Bullettu Bandekki.. dukku...dukku: ಮದುವೆ ದಿನ ಮೈಚಳಿ ಬಿಟ್ಟು ಕುಣಿದ ವಧುವಿನ ಅದೃಷ್ಟವೇ ಬದಲಾಗಿ ಹೋಯ್ತು!

Bullet Bandi fame gets a big offer: ಮದುವೆ ದಿನ ಯಾವ ಹಿಂಜರಿಕೆಯೂ ಇಲ್ಲದೇ ವಧು ಸಾಯಿ ಶ್ರೇಯಾ ಡುಕ್ಕು ಡುಕ್ಕು ಹಾಡಿಗೆ ಹೆಜ್ಜೆ ಹಾಕಿದ್ದರು.ರಸ್ತೆಯಲ್ಲಿ ಕಾರಿನ ಮುಂದೆ ಮದುವೆಯ ಉಡುಪಿನಲ್ಲೇ ಇಬ್ಬರು ಡ್ಯಾನ್ಸ್​ ಮಾಡಿದ್ದರು. ಈ ವಿಡಿಯೋ ಸಖತ್​ ವೈರಲ್​​ ಆಗಿದೆ.

ವೈರಲ್​​ ಆದ ಜೋಡಿ

ವೈರಲ್​​ ಆದ ಜೋಡಿ

  • Share this:
ಹೈದರಾಬಾದ್: ನಿ ಬುಲೆಟ್ ಬಂಡಿ ಎಕಿ ವಚೆಸ್ತಾ ಪ ಡುಕ್ಕು ಡುಕ್ಕು ಅನಿ.. (Nee  Bullettu Bandekki vachesta pa..dukku...dukku...dukku..) ಕಳೆದ ಕೆಲ ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಈ ತೆಲುಗು ಜಾನಪದ ಹಾಡು ಹೊಸ ಕ್ರೇಜ್​​ ಹುಟ್ಟು ಹಾಕಿದೆ. ಆಂಧ್ರ-ತೆಲಂಗಾಣದಲ್ಲಂತೂ ಎಲ್ಲಿ ಕೇಳಿದ್ರೂ ಡುಕ್ಕು ಡುಕ್ಕು ಸಾಂಗಿನ ಗುಂಗೇ ತುಂಬಿದೆ. ಈ ಹಾಡಿಗೆ ತನ್ನ ಮದುವೆಯಂದು ಹೆಜ್ಜೆ ಹಾಕಿದ್ದ ವಧು ಈಗ ರಾತ್ರೋರಾತ್ರಿ ಸ್ಟಾರ್​​ ಆಗಿದ್ದಾರೆ. ಸಾಯಿ ಶ್ರೇಯಾ(Telangana Bride Sai Shreya ) ಎಂಬುವರು ಮದುವೆಯ ಉಡುಗೆಯಲ್ಲೇ ಗಂಡನ ಎದುರು ಈ ಜಾನಪದ ಹಾಡಿಗೆ ಕುಣಿದಿದ್ದರು. ಆ ವಿಡಿಯೋ ವೈರಲ್​​ ಆಗಿದ್ದು, ನವವಧುವಿಗೆ ಭಾಗ್ಯದ ಬಾಗಿಲು ತೆರೆದಿದೆ. ವೈರಲ್​​ ವಧು ಶ್ರೇಯಾಗೆ ದೊಡ್ಡ ಮ್ಯೂಸಿಕ್​ ಕಂಪನಿ ಭರ್ಜರಿ ಆಫರ್​ ನೀಡಿದೆ. ತಮ್ಮ ಮುಂದಿನ ಹಾಡಿನ ವಿಡಿಯೋದಲ್ಲಿ ಭಾಗಿಯಾಗುವಂತೆ ಬಿಗ್​ ಆಫರ್​ ನೀಡಿದೆ.

ಆಗಸ್ಟ್ 14 ರಂದು FSO ರಾಮು ಹಾಗೂ ಸುರೇಖಾ ದಂಪತಿ ತಮ್ಮ ಹಿರಿಯ ಪುತ್ರಿ ಸಾಯಿ ಶ್ರೇಯಾ ಅವರನ್ನು  ರಾಮಕೃಷ್ಣಪುರದ ಆಕುಲ ಅಶೋಕ್ ಎಂಬವರಿಗೆ ಕೊಟ್ಟು ಮದುವೆ ಮಾಡಿದ್ದರು. ಮಂಚೇರಿಯಲ್ ಜಿಲ್ಲೆಯ ಜನ್ನಾರಾಮ್ ಗ್ರಾಮದಲ್ಲಿ ಮದುವೆ ಅದ್ಧೂರಿಯಾಗಿ ನಡೆದಿತ್ತು. ಮದುವೆ ದಿನ ಯಾವ ಹಿಂಜರಿಕೆಯೂ ಇಲ್ಲದೇ ವಧು ಸಾಯಿ ಶ್ರೇಯಾ ಡುಕ್ಕು ಡುಕ್ಕು ಹಾಡಿಗೆ ಹೆಜ್ಜೆ ಹಾಕಿದ್ದರು. ಪತ್ನಿಯ ಡ್ಯಾನ್ಸ್​​ಗೆ ಪತಿ ಅಕುಲ್​ ಕೂಡ ಜೊತೆಯಾಗಿದ್ದರು. ರಸ್ತೆಯಲ್ಲಿ ಕಾರಿನ ಮುಂದೆ ಮದುವೆಯ ಉಡುಪಿನಲ್ಲೇ ಇಬ್ಬರು ಡ್ಯಾನ್ಸ್​ ಮಾಡಿದ್ದರು. ಯುಟ್ಯೂಬ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ತಕ್ಷಣ ಅದು ವೈರಲ್ ಆಗಿತ್ತು.

ಹೀಗಾಗಿ ಬ್ಲೂ ರ್ಯಾಬಿಟ್ ಎಂಟರ್‌ಟೈನ್‌ಮೆಂಟ್ ಕಂಪನಿ(Blue Rabit Entertainment Company)ಯು ನಿರ್ಮಿಸಿದ ಹಾಡು ದೊಡ್ಡ ಹಿಟ್ ಆಗಿದ್ದು ಇಂಟರ್ನೆಟ್ ಮತ್ತು ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ಈ ಜನಪ್ರಿಯತೆಯೊಂದಿಗೆ, ಬ್ಲೂ ರಾಬಿಟ್ ಎಂಟರ್‌ಟೈನ್‌ಮೆಂಟ್ ಕಂಪನಿ ವಧುವಿಗೆ ಬಿಗ್​ ಆಫರ್​ ನೀಡಿದೆ.  ತಮ್ಮ ಮುಂದಿನ ಹಾಡಿನಲ್ಲಿ(folk album) ಹಾಡಿ-ಕುಣಿಯಲು ಅವಕಾಶವನ್ನು ನೀಡಿದೆ. ಕಂಪನಿಯ ಅಧಿಕಾರಿ ನಿರುಪಾ, ನವವಿವಾಹಿತೆ ಸಾಯಿ ಶ್ರೇಯಾ ಜೊತೆ ಫೋನಿನಲ್ಲಿ ಮಾತನಾಡಿದ್ದಾರೆ . ಅವರು ಮುಂದಿನ ಹಾಡಿನಲ್ಲಿ ನಟಿಸಬೇಕು ಎಂದೊಂಡನೆ ಸಾಯಿ ಶ್ರೇಯಾ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಹಾಡು ವೈರಲ್ ಆಗಿದ್ದು, ವಿಡಿಯೋವನ್ನು 30 ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ನವವಿವಾಹಿತ ದಂಪತಿ ಬಿಗ್​ ಅಫರ್​ನಿಂದ ಖುಷಿಯಾಗಿದ್ದಾರೆ. ಹಲವಾರು ಟಿವಿ ಚಾನೆಲ್‌ಗಳು ಅವರ ಸಂದರ್ಶನಗಳನ್ನು ತೆಗೆದುಕೊಳ್ಳುತ್ತಿವೆ.  ಸಂಬಂಧಿಕರು, ನೆರೆಹೊರೆಯವರು ಸಾಯಿ ಶ್ರೇಯಾ ಅವರನ್ನು ಪ್ರಶಂಸಿಸುತ್ತಿದ್ದಾರೆ. ಮದುವೆಯ ಬಳಿಕ ಬಣ್ಣದ ಲೋಕಕ್ಕೆ ಕಾಲಿಡುತ್ತಿರುವ ಬಗ್ಗೆ ಶ್ರೇಯಾ ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಸೋಷಿಯಲ್​ ಮೀಡಿಯಾ ಮೂಲಕ ರಾತ್ರೋರಾತ್ರಿ ಫೇಮಸ್​ ಆದರವ ಪಟ್ಟಿಗೆ ತೆಲುಗು ನಾಡಿದ ಸಾಯಿ ಶ್ರೇಯಾ ಕೂಡ ಸೇರ್ಪಡೆಯಾಗಿದ್ದಾರೆ. ತೆಲುಗು ಜಾನಪದ ಹಾಡುಗಳಿಗೆ ಇರುವ ಶಕ್ತಿ ಇದು ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: