Inspiring Story: ಮಹಿಳಾ ಪೊಲೀಸ್ ಕನಸಿಗೆ ಸಿಎ ಕೆಲಸ ಬಿಟ್ಟ ಮೇಸ್ತ್ರಿಯ ಮಗಳು; ಕಡೆಗೂ ಗೆದ್ದೆಬಿಟ್ಟಳು

ಕೆಲಸವು ಅವಳ ಅರ್ಹತೆಗೆ ಸರಿ ಹೊಂದುತ್ತದೆ. ಅವಳ ಕುಟುಂಬದ ನಿರ್ವಹಣೆಗೆ ತುಂಬಾನೇ ಸೂಕ್ತವಾಗಿದೆ ಎಂದು ಅವಳು ಅಷ್ಟಕ್ಕೇ ತೃಪ್ತಳಾಗಲಿಲ್ಲ.

ಎಂ ಮಲ್ಲಿಕಾ

ಎಂ ಮಲ್ಲಿಕಾ

  • Share this:
ಜೀವನದಲ್ಲಿ ಒಂದು ಗುರಿ (Aim) ಹಿಂಬಾಲಿಸಿಕೊಂಡು ಹೋಗುವವರಿಗೆ ಬರೀ ಆ ಗುರಿಯೊಂದೇ ಅವರ ಕಣ್ಣಿಗೆ ಕಾಣುತ್ತಿರುತ್ತದೆ ಮತ್ತು ಎಷ್ಟೋ ಜನರು ಏನೋ ಓದಿಕೊಂಡು ಒಂದು ಒಳ್ಳೆಯ ಕೆಲಸದಲ್ಲಿ ಇದ್ದರೂ ಸಹ ಅವರ ಮನಸ್ಸು ಆ ಗುರಿಯ ಮೇಲೆಯೇ ಇರುತ್ತದೆ. ಅನೇಕ ಜನರು ತಾವು ಮಾಡುತ್ತಿದ್ದ ಕೆಲಸದಲ್ಲಿ ಕೈತುಂಬಾ ಹಣ ಸಂಪಾದನೆ (Earning) ಮಾಡುತ್ತಿದ್ದರೂ ಅವರಿಗೆ ಅದು ಮನಸ್ಸಿಗೆ ಅಷ್ಟೊಂದು ಸಂತೋಷ ನೀಡುತ್ತಿರುವುದಿಲ್ಲ. ಅಂತಹ ಒಂದು ಸಂದರ್ಭದಲ್ಲಿ ಮನಸ್ಸಿಗೆ ಸಂತೋಷ ನೀಡುವ ಕೆಲಸವನ್ನು (Dream Job) ಆಯ್ಕೆ ಮಾಡಿಕೊಂಡು ಇರುವ ಕೆಲಸ ಬಿಟ್ಟು ಬಿಡುತ್ತಾರೆ. ಇಲ್ಲಿ ನಾವು ನಿಮಗೆ ಹೇಳಲು ಹೊರಟಿರುವ ಸುದ್ದಿ ಸಹ ಅಂತಹದೇ ಆಗಿದೆ.

ಒಬ್ಬ ಬಡ ಮೇಸ್ತ್ರಿಯ ಮಗಳು ಎಂ ಮಲ್ಲಿಕಾ ಚಾರ್ಟರ್ಡ್ ಅಕೌಂಟೆನ್ಸಿ ಇಂಟರ್ ಮೀಡಿಯೇಟ್ ಕೋರ್ಸ್ ಪೂರ್ಣಗೊಳಿಸಿ, ಹೈದರಾಬಾದ್‌ನಲ್ಲಿ ಯೋಗ್ಯವಾದ ಒಂದು ಕೆಲಸವನ್ನು ಪಡೆದರು. ಆದರೆ ಅವರಿಗಿದ್ದ ತುಡಿತವೇ ಬೇರೆ ಎಂದು ಅವರ ಒಂದು ನಿರ್ಧಾರದಿಂದ ತಿಳಿಯುತ್ತದೆ. ಅವರು ಆ ಕೆಲಸವನ್ನು ಬಿಟ್ಟು ಪೊಲೀಸ್ ಸಮವಸ್ತ್ರ ಧರಿಸುವ ಅವರ ಮಹತ್ವಾಕಾಂಕ್ಷೆಯ ಕೆಲಸವನ್ನು ಆರಿಸಿಕೊಳ್ಳುವಂತೆ ಮಾಡಿತು. ನಂತರ ತನ್ನ ಸ್ವಂತ ಗ್ರಾಮವಾದ ರಾಜನಗರಂಗೆ ಹಿಂತಿರುಗಿ ಕೊನೆಗೂ ಮಹಿಳಾ ಪೊಲೀಸ್‌ ಆಗಿದ್ದಾರೆ.

ಹಳ್ಳಿ ಜನರ ಸೇವೆ ಕನಸು ಕಂಡ ಹುಡುಗಿ

"ಎಲ್ಲಾ ಸಮಯದಲ್ಲೂ ಹಣ ಒಂದೇ ಮುಖ್ಯವಾಗುವುದಿಲ್ಲ, ಒಬ್ಬ ಮಹಿಳಾ ಪೊಲೀಸ್ ಆಗಿ ನನ್ನ ಹಳ್ಳಿಯ ಜನರ ಸೇವೆ ಮಾಡಲು ನನಗೆ ತುಂಬಾನೇ ಸಂತೋಷವಾಗುತ್ತದೆ” ಎಂದು ಮಲ್ಲಿಕಾ ಹೇಳುತ್ತಾರೆ. ಮಲ್ಲಿಕಾ ತನ್ನ ಶಿಕ್ಷಣ ಪೂರ್ಣಗೊಳಿಸುವಲ್ಲಿ ಅನೇಕ ಅಡೆತಡೆಗಳು ಬಂದರೂ, ಎಲ್ಲವನ್ನೂ ಧೈರ್ಯದಿಂದ ಎದುರಿಸಿದಳು. ಪದವಿಯ ನಂತರ, ಅವಳು ಸಿಎ ಬಗ್ಗೆ ಆಸಕ್ತಿ ಬೆಳೆಸಿಕೊಂಡಳು ಮತ್ತು ಅದೇ ರೀತಿಯಲ್ಲಿ ಇವಳ ಕುಟುಂಬವು ಈಕೆಗೆ ಬೆಂಬಲವಾಗಿ ನಿಂತರು.

ನಂತರ ಅವರು ಹೈದರಾಬಾದ್‌ನ ಮಾಧಾಪುರದಲ್ಲಿ ಕಾರ್ಪೊರೇಟ್ ಕಂಪನಿಗೆ ಸೇರಿದರು. ಸರ್ಟಿಫೈಡ್ ಫೈನಾನ್ಷಿಯಲ್ ಪ್ಲಾನರ್ ಕೋರ್ಸ್ ಅನ್ನು ಸಹ ಮಾಡಿದರು.

ಇದನ್ನು ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ; ತನಿಖೆಗೆ ಎಸ್​ಐಟಿ ತಂಡ ರಚನೆ

ಉತ್ತಮ ಕೆಲಸ ಇದ್ದರೂ ಇರಲಿಲ್ಲ ಸಂತಸ

ಈ ಕೆಲಸವು ಅವಳ ಅರ್ಹತೆಗೆ ಸರಿ ಹೊಂದುತ್ತದೆ. ಅವಳ ಕುಟುಂಬದ ನಿರ್ವಹಣೆಗೆ ತುಂಬಾನೇ ಸೂಕ್ತವಾಗಿದೆ ಎಂದು ಅವಳು ಅಷ್ಟಕ್ಕೇ ತೃಪ್ತಳಾಗಲಿಲ್ಲ. ಆ ಸಮಯದಲ್ಲಿಯೇ ಆಂಧ್ರಪ್ರದೇಶ ಸರ್ಕಾರವು ಮಹಿಳಾ ಪೊಲೀಸರನ್ನು ಅವಿಭಾಜ್ಯ ಅಂಗವಾಗಿ ಮಾಡಿದ ಗ್ರಾಮ ಸಚಿವಾಲಯದ ವ್ಯವಸ್ಥೆಯನ್ನು ಜಾರಿಗೆ ತಂದಿತು.

ಪೊಲೀಸ್ ಕೆಲಸದ ಬಗ್ಗೆ ಅವಳ ಉತ್ಸಾಹವು ಅವಳನ್ನು ಹುದ್ದೆಯನ್ನು ತ್ಯಜಿಸುವಂತೆ ಮಾಡಿತು. ಮನೆಗೆ ತಲುಪಿದ ನಂತರ, ಅವರು ಗ್ರಾಮ ಸಚಿವಾಲಯದಲ್ಲಿ ಮಹಿಳಾ ಪೊಲೀಸ್ ಕೆಲಸಕ್ಕೆ ಅರ್ಜಿ ಸಲ್ಲಿಸಿದರು. ಇದರ ಮಾಸಿಕ ವೇತನ ಕೇವಲ 13,000 ರೂಪಾಯಿ ಆಗಿತ್ತು.

ಇದನ್ನು ಓದಿ: ಆತಂಕ ಬೇಡ; ಕಂಟೈನ್‌ಮೆಂಟ್, ಹೋಮ್ ಐಸೋಲೇಶನ್ ಚಿಕಿತ್ಸೆಗೆ ಹೆಚ್ಚಿನ ಗಮನ ಇರಲಿ

ಕಡೆಗೂ ಕನಸು ಈಡೇರಿಕೆ

ಅವರು ಮಹಿಳಾ ಪೊಲೀಸ್ ಆಗಿ ಆಯ್ಕೆಯಾದರು. ಪೂರ್ವ ಗೋದಾವರಿ ಜಿಲ್ಲೆಯ ಚಕ್ರದ್ವಾರಬಂಧಂ ಗ್ರಾಮ ಸಚಿವಾಲಯದಲ್ಲಿ ನೇಮಕಗೊಂಡರು. ಕೆಲವೇ ತಿಂಗಳುಗಳಲ್ಲಿ, ಮಹಿಳೆಯರ ಮೇಲಿನ ಕಿರುಕುಳ ಸೇರಿದಂತೆ 60 ಅಪರಾಧಗಳನ್ನು ವರದಿ ಮಾಡುವಲ್ಲಿ 29 ವರ್ಷದ ಮಲ್ಲಿಕಾ ಅವರ ಕಾರ್ಯಕ್ಷಮತೆಯು ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನು ಗಳಿಸಿತು ಎಂದು ಹೇಳಲಾಗುತ್ತಿದೆ.

"ನಮ್ಮ ಗುರಿಯನ್ನು ಸಾಧಿಸಲು ನಾವು ಕೆಲವೊಮ್ಮೆ ಉತ್ತಮ ಜೀವನ ಮತ್ತು ಉದ್ಯೋಗ ತ್ಯಜಿಸಬೇಕಾಗುತ್ತದೆ. ನನಗೆ ಸಮವಸ್ತ್ರ ಧರಿಸುವ ಕೆಲಸ ಮಾಡುವ ಗುರಿ ಇತ್ತು, ಹಾಗಾಗಿ ಪೊಲೀಸ್ ಕೆಲಸವನ್ನು ಆಯ್ಕೆ ಮಾಡಿಕೊಂಡೇ ಮತ್ತು ಕರ್ತವ್ಯ ನಿಭಾಯಿಸುವಲ್ಲಿ ಒಂದು ರೀತಿಯ ಸಂತೋಷವಿದೆ. ಆದರೆ ನನಗೆ ಕಡಿಮೆ ಸಂಬಳ ಸಿಗುತ್ತಿದೆ ಎನ್ನುವುದು ನನಗೆ ತಿಳಿದಿದೆ” ಎಂದು ಮಲ್ಲಿಕಾ ಹೇಳಿದರು. ಮಲ್ಲಿಕಾ ಈಗ ಗ್ರೂಪ್-1 ಮತ್ತು ಗ್ರೂಪ್-2 ಹುದ್ದೆಗಳಿಗೆ ತಯಾರಿ ನಡೆಸುತ್ತಿದ್ದಾರೆ.

ಸುಲಭದ ದಾರಿಯಲ್ಲ

"ಜೀವನವು ಅಷ್ಟೊಂದು ಸುಲಭದ ದಾರಿಯಲ್ಲ, ಮಾಧಾಪುರ ಜೀವನ ಬಿಟ್ಟು ಗ್ರಾಮಕ್ಕೆ ಬಂದು ಗ್ರಾಮಸ್ಥರೊಂದಿಗೆ ಬೆರೆಯುವುದು ತುಂಬಾ ಕಷ್ಟದ ಕೆಲಸ. ಆರಂಭಿಕ ದಿನಗಳಲ್ಲಿ ನಾನು ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ” ಎಂದು ಅವರು ಹೇಳುತ್ತಾರೆ. ಹಳ್ಳಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಬಹಿರಂಗಪಡಿಸುವಾಗ, ಅನೇಕ ಬೆದರಿಕೆಗಳನ್ನು ಸ್ವೀಕರಿಸಿದ್ದೇನೆ, ಆದರೆ ಎಂದಿಗೂ ಹೆದರಲಿಲ್ಲ” ಎಂದು ಹೇಳಿದರು.

ಮಲ್ಲಿಕಾ ಅವರು ಹಳ್ಳಿಯಲ್ಲಿ ಐದು ಬಾಲ್ಯ ವಿವಾಹಗಳನ್ನು ತಡೆದರು ಮತ್ತು ಅದರ ಜೊತೆಗೆ ಗ್ರಾಮಸ್ಥರಲ್ಲಿ ಕೋವಿಡ್ ಜಾಗೃತಿ ಉಂಟು ಮಾಡಿದರು ಎಂದು ಹೇಳಲಾಗುತ್ತಿದೆ.
Published by:Seema R
First published: