Crime News: ಬಿಜೆಪಿ ನಾಯಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಸಾವಿಗೆ ಕಾರಣ ಏನಿರಬಹುದು?

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ (ಪಿಎಂಇ) ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

 ಜ್ಞಾನೇಂದ್ರ ಪ್ರಸಾದ್

 ಜ್ಞಾನೇಂದ್ರ ಪ್ರಸಾದ್

 • Share this:
  ಹೈದರಾಬಾದ್: ಬಿಜೆಪಿ ನಾಯಕನೋರ್ವ ಶವವಾಗಿ (BJP Leader Death) ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಭಾರತೀಯ ಜನತಾ ಪಕ್ಷದ ತೆಲಂಗಾಣದ (Telangana) ನಾಯಕ ಜ್ಞಾನೇಂದ್ರ ಪ್ರಸಾದ್ ಅವರ (Gnanendra Prasad Death) ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ ಜ್ಞಾನೇಂದ್ರ ಪ್ರಸಾದ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.  ಮಿಯಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸೋಮವಾರ ಬೆಳಗ್ಗೆ ಮಿಯಾಪುರ ಪೊಲೀಸರಿಗೆ ಮಾಹಿತಿ ಲಭಿಸಿದಾಗ ಘಟನೆ ಬೆಳಕಿಗೆ ಬಂದಿದೆ.

  ಘಟನೆ ತಿಳಿದ ತಕ್ಷಣವೇ ಒಂದು ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಪೊಲೀಸರಿಗೆ ಒಬ್ಬ ವ್ಯಕ್ತಿ ತನ್ನ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಅವರ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಅವರು ಕಳೆದ ಕೆಲವು ದಿನಗಳಿಂದ ತಮ್ಮ ಪೆಂಟ್‌ಹೌಸ್‌ನಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  ಮರಣೋತ್ತರ ಪರೀಕ್ಷೆ ಶುರು
  ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ (ಪಿಎಂಇ) ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

  ಇದನ್ನೂ ಓದಿ: Bulldozer Government: ಮಹಿಳೆ ಮೇಲೆ ಹಲ್ಲೆ; ಬುಲ್ಡೋಜರ್​ನಿಂದ ರಾಜಕೀಯ ನಾಯಕನ ಮನೆ ಕೆಡವಿದ ಪೊಲೀಸ್!

  ಹೆಚ್ಚಿನ ತನಿಖೆ ಆರಂಭ
  ಮಿಯಾಪುರ್ ಪೊಲೀಸರ ಪ್ರಕಾರ, "ಬೆಳಗ್ಗೆ 11 ಗಂಟೆಯ ಸುಮಾರಿಗೆ ಜ್ಞಾನೇಂದ್ರ ಪ್ರಸಾದ್ ನೇಣು ಹಾಕಿಕೊಂಡಿರಬಹುದು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ದುರದೃಷ್ಟವಷಾತ್ ಅವರು  ಅದಕ್ಕೂ ಮುನ್ನವೇ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆದರೆ ಜ್ಞಾನೇಂದ್ರ ಪ್ರಸಾದ್ ಅವರು ಬೆಳಿಗ್ಗೆ 9 ಗಂಟೆಗೆ ನೇಣು ಬಿಗಿದುಕೊಂಡಿರಬಹುದು. ಬಾಗಿಲು ಒಳಗಿನಿಂದ ಲಾಕ್ ಆಗಿತ್ತು ಎಂದೂ ಸಹ ಪೊಲೀಸರು ಅಂದಾಜಿಸಿದ್ದಾರೆ.

  ಕಾರ್ಯಕಾರಿಣಿ ಸದಸ್ಯರಾಗಿದ್ದ ಜ್ಞಾನೇಂದ್ರ ಪ್ರಸಾದ್
  ತೆಲಂಗಾಣ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿಯೂ ಜ್ಞಾನೇಂದ್ರ ಪ್ರಸಾದ್ ಜವಾಬ್ದಾರಿ ಹೊತ್ತಿದ್ದರು. ಸೋಮವಾರ ಮಿಯಾಪುರದ ಆಲ್ವಿನ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

  ಇದನ್ನೂ ಓದಿ: Bihar Politics: ಎನ್​ಡಿಎ ಮೈತ್ರಿಕೂಟಕ್ಕೆ ಟಾಟಾ, ಆರ್​ಜೆಡಿ ಜೊತೆ ದೋಸ್ತಿ? ಬಿಹಾರ ಸಿಎಂ ನಿತೀಶ್ ಕುಮಾರ್ ನಡೆಯೇನು?

  ಮೂಲಗಳ ಪ್ರಕಾರ ಸೆರ್ಲಿಂಗಂಪಲ್ಲಿಯ ನಾಯಕ ಪ್ರಸಾದ್ ಕಳೆದ ಕೆಲವು ದಿನಗಳಿಂದ ಅಸಮಾಧಾನಗೊಂಡಿದ್ದರು ಎಂದು ಸಹ ಹೇಳಲಾಗಿದೆ.

  ಗಾಳಿಪಟದ ದಾರ ಸಿಲುಕಿ ಡೆಲಿವರಿ ಬಾಯ್ ಸಾವು
  ದುರದೃಷ್ಟಕರ ಘಟನೆಯೊಂದರಲ್ಲಿ ದೆಹಲಿಯ ರಸ್ತೆಯಲ್ಲಿ ತನ್ನ ಮೋಟಾರ್‌ಸೈಕಲ್‌ನಿಂದ ಬಿದ್ದು 32 ವರ್ಷದ ಆಹಾರ ವಿತರಣಾ ಕಾರ್ಯನಿರ್ವಾಹಕ ಸಾವನ್ನಪ್ಪಿದ್ದಾನೆ. ಅಪರಿಚಿತ ಭಾರೀ ವಾಹನವೊಂದರ ಚಕ್ರದಡಿಯಲ್ಲಿ ವ್ಯಕ್ತಿ ನಜ್ಜುಗುಜ್ಜಾಗಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆದರೆ ವಿಷಯ ಇನ್ನೂ ಬೇರೆಯೇ ಇದೆ.

  ಎಚ್ಚರ ಬೈಕ್ ಸವಾರರೇ ಎಚ್ಚರ!
  ಬೈಕ್​ನ ಫುಟ್‌ರೆಸ್ಟ್‌ನಲ್ಲಿ ಚೀನಾದಲ್ಲಿ ತಯಾರಾದ ಗಾಳಿಪಟದ ದಾರ ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗಾಳಿಪಟದ ದಾರದಿಂದಲೆ ಡೆಲಿವರಿ ಬಾಯ್ ಅಪಘಾತದಲ್ಲಿ ಸಾವನ್ನಪ್ಪಿರು ಸಾಧ್ಯತೆ ದಟ್ಟವಾಗಿದೆ. ಆಗ್ನೇಯ ದೆಹಲಿಯ ತುಘಲಕಾಬಾದ್ ಮೆಟ್ರೋ ನಿಲ್ದಾಣದ ಬಳಿ ಭಾನುವಾರ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
  Published by:guruganesh bhat
  First published: