• Home
  • »
  • News
  • »
  • national-international
  • »
  • Telangana: ಬಿಜೆಪಿ ರಾಜ್ಯಾಧ್ಯಕ್ಷನ ಪುತ್ರನಿಂದ ಕಾಲೇಜು ವಿದ್ಯಾರ್ಥಿಯ ಮೇಲೆ ಹಲ್ಲೆ: ವಿಡಿಯೋ ವೈರಲ್

Telangana: ಬಿಜೆಪಿ ರಾಜ್ಯಾಧ್ಯಕ್ಷನ ಪುತ್ರನಿಂದ ಕಾಲೇಜು ವಿದ್ಯಾರ್ಥಿಯ ಮೇಲೆ ಹಲ್ಲೆ: ವಿಡಿಯೋ ವೈರಲ್

ಬಂಡಿ ಸಂಜಯ್ ಕುಮಾರ್ ಮತ್ತು ಪುತ್ರ

ಬಂಡಿ ಸಂಜಯ್ ಕುಮಾರ್ ಮತ್ತು ಪುತ್ರ

ಹೈದರಾಬಾದ್‌ನಲ್ಲಿರುವ ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತೆಲಂಗಾಣ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಭಗೀರಥ ಸಾಯಿ ವಿರುದ್ಧ ಪ್ರಕರಣ ದಾಖಲಾಗಿದೆ.

  • News18 Kannada
  • Last Updated :
  • Telangana, India
  • Share this:

ಹೈದರಾಬಾದ್:  ಖಾಸಗಿ ಕಾಲೇಜ್‌ನಲ್ಲಿ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ (Assault Case ) ನಡೆಸಿದ ಆರೋಪದ ಮೇಲೆ ತೆಲಂಗಾಣ ( Telangana BJP) ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ (Bandi Sanjay Kumar) ಅವರ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೈದರಾಬಾದ್‌ನಲ್ಲಿರುವ (Hyderabad) ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ ಈ ರಾಗಿಂಗ್ (Ragging) ಪ್ರಕರಣ ನಡೆದಿದ್ದು, ತೆಲಂಗಾಣ ಬಿಜೆಪಿಯ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಭಗೀರಥ ಸಾಯಿ ತನ್ನ ಸ್ನೇಹಿತರೊಂದಿಗೆ ಕೂಡಿ ಕಾಲೇಜಿನ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆಯ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಹಲ್ಲೆಗೊಳಗಾದ ವಿದ್ಯಾರ್ಥಿ ಶ್ರೀರಾಮ್ ಮತ್ತು ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಭಗೀರಥ ಸಾಯಿ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಸದ್ಯ ಹಲ್ಲೆ ಪ್ರಕರಣದ ಸುದ್ದಿ ಕಾಲೇಜಿನಾದ್ಯಂತ ಬಾಯಿಂದ ಬಾಯಿಗೆ ಹರಡುತ್ತಿದ್ದಂತೆ ಮಹೀಂದ್ರಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಅದರನ್ವಯ ಸ್ಥಳೀಯ ದುಂಡಿಗಲ್‌ ಠಾಣಾ ಪೊಲೀಸರು ಭಗೀರಥ ಸಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಇದನ್ನೂ ಓದಿ: Mother assault: ಹಠ ಮಾಡುತ್ತಿದ್ದ ಮಗುವಿಗೆ ಬರೆ ಹಾಕಿದ‌ ತಾಯಿ, ಮತ್ತೊಂದೆಡೆ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿದ ಪತಿ!


ಒಬ್ಬ ವಿದ್ಯಾರ್ಥಿಗೆ ಐವರಿಂದ ಹಲ್ಲೆ!


ವಿಡಿಯೋದಲ್ಲಿ ಸಂತ್ರಸ್ತ ವಿದ್ಯಾರ್ಥಿಗೆ ಭಗೀರಥ ಸಾಯಿ ಪದೇ ಪದೇ ಕಪಾಳಕ್ಕೆ ಬಾರಿಸುತ್ತಿದ್ದ. ಅಷ್ಟೇ ಅಲ್ಲದೇ ವಿಡಿಯೋದಲ್ಲಿ ಇನ್ನೊಬ್ಬ ವ್ಯಕ್ತಿ ಕೂಡ ಸಂತ್ರಸ್ತ ವಿದ್ಯಾರ್ಥಿಗೆ ಮನಬಂದಂತೆ ಹಲ್ಲೆ ನಡೆಸುತ್ತಿರುವುದು ಸೆರೆಯಾಗಿದೆ. ಹಲ್ಲೆಗೆ ಸಂಬಂಧಿಸಿದಂತೆ ಎರಡು ವಿಡಿಯೋಗಳು ವೈರಲ್ ಆಗಿದ್ದು, ಎರಡನೆಯ ವಿಡಿಯೋದಲ್ಲಿ ಹಾಸ್ಟೆಲ್‌ನಲ್ಲಿ ಸಂತ್ರಸ್ತ ವಿದ್ಯಾರ್ಥಿಗೆ ಬಿಜೆಪಿ ಅಧ್ಯಕ್ಷನ ಪುತ್ರ ಭಗೀರಥ ಸಾಯಿ ಮತ್ತು ಇತರ ಐವರು ವಿದ್ಯಾರ್ಥಿಗಳು ನಿಂದನೆ ಮಾಡಿ ಹಲ್ಲೆ ನಡೆಸುತ್ತಿರುವ ದೃಶ್ಯ ಇದೆ. ಸಾಯಿ ಭಗೀರಥ ಸಂತ್ರಸ್ತ ವಿದ್ಯಾರ್ಥಿಯ ಮುಖಕ್ಕೆ ಬಲವಾಗಿ ಗುದ್ದಿದ್ದು, ಬಳಿಕ ಇತರ ವಿದ್ಯಾರ್ಥಿಗಳು ಕೂಡಾ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.


ಇದನ್ನೂ ಓದಿ: Milari Chhangte Assaulted Doctor: ಡಾಕ್ಟರ್​ಗೆ ಕಪಾಳಮೋಕ್ಷ ಮಾಡಿದ ಸಿಎಂ ಮಗಳು; ಮುಖ್ಯಮಂತ್ರಿ ಕ್ಷಮೆಯಾಚನೆ


ಹಲ್ಲೆಗೊಳಗಾದ ವಿದ್ಯಾರ್ಥಿಯಿಂದ ಕ್ಷಮೆಯಾಚನೆ!


ಹಲ್ಲೆಗೊಳಗಾದ ಸಂತ್ರಸ್ತ ವಿದ್ಯಾರ್ಥಿಯು ತನ್ನ ಸ್ನೇಹಿತನ ಸಹೋದರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆಂಬ ಆರೋಪದ ಮೇಲೆ ಈ ಹಲ್ಲೆ ನಡೆಸಲಾಗಿದೆ ಎಂದು ಸಾಯಿ ಭಗೀರಥ ಹೇಳಿದ್ದಾನೆ ಎನ್ನಲಾಗಿದೆ. ಪ್ರಕರಣ ತೆಲಂಗಾಣದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಕಚೇರಿಯಿಂದ ಸಂತ್ರಸ್ತ ವಿದ್ಯಾರ್ಥಿ ಶ್ರೀರಾಮ್ ತಪ್ಪೊಪ್ಪಿಕೊಳ್ಳುವ ವಿಡಿಯೋವನ್ನು ರಿಲೀಸ್ ಮಾಡಲಾಗಿಕದೆ. ಆ ವಿಡಿಯೋದಲ್ಲಿ ಆತ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಭಗೀರಥ ಹಲ್ಲೆ ನಡೆಸಿದ್ದಾನೆ ಎಂದು ಹೇಳುತ್ತಿರುವುದು ಸೆರೆಯಾಗಿದೆ.
ಸಾಯಿ ಭಗೀರಥನ ಕಿರಿಕ್ ಇದೇ ಮೊದಲಲ್ಲ!


ಅಂದ ಹಾಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಭಗೀರಥ ಸಾಯಿ ಕಿರಿಕ್ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಆತ ಹಲವು ವಿವಾದಗಳಲ್ಲಿ ಭಾಗಿಯಾಗಿದ್ದು, ದಿಲ್ಲಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆಯೂ ಇದೇ ರೀತಿಯ ಪ್ರಕರಣದಲ್ಲಿ ಕಾಲೇಜಿನಿಂದ ಡಿಬಾರ್ ಆಗಿದ್ದ ಎಂದು ತಿಳಿದು ಬಂದಿದೆ. ಅಚ್ಚರಿಯ ವಿಷಯ ಅಂದ್ರೆ, ತೆಲಂಗಾಣದಲ್ಲಿ ಸಹಪಾಠಿಗೆ ಹಲ್ಲೆ ನಡೆಸಿದ ಬಳಿಕ ಈ ಘಟನೆಯನ್ನು ಯಾರ ಬಳಿಯಾದರೂ ಹೇಳಿದರೆ ಅಥವಾ ಪೊಲೀಸ್ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

Published by:Avinash K
First published: