗಿ ಸರಿಯಾದ ನಿಟ್ಟಿನಲ್ಲಿ ಚರ್ಚಿಸಿ ಎಲ್ಲರಿಗೂ ಒಂದೇ ಹಂತದಲ್ಲಿ ಖಾತೆಗಳನ್ನು ಹಂಚುವ ಕಾರ್ಯ ನಡೆಯುತ್ತಿದೆ. ಇನ್ನೊಂದೆಡೆ ಒಳ್ಳೆಯ ಖಾತೆಗಳಿಗಾಗಿ ಉನ್ನತ ಮಟ್ಟದಲ್ಲಿ ಪ್ರಭಾವಿ ನಾಯಕರ ಲಾಬಿ ನಡೆಸುತ್ತಿದ್ದಾರೆ. ಟಿಆರ್​ಎಸ್​ ಹೈಕಮಾಂಡ್​​​ ಯಾರಿಗೆ? ಮಣೆ ಹಾಕಲಿದೆ ಎಂಬುದೇ ಕುತೂಹಲ ಸಂಗತಿ ಎನ್ನುತ್ತಾರೆ ಟಿಆರ್​ಎಸ್​​ ನಾಯಕರೊಬ್ಬರು..

ಇದನ್ನೂ ಓದಿ: ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ಕೊಲೆಗೆ ಸಂಚು

ಸರ್ಕಾರದಲ್ಲಿ ಕೇವಲ 18 ಮಂತ್ರಿ ಸ್ಥಾನಗಳಿವೆ. ರಾಜ್ಯದ ಎಲ್ಲಾ ಜಿಲ್ಲೆಯವರಿಗೆ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ. ಆದರೆ, ಹೇಗಾದರೂ ಮಾಡಿ ಪ್ರತಿಯೊಬ್ಬ ಶಾಸಕರಿಗೂ ಅವಕಾಶ ನೀಡಲೇಬೇಕು. ಈ ಹಿನ್ನೆಲೆಯಲ್ಲಿ ಮತ್ತೆ ಸಂಸದೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿಸಲು ಕೆಸಿಆರ್​ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಸರ್ಕಾರದಲ್ಲಿ ಸಿಎಂ, ಡಿಸಿಎಂ ಹುದ್ದೆ ಸೇರಿದಂತೆ 16 ಮಂತ್ರಿ ಸ್ಥಾನಗಳಿವೆ. ಸಂಪುಟದಲ್ಲಿ ಎಲ್ಲಾ ಜಾತಿ/ಧರ್ಮ/ಜಿಲ್ಲೆ ಆಧಾರದ ಮೇಲೆ ಪ್ರಾತಿನಿಧ್ಯತೆ ನೀಡುವುದು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನ ಸಿಗದ ಜಿಲ್ಲೆಯವರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲು ಕೆಸಿಆರ್​ ನಿರ್ಧರಿಸಿದ್ದಾರೆ ಎನ್ನುತ್ತಿವೆ ಉನ್ನತ ಮೂಲಗಳು.

ನೂತನ ಮಂತ್ರಿ ಮಂಡಲ ಪಟ್ಟಿ ಹೀಗಿದೆ ನೋಡಿ..
Loading...

1. ಜೋಗು ರಾಮನ್ನ- ಉಮ್ಮಡಿ ಆದಿಲಾಬಾದ್​
2. ಪ್ರಶಾಂತ್​​ ರೆಡ್ಡಿ- ನಿಜಾಮಾಬಾದ್​
3. ಶ್ರೀನಿವಾಸ್​ ರೆಡ್ಡಿ- ನಿಜಾಮಾಬಾದ್​
4. ಹರೀಶ್​​ ರಾವ್​​- ಉಮ್ಮಡಿ ಮೆದಾಕ್​
5. ಪದ್ಮಾ ದೇವೇಂದರ್​​ ರೆಡ್ಡಿ
6. ಈಟಲ ರಾಜೇಂದರ್​​- ಉಮ್ಮಡಿ ಕರೀಂನಗರ
7. ಕೆಟಿಆರ್​- ಉಮ್ಮಡಿ ಕರೀಂನಗರ
8. ಕಡಿಯಂ ಶ್ರೀಹರಿ- ಉಮ್ಮಡಿ ವರಂಗಲ್​​
9. ಎರ್ರಬೆಲ್ಲಿ ದಯಾಕರ್​​ ರಾವ್​​- ಉಮ್ಮಡಿ ವರಂಗಲ್​​
10. ಜಗದೀಶ್​ ರೆಡ್ಡಿ- ಉಮ್ಮಡಿ ನಲ್ಲಗೊಂಡ
11. ನಿರಂಜನ್​​ ರೆಡ್ಡಿ- ಉಮ್ಮಡಿ ಮೆಹಬೂಬಾ ನಗರ
12 ಲಕ್ಷ್ಮೀ ರೆಡ್ಡಿ- ಉಮ್ಮಡಿ ಮೆಹಾಬೂಬ ನಗರ
13. ಪುವ್ವಾಡ ಅಜಯ್​​- ಉಮ್ಮಡಿ ಖಮ್ಮಂ
14. ತಲನೇನಿ ಶ್ರೀನಿವಾಸ್​​- ಉಮ್ಮಡಿ ಖಮ್ಮಂ
15. ಪದ್ಮಾರವ್​- ಹೈದರಾಬಾದ್​
16. ಅರಿಕಪೂಡಿ ಗಾಂಧಿ- ರಂಗಾರೆಡ್ಡಿ

-------------
ಶಾಸಕ ಗೋಪಾಲಯ್ಯ ಸಂಬಂಧಿ ಕೊಲೆ; ಮರ್ಯಾದಾ ಹತ್ಯೆಯಾ? ಹೌದು ಎನ್ನುತ್ತಿದೆ ಈ ವಿಡಿಯೋ
First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ